World Diabetes Day: ವಿಶ್ವ ಮಧುಮೇಹ ದಿನ ಆಚರಿಸುವ ಉದ್ದೇಶವೇನು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2024 | 10:10 AM

ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕತೆ (ವಂಶವಾಹಿ) ಸೇರಿದಂತೆ ಇತ್ಯಾದಿ ಕಾರಣಗಳಿಂದ ಮಧುಮೇಹ ಕಾಯಿಲೆ ಬಾಧಿಸಬಹುದು. ದೇಹದಲ್ಲಿ ಇನ್ಸುಲಿನ್ ಅಸಮತೋಲನದಿಂದ ಮಧುಮೇಹ ಕಾಯಿಲೆ ಬರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಈ ರೀತಿ ಆದರೆ ಅನೇಕ ರೀತಿಯ ಗಂಭೀರ ರೋಗಗಳ ಅಪಾಯವು ಹೆಚ್ಚುತ್ತದೆ. ಹಾಗಾಗಿ ಮಧುಮೇಹದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತಿದೆ. ಈ ದಿನ ಆಚರಣೆ ಮಾಡುವ ಉದ್ದೇಶವೇನು? ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

World Diabetes Day: ವಿಶ್ವ ಮಧುಮೇಹ ದಿನ ಆಚರಿಸುವ ಉದ್ದೇಶವೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ (Diabetes) ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿದ್ದಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕತೆ (ವಂಶವಾಹಿ) ಸೇರಿದಂತೆ ಇತ್ಯಾದಿ ಕಾರಣಗಳಿಂದ ಮಧುಮೇಹ ಕಾಯಿಲೆ ಬಾಧಿಸಬಹುದು. ದೇಹದಲ್ಲಿ ಇನ್ಸುಲಿನ್ ಅಸಮತೋಲನದಿಂದ ಮಧುಮೇಹ ಕಾಯಿಲೆ ಬರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಈ ರೀತಿ ಆದರೆ ಅನೇಕ ರೀತಿಯ ಗಂಭೀರ ರೋಗಗಳ ಅಪಾಯವು ಹೆಚ್ಚುತ್ತದೆ. ಹಾಗಾಗಿ ಮಧುಮೇಹದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತಿದೆ. ಈ ದಿನ ಆಚರಣೆ ಮಾಡುವ ಉದ್ದೇಶವೇನು? ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ದಿನದ ಮುಖ್ಯ ಉದ್ದೇಶವೇನು?

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರತಿ ವರ್ಷ 40 ಲಕ್ಷ ಜನರು ಮಧುಮೇಹ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ಕಾಯಿಲೆಗೆ ಸರಿಯಾದ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ನಮ್ಮ ಜೀವನಶೈಲಿ ಮತ್ತು ಆಹಾರ ಕ್ರಮಗಳಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಹುದು. ಹೀಗೆ ಮಧುಮೇಹ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸಲಾಗುತ್ತಿದೆ. ಮಧುಮೇಹ ಕಾಯಿಲೆ ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವುದು ಮಧುಮೇಹ ದಿನದ (World Diabetes Day) ಉದ್ದೇಶವಾಗಿದೆ. ಪ್ರತಿಯೊಬ್ಬರೂ ಕೂಡ ಈ ದಿನವನ್ನು ಆಚರಿಸಿ ಈ ಬಗ್ಗೆ ಸರಿಯಾದ ಅರಿವು ಮೂಡಿಸಿ ಈ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: ಹಠಾತ್ತನೆ ಎದ್ದು ನಿಂತಾಗ ಉಂಟಾಗುವ ತಲೆತಿರುಗುವಿಕೆಗೆ ಕಾರಣಗಳೇನು?

ವಿಶ್ವ ಮಧುಮೇಹ ದಿನದ ಇತಿಹಾಸ:

ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 1991ರಲ್ಲಿ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು. ವಿಜ್ಞಾನಿ ಸರ್‌ ಫೆಡ್ರಿಕ್‌ ಬೆಂಟಿಂಗ್‌ ಅವರು ಪ್ರಥಮ ಬಾರಿಗೆ ಮಧುಮೇಹಕ್ಕೆ ನೀಡುವ ‘ಇನ್ಸುಲಿನ್‌’ ಸಂಶೋಧಿಸಿದರು. ಬೆಂಟಿಂಗ್‌ ಅವರು ಜನಿಸಿದ ದಿನ ನವೆಂಬರ್‌ 14. ಹಾಗಾಗಿ ಅವರ ಸವಿ ನೆನಪಿಗಾಗಿ ನ. 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಧ್ಯಮಗಳ ಸಹಯೋಗದೊಂದಿಗೆ ವಿಶ್ವದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಈ ದಿನ ಅಭಿಯಾನ ಕಾರ್ಯಗಳನ್ನು ಕೂಡ ನಡೆಸಲಾಗುತ್ತದೆ. ನೀಲಿ ಬಣ್ಣ ವಿಶ್ವಮಧುಮೇಹ ದಿನದ ಸಂಕೇತವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ