ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಆರೋಗ್ಯ ದಿನದ ವಿಷಯ ಎಲ್ಲರಿಗೂ ಉತ್ತಮವಾದ ಆರೋಗ್ಯಕರ ಜಗತ್ತನ್ನು ನಿರ್ಮಿಸುವುದಾಗಿದೆ. ಆರೋಗ್ಯಕರ ಜೀವನವನ್ನು ಹೊಂದುವುದು ಎಂದರೆ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡುವುದು ಎಂದಾಗುತ್ತದೆ. ನಿಮ್ಮ ಜೀವನಶೈಲಿಗೆ ತಕ್ಕಂತೆ ಆರೋಗ್ಯದಲ್ಲಿ ಸುಧಾರಣೆಗಳನ್ನು ತರಲು ಇಚ್ಛಿಸಿದರೆ ನೀವು ಒಬ್ಬಂಟಿಯಾಗಿಲ್ಲ ಎಂದರ್ಥ. ಆಹಾರ ಮತ್ತು ಜೀವನಶೈಲಿಯಲ್ಲಿನ ಸರಳ ಮಾರ್ಪಾಡುಗಳು ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಾಗಿ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಇಂದು ಮಾನಸಿಕವಾಗಿ ಆರೋಗ್ಯದ ಕಾಳಜಿಯನ್ನು ಮಾಡುವ ಐದು ವಿಧಾನವನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.
ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಹೊಂದಲು 5 ನಿಯಮಗಳು
1. ಆರೋಗ್ಯಕರ ಆಹಾರ
ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಹಂತಗಳಲ್ಲಿ ಸಮತೋಲಿತ ಆಹಾರವು ಒಂದು ಪ್ರಮುಖ ಘಟ್ಟವಾಗಿರುತ್ತದೆ. ದಿನಕ್ಕೆ ಕನಿಷ್ಠ ಮೂರು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸಿವುದು ಅಗತ್ಯವಾಗಿರುತ್ತದೆ. ಇನ್ನು ರಾತ್ರಿಯ ಭೋಜನವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯದ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಬಹುದು ಎಂಬುವುದನ್ನು ಮರೆಯದಿರಿ. ಬಹುಪಾಲು ಆಹಾರ ಸೇವನೆಯು ಆರೋಗ್ಯಕರ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ ಭರಿತ ಆಹಾರವನ್ನು ಒಳಗೊಂಡಿರಬೇಕು. ಇದಲ್ಲದೆ, ಸಂಸ್ಕರಿಸದ ಸಂಪೂರ್ಣ ಆಹಾರವನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಸಮತೋಲಿತ ಆಹಾರವು ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸ್ವೀಕರಿಸಲು ನಿಮಗೆ ಸಹಾಯ ಮಾಡುತ್ತದೆ.
2. ಉತ್ತಮ ನಿದ್ರೆ ಮಾಡಿ
ನಿಮ್ಮ ಒಟ್ಟಾರೆ ಯೋಗಕ್ಷೇಮದಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸ್ಥೂಲಕಾಯತೆ ಹಾಗೂ ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳಿಗೆ ನಿದ್ರಾಹೀನತೆಯು ಸಂಬಂಧಿಸಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಎಲ್ಲಾ ವಯಸ್ಸಿನ ಜನರಿಗೆ ಉತ್ತಮ, ಗುಣಮಟ್ಟದ ನಿದ್ರೆಯನ್ನು ಹೆಚ್ಚು ಶಿಫಾರಸು ಮಾಡಲಾಗಿದೆ ಏಕೆಂದರೆ ಇದು ನಿಮ್ಮ ಆರೋಗ್ಯವನ್ನು ನೀವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸುಧಾರಿಸುತ್ತದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮವಾಗಿರಲು ಮತ್ತು ಆರೋಗ್ಯದಲ್ಲಿನ ಅನೇಕ ಸಮಸ್ಯೆಗಳಿಗೆ ಉತ್ತಮ ನಿದ್ರೆ ರಾಮಬಾಣವಾಗಿರುತ್ತದೆ.
ಪ್ರತಿ ರಾತ್ರಿಯೂ ನಿದ್ರೆಗೆ ಜಾರುವಲ್ಲಿ ನಿಮಗೆ ಸಮಸ್ಯೆ ಕಂಡುಬಂದರೆ, ಅದನ್ನು ಸುಧಾರಿಸಲು ನೀವು ಹಲವಾರು ಮಾರ್ಗಗಳನ್ನು ಪ್ರಯತ್ನಿಸಬಹುದು ಅವುಗಳಲ್ಲಿ ಕೆಲವು ಈ ಕೆಳಗಿನಂತಿದೆ.
3. ಒತ್ತಡ ನಿಯಂತ್ರಣ
ಒತ್ತಡವು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ತೂಕ ಹೆಚ್ಚು ಮಾಡುವುದಲ್ಲದೇ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒತ್ತಡವನ್ನು ನಿಯಂತ್ರಣಕ್ಕೆ ತರಲು ಅನೇಕ ವಿಧಾನಗಳಿವೆ. ವ್ಯಾಯಾಮ, ಸ್ವಾಭಾವಿಕ ನಡಿಗೆ, ಆಳವಾದ ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. ಅತಿಯಾದ ಒತ್ತಡಕ್ಕೆ ಒಳಗಾಗದೆ ನಿಮ್ಮ ದಿನನಿತ್ಯದ ಜೀವನವನ್ನು ನಿಭಾಯಿಸಲು ನಿಮಗೆ ಸಂಪೂರ್ಣವಾಗಿ ಸಾಧ್ಯವಾಗದಿದ್ದರೆ, ಮನಶ್ಶಾಸ್ತ್ರಜ್ಞರನ್ನು ಕಾಣುವುದು ಅಗತ್ಯ.
4. ಮಾನಸಿಕ ಆರೋಗ್ಯಕ್ಕೆ ಗಮನ ನೀಡಿ
ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ದೈಹಿಕ ಅಂಶಗಳ ಕಡೆಗೆ ಗಮನಹರಿಸಲು ಮುಂದಾಗುವಾಗ ಮಾನಸಿಕ ಆರೋಗ್ಯ ಸ್ಥಿಮಿತತೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತದೆ. ಆದಾಗ್ಯೂ, ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯವಾಗಿದೆ ಮತ್ತು ಮಾನಸಿಕ ಆರೋಗ್ಯವು ನಿಮ್ಮ ಒಟ್ಟಾರೆ ಆರೋಗ್ಯದ ಅಡಿಪಾಯ ಎಂಬುದನ್ನು ಮರೆಯಬೇಡಿ. ಆರೋಗ್ಯವನ್ನು ಪ್ರತಿದಿನವೂ ನಿರ್ವಹಿಸುವುದು ಮತ್ತು ನಿರ್ಣಯಿಸುವುದು ಬಹಳ ಮುಖ್ಯ.
5. ವ್ಯಾಯಾಮ
ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿಡಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ನಿಯಮಿತ ವ್ಯಾಯಾಮದ ಪ್ರಯೋಜನಗಳನ್ನು ಅಧ್ಯಯನಗಳು ಕೂಡ ಸಾಬೀತುಪಡಿಸಿವೆ. ಇನ್ನು ವಾರಕ್ಕೆ ಮೂರು ಬಾರಿ ವ್ಯಾಯಾಮವನ್ನು ಮಾಡುವುದರಿಂದ ದೀರ್ಘಾಯುಷ್ಯ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರತಿ ವಾರ 150 ನಿಮಿಷಗಳ ವ್ಯಾಯಾಮ ಅಥವಾ ವಾರಕ್ಕೆ ಕನಿಷ್ಠ ಮೂರು ಬಾರಿ ವ್ಯಾಯಾಮವನ್ನು ಶಿಫಾರಸು ಮಾಡುತ್ತದೆ.
ಜೀವನಕ್ರಮಗಳು ವಿನೋದಮಯವಾಗಿರಬೇಕು ಮತ್ತು ಇದು ನಿಮ್ಮ ಕೆಲಸ ಎಂದು ಭಾವಿಸುವ ಬದಲು ನಿಮ್ಮ ವ್ಯಾಯಾಮವನ್ನು ನೀವು ಆನಂದಿಸಬೇಕು. ಇನ್ನು ಕೆಲವು ತಮಾಷೆಯ ದೈಹಿಕ ಚಟುವಟಿಕೆಗಳು ಕೂಡ ಇವುಗಳಲ್ಲಿ ಸೇರಿಕೊಂಡಿವೆ.
ಒಟ್ಟಾರೆ ಈ ಬಾರಿಯ ಆರೋಗ್ಯ ದಿನ, ಈ ಅಗತ್ಯ ಅಂಶಗಳನ್ನು ನಿಮ್ಮ ಆರೋಗ್ಯದಲ್ಲಿ ಸೇರಿಸಲಿ ಮತ್ತು ಉತ್ತಮ ಜೀವನ ನಿಮ್ಮದಾಗಲಿ.
ಇದನ್ನೂ ಓದಿ: Health Tips: ಈ ಔಷಧೀಯ ಸಸ್ಯಗಳು ನಿಮ್ಮ ಗಾರ್ಡನ್ನಲ್ಲಿ ಇರಲಿ; ಅಡುಗೆಗೂ ಆಯಿತು.. ಆರೋಗ್ಯಕ್ಕೂ ಒಳ್ಳೆಯದು