ಹೃದಯಾಘಾತವಾದಾಗ ನಿಮ್ಮ ಬಳಿ ಇರತ್ತೆ ಗೋಲ್ಡನ್ ಟೈಮ್; ವೈದ್ಯರು ನೀಡುವ ಸಲಹೆ ಏನು ?

| Updated By: preethi shettigar

Updated on: Oct 29, 2021 | 3:06 PM

Heart Attack: ಆಹಾರ ಪದ್ಧತಿಯನ್ನು ಸರಿಪಡಿಸುವುದು ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ಇಲ್ಲಿ ಅಗತ್ಯ. ವೈದ್ಯರು ಸಾಮಾನ್ಯವಾಗಿ ಹೃದಯಾಘಾತವಾದ ಸಮಯವನ್ನು ಗೋಲ್ಡನ್ ಟೈಮ್​ ಎಂದು ಉಲ್ಲೇಖಿಸುತ್ತಾರೆ. ಅದರ ಬಗ್ಗೆ ಪ್ರತಿಯೊಬ್ಬ ರೋಗಿಯು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಹೃದಯಾಘಾತವಾದಾಗ ನಿಮ್ಮ ಬಳಿ ಇರತ್ತೆ ಗೋಲ್ಡನ್ ಟೈಮ್; ವೈದ್ಯರು ನೀಡುವ ಸಲಹೆ ಏನು ?
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಆಹಾರ ಮತ್ತು ಜೀವನಶೈಲಿಯಲ್ಲಿನ ಅಡಚಣೆಗಳಿಂದ ಈ ರೋಗವು ಉಲ್ಬಣಗೊಳ್ಳುತ್ತಿದೆ. ವೈದ್ಯಕೀಯ ತಜ್ಞರು ಮತ್ತು ವೈದ್ಯರ ಪ್ರಕಾರ, ಚಿಕಿತ್ಸೆಯ ಜೊತೆಗೆ ಜೀವನಶೈಲಿಯನ್ನು ಬದಲಾಯಿಸುವುದು ಅವಶ್ಯಕ. ಆಹಾರ ಪದ್ಧತಿಯನ್ನು ಸರಿಪಡಿಸುವುದು ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ಇಲ್ಲಿ ಅಗತ್ಯ. ವೈದ್ಯರು ಸಾಮಾನ್ಯವಾಗಿ ಹೃದಯಾಘಾತವಾದ ಸಮಯವನ್ನು ಗೋಲ್ಡನ್ ಟೈಮ್​ ಎಂದು ಉಲ್ಲೇಖಿಸುತ್ತಾರೆ. ಅದರ ಬಗ್ಗೆ ಪ್ರತಿಯೊಬ್ಬ ರೋಗಿಯು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಗೋಲ್ಡನ್ ಅವರ್ ಎಂದರೇನು ಮತ್ತು ಹೃದ್ರೋಗಿಗಳಿಗೆ ಅದು ಏಕೆ ಮುಖ್ಯ?
ಈ ಬಗ್ಗೆ ವೈದ್ಯರು ಹೇಳುವಂತೆ ರೋಗಿಗೆ ಹೃದಯಾಘಾತವಾಗಿದೆ ಎಂದು ತಿಳಿದ ತಕ್ಷಣ ಚಿಕಿತ್ಸೆ ಆರಂಭಿಸಬೇಕು. ರೋಗಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದರೆ ಪ್ರಾಣಾಪಾಯದಿಂದ ಪಾರಾಗಬಹುದು. ಹೃದಯಾಘಾತದ ಮೊದಲ ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಈ ಕುರಿತು ದೆಹಲಿಯ ಜಿ.ಬಿ.ಪಂತ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸಂಜಯ್ ತ್ಯಾಗಿ ಅವರು ಮಾತನಾಡಿದ್ದು, ಹೃದಯಾಘಾತದ ನಂತರ ಹೃದಯದ ನಾಡಿಮಿಡಿತದಲ್ಲಿ ಅಡಚಣೆಯಾಗುತ್ತದೆ. ಆಗ ತಕ್ಷಣ ಅದು ಇಡೀ ಹೃದಯಕ್ಕೆ ಹರಡುವ ಅಪಾಯವಿರುತ್ತದೆ.

ಹೃದಯಾಘಾತದಲ್ಲಿ ಏನಾಗುತ್ತದೆ?
ಡಾ.ತ್ಯಾಗಿ ಅವರ ಪ್ರಕಾರ, ಹೃದಯದ ನಾಡಿಮಿಡಿತದಲ್ಲಿ ಅಡಚಣೆಯಿರುವ ಭಾಗವು ನಾಶವಾಗಲು ಪ್ರಾರಂಭಿಸುತ್ತದೆ. ತಕ್ಷಣವೇ ಚಿಕಿತ್ಸೆ ನೀಡಿದರೆ, ನಾಡಿಮಿಡಿತವನ್ನು ತೆರೆದರೆ, ರೋಗಿಯ ಜೀವವನ್ನು ಉಳಿಸಬಹುದು. ಈ ಕೆಲಸವನ್ನು ಇಂಜೆಕ್ಷನ್ ಮೂಲಕ ಅಥವಾ ಆಂಜಿಯೋಪ್ಲ್ಯಾಸ್ಟಿ ಮೂಲಕ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೃದ್ರೋಗಿಯನ್ನು ಸಾವಿನಿಂದ ರಕ್ಷಿಸಬಹುದು. ಹೆಚ್ಚಿನ ರೋಗಿಗಳು ಹೃದಯಾಘಾತದ ಮೊದಲ ಗಂಟೆಯೊಳಗೆ ಸಾಯುತ್ತಾರೆ. ಹೃದಯಾಘಾತದ ಶೇ 50 ರಷ್ಟು ಸಾವು, ಮೊದಲ ಒಂದು ಗಂಟೆಯಲ್ಲಿ ಸಂಭವಿಸುತ್ತವೆ. ಆದ್ದರಿಂದ, ಮೊದಲ ಗಂಟೆಯಲ್ಲಿ ಅದನ್ನು ಗುರುತಿಸುವುದು ಮತ್ತು ಚಿಕಿತ್ಸೆ ನೀಡುವುದು ಬಹಳ ಮುಖ್ಯ. ರೋಗಲಕ್ಷಣಗಳನ್ನು ಗುರುತಿಸಿ ಮತ್ತು ತಕ್ಷಣ ಈ ರೋಗಿಯನ್ನು ಚಿಕಿತ್ಸಾ ಸೌಲಭ್ಯಕ್ಕಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವುದು ಮುಖ್ಯ.

ಚಿಕಿತ್ಸೆ ಹೇಗಿರಬೇಕು?
ಹೃದಯಾಘಾತದ ಸಂದರ್ಭದಲ್ಲಿ ಯಾವ ಚಿಕಿತ್ಸೆ ನೀಡಬೇಕು? ಎನುವುದು ಎಲ್ಲರನ್ನು ಕಾಡುವ ಪ್ರಶ್ನೆ. ಈ ಬಗ್ಗೆ ಡಾ.ತ್ಯಾಗಿ  ಸಲಹೆ ನೀಡಿದ್ದಾರೆ. ಆರಂಭದಲ್ಲಿ ಆಸ್ಪಿರಿನ್ ನಂತಹ ಔಷಧಗಳು ನೀರಿನಲ್ಲಿ ಕರಗುತ್ತವೆ. ಆಂಜಿಯೋಪ್ಲ್ಯಾಸ್ಟಿ ಸೌಲಭ್ಯವಿರುವ ಆಸ್ಪತ್ರೆಯಲ್ಲಿ ರೋಗಿಯ ಆಂಜಿಯೋಗ್ರಫಿ ಮಾಡಿ ತಡೆಹಿಡಿಯಲಾದ ನಾಡಿಯನ್ನು ತೆರೆಯಲಾಗುತ್ತದೆ. ಆದರೆ ರೋಗಿಯು ದೊಡ್ಡ ಆಸ್ಪತ್ರೆ ಅಥವಾ ಕ್ಯಾಥ್ ಲ್ಯಾಬ್ ಸೌಲಭ್ಯವಿಲ್ಲದ ಹಳ್ಳಿಯಲ್ಲಿದ್ದರೆ, ಚುಚ್ಚುಮದ್ದಿನ ಮೂಲಕ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಬಹುದು. ಆರಂಭಿಕ ಚಿಕಿತ್ಸೆಯ ಸಮಯದಲ್ಲಿ ಇಂಜೆಕ್ಷನ್ ಶೇ. 60-70 ಯಶಸ್ಸನ್ನು ನೀಡುತ್ತದೆ. ಆಂಜಿಯೋಪ್ಲಾಸ್ಟಿ ಮಾಡಿದರೆ ಶೇ.90ಕ್ಕೂ ಹೆಚ್ಚು ಯಶಸ್ಸು ಸಿಗುತ್ತದೆ.

ತೀವ್ರ ಲಕ್ಷಣಗಳು ಯಾವುವು?
ಆಸ್ಪತ್ರೆಯಲ್ಲಿ ತಕ್ಷಣ ಗಮನಿಸಬೇಕಾದ ಗಂಭೀರ ಲಕ್ಷಣಗಳ ಬಗ್ಗೆಯೂ ತಿಳಿಯುವುದು ಬಹಳ ಮುಖ್ಯ. ಹೃದಯಾಘಾತಕ್ಕೂ ಮುನ್ನ ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುವುದು ಮೊದಲ ಲಕ್ಷಣ. ಎದೆಯಲ್ಲಿ ಭಾರವಿದೆ, ಎದೆಯಲ್ಲಿ ಅಸ್ವಸ್ಥತೆ ಕೆಲವು ನಿಮಿಷಗಳಿಗಿಂತ ಹೆಚ್ಚು ಇರುತ್ತದೆ. ಈ ನೋವು ದವಡೆ ಮತ್ತು ಕೆಳಗಿನ ತೋಳಿನವರೆಗೆ ಹೋಗುತ್ತದೆ. ನೋವು ತೋಳುಗಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ಕೂಡ ಇರುತ್ತದೆ. ಸ್ವಲ್ಪ ಸಮಯದ ನಂತರ ಅದು ಸರಿಯಾಗಬಹುದು. ಇದರ ನಂತರ ಹೃದಯಾಘಾತ ಬರುತ್ತದೆ. ಇದರಲ್ಲಿ ಎದೆಯಲ್ಲಿ ಭಾರೀ ನೋವು, ಬೆವರುವುದು, ಹೆದರಿಕೆ, ಅನೇಕ ಜನರು ವಾಂತಿ ಕೂಡ ಮಾಡಬಹುದು. ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಅಂತಹ ರೋಗಲಕ್ಷಣಗಳು ಸಂಭವಿಸಿದಾಗ ಮತ್ತು 10 ರಿಂದ 15 ನಿಮಿಷಗಳಲ್ಲಿ ಇದು ಸುಧಾರಿಸದಿದ್ದರೆ, ಇದು ಹೃದಯಾಘಾತದ ದೊಡ್ಡ ಲಕ್ಷಣವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಕೂಡಲೇ ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಇದನ್ನೂ ಓದಿ:
ಪುನೀತ್​ಗೆ ತೀವ್ರ ಹೃದಯಾಘಾತವಾಗಿದೆ, ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಏನನ್ನೂ ಹೇಳೋಕೆ ಆಗಲ್ಲ; ಆಸ್ಪತ್ರೆ ವೈದ್ಯರು

Health Tips: ಹೃದಯ ಆರೋಗ್ಯ ಸುಧಾರಣೆಗೆ ಈ ಹಣ್ಣುಗಳ ಸೇವನೆ ಪ್ರಯೋಜನಕಾರಿ

Published On - 2:59 pm, Fri, 29 October 21