World Stroke Day 2021: ವಿಶ್ವ ಪಾರ್ಶ್ವವಾಯು ಜಾಗೃತಿ ದಿನದ ಮಹತ್ವ ಇತಿಹಾಸದ ಜೊತೆಗೆ ತಡೆಗಟ್ಟುವ ವಿಧಾನಗಳು
ವಿಶ್ವ ಪಾರ್ಶ್ವವಾಯು ಜಾಗೃತಿ ದಿನ: ಪಾರ್ಶ್ವವಾಯು ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸುವಲ್ಲಿ ಅರಿವು ಮೂಡಿಸಲು ಪ್ರತೀ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಪ್ರತೀ ವರ್ಷ ಅಕ್ಟೋಬರ್ 29ನೇ ತಾರೀಕಿನಂದು ವಿಶ್ವ ಪಾರ್ಶ್ವವಾಯು ಜಾಗೃತಿ ದಿನವನ್ನು ಆರಿಸಲಾಗುತ್ತದೆ. ರಕ್ತದ ಹರಿವು ಮೆದುಳಿಗೆ ತಲುಪಲು ವಿಳಂಬವಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸುವಲ್ಲಿ ಅರಿವು ಮೂಡಿಸಲು ಪ್ರತೀ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಪಾರ್ಶ್ವವಾಯು ಸಮಸ್ಯೆಯ ಸಮಯದಲ್ಲಿ ಯಾವ ರೀತಿ ಎಚ್ಚರದಿಂದಿರಬೇಕು ಮತ್ತು ಆ ಸಮಯದಲ್ಲಿ ಲಕ್ಷಣಗಳು ಯಾವ ರೀತಿಯಿರುತ್ತದೆ ಎಂಬುದರ ಕುರಿತಾಗಿ ಜನರಿಗೆ ತಿಳಿಸುವ ಉದ್ದೇಶವನ್ನು ಹೊಂದಿದೆ.
ಕೆನಡಾದ ವ್ಯಾಂಕೋವರ್ನಲ್ಲಿ ನಡೆದ ವಿಶ್ವ ಸ್ಟ್ರೋಕ್ 2004ರಲ್ಲಿ ವಿಶ್ವ ಸ್ಟ್ರೋಕ್ ದಿನವನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು. ಅದೇ ಸಮಯದಲ್ಲಿ ಇಂಟರ್ನ್ಯಾಷನಲ್ ಸ್ಟ್ರೋಕ್ ಸೊಸೈಟಿ ವರ್ಲ್ಡ್ ಸ್ಟ್ರೋಕ್ ಫೆಡರೇಶನ್ ವಿಶ್ವ ಸ್ಟ್ರೋಕ್ ಸಂಸ್ಥೆ ವಿಶ್ವ ಸ್ಟ್ರೋಕ್ ದಿನದ ನಿರ್ವಹಣೆಯನ್ನು ವಹಿಸಿಕೊಂಡಿತು.
ಸ್ಟ್ರೋಕ್ನಲ್ಲಿ ಹಲವಾರು ವಿಧಗಳಿವೆ ಇಸ್ಕೆಮಿಕ್ ಸ್ಟ್ರೋಕ್ ಹೆಮರಾಜಿಕ್ ಸ್ಟ್ರೋಕ್ ಅಸ್ಥಿರ ಇಸ್ಕೆಮಿಕ್ ಅಟ್ಯಾಕ್ ಸ್ಟ್ರೋಕ್ ಬ್ರ್ಐನ್ ಸ್ಟೆಮ್ ಸ್ಟ್ರೋಕ್ ಕ್ರಿಕ್ಟೋಜೆನಿಕ್ ಸ್ಟ್ರೋಕ್
ತಡೆಗಟ್ಟುವ ವಿಧಾನಗಳು ಆರೊಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮ ಆರೋಗ್ಯಕರ ಜೀವನದ ಎರಡು ಮುಖ್ಯ ಧ್ಯೇಯಗಳಾಗಿವೆ. ಈ ಎರಡು ಅಂಶ ಯಾವುದೇ ರೋಗವನ್ನು ಕಡಿಮೆ ಮಾಡುತ್ತದೆ ಮತ್ತು ನಿವಾರಿಸುತ್ತದೆ. ಸ್ಟ್ರೋಕ್ ತಡೆಗಟ್ಟುವಲ್ಲಿ ಸಹಾಯ ಮಾಡುವ ಕೆಲವು ಅಂಶಗಳನ್ನು ಕೆಳಗೆ ನೀಡಲಾಗಿದೆ.
ಆಹಾರ: ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ಒಳಗೊಂಡಂತೆ ಕಡಿಮೆ ಕೊಬ್ಬು, ಹೆಚ್ಚಿನ ಫೈಬರ್ಯುಕ್ತ ಆಹಾರವನ್ನು ಸೇವಿಸಿ.
ವ್ಯಾಯಾಮ: ನಿಯಮಿತ ವ್ಯಾಯಾಮವು ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತ್ತದೆ.
ಧೂಮಪಾನವನ್ನು ನಿಲ್ಲಿಸಿ: ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ಗೊತ್ತಿದೆ. ಹಾಗಿರುವಾಗ ಧೂಮಪಾನವನ್ನು ನಿಲ್ಲಿಸುವ ಮೂಲಕ ಪಾರ್ಶ್ವವಾಯು ಅಪಾಯಗಳು ಕಡಿಮೆಯಾಗುತ್ತದೆ.
ನಿರ್ವಹಣೆ: ನಿಮಗೆ ಪಾರ್ಶ್ವವಾಯು ಸಮಸ್ಯೆ ಇದ್ದರೆ ಜೀವನ ಶೈಲಿಯಲ್ಲಿನ ಬದಲಾವಣೆಗಳು ಬಹಳ ಮುಖ್ಯ. ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನವಹಿಸಲೇಬೇಕು. ಉತ್ತಮ ಅಹಾರ ಪದ್ಧತಿಯ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುವ ಅಂಶಗಳು ಟ್ರಾನ್ಸ್ ಕೊಬ್ಬಿನೊಂದಿಗೆ ಸಂಸ್ಕರಿಸಿದ ಆಹಾರಗಳು ಸಂಸ್ಕರಿಸಿದ ಮಾಂಸದ ಅತಿಯಾದ ಸೇವನೆ ತುಂಬಾ ಜಂಕ್ ಫುಡ್ ಸೇವನೆ ಸಾಕಷ್ಟು ನೀರು ಕುಡಿಯದಿರುವುದು
ಇದನ್ನೂ ಓದಿ:
World Heart Day: ಪಿಸಿಒಎಸ್ ನಿಮ್ಮ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ