World Heart Day: ಪಿಸಿಒಎಸ್ ನಿಮ್ಮ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ

ಭಾರತದಲ್ಲಿ ಶೇ. 25 ರಿಂದ 30 ರಷ್ಟು ಮಹಿಳೆಯರು ಪಿಸಿಒಎಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪಿಸಿಒಎಸ್ ಆರೋಗ್ಯವನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಇಂತವರಲ್ಲಿ ಶೇ 40ರಷ್ಟು ಮಹಿಳೆಯರು ಟೈಪ್ 2 ಮಧುಮೇಹದ ಅಪಾಯದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

World Heart Day: ಪಿಸಿಒಎಸ್ ನಿಮ್ಮ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Sep 28, 2021 | 11:47 AM

ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ಇಡೀ ಮನುಕುಲವೇ ನರಳುತ್ತಿದೆ. ಅಸಂಖ್ಯಾತ ಜನರು ಸೋಂಕಿಗೆ ಒಳಗಾಗಿದ್ದಾರೆ. ಅನೇಕರು ತಮ್ಮ ಪ್ರೀತಿ ಪಾತ್ರರನ್ನು ಮಾರಣಾಂತಿಕ ಕೊವಿಡ್19 ವೈಸರ್ ಪರಿಣಾಮವಾಗಿ ಕಳೆದುಕೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಪ್ರಾರಂಭವಾಗುವ ಮೊದಲು ಹೃದಯ ರಕ್ತನಾಳದ ದುರ್ಬಲತೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಕಳವಳಕ್ಕೆ ಕಾರಣವಾಗಿತ್ತು. ಈಗಲೂ ಸಹ ಹೃದಯಾಘಾತ ಮತ್ತು ಪಾರ್ಶ್ವವಾಯು ತೊಂದರೆಗಳಿಂದ ಜನರು ಬಳಲುತ್ತಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಗಳಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿರುವಾಗ ಇದನ್ನು ತಡೆಗಟ್ಟುವ ಕ್ರಮಗಳು ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.

ಸ್ಯಾಚುರೇಟೆಡ್ ಕೊಬ್ಬುಗಳು, ಸ್ಥೂಲಕಾಯ, ಜಡತ್ವದ ಜೀವನ ಶೈಲಿ, ಮಧುಮೇಹ, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಧೂಮಪಾನದ ಅಧಿಕ ಸೇವನೆಯಿಂದಾಗಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚುತ್ತವೆ. ಆದಾಗ್ಯೂ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್​ (ಪಿಸಿಒಎಸ್) ಅಥವಾ ಪಿಸಿಒಡಿ ಕೂಡಾ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯಕ್ಕೆ ಕಾರಣವಾಗಿದೆ ಎಂದು ಜರ್ನಲ್ ಆಫ್ ಕ್ಲಿನಿಕ್ ಎಂಡೋಕ್ರೈನಾಲಜಿಯಲ್ಲಿ ಪ್ರಕಟವಾದ ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.

ಪಿಸಿಒಎಸ್ ಮತ್ತು ಹೃದಯಾಘಾತ ಪಿಸಿಒಎಸ್ ಹಾರ್ಮೋನ್​ ಅಸ್ವಸ್ಥೆತೆಯಿಂದ ಕಂಡು ಬರುವ ಸಮಸ್ಯೆಯಾಗಿದೆ. ಇದರಲ್ಲಿ ಅಂಡಾಶಯಗಳು ಅಸಹಜ ಪ್ರಮಾಣದ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಇಡೀ ಅಂಡಾಶಯದ ಮೇಲೆ ಸಣ್ಣ ಸಣ್ಣ ಚೀಲಗಳನ್ನು ಹೊಂದಿರುತ್ತದೆ. ಇದು ಅನಿಯಮಿತ ಅವಧಿ, ಬಂಜೆತನ, ಕೂದಲು ಉದುರು ಸಮಸ್ಯೆ, ಮೊಡವೆ, ಮುಖದ ಕೂದಲು ಮತ್ತು ಮುಟ್ಟಿನ ಸಮಯದಲ್ಲಿ ನೋವಿಗೆ ಕಾರಣವಾಗುತ್ತವೆ.

ಭಾರತದಲ್ಲಿ ಶೇ. 25 ರಿಂದ 30 ರಷ್ಟು ಮಹಿಳೆಯರು ಪಿಸಿಒಎಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪಿಸಿಒಎಸ್ ಆರೋಗ್ಯವನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಇಂತವರಲ್ಲಿ ಶೇ 40ರಷ್ಟು ಮಹಿಳೆಯರು ಟೈಪ್ 2 ಮಧುಮೇಹದ ಅಪಾಯದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಜತೆಗೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನೂ ಸಹ ಎದುರಿಸುವ ಸಾಧ್ಯತೆಗಳೂ ಇರುತ್ತದೆ.

ಪಿಸಿಒಎಸ್, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ ಎಂದು ಹೃದ್ರೋಗ ತಜ್ಞರಾದ ಡಾ. ರಾಜಪಾಲ್ ಸಿಂಗ್ ಅವರು ವಿವರಿಸಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್​ನಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಸುಮಾರು ಶೇ 25 ರಿಂದ 30 ರಷ್ಟು ಮಕ್ಕಳನ್ನು ಹೆರುವ ವಯಸ್ಸಿನಲ್ಲಿ ಮಹಿಳೆಯರು ಪಾಲಿಸಿಸ್ಟಿಕ್ ಸಿಂಡ್ರೋಮ್ (ಪಿಸಿಒಎಸ್) ಅಥವಾ ಪಾಲಿಸ್ಟಿಕ್ ಓವರಿಯನ್ ಡಿಸೀಸ್ (ಪಿಸಿಒಡಿ)ಯಿಂದ ಬಳಲುತ್ತಿದ್ದಾರೆ. ಇದು ಬಂಜೆತನಕ್ಕೆ ಕಾರಣವಾಗುತ್ತದೆ. ಇದು ಹೃದಯ ಸಂಬಂಧಿತ ಖಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಪಿಸಿಒಎಸ್ ಹಾರ್ಮೋನುಗಳ ಅಸಮತೋಲನದಿಂದಾಗಿ ದೀರ್ಘಕಾಲದ ಚಯಾಪಚಯ ಕ್ರಿಯೆಗೆ ತೊಡಕು ಉಂಟಾಗುತ್ತದೆ. ಏಕೆಂದರೆ ಪಿಸಿಒಎಸ್ ಪಾರ್ಶ್ವವಾಯು ಮತ್ತು ಹೃದಯರಕ್ತನಾಳದ ಖಾಯಿಲೆಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಸಿಂಡ್ರೋಮ್​ನಿಂದ ಉಂಟಾಗುವ ತೊಡಕುಗಳನ್ನು ಕಡಿಮೆ ಮಾಡಲು ಪಿಸಿಒಎಸ್ಅನ್ನು ಮೊದಲೇ ಪತ್ತೆಹಚ್ಚಬೇಕು ಎಂದು ಎಸ್ಆರ್​ಎಲ್​ ಪ್ರಯೋಗಾಲಯ ಮುಖ್ಯಸ್ಥ ಡಾ. ದೀಪಕ್ ಸಾಂಘವಿ ಹೇಳಿದ್ದಾರೆ.

ಪಿಸಿಒಎಸ್ ಸಮಸ್ಯೆಯಲ್ಲಿ ಜೀವನ ಬದಲಾವಣೆಯಲ್ಲಿ ಹೊಂದಿಕೊಳ್ಳುವುದು ಮುಖ್ಯ. ಪ್ರತಿನಿತ್ಯ ವ್ಯಾಯಾಮವನ್ನು ದಿನಚರಿಯ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು. ತಜ್ಞರು ಸೂಚಿಸಿದ ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಬೇಕು. ಆರಂಭದಲ್ಲಿಯೇ ಪಿಸಿಒಎಸ್ ತೊಡಕನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Heart Failure Symptoms: ಹೃದಯ ವೈಫಲ್ಯದ ಈ ಲಕ್ಷಣಗಳನ್ನು ಎಂದು ನಿರ್ಲಕ್ಷಿಸಬೇಡಿ

Women Health: ಪಿಸಿಒಎಸ್ ಸಮಸ್ಯೆ ಇರುವವರು ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ

(World Heart day PCOS affect to risk of heart and stroke new study in Kannada)

Published On - 11:34 am, Tue, 28 September 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್