Sign In

By signing in or creating an account, you agree with Associated Broadcasting Company's Terms & Conditions and Privacy Policy.

Almonds Benefits: ತೂಕ ಕಡಿಮೆ ಮಾಡಿಕೊಳ್ಳಬೇಕೆ? ಬಾದಾಮಿಯನ್ನು ಈ ವಿಧಾನಗಳಲ್ಲಿ ಬಳಸಿದರೆ ಪರಿಣಾಮ‌‌ ಖಂಡಿತ!

Weight Loss Tips: ಬಾದಾಮಿಯು ಫೈಬರ್ ಮತ್ತು ಪ್ರೋಟೀನ್​ಗಳಿಂದ ಸಮೃದ್ಧವಾಗಿರುತ್ತದೆ. ಇದು ದೇಹದ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

Almonds Benefits: ತೂಕ ಕಡಿಮೆ ಮಾಡಿಕೊಳ್ಳಬೇಕೆ? ಬಾದಾಮಿಯನ್ನು ಈ ವಿಧಾನಗಳಲ್ಲಿ ಬಳಸಿದರೆ ಪರಿಣಾಮ‌‌ ಖಂಡಿತ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Sep 28, 2021 | 12:36 PM

ಉತ್ತಮ ಹೃದಯ ಆರೋಗ್ಯ, ಆರೋಗ್ಯಕರ ಜೀವನ ಶೈಲಿಯನ್ನು ಪಡೆಯಬೇಕಾದಲ್ಲಿ ಪೌಷ್ಟಿಕಯುಕ್ತ ಆಹಾರ ಕ್ರಮ ನಮ್ಮದಾಗಿರಬೇಕು. ದೇಹದ ತೂಕ ನಿಯಂತ್ರಣ ಕೂಡಾ ನಾವು ಸೇವಿಸುವ ಅಹಾರದಕ್ಕೆ ಅವಲಂಬಿತವಾಗಿರುತ್ತದೆ. ಹಾಗಿರುವಾಗ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಎಂದು ಯೋಚಿಸಿದ್ದರೆ ಬಾದಾಮಿಯನ್ನು ಸೇವಿಸಿ. ಇದು ನಿಮ್ಮ ತೂಕ ನಷ್ಟಕ್ಕೆ ಸಹಯವಾಗುತ್ತದೆ. ಯಾವ ಯಾವ ವಿಧಾನಗಳಲ್ಲಿ ಬಾದಾಮಿಯನ್ನು ಸೇವಿಸಬಹುದು ಎಂದು ಆಲೋಚಿಸುತ್ತಿದ್ದಿರಾ? ಈ ಕೆಲವು ವಿಧಾನಗಳ ಮೂಲಕ ನೀವು ಬಾದಾಮಿಯನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಬಾದಾಮಿಯು ಫೈಬರ್ ಮತ್ತು ಪ್ರೋಟೀನ್​ಗಳಿಂದ ಸಮೃದ್ಧವಾಗಿರುತ್ತದೆ. ಇದು ದೇಹದ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್​ನ ಡಯೆಟಿಕ್ಸ್ ರಿತಿಕಾ ಸಮದ್ಧರ್ ಹೇಳಿರುವ ಮಾಹಿತಿಯನ್ನು ಹಿಂದುಸ್ತಾನ್ ಟೈಮ್ಸ್​ನಲ್ಲಿ ಉಲ್ಲೇಖಿಸಲಾಗಿದೆ.

ಇಂಟರ್ ನ್ಯಾಶನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾದಾಮಿಯು ಶೇ. 39ರಷ್ಟು ಕೊಬ್ಬನ್ನು ಒಳಗೊಂಡಿರುತ್ತದೆ. ಇದರಲ್ಲಿ ಶೇ. 25ರಷ್ಟು ಹೃದಯ ಅರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳಿವೆ. ಅಧ್ಯಯನದ ಪ್ರಕಾರ, ನಿಯಮಿಯವಾಗಿ ಬಾದಾಮಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳುವುದಲ್ಲದೇ ಹೊಟ್ಟೆಯ ಕೊಬ್ಬು ಮತ್ತು ಸೊಂಟದ ಹೆಚ್ಚುವರಿ ಸುತ್ತಳತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಇದಲ್ಲದೇ ಬಾದಾಮಿ ಸೇವನೆಯು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯ ಪ್ರಯೋಜನ ಬೀರುವಂಥದ್ದು. ಒಂದು ಮುಷ್ಟಿ ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ಅನ್ನು ಶೇ 4.4 ರಷ್ಟು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ತಜ್ಞರು ಹೇಳುವ ಪ್ರಕಾರ ಪ್ರತಿನಿತ್ಯ 28 ರಿಂದ 30 ಗ್ರಾಂ ಬಾದಾಮಿ ಸೇವಿಸುವ ಮೂಲಕ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಬಾದಾಮಿ ಸೇವಿಸಲು ಸೂಕ್ತ ಸಮಯ ಯಾವುದು? ಊಟದ ಮಾಡುವ ಮೊದಲು ನಿಮಗೆ ಹಸಿವಾದಾಗ ಬಾದಾಮಿಯಿಂದ ತಯಾರಿಸಿದ ತಿಂಡಿಗಳನ್ನು ನೀವು ಸವಿಯಬಹುದು. ಕೆಲವರು ಮುಂಜಾನೆಯಲ್ಲಿ ತಿಂಡಿಯ ನಂತರ ಹಸಿವಾದಾಗ ಮಧ್ಯ ಆಹಾರವಾಗಿ ಸೇವಿಸುತ್ತಾರೆ. ಜತೆಗೆ ಸ್ನ್ಯಾಕ್ಸ್ ರೂಪದಲ್ಲಿಯೂ ಸಹ ಸಂಜೆಯ ವೇಳೆ ಸೇವಿಸಬಹುದು.

ಹಸಿ ಬಾದಾಮಿ ಬಾದಾಮಿಯನ್ನು ಹಸಿಯಾಗಿಯೂ ಸೇವಿಸಬಹುದು ಇಲ್ಲವೇ ಹುರಿದು ಸೇವಿಸಬಹುದು. ಸುಮಾರು 22 ರಿಂದ 23 ಗ್ರಾಂ ಬಾದಾಮಿ ನಿಮ್ಮ ದೇಹದಲ್ಲಿ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲವೇ ನೀರಿನಲ್ಲಿ ನೆನೆಸಿ ಅವುಗಳನ್ನು ಸೇವಿಸಬಹುದಾಗಿದೆ. ಯಾವುದಕ್ಕೂ ಬಾದಾಮಿಯ ಸಿಪ್ಪೆ ತೆಗೆದು ಸೇವಿಸಬೇಡಿ, ನೀರಿನಲ್ಲಿ ನೆನೆಸಿ ಸೇವಿಸುವಾಗಲೂ ಸಿಪ್ಪೆಯೊಂದಿಗೆ ಬಾದಾಮಿ ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಬಾದಾಮಿ ಪುಡಿ ನೀವು ಪ್ರತಿನಿತ್ಯ ಗಂಜಿ ಅಥವಾ ಇನ್ನಿತರ ಆಹಾರವನ್ನು ಸೇವಿಸುವಾಗ ಬಾದಾಮಿ ಪುಡಿಯನ್ನು ಸೇರಿಸಿಕೊಂಡು ಸೇವಿಸಬಹುದು. ಇದು ನಿಮ್ಮ ಅರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತದೆ ಜತೆಗೆ ಆಹಾರದೊಂದಿಗೆ ಬಾದಾಮಿ ನಿಮ್ಮ ದೇಹವನ್ನು ಸೇರುತ್ತದೆ.

ಬಾದಾಮಿ ಹಾಲು ಬಾದಾಮಿ ಹಾಲು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಸುಲಭದಲ್ಲಿ ಬಾದಾಮಿ ಹಾಲನ್ನು ತಯಾರಿಸಬಹುದು ಜತೆಗೆ ಹೆಚ್ಚು ರುಚಿಕರವಾಗಿಯೂ ಇರುತ್ತದೆ. ಈ ರೀತಿಯಾಗಿ ಸುಲಭದಲ್ಲಿ ನೀವು ಅರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ತೂಕ ನಷ್ಟಕ್ಕೆ ಅದೆಷ್ಟೋ ಪ್ರಯತ್ನ ಪಡುತ್ತಿದ್ದರೆ, ಈ ರೀತಿಯಾಗಿ ನೀವು ಆರೋಗ್ಯ ಪ್ರಯೋಜನಗಳ ಜತೆಗೆ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಇದನ್ನೂ ಓದಿ:

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 3 ಬಗೆಯ ಆರೋಗ್ಯಕರ ಪಾನೀಯಗಳು ಸಹಾಯಕ

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ

(Almonds use to 4 ways for weight loss check in kannada)

ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ