Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

Donkey Milk Benefits | ಕತ್ತೆ ಹಾಲನ್ನು ಕಾಸ್ಮೆಟಿಕ್ಸ್ ಗಳನ್ನು ತಯಾರಿಸಲು ಕೂಡ ಬಳಸಲಾಗುತ್ತದೆ. ಸನ್ ಸ್ಕ್ರೀನ್ ಲೋಷನ್, ಬ್ಯೂಟಿ ಕ್ರೀಮ್ ಹಾಗೂ ಇನ್ನಿತರ ಕಾಸ್ಮೆಟಿಕ್ಸ್ ಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸುತ್ತಾರೆ.

Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ
ತ್ವಚೆಯ ಸೌಂದರ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 27, 2021 | 5:24 PM

ಜಗತ್ತಿನ ಅತ್ಯಂತ ಸುಂದರಿಯರಲ್ಲಿ ಒಬ್ಬಳಾದ ಕ್ಲಿಯೋಪಾತ್ರ ಸೌಂದರ್ಯದ ಬಗ್ಗೆ ಇಂದಿಗೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆಕೆಯ ಚಿರಯೌವನದ ಗುಟ್ಟೇನು? ಎಂಬುದರ ಬಗ್ಗೆ ಸಾಕಷ್ಟು ಕತೆಗಳು ಹೆಣೆದುಕೊಂಡಿವೆ. ಅಪ್ರತಿಮ ಸುಂದರಿಯಾಗಿದ್ದ ರಾಣಿ ಕ್ಲಿಯೋಪಾತ್ರ ತನ್ನ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕತ್ತೆಯ ಹಾಲನ್ನು ಬಳಸುತ್ತಿದ್ದಳಂತೆ. ದಿನವೂ ಕತ್ತೆ ಹಾಲಿನಲ್ಲೇ ಆಕೆ ಸ್ನಾನ ಮಾಡುತ್ತಿದ್ದಳಂತೆ. ಹಾಗಾದರೆ ಕತ್ತೆಯ ಹಾಲಿನಲ್ಲಿ ಅಂತಹ ಶಕ್ತಿ ಏನಿದೆ? ಕತ್ತೆ ಹಾಲನ್ನು ಬಳಸಿದರೆ ನಿಜಕ್ಕೂ ಸೌಂದರ್ಯ ಹೆಚ್ಚಾಗುತ್ತದಾ? ಚರ್ಮ ಫಳಫಳನೆ ಹೊಳೆಯುತ್ತದಾ? ಇಲ್ಲಿದೆ ಮಾಹಿತಿ.

ಕತ್ತೆಯ ಹಾಲು ಮನುಷ್ಯನ ಚರ್ಮವನ್ನು ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ದಿನವೂ ಕತ್ತೆ ಹಾಲನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೂ ಸಾಕಷ್ಟು ಅನುಕೂಲಗಳಿವೆ. ಈ ಕತ್ತೆ ಹಾಲನ್ನು ಕಾಸ್ಮೆಟಿಕ್ಸ್ ಗಳನ್ನು ತಯಾರಿಸಲು ಕೂಡ ಬಳಸಲಾಗುತ್ತದೆ. ಸನ್ ಸ್ಕ್ರೀನ್ ಲೋಷನ್, ಬ್ಯೂಟಿ ಕ್ರೀಮ್ ಹಾಗೂ ಇನ್ನಿತರ ಕಾಸ್ಮೆಟಿಕ್ಸ್ ಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸುತ್ತಾರೆ.

ಕತ್ತೆ ಹಾಲಿನಿಂದ ಮುಖವನ್ನು ತೊಳೆದರೆ ಮುಖ ಸುಕ್ಕುಗಟ್ಟುವುದಿಲ್ಲ. ಕತ್ತೆ ಹಾಲಿನಲ್ಲಿರುವ ಫ್ಯಾಟಿ ಆ್ಯಸಿಡ್ ಮುಖಕ್ಕೆ ಮಾಯಿಶ್ಚರೈಸರ್ ನೀಡುತ್ತದೆ. ಇದರಿಂದ ಮುಖ ಸುಕ್ಕುಗಟ್ಟುವುದು ಕಡಿಮೆಯಾಗುತ್ತದೆ. ಚರ್ಮ ಒಣಗುವಿಕೆಯನ್ನು ಕಡಿಮೆ ಮಾಡಿ, ಹೊಳೆಯುವಂತೆ ಮಾಡುತ್ತದೆ. ಅಲ್ಲದೆ, ಬಿಸಿಲಿಗೆ ಚರ್ಮ ಕಳೆಗುಂದದಂತೆ ತಡೆಯುತ್ತದೆ.

ನಾವು ದಿನವೂ ಕುಡಿಯುವ ಹಸುವಿನ ಹಾಲಿನಲ್ಲಿರುವ ಕೊಬ್ಬಿನ ಅಂಶಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಕತ್ತೆ ಹಾಲಿನಲ್ಲಿ ಕೊಬ್ಬಿನಾಂಶ ಇರುತ್ತದೆ. ತಾಯಿಯ ಎದೆ ಹಾಲಿನಲ್ಲಿ ಇರುವಷ್ಟು ಪ್ರಮಾಣದಲ್ಲಿ ವಿಟಮಿನ್ ಮತ್ತು ಫ್ಯಾಟಿ ಆಸಿಡ್ ಅಂಶಗಳು ಈ ಕತ್ತೆ ಹಾಲಿನಲ್ಲಿದೆ. ಕತ್ತೆಯ ಹಾಲು ಹಸುವಿನ ಹಾಲಿಗಿಂತ ಬಹಳ ಬೇಗ ಜೀರ್ಣವಾಗುತ್ತದೆ. ಈ ಕತ್ತೆಯ ಹಾಲಿನಲ್ಲಿ ಹಸುವಿನ ಹಾಲಿನಂತೆ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಬಿ2, ವಿಟಮಿನ್ ಬಿ6, ವಿಟಮಿನ್ ಡಿ ಮತ್ತು ವಿಟಮಿನ್ ಇ ಅಂಶಗಳು ಹೆಚ್ಚಾಗಿವೆ.

ಇದನ್ನೂ ಓದಿ: Diet Tips: ಡಯಟ್ ಮಾಡೋರು ಪನೀರ್​, ತುಪ್ಪ, ಮೊಸರು ತಿನ್ನಬಾರದಾ?

Health Tips: ಆಫೀಸು, ಮನೆ ಈ ಎಲ್ಲವುಗಳ ಒತ್ತಡದಿಂದ ಬಳಲುತ್ತಿದ್ದೀರಾ?; ಹೊರಬರಲು ಇಲ್ಲಿವೆ ಸುಲಭ ವಿಧಾನಗಳು

(Beauty Tips: Is donkey milk good for your skin Donkey Milk Benefits)

Published On - 5:22 pm, Mon, 27 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ