Heart Attack: ಹೃದಯಾಘಾತಕ್ಕೆ ಕಾರಣಗಳೇನು? ಈ ಬಗ್ಗೆ ವೈದ್ಯರು ಹೇಳುವುದೇನು?

ಹೃದಯಾಘಾತಕ್ಕೆ ಕಾರಣವೇನು ಮತ್ತು ಹೃದಯ ಆರೋಗ್ಯ ಸುಧಾರಿಸಿಕೊಳ್ಳುವ ಸಲಹೆಗಳೇನು? ಎಂಬುದರ ಕುರಿತಾಗಿ ವೈದ್ಯರು ಕೆಲವೊಂದಿಷ್ಟು ಮಾಹಿತಿಯನ್ನು ತಿಳಿಸಿದ್ದಾರೆ.

Heart Attack: ಹೃದಯಾಘಾತಕ್ಕೆ ಕಾರಣಗಳೇನು? ಈ ಬಗ್ಗೆ ವೈದ್ಯರು ಹೇಳುವುದೇನು?
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Oct 29, 2021 | 4:18 PM

ಜನರಲ್ಲಿ ಹೃದಯಾಘಾತದ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದೆ. ನೋಡಲು ಫಿಟ್ ಆಗಿದ್ದರೂ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತಿದೆ ಎನ್ನುತ್ತಾ ಅನೇಕರು ನಮ್ಮಲ್ಲಿಗೆ ಬರುತ್ತಾರೆ. ಆಹಾರ ಪದ್ಧತಿ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಉದಾಹರಣೆಗೆ ದೇಹಕ್ಕೆ ಸುಸ್ತು, ಆಯಾಸ ಬೇಕು, ಆದರೆ ಅದು ಅತಿಯಾದರೂ ದೇಹಕ್ಕೆ ಸಮಸ್ಯೆಯೇ ಎಂದು ವೈದ್ಯರಾದ ಡಾ. ಶೇಷಮೂರ್ತಿ ಹೆಗಡೆ ಶಿರಸಿ ಟಿವಿ9 ಡಿಜಿಟಲ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶ ರಕ್ತದ ಮೂಲಕ ಆಹಾರವಾಗಿ ಹೃದಯಕ್ಕೆ ಸೇರುತ್ತದೆ. ಅಂದರೆ ನಾವು ಸೇವಿಸುವ ಆಹಾರದಲ್ಲಿನ ಪೌಷ್ಟಿಕಾಂಶಗಳು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ ಪೋಷಣೆಯನ್ನು ನೀಡುತ್ತದೆ. ಹೃದಯಕ್ಕೆ ರಕ್ತನಾಳಗಳ ಮೂಲಕ ಹರಿಯುವ ರಕ್ತ ಹೆಪ್ಪುಗಟ್ಟಿದ ಸಂದರ್ಭದಲ್ಲಿ ಹೃದಯಾಘಾತ, ಎದೆನೋವು ಕಾಣಿಸಿಕೊಳ್ಳುತ್ತದೆ. ಇದು ದೇಹದಲ್ಲಿನ ಚಿಂತೆ, ಆಘಾತ ಜೊತೆಗೆ ದೇಹಕ್ಕೆ ತೀವ್ರವಾಗಿ ಒತ್ತಡ ಬಿದ್ದಾಗಲೂ ಸಂಭವಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಹೃದಯಕ್ಕೆ ಪೋಷಕಾಂಶ ಒದಗಿಸಲು ರಕ್ತನಾಳಗಳ ಕವಲುಗಳಿವೆ. ಅಂದರೆ ಮುಖ್ಯವಾದ ರಕ್ತನಾಳದ ಮೂಲಕ ಇತರ ಸಣ್ಣ ಪುಟ್ಟ ಕವಲುಗಳಲ್ಲಿ ರಕ್ತದ ಹರಿವು ಉಂಟಾಗುತ್ತದೆ. ಹೃದಯಕ್ಕೆ ರಕ್ತದ ಹರಿವು ನಿಂತಾಗ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ. ಇಲ್ಲವೇ ಮುಖ್ಯ ರಕ್ತ ನಾಳದಲ್ಲಿ ಅಡಚಣೆಗಳಾದರೆ ತೀವ್ರ ಅಪಾಯ ಉಂಟಅಗುವ ಸಾಧ್ಯತೆಗಳಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಹಾರ ಪದ್ಧತಿ ಉತ್ತಮ ಆಹಾರ ಪದ್ಧತಿ ಮನುಷ್ಯನಿಗೆ ಅತಿ ಅವಶ್ಯಕ. ಒಲ್ಳೆಯ ಜೀವನ ಶೈಲಿ ಮತ್ತು ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹೆಚ್ಚು ಕೊಲೆಸ್ಟ್ರಾಲ್​ಯುಕ್ತ ಅಥವಾ ಕೊಬ್ಬಿನಾಂಶಭರಿತ ಆಹಾರವನ್ನು ಸೇವಿಸಿದರೆ ಆರೋಗ್ಯಕ್ಕೆ ಅಪಾಯ ಹೆಚ್ಚು. ಅತಿಯಾದ ಕೊಬ್ಬಿನಾಂಶ ದೇಹದಲ್ಲಿ ರಕ್ತದೊತ್ತಡವನ್ನು ಉಂಟು ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪು ಗಟ್ಟುವ ಮೂಲಕ ಆರೋಗ್ಯ ಹದಗೆಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ನಿಯಮಿತವಾದ ವ್ಯಾಯಾಮ ಇರಲಿ ವ್ಯಾಯಾಮ ದೇಹಕ್ಕೆ ಬೇಕೇಬೇಕು. ಕೊಲೆಸ್ಟ್ರಾಲ್ ಕೊಬ್ಬಿನಾಂಶಗಳನ್ನು ಕಡಿಮೆ ಮಾಡಿಕೊಳ್ಳಲು ಜಿಮ್ ಮಾಡುವುದು, ವ್ಯಾಯಾಮ ಈ ರೀತಿಯಲ್ಲಿ ತೊಡಗಿಕೊಳ್ಳಬಹುದು. ಆದರೆ ಕೆಲವು ಬಾರಿ ದೇಹಕ್ಕೆ ಅತಿಯಾದ ಸುಸ್ತು ಆಯಾಸ ದೇಹದ ಅಂಗಗಳಿಗೆ ಒತ್ತಡವನ್ನುಂಟು ಮಾಡುತ್ತದೆ. ಅದು ಸಹ ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ನಿಯಮಿತವಾಗಿ ಮತ್ತು ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುವುದು ಅವಶ್ಯಕ.

ವೈದ್ಯಕೀಯ ಪರೀಕ್ಷೆ ನೀವು ನೋಡಲು ಸದೃಢರಾಗಿರಬಹುದು. ಫಿಟ್ ಆಗಿರಬಹುದು, ಯಾವುದೇ ಸಮಸ್ಯೆ ಇಲ್ಲದಂತೆ ಅನಿಸಿರಬಹುದು. ಆದರೆ ವೈದ್ಯಕೀಯ ಪರೀಕ್ಷೆಯನ್ನು ಅಥವಾ ತಪಾಸಣೆಯನ್ನು ಮಾಡಿಸಿಕೊಳ್ಳಿ. ನೀವು ಹೊರಗಡೆಯಿಂದ ಆರೋಗ್ಯವಂತರಾಗಿ ಅನಿಸಿದರೂ ದೇಹದ ಒಳಭಾಗದಲ್ಲಿನ ಕೆಲವು ಸಮಸ್ಯೆಗಳು ಅಪಾಯವನ್ನುಂಟು ಮಾಡುತ್ತದೆ.

ಬಿಪಿ, ಡಯಾಬಿಟಿಸ್, ಹೈಪರ್ ಟೆನ್ಷನ್, ನಿದ್ರಾಹೀನತೆ ಇದ್ದರೆ ಲಕ್ಷ್ಯವಿರಲಿ ಆಘಾತದ ವಿಷಯಗಳು, ಪ್ರತಿಯೊಂದಕ್ಕೂ ಟೆನ್ಷನ್, ಅತಿಯಾದ ಚಿಂತೆ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡಕ್ಕೆ ಕಾರಣ. ಇವು ನಿಮ್ಮ ರಕ್ತನಾಳಗಳಲ್ಲಿ ಒತ್ತಡವನ್ನು ಸೃಷ್ಟಿಸುತ್ತವೆ. ಇವುಗಳಿಂದ ಅಪಾಯ ಹೆಚ್ಚುವ ಸಾಧ್ಯತೆಗಳಿರುತ್ತವೆ. ಅದರಲ್ಲಿಯು ಮುಖ್ತವಾಗಿ ನಿದ್ರಾಹೀನತೆ ಅಪಾಯಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

ಹೃದಯಾಘಾತ ಮತ್ತು ಹೃದಯ ಸ್ತಂಭನ ಒಂದೇ ಅಲ್ಲ; ಇವುಗಳ ನಡುವೆ ಇರುವ ವ್ಯತ್ಯಾಸ ತಿಳಿಯಿರಿ

Published On - 4:02 pm, Fri, 29 October 21

ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್