ಹಲಸನ್ನು ಕಾಯಿ ಅಥವಾ ಹಣ್ಣಿನ ರೂಪದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇದು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ, ನಿಯಾಸಿನ್, ಪೊಟ್ಯಾಸಿಯಮ್, ಕಬ್ಬಿಣ, ಫೋಲಿಕ್ ಆಮ್ಲ, ಮೆಗ್ನೀಸಿಯಮ್ ಮತ್ತು ವಿಟಮಿನ್ ಎ(Vitamin A), ಸಿ ಮತ್ತು ಬಿ 6, ಥಯಾಮಿನ್ ಮತ್ತು ರೈಬೋಫ್ಲಾವಿನ್ ನಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ನೀವು ಇದನ್ನು ಇತರ ಹಲವು ವಿಧಾನಗಳಲ್ಲಿ ಸೇವಿಸಬಹುದು. ನೀವು ಹಲಸಿನ ಹಣ್ಣಿನ ಬಿರಿಯಾನಿ ಮತ್ತು ಫ್ರೈ ರೂಪದಲ್ಲಿಯೂ ಸೇವಿಸಬಹುದು. ಇದು ಆರೋಗ್ಯಕ್ಕೆ(Health) ಪ್ರಯೋಜನಕಾರಿ. ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಮತ್ತು ಹಲಸಿನ ಹಣ್ಣಿನಿಂದ(Jackfruit) ಯಾವ ಖಾದ್ಯಗಳನ್ನು ಮಾಡಬಹುದು ಎಂಬುದರ ವಿವರ ಇಲ್ಲಿದೆ.
ಮಧುಮೇಹ
ನೀವು ಮಧುಮೇಹಿಗಳಾಗಿದ್ದರೆ, ಇದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಲಸಿನ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಹಲಸಿನ ಹಣ್ಣಿನಲ್ಲಿರುವ ಕ್ಯಾಲೋರಿಗಳು ಕೂಡ ತುಂಬಾ ಕಡಿಮೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಸಹ ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಎಲ್ಲಾ ರೀತಿಯಲ್ಲೂ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ರೋಗನಿರೋಧಕ ಶಕ್ತಿ
ಹವಾಮಾನ ವೈಪರೀತ್ಯದಿಂದ ಹಲವು ಬಾರಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಲಸು ತಿನ್ನುವುದು ಋತುಮಾನದ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳು, ಪೊಟ್ಯಾಸಿಯಮ್, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ರಂಜಕದಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಹಲಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ತೂಕ ನಷ್ಟಕ್ಕೆ ಪ್ರಯೋಜನಕಾರಿ
ಹಲಸಿನ ಹಣ್ಣಿನಲ್ಲಿ ಕ್ಯಾಲೋರಿ ಕಡಿಮೆ. ಇದು ಫೈಬರ್ನಿಂದ ಸಮೃದ್ಧವಾಗಿದೆ. ಹಲಸು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ನಿಮ್ಮ ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಹಲಸಿನ ಹಣ್ಣಿನ ವಿವಿಧ ಖಾದ್ಯಗಳು
ಹಲಸಿನ ಹಣ್ಣಿನ ಬಿರಿಯಾನಿ
ಹಲಸಿನ ಹಣ್ಣಿನ ಬಿರಿಯಾನಿ ಮಾಡಲು, ಹಲಸಿನ ಹಣ್ಣಿನ ತುಂಡುಗಳನ್ನು ಮೊಸರು ಮತ್ತು ಮಸಾಲೆಗಳಲ್ಲಿ ಮ್ಯಾರಿನೇಟ್ ಮಾಡಿ. ಈಗ ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಮತ್ತು ಅದಕ್ಕೆ ಕೆಲವು ಪರಿಮಳಯುಕ್ತ ಮಸಾಲೆಗಳನ್ನು ಸೇರಿಸಿ. ಈಗ ಮ್ಯಾರಿನೇಟ್ ಮಾಡಿದ ಹಲಸಿನ ಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯ ಬೇಯಿಸಿ. ನಂತರ ಇದಕ್ಕೆ ಅಕ್ಕಿ ಮತ್ತು ನೀರು ಸೇರಿಸಿ. ಪಾತ್ರೆ ಮುಚ್ಚಿ ಮತ್ತು ಸ್ವಲ್ಪ ಸಮಯ ಬೇಯಲು ಬಿಡಿ. ಈ ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಬಿರಿಯಾನಿ ಸವಿಯಲು ಸಿದ್ಧ.
ಹಲಸಿನ ಹಣ್ಣಿನ ಫ್ರೈ
ಹಲಸಿನ ಹಣ್ಣಿನ ತುಂಡುಗಳನ್ನು ಕತ್ತರಿಸಿ ಕುದಿಸಿ. ಅದರ ನೀರನ್ನು ಹೊರತೆಗೆಯಿರಿ. ಅವುಗಳನ್ನು ಉಪ್ಪು, ಕರಿಮೆಣಸು, ಕೆಂಪು ಮೆಣಸಿನ ಪುಡಿ ಮತ್ತು ಜೀರಿಗೆ ಪುಡಿ, ಅಕ್ಕಿ ಹಿಟ್ಟಿನೊಂದಿಗೆ ಮ್ಯಾರಿನೇಟ್ ಮಾಡಿ. ಮಸಾಲೆ ಮಿಶ್ರಣವನ್ನು ಚೆನ್ನಾಗಿ ಕಲಸಿ. ಬೇಕಿಂಗ್ ಟ್ರೇನಲ್ಲಿ ಇರಿಸಿ. ಆಲಿವ್ ಎಣ್ಣೆ ಮತ್ತು ಮಸಾಲೆ ಸೇರಿಸಿ. ನಂತರ ಅದನ್ನು ಎಣ್ಣೆಯಲ್ಲಿ ಕರಿಯಿರಿ ಮತ್ತು ಬಿಸಿ ಚಹಾದೊಂದಿಗೆ ಆನಂದಿಸಿ.
ಇದನ್ನೂ ಓದಿ:
Milkshake: ಹಲಸಿನ ಹಣ್ಣಿನ ಬೀಜದಲ್ಲಿ ಕೂಡ ಮಿಲ್ಕ್ ಶೇಕ್ ಮಾಡಬಹುದು
ಹಲಸಿನ ಬೀಜದ ಉಪಯೋಗ ತಿಳಿದರೆ ಒಂದು ಬೀಜವನ್ನೂ ಹಾಳು ಮಾಡಲಾರಿರಿ; ಇಲ್ಲಿದೆ ವಿವರ