ಹಸಿ ಟೊಮೇಟೊ ಸೇವಿಸುವ ಅಭ್ಯಾಸ ಇದೆಯೇ? ಹಾಗಿದ್ದರೆ ಆರೋಗ್ಯದಲ್ಲಾಗುವ ಈ ಬದಲಾವಣೆಗಳ ಬಗ್ಗೆ ತಿಳಿಯಿರಿ

| Updated By: Skanda

Updated on: Jun 24, 2021 | 7:55 AM

ಟೊಮೇಟೊ ನೈಸರ್ಗಿಕ ಜೀವಸತ್ವಗಳು ಮತ್ತು ವಿಟಮಿನ್ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ಖನಿಜಗಳಿಂದ ಸಮೃದ್ಧವಾಗಿದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಸಹ ಹೊಂದಿರುತ್ತದೆ.

ಹಸಿ ಟೊಮೇಟೊ ಸೇವಿಸುವ ಅಭ್ಯಾಸ ಇದೆಯೇ? ಹಾಗಿದ್ದರೆ ಆರೋಗ್ಯದಲ್ಲಾಗುವ ಈ ಬದಲಾವಣೆಗಳ ಬಗ್ಗೆ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us on

ಟೊಮೇಟೊ ಹಣ್ಣು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ಟೊಮೇಟೊವನ್ನು ಹಸಿ ತಿನ್ನಬಹುದು ಅಥವಾ ಬೇಯಿಸಿ ತಿನ್ನಬಹುದು. ಆದರೆ ನಾವು ಟೊಮೇಟೊವನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು ಎನ್ನುವುದನ್ನು ಮಾತ್ರ ಮರೆಯಬಾರದು. ಟೊಮೇಟೊ ನೈಸರ್ಗಿಕ ಜೀವಸತ್ವಗಳು ಮತ್ತು ವಿಟಮಿನ್ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ಖನಿಜಗಳಿಂದ ಸಮೃದ್ಧವಾಗಿದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಶಿಯಮ್, ಮೆಗ್ನೀಶಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಸಹ ಹೊಂದಿರುತ್ತದೆ. ಈ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟೊಮೇಟೊನಲ್ಲಿ ಫೈಟೊಕೆಮಿಕಲ್‌ಗಳು ಹೆಚ್ಚು ಇದ್ದು, ಯಾವೇಲ್ಲ ಪ್ರಯೋಜನಗಳನ್ನು ಹೊಂದಿದೆ ಎನ್ನುವುದಕ್ಕೆ ಉತ್ತರ ಹೀಗಿದೆ.

1. ಚರ್ಮ ಮತ್ತು ಕೂದಲಿಗೆ ಒಳ್ಳೆಯದು
ಟೊಮೇಟೊ ಸಲಾಡ್ ಮಾಡಿ ಸೇವಿಸಬಹುದು.​ ಇದಲ್ಲದೆ ಹಣ್ಣಾದ ಟೊಮೇಟೊವನ್ನು ಮುಖದ ಸೌಂದರ್ಯ ಹೆಚ್ಚಿಸಲು ಬಳಸಬಹುದು. ಟೊಮೇಟೊದಲ್ಲಿನ ಲೈಕೋಪೀನ್ ಮುಖದ ಕಾಂತಿ ಹೆಚ್ಚಿಸುತ್ತದೆ. ಅಲ್ಲದೆ ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಟೊಮೇಟೊ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕೂದಲಿಗೂ ಕೂಡ ಒಳ್ಳೆಯದು.

2. ಮೂಳೆಗಳಿಗೆ ಶಕ್ತಿ ನೀಡುತ್ತದೆ
ಹಸಿ ಟೊಮೇಟೊ ತಿನ್ನುವುದು ಮೂಳೆಗಳಿಗೆ ಒಳ್ಳೆಯದು. ಟೊಮೇಟೊನಲ್ಲಿರುವ ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಲೈಕೋಪೀನ್ ಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಟೊಮೇಟೊ ರಸವನ್ನು ಕುಡಿಯುವುದರಿಂದ ಜೀವಕೋಶಗಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕಗಳು ಕೂಡ ದೊರೆಯುತ್ತದೆ.

3. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
ರಕ್ತದಲ್ಲಿನ ಅಧಿಕ ಸಕ್ಕರೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಹೊರಬರಲು ಟೊಮೇಟೊ ಉತ್ತಮ ಆಯ್ಕೆಯಾಗಿದೆ. ಇದರಲ್ಲಿನ ಕ್ರೋಮಿಯಂ ಇರುವಿಕೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಟೊಮೇಟೊವನ್ನು ಸೇರಿಸಿಕೊಳ್ಳುವುದು ಸೂಕ್ತ.

4. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಗೆ ಟೊಮೇಟೊ ಮುಖ್ಯ. ಟೊಮೇಟೊದಲ್ಲಿ ವಿಟಮಿನ್ ಸಿ ತುಂಬಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ವಿಟಮಿನ್ ಸಿ ಒತ್ತಡದ ಹಾರ್ಮೋನುಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ದೇಹವು ದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

5. ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ
ಟೊಮೇಟೊ ಮತ್ತು ಟೊಮೇಟೊ ಆಧಾರಿತ ಉತ್ಪನ್ನಗಳು ಅನೇಕ ರೀತಿಯ ಕ್ಯಾನ್ಸರ್ ಅನ್ನು ತಡೆಯುತ್ತವೆ. ಟೊಮೇಟೊದಲ್ಲಿ ಹೆಚ್ಚಿನ ಪ್ರಮಾಣದ ಲೈಕೋಪೀನ್ ಪ್ರಾಸ್ಟೇಟ್, ಕೊಲೊರೆಕ್ಟಲ್ ಮತ್ತು ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್​ಗಳನ್ನು ಕಡಿಮೆ ಮಾಡುವ ಗುಣ ಇದೆ. ಟೊಮೇಟೊದಲ್ಲಿನ ಲೈಕೋಪೀನ್ ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ:

Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ

Omega-3: ರೋಗನಿರೋಧಕ ಶಕ್ತಿ ಹೆಚ್ಚಿಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಒಮೆಗಾ-3 ಆಹಾರಗಳ ಬಗ್ಗೆ ತಿಳಿಯಿರಿ