ಪೂರ್ವಜರು ಹಾಕಿಕೊಟ್ಟ ಕೆಲವು ನಿಯಮಗಳು ಮತ್ತು ಸಂಪ್ರದಾಯಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬಂದಿದ್ದೇವೆ ಅದಕ್ಕೆ ಕಾರಣ, ಈ ನಿಯಮಗಳು ನಮ್ಮ ಆರೋಗ್ಯವನ್ನು(Health) ಸದಾ ಕಾಪಾಡುತ್ತದೆ. ಊಟ ಮಾಡುವುದರಿಂದ ಹಿಡಿದು, ನಿದ್ರೆಯವರೆಗೆ ಅನೇಕ ನಂಬಿಕೆಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಉದಾಹರಣೆ ಎಂಬಂತೆ ಈಗಲೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ಮನೆಯಲ್ಲಿ ಹಿರಿಯರು ತಪ್ಪು ಎನ್ನುತ್ತಾರೆ. ಅದರಂತೆಯೇ ಮಲಗುವಾಗ ಬಲಭಾಗಕ್ಕೆ ತಿರುಗಿ ಮಲಗುವುದು ಒಳ್ಳೆಯದಲ್ಲ. ಬದಲಾಗಿ ಎಡಭಾಗದಲ್ಲಿ (Left Side) ಮಾತ್ರ ಮಲಗಬೇಕು. ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.
ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಊಟದ ನಂತರ ಜೀರ್ಣವಾಗಲು ಹೊಟ್ಟೆಯನ್ನು ಸಕ್ರಿಯಗೊಳಿಸುತ್ತದೆ. ಹೀಗೆ ಮಲಗುವುದರಿಂದ ರಕ್ತ ದೇಹದ ಎಲ್ಲಾ ಭಾಗಗಳಿಗೂ ತಲುಪುತ್ತದೆ. ನಂತರ ಮೆದುಳು ವಿಶ್ರಾಂತಿ ಪಡೆಯಲು ಇದು ಸಹಕರಿಸುತ್ತದೆ. ಅಲ್ಲದೆ ಸುಖವಾದ ನಿದ್ದೆ ಬರುತ್ತದೆ. ವಿಶ್ರಾಂತಿ ಪಡೆಯಲು ಇಚ್ಛಿಸುವವರು ಎಡಭಾಗಕ್ಕೆ ತಿರುಗಿ ಮಲಗುವುದು ಉತ್ತಮ. ಇನ್ನು ಊಟವಾದ ತಕ್ಷಣ ಮಲಗಲು ಹೋಗಬೇಡಿ. ಕನಿಷ್ಠ ಎರಡು ಗಂಟೆಗಳ ಅಂತರವನ್ನು ನೀಡಿದ ನಂತರ ಮಲಗಲು ಹೋಗಿ. ಊಟವಾದ ತಕ್ಷಣ ಮಲಗುವುದರಿಂದ ಮಧುಮೇಹ ಮತ್ತು ಹೃದಯಾಘಾತದಂತಹ ರೋಗಗಳ ಅಪಾಯ ಹೆಚ್ಚಳವಾಗುತ್ತದೆ.
ಎಡಭಾಗಕ್ಕೆ ತಿರುಗಿ ಮಲಗಿ
ಎಡಭಾಗಕ್ಕೆ ತಿರುಗಿ ಮತ್ತು ನಿಮ್ಮ ಎಡಗೈಯನ್ನು ತಲೆಕೆಳಗಾಗಿ ಇಟ್ಟುಕೊಳ್ಳಿ. ಈ ರೀತಿಯಾಗಿ ನಿದ್ರೆಯನ್ನು ಮಾಡುವುದರಿಂದ ಹೆಚ್ಚು ವಿಶ್ರಾಂತಿ ಸಿಗುತ್ತದೆ. ದಣಿದಾಗ, ಈ ರೀತಿ ಎಡಭಾಗದಲ್ಲಿ ಮಲಗಿಕೊಂಡರೆ ಆಯಾಸವನ್ನು ನಿವಾರಿಸುತ್ತದೆ. ಉಳಿದ ದಿನಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸಗಳನ್ನು ಮಾಡಲು ಸಹಕಾರಿಯಾಗಿದೆ.
ಎಡಭಾಗಕ್ಕೆ ತಿರುಗಿ ಮಲಗುವ ಪ್ರಯೋಜನಗಳು:
* ಗೊರಕೆಯನ್ನು ಕಡಿಮೆ ಮಾಡುತ್ತದೆ.
* ಗರ್ಭಿಣಿಯರಿಗೆ ಉತ್ತಮ ರಕ್ತ ಪರಿಚಲನೆ ದೊರಕುತ್ತದೆ. ಗರ್ಭಕೋಶ, ಗರ್ಭದಲ್ಲಿರುವ ಭ್ರೂಣಕ್ಕೆ ಉತ್ತಮ ರಕ್ತ ಪರಿಚಲನೆ ಸಿಗುತ್ತದೆ.
* ಬೆನ್ನು ನೋವನ್ನು ನಿವಾರಿಸುತ್ತದೆ.
* ಊಟದ ನಂತರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
* ಕುತ್ತಿಗೆ ನೋವನ್ನು ನಿವಾರಿಸುತ್ತದೆ.
* ದೇಹದಲ್ಲಿರುವ ವಿಷ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ತೆಗೆಯಲು ಸಹಕರಿಸುತ್ತದೆ.
* ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
* ಜೀರ್ಣ ಪ್ರಕ್ರಿಯೆಯು ನಿಯಮಿತವಾಗಿರುತ್ತದೆ.
* ಹೃದಯ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
* ಹೃದಯದಲ್ಲಿನ ಉರಿಯೂತವನ್ನು ತಡೆಯುತ್ತದೆ.
* ಬೆಳಿಗ್ಗೆ ಆಯಾಸವಿಲ್ಲದೆ ಉತ್ಸುಕರಾಗಿರುವಂತೆ ಮಾಡುತ್ತದೆ.
* ಕೊಬ್ಬಿನ ಪದಾರ್ಥಗಳು ಸುಲಭವಾಗಿ ಜೀರ್ಣವಾಗುತ್ತವೆ.
* ಮೆದುಳು ಸಕ್ರಿಯವಾಗಿರುತ್ತದೆ.
ಆಯುರ್ವೇದ ವೈದ್ಯರು ಹೇಳುವಂತೆ ಎಡಭಾಗದಲ್ಲಿ ಮಲಗುವುದು ಉತ್ತಮ ವಿಧಾನ. ಪ್ರತಿದಿನ ನೀವು ಎಡಭಾಗದಲ್ಲಿ ಮಲಗಿದ ನಂತರ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬಹುದು.
ಇದನ್ನೂ ಓದಿ:
Health Tips: ಈ ಮೂರು ಸಮಯದಲ್ಲಿ ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಇಂದೇ ಅದನ್ನು ಬದಲಾಯಿಸಿ
Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ
(You must know the health benefits of sleeping on your left side every night)
Published On - 7:30 am, Sun, 8 August 21