Health Benefits: ದೇಹದಿಂದ ಹೊರ ಬರುವ ಬೆವರು ಆರೋಗ್ಯಕರ ಲಕ್ಷಣವನ್ನು ಹೊಂದಿದೆ

ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾದಾಗ, ದೇಹವು ನೀರನ್ನು ಹೀರಿಕೊಳ್ಳಲು ಬೆವರು ಸಕ್ರಿಯ ಗ್ರಂಥಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಹದಿಂದ ಬರುವ ನೀರು ಹೀಟ್ ಸ್ಟ್ರೋಕ್‌ನಂತಹ ಅಪಾಯಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ.

Health Benefits: ದೇಹದಿಂದ ಹೊರ ಬರುವ ಬೆವರು ಆರೋಗ್ಯಕರ ಲಕ್ಷಣವನ್ನು ಹೊಂದಿದೆ
ಸಾಂದರ್ಭಿಕ ಚಿತ್ರ
Follow us
| Updated By: Skanda

Updated on: Jul 03, 2021 | 7:10 AM

ದೇಹದಲ್ಲಿ ಬೆವರು ಕಾಣಿಸಿಕೊಳ್ಳಲು ಹಲವು ಕಾರಣಗಳಿದ್ದರೂ, ದೇಹದಿಂದ ಬೆವರು ಏಕೆ ಬರುತ್ತದೆ? ಇದಕ್ಕೆ ನಿಜವಾದ ಕಾರಣ ಏನು? ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಪ್ರಾಚೀನ ಕಾಲದಲ್ಲಿ ಜನರು ದೈಹಿಕವಾಗಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದರು. ಆದ್ದರಿಂದ ಅವರು ಯಾವಾಗಲೂ ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳನ್ನು ಆಧರಿಸಿ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತದೆ. ಇದು ಜನರು ದೈಹಿಕ ಚಟುವಟಿಕೆಯಿಂದ ದೂರ ಇರುವಂತೆ ಮಾಡಿದೆ. ಅದರಲ್ಲೂ ಸ್ವಲ್ಪ ಬೆವರು ಬಂದದೂ ಕೂಡ ಅದನ್ನು ತಡೆಯುವುದಿಲ್ಲ. ಹೀಗಾಗಿಯೇ ಆಧುನಿಕ ಜಗತ್ತಿಗೆ ಒಗ್ಗಿಕೊಂಡಿರುವ ಜನರು ಫ್ಯಾನ್, ಎಸಿಯ ಮೊರೆ ಹೋಗಿದ್ದಾರೆ. ಆದರೆ ಬೆವರುವುದು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದಿಂದ ಹೊರಬರುವ ಸಣ್ಣ ಹನಿಗಳು ಅಥವಾ ಬೆವರಿನಲ್ಲಿ ಅಮೋನಿಯಾ, ಯೂರಿಯಾ, ಉಪ್ಪು, ಸಕ್ಕರೆ ಇತ್ಯಾದಿ ಇರುತ್ತದೆ. ನಮ್ಮ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾದಾಗ, ದೇಹವು ನೀರನ್ನು ಹೀರಿಕೊಳ್ಳಲು ಬೆವರು ಸಕ್ರಿಯ ಗ್ರಂಥಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಹದಿಂದ ಬರುವ ನೀರು ಹೀಟ್ ಸ್ಟ್ರೋಕ್‌ನಂತಹ ಅಪಾಯಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ.

1. ವ್ಯಾಯಾಮದ ಸಮಯದಲ್ಲಿ ಬೆವರುವುದು ದೇಹದ ಉಷ್ಣತೆಯನ್ನು ತಡೆಯಲು ಬೆವರುವುದು ಅಗತ್ಯ. ಹೀಗಾಗಿ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ. ವ್ಯಾಯಾಮದ ಸಮಯದಲ್ಲಿ ಹೃದಯ ವೇಗವಾಗಿ ಬಡಿಯುವ ಕಾಲಕ್ಕೆ ಬೆವರು ನಿಮ್ಮ ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ.

2. ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಬೆವರು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಕೆಲವು ಸಂಶೋಧನೆಗಳು ಉಪ್ಪು ಮತ್ತು ಸಕ್ಕರೆಯ ಜೊತೆಗೆ, ಬೆವರು ಕೂಡ ಕೊಲೆಸ್ಟ್ರಾಲ್ ಮತ್ತು ಆಲ್ಕೋಹಾಲ್ ನಂತಹ ಪದಾರ್ಥಗಳನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. ಹೀಗಾಗಿ ಬೆವರುವುದರಿಂದ ದೇಹವು ಚೆನ್ನಾಗಿ ಶುದ್ಧವಾಗುತ್ತದೆ ಮತ್ತು ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

3. ಬೆವರು ಚರ್ಮವನ್ನು ಬೆಳಗಿಸುತ್ತದೆ ಬೆವರು ಹೊರಬಂದಾಗ ಚರ್ಮಕ್ಕೆ ಹೊಳಪು ಬರುತ್ತದೆ ಎಂದು ಹೇಳಲಾಗುತ್ತದೆ. ಬೆವರಿನಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಅಂತಹ ಸ್ಥಿತಿಯಲ್ಲಿ ಚರ್ಮದ ಮೇಲೆ ಸಂಗ್ರಹವಾಗಿರುವ ವಿಷವನ್ನು ಸಹ ಬೆವರಿನ ಮೂಲಕ ಹೊರಹಾಕಲಾಗುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

4. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಪ್ರತಿದಿನವೂ ಕೆಲಸ ಮಾಡುವಾಗ ಬೆವರುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ ದೇಹವು ಎಲ್ಲಾ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಅನಾರೋಗ್ಯಕ್ಕೆ ಗುರಿಯಾಗಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Benefits of crying: ಅಳುವುದು ಉತ್ತಮ ಅಭ್ಯಾಸ; ಕಣ್ಣೀರು ಹೊರ ಹಾಕುವುದರಿಂದ ಆಗುವ ಆರೋಗ್ಯಕರ ಬದಲಾವಣೆಗಳ ಬಗ್ಗೆ ತಿಳಿಯಿರಿ

Health Tips: ಬೀಟ್​ರೂಟ್​​ ಡಿಟಾಕ್ಸ್​ ಜ್ಯೂಸ್; ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್