Health Benefits: ಉತ್ತರಾಣಿ ಗಿಡದ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ, ಪ್ರತಿದಿನ ಇದನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ

| Updated By: preethi shettigar

Updated on: Jul 18, 2021 | 7:52 AM

ಉತ್ತರ ಭಾಗದಲ್ಲಿ ಹೆಚ್ಚು ಬೆಳೆಯುವ ಉತ್ತರಾಣಿಯ ಕಾಂಡ ಮತ್ತು ಎಲೆಯನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಹಾವು ಮತ್ತು ಚೇಳುಗಳಿಂದ ಕಚ್ಚಿಸಿಕೊಂಡವರಿಗೆ ಪ್ರಥಮ ಚಿಕಿತ್ಸೆಯಾಗಿ ಉತ್ತರಾಣಿ ಬಳಸಲಾಗುತ್ತದೆ.

Health Benefits: ಉತ್ತರಾಣಿ ಗಿಡದ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ, ಪ್ರತಿದಿನ ಇದನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ
ಉತ್ತರಾಣಿ ಗಿಡ
Follow us on

ಉತ್ತರಾಣಿ ಎಲೆಯು ವಿನಾಯಕ ಚತುರ್ಥಿಗೆ ಅರ್ಪಿಸುವ ಪ್ರಮುಖ ಎಲೆಯಾಗಿದೆ ಮತ್ತು ಪೂಜಾ ಕ್ರಮದಲ್ಲಿ ಉತ್ತರಾಣಿ ಎಲೆ ಆರನೇ ಸ್ಥಾನ ಪಡೆದಿದೆ. ಅಷ್ಟೇ ಅಲ್ಲದೇ ಔಷಧದಲ್ಲಿ ಕೂಡ ಉತ್ತರಾಣಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಉತ್ತರ ಭಾಗದಲ್ಲಿ ಹೆಚ್ಚು ಬೆಳೆಯುವ ಉತ್ತರಾಣಿಯ ಕಾಂಡ ಮತ್ತು ಎಲೆಯನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಹಾವು ಮತ್ತು ಚೇಳುಗಳಿಂದ ಕಚ್ಚಿಸಿಕೊಂಡವರಿಗೆ ಪ್ರಥಮ ಚಿಕಿತ್ಸೆಯಾಗಿ ಉತ್ತರಾಣಿ ಬಳಸಲಾಗುತ್ತದೆ. ಉತ್ತರಾಣಿಯನ್ನು ಸಂಸ್ಕೃತದಲ್ಲಿ ಅಪಮಾರ್ಗ ಮತ್ತು ಖರಮಂಜರಿ ಎಂದು ಕರೆಯಲಾಗುತ್ತದೆ. ಉತ್ತರಾಣಿ ಗೀಡದ ಉಪಯೋಗಗಳು ಈ ಕೆಳಗಿನಂತಿದೆ.

* ಉತ್ತರಾಣಿ ಎಲೆಯ ಕಷಾಯ ಅಥವಾ ರಸವು ಮೂತ್ರಪಿಂಡವನ್ನು ಶುದ್ಧಗೊಳಿಸುತ್ತದೆ ಮತ್ತು ಮೂತ್ರವಿಸರ್ಜನೆಯನ್ನು ಸುಲಭಗೊಳಿಸುತ್ತದೆ.

* ಉತ್ತರಾಣಿ ರಸವು ಕಫ, ದೇಹ ಉಬ್ಬುವುದು, ನೋವು, ತುರಿಕೆ ಮತ್ತು ಕುಷ್ಠರೋಗವನ್ನು ತಡೆಯುತ್ತದೆ.

* ಉತ್ತರಾಣಿಯನ್ನು ಅನುಭವಿ ವೈದ್ಯರು ಕಾಯಸಿದ್ಧಿ ಔಷಧಿಯಾಗಿ ಬಳಸುತ್ತಾರೆ. ಅಂದರೆ ಇದನ್ನು ವಯಸ್ಸಾದವರ ಆರೋಗ್ಯದ ಹಿತದೃಷ್ಟಿಯಿಂದ ಬಳಸಲಾಗುತ್ತದೆ.

* ಹಾಲಿನೊಂದಿಗೆ ಉತ್ತರಾಣಿ ಬೀಜಗಳನ್ನು ಕುದಿಸಿ, ಸೇವಿಸಿದರೆ ಹೊಟ್ಟೆ ನೋವು ತಡೆಯಬಹುದು.

* ಅಜೀರ್ಣ ಸಮಸ್ಯೆಗಳಿಗೆ ಉತ್ತರಾಣಿ, ಉತ್ತಮ ಔಷಧವಾಗಿದೆ. ಅದರಲ್ಲೂ ಉತ್ತರಾಣಿ ಬೇರನ್ನು ಪುಡಿ ಮಾಡಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಬೇಗ ಗುಣವಾಗುತ್ತದೆ.

* ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡರೆ, ಪುಡಿಮಾಡಿದ ಉತ್ತರಾಣಿ ಬೀಜಗಳು ಉತ್ತಮ ಔಷಧ. ಹುಚ್ಚು ನಾಯಿ ಕಚ್ಚುವುದರಿಂದ ಉಂಟಾಗುವ ಹೈಡ್ರೋಫೋಬಿಸಿಟಿ ಉತ್ತರಾಣಿ ಕಡಿಮೆ ಮಾಡುತ್ತದೆ.

* ಚೇಳು ಮತ್ತು ಹಾವು ಮುಂತಾದ ವಿಷಕಾರಿ ಪ್ರಾಣಿಗಳು ಕಚ್ಚಿದಾಗ, ಉತ್ತರಾಣಿ ಎಲೆಗಳನ್ನು ಕಚ್ಚಿದ ಸ್ಥಳಕ್ಕೆ ಹಚ್ಚಿ. ಇದರಿಂದ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ ಹಾಗೂ ವಿಷದ ಅಂಶ ಇಳಿಯುತ್ತದೆ.

* ಆಸ್ತಮಾದಿಂದ ಬಳಲುತ್ತಿರುವ ಜನರು ಉತ್ತರಾಣಿ ಬೇರಿನಿಂದ ಮಾಡಿದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರಿಸಿ ಕುಡಿಯುವುದರಿಂದ ಈ ಕಾಯಿಲೆ ಕಡಿಮೆಯಾಗುತ್ತದೆ.

* ನೀವು ಸತತವಾಗಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರೆ ಉತ್ತರಾಣಿ ಎಲೆಯನ್ನು ಕಷಾಯ ಮಾಡಿ ಸೇವಿಸಿ. ಇದು ಹುಣ್ಣಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

* ಚರ್ಮದ ಸಮಸ್ಯೆಗೂ ಕೂಡ ಉತ್ತರರಾಣಿ ಪರಿಹಾರ ನೀಡುತ್ತದೆ.

ಇದನ್ನೂ ಓದಿ:
Dragon fruit Benefits: ಡ್ರ್ಯಾಗನ್​ ಫ್ರೂಟ್ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೀವು ತಿಳಿದರೆ ಇಂದೇ ಖರೀದಿಸಿ, ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ

Health Benefits: ಕಡಲೆಕಾಯಿ ತಿನ್ನುವ ಅಭ್ಯಾಸ ಇದೆಯೇ? ಸಿಪ್ಪೆಯ ಜತೆಗೆ ಇದನ್ನು ಸೇವಿಸುವುದರಿಂದಾಗುವ ಆರೋಗ್ಯಕರ ಬದಲಾವಣೆಗಳ ಬಗ್ಗೆ ತಿಳಿಯಿರಿ