Weight Loss: ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಬೊಜ್ಜಿಗೆ ಕಾರಣ ಏನು ಗೊತ್ತಾ?

| Updated By: preethi shettigar

Updated on: Dec 06, 2021 | 10:54 AM

ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ನಿರ್ದಿಷ್ಟ ಪ್ರಮಾಣದಲ್ಲಿರಬೇಕು. ಅಂದರೆ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾದರೂ ಸಮಸ್ಯೆಯಾಗುತ್ತದೆ ಮತ್ತು ಅದರ ಮಟ್ಟ ಕಡಿಮೆಯಾದರೂ ಅದು ದೇಹಕ್ಕೆ ಹಾನಿಯಾಗುತ್ತದೆ. ಆದ್ದರಿಂದ ನಾವು ಈ ಹಾರ್ಮೋನ್ ಅನ್ನು ಸಮತೋಲನಗೊಳಿಸುವುದು ಬಹಳ ಮುಖ್ಯ ಎಂದು ಲಾವ್ಲೀನ್ ಹೇಳಿದ್ದಾರೆ.

Weight Loss: ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಬೊಜ್ಜಿಗೆ ಕಾರಣ ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಹೊಟ್ಟೆಯ ಕೊಬ್ಬು ಅಥವಾ ಕಿಬ್ಬೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೆಚ್ಚಿನ ಜನರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವೊಮ್ಮೆ ಸರಿಯಾದ ಆಹಾರಕ್ರಮವನ್ನು ಅನುಸರಿಸಿದ ನಂತರ ಅಥವಾ ನಿಯಮಿತವಾಗಿ ವ್ಯಾಯಾಮ ಮಾಡಿದ ನಂತರವೂ ಬೊಜ್ಜಿನಂತಹ ಸಮಸ್ಯೆ ದೂರವಾಗುವುದಿಲ್ಲ. ಒಂದೊಮ್ಮೆ ನಿಮ್ಮ ಭುಜ ಅಥವಾ ಕಾಲುಗಳಲ್ಲಿ ನೀವು ವ್ಯತ್ಯಾಸವನ್ನು ನೋಡಬಹುದು. ಆದರೆ ಹೊಟ್ಟೆಯ ಬೊಜ್ಜನ್ನು (Belly fat) ಕಳೆದುಕೊಳ್ಳುವುದು ಬಹಳ ಕಷ್ಟ. ಹೀಗಾಗಿ ಹೊಟ್ಟೆಯಲ್ಲಿ ಏಕೆ ಕೊಬ್ಬು ಬೆಳೆಯುತ್ತದೆ ಮತ್ತು ಅದನ್ನು ಹೇಗೆ ತೊಡೆದುಹಾಕಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಡಯಟೀಶಿಯನ್ ಲವ್ಲೀನ್ ಕೌರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಾರ್ಮೋನ್ ಅನ್ನು ನಿರ್ವಹಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿ ಎಂಬ ಶೀರ್ಷಿಕೆಯಡಿಯಲ್ಲಿ ಅವರು ಫೇಸ್‌ಬುಕ್‌ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹೊಟ್ಟೆಯಲ್ಲಿನ ಬೊಜ್ಜಿಗೆ ಕಾರ್ಟಿಸೋಲ್ ಎಂಬ ಹಾರ್ಮೋನ್ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ನಿರ್ದಿಷ್ಟ ಪ್ರಮಾಣದಲ್ಲಿರಬೇಕು. ಅಂದರೆ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾದರೂ ಸಮಸ್ಯೆಯಾಗುತ್ತದೆ ಮತ್ತು ಅದರ ಮಟ್ಟ ಕಡಿಮೆಯಾದರೂ ಅದು ದೇಹಕ್ಕೆ ಹಾನಿಯಾಗುತ್ತದೆ. ಆದ್ದರಿಂದ ನಾವು ಈ ಹಾರ್ಮೋನ್ ಅನ್ನು ಸಮತೋಲನಗೊಳಿಸುವುದು ಬಹಳ ಮುಖ್ಯ ಎಂದು ಲಾವ್ಲೀನ್ ಹೇಳಿದ್ದಾರೆ.

ಕಾರ್ಟಿಸೋಲ್ ಏನು ಮಾಡುತ್ತದೆ?
1) ನಿಮ್ಮ ಮೂತ್ರಜನಕಾಂಗದ ಗ್ರಂಥಿಯು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡಿದಾಗ, ಅದು ಜೀವಕೋಶಕ್ಕೆ ಹೋಗುತ್ತದೆ. ಆದ್ದರಿಂದ ಕಾರ್ಟಿಸೋಲ್ ರಕ್ತದ ಮೂಲಕ ಜೀವಕೋಶಗಳಿಗೆ ಹೋಗುತ್ತದೆ. ಆಗ ಜೀವಕೋಶಗಳು ಸ್ಥಗಿತಗೊಳ್ಳುತ್ತವೆ. ಇದನ್ನು ಕಾರ್ಟಿಸೋಲ್ ಪ್ರತಿರೋಧ ಎಂದು ಕರೆಯಲಾಗುತ್ತದೆ. ಮೂಲಭೂತವಾಗಿ ಜೀವಕೋಶಗಳು ಕಾರ್ಟಿಸೋಲ್ ಅನ್ನು ಈ ಹಂತದಲ್ಲಿ ತೆಗೆದುಕೊಳ್ಳಲು ನಿರಾಕರಿಸುತ್ತವೆ.

2) ನಿಮ್ಮ ಜೀವನಶೈಲಿಯಲ್ಲಿನ ಬದಲಾವಣೆ ಕೂಡ ಜೀವನಕೋಶಗಳ ಬೆಳವಣಿಗೆಗೆ ತಡೆಯೊಡ್ಡಬಹುದು.

3) ಈ ಜೀವಕೋಶದ ಅಡಚಣೆಯಿಂದಾಗಿ ಕಾರ್ಟಿಸೋಲ್ ಯಕೃತ್ತಿನಿಂದ ರಕ್ತದಲ್ಲಿ ಗ್ಲೂಕೋಸ್ ಅನ್ನು ಬಿಡುಗಡೆ ಮಾಡುತ್ತದೆ. ಅಲ್ಲಿಂದ ಸಿಗದಿದ್ದರೆ ದೇಹದಲ್ಲಿ ಬೇರೆಡೆಯಿಂದ ಪ್ರೊಟೀನ್ ತೆಗೆದುಕೊಂಡು ಗ್ಲೂಕೋಸ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ. ಪರಿಣಾಮವಾಗಿ, ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.

ಕಾರ್ಟಿಸೋಲ್ ಏಕೆ ಸರಿಯಾಗಿ ಕೆಲಸ ಮಾಡುವುದಿಲ್ಲ?
1) ನೀವು ಸರಿಯಾಗಿ ನಿದ್ರೆ ಮಾಡದಿದ್ದಾಗ.

2) ಅತಿ ಹೆಚ್ಚು ಕಾಫಿ ಕುಡಿದರೆ ಕಾರ್ಟಿಸೋಲ್ ಸರಿಯಾಗಿ ಕೆಲಸ ಮಾಡುವುದಿಲ್ಲ.

3) ಉತ್ತಮ ಜೀವನಶೈಲಿಯ ಕೊರತೆ.

4) ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೊಂದಿರುವ ಆಹಾರದ ಕೊರತೆ.

ವಿಟಮಿನ್ ಸಿ ಹೊಂದಿರುವ ಪೇರಲೆ ಹಣ್ಣು, ನೆಲ್ಲಿಕಾಯಿ ಮತ್ತು ನಿಂಬೆಯಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು. ನೀವು ಸೂರ್ಯನ ಬೆಳಕಿನ ಮೂಲಕ ಸಾಕಷ್ಟು ವಿಟಮಿನ್ ಡಿ ತೆಗೆದುಕೊಳ್ಳಬೇಕು ಎಂದು ಲಾವ್ಲೀನ್ ಹೇಳಿದ್ದಾರೆ.

ಈ ಸಮಸ್ಯೆಗೆ ಪರಿಹಾರ ಏನು?

  • ನಿಯಮಿತವಾಗಿ ವಾಕಿಂಗ್ ಮಾಡಿ.
  • ನಿಮ್ಮ ಪ್ರೀತಿಪಾತ್ರರ ಜೊತೆಗೆ ಕಾಲ ಕಳೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಸಂತೋಷವಾಗಿರಿ.
  • ಒತ್ತಡದ ನಿವಾರಣೆಗಾಗಿ ಕುಟುಂಬದವರೊಂದಿಗೆ ಸಮಯ ಕಳೆಯಿರಿ.
  • ಆಹಾರ ಕ್ರಮದ ಬಗ್ಗೆ ಎಚ್ಚರ ಅಗತ್ಯ. ಆಹಾರ ಸೇವಿಸಿದ ನಂತರ ಜೀರ್ಣಿಸಿಕೊಳ್ಳಲು ಮತ್ತು ಅದನ್ನು ಸರಿಪಡಿಸಲು ನಿಮ್ಮ ದೇಹಕ್ಕೆ ಸಮಯವನ್ನು ನೀಡಿ. ಆದರೆ ಊಟದ ನಡುವೆ ದೀರ್ಘ ಅಂತರವನ್ನು ಇಡಬೇಡಿ.

ಇದನ್ನೂ ಓದಿ:
Coffee Flour Benefits: ಕಾಫಿ ಹಿಟ್ಟಿನ ಬಳಕೆ ಹೇಗೆ ಗೊತ್ತಾ? ಆರೋಗ್ಯಕರ ಗುಣಗಳ ಬಗ್ಗೆ ಗಮನಿಸಿ

Health Tips: ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಈ ಕೆಲವು ಮಸಾಲೆ ಪದಾರ್ಥಗಳ ಪಾತ್ರ ಮಹತ್ವದ್ದು

Published On - 10:21 am, Mon, 6 December 21