Coffee Flour Benefits: ಕಾಫಿ ಹಿಟ್ಟಿನ ಬಳಕೆ ಹೇಗೆ ಗೊತ್ತಾ? ಆರೋಗ್ಯಕರ ಗುಣಗಳ ಬಗ್ಗೆ ಗಮನಿಸಿ

1 ಟೀಚಮಚ ಕಾಫಿಯಲ್ಲಿ 34 ಕ್ಯಾಲೋರಿಗಳು, 310 ಮಿಗ್ರಾಂ ಪೊಟ್ಯಾಸಿಯಮ್, 1.8 ಮಿಗ್ರಾಂ ಸೋಡಿಯಂನಂತಹ ಅನೇಕ ಪ್ರಯೋಜನಕಾರಿ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡಲು ಕೂಡ ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾಫಿ ಹಿಟ್ಟಿನ ಕೆಲವು ವಿಶೇಷ ಪ್ರಯೋಜನಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.

Coffee Flour Benefits: ಕಾಫಿ ಹಿಟ್ಟಿನ ಬಳಕೆ ಹೇಗೆ ಗೊತ್ತಾ? ಆರೋಗ್ಯಕರ ಗುಣಗಳ ಬಗ್ಗೆ ಗಮನಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 03, 2021 | 12:00 PM

ಸಾಮಾನ್ಯವಾಗಿ ಹೆಚ್ಚಿನ ಜನರು ಕಾಫಿ (Coffee) ಕುಡಿಯಲು ಇಷ್ಟಪಡುತ್ತಾರೆ. ಆಯಾಸವನ್ನು ನಿವಾರಿಸಲು, ತೂಕವನ್ನು ಕಡಿಮೆ ಮಾಡಲು ಕಾಫಿಯನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ (Winter) ಜನರು ಚಹಾಕ್ಕಿಂತ ಹೆಚ್ಚು ಕಾಫಿಯನ್ನು ಸೇವಿಸುತ್ತಾರೆ. ಕಾಫಿಯನ್ನು ವಿವಿಧ ರೀತಿಯಲ್ಲಿ ಸೇವಿಸಲಾಗುತ್ತದೆ. ಅಂತೆಯೇ ಕಾಫಿ ಹಿಟ್ಟನ್ನು ಕೂಡ ಸೇವಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೌದು, ಕಾಫಿ ಹಿಟ್ಟಿನಲ್ಲಿ (Coffee flour) ಗ್ಲುಟನ್ ಇಲ್ಲ. ಕಾಫಿ ಮಾಡಲು ಕಾಫಿ ಹಣ್ಣನ್ನು ಒಣಗಿಸಿ ಅದನ್ನು ಪುಡಿ ಮಾಡಲಾಗುತ್ತದೆ. ಹೀಗೆ ಪುಡಿ ಮಾಡುವಾಗ ಕಾಫಿ ಬೀಜದ ತಿರುಳನ್ನು ಎಸೆಯಲಾಗುತ್ತದೆ. ಆದರೆ ಇದರಲ್ಲಿ ಕಾಫಿ ಹಿಟ್ಟು ತಯಾರಿಸಿ ಬಳಸಬಹುದು. ವಿಶೇಷವೆಂದರೆ ಕಾಫಿ ಹಿಟ್ಟಿನ ರುಚಿ ಕಾಫಿಯಂತೆಯೇ ಇರುವುದಿಲ್ಲ. ಈ ಹಿಟ್ಟಿನ ರುಚಿ ಇನ್ನಿತರ ಹಣ್ಣುಗಳಂತೆಯೇ ಇರುತ್ತದೆ.

1 ಟೀಚಮಚ ಕಾಫಿಯಲ್ಲಿ 34 ಕ್ಯಾಲೋರಿಗಳು, 310 ಮಿಗ್ರಾಂ ಪೊಟ್ಯಾಸಿಯಮ್, 1.8 ಮಿಗ್ರಾಂ ಸೋಡಿಯಂನಂತಹ ಅನೇಕ ಪ್ರಯೋಜನಕಾರಿ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡಲು ಕೂಡ ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾಫಿ ಹಿಟ್ಟಿನ ಕೆಲವು ವಿಶೇಷ ಪ್ರಯೋಜನಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.

ಕಾಫಿ ಹಿಟ್ಟಿನ ಪ್ರಯೋಜನಗಳು ತೂಕ ಇಳಿಕೆ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಕಾಫಿ ಹಿಟ್ಟು ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ, ಕಾಫಿ ಹಿಟ್ಟು ಸ್ವಲ್ಪ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ. ಆದರೆ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಬಾದಾಮಿ ಪುಡಿ ಜತೆಗೆ ಬೆರೆಸಿದ ಕಾಫಿ ಹಿಟ್ಟನ್ನು ಸೇವಿಸಿದರೆ ಇನ್ನು ಹೆಚ್ಚಿನ ಪ್ರಯೋಜನಗಳು ನಿಮ್ಮದಾಗುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ ಕಾಫಿ ಹಿಟ್ಟು ಜೀರ್ಣಕ್ರಿಯೆಗೆ ಬಹಳಷ್ಟು ಸಹಾಯ ಮಾಡುವ ಆಹಾರದ ಫೈಬರ್ ಅನ್ನು ಹೊಂದಿರುತ್ತದೆ. ಕಾಫಿ ಹಿಟ್ಟು ಸುಮಾರು 5.2 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಆಹಾರವನ್ನು ನಿಧಾನವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನೀವು ದೀರ್ಘಕಾಲದವರೆಗೆ ಹಸಿವಿನಿಂದ ಬಳಲುವುದಿಲ್ಲ. ಇದರಿಂದಾಗಿ ನೀವು ಕಡಿಮೆ ಆಹಾರ ಸೇವಿಸುತ್ತೀರ. ಇದು ತೂಕವನ್ನು ಕಡಿಮೆ ಮಾಡುವಲ್ಲಿಯೂ ಕೆಲಸ ಮಾಡುತ್ತದೆ.

ಜೀವಕೋಶಕ್ಕೆ ಸಹಕಾರಿ ಪೊಟ್ಯಾಸಿಯಮ್ ಕಾಫಿ ಹಿಟ್ಟಿನಲ್ಲಿಯೂ ಕಂಡುಬರುತ್ತದೆ. ಇದು ಪ್ರಮುಖ ಸೂಕ್ಷ್ಮ ಪೋಷಕಾಂಶವಾಗಿದೆ. ಈ ಪೋಷಕಾಂಶವು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಜೀವಕೋಶಗಳನ್ನು ಸಾಮಾನ್ಯವಾಗಿಡಲು ಕೆಲಸ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ ಅಷ್ಟೇ ಅಲ್ಲ, ಕಾಫಿ ಹಿಟ್ಟಿನಲ್ಲಿ ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಬಲವಾಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಕಾಫಿ ಹಿಟ್ಟಿನಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ನಮ್ಮ ದೇಹದ ಸ್ವತಂತ್ರ ರಾಡಿಕಲ್‌ಗಳನ್ನು ನಾಶಪಡಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಇದನ್ನೂ ಓದಿ: Health Tips: ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಈ ಕೆಲವು ಮಸಾಲೆ ಪದಾರ್ಥಗಳ ಪಾತ್ರ ಮಹತ್ವದ್ದು

ಚಳಿಗಾಲದಲ್ಲಿ ಈ ತರಕಾರಿಗಳ ಸೇವನೆ ಬಹಳ ಮುಖ್ಯ; ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್