Side Effects of Kiwi fruit: ಕಿವಿ ಹಣ್ಣನ್ನು ಅತಿ ಹೆಚ್ಚು ಸೇವಿಸುವ ಮುನ್ನ ಅಡ್ಡ ಪರಿಣಾಮಗಳ ಬಗ್ಗೆ ಗಮನಹರಿಸಿ

| Updated By: preethi shettigar

Updated on: Aug 31, 2021 | 9:08 AM

ಕಿವಿ ಹಣ್ಣು ಎಲ್ಲರಿಗೂ ಸಮಾನವಾಗಿ ಪ್ರಯೋಜನವನ್ನು ನೀಡುವುದಿಲ್ಲ. ಕೆಲವರಿಗೆ ಈ ಹಣ್ಣಿನ ಸೇವನೆ ಉತ್ತಮ ಪರಿಣಾವನ್ನು ನೀಡಿದರೆ, ಮತ್ತೆ ಕೆಲವರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ.

Side Effects of Kiwi fruit: ಕಿವಿ ಹಣ್ಣನ್ನು ಅತಿ ಹೆಚ್ಚು ಸೇವಿಸುವ ಮುನ್ನ ಅಡ್ಡ ಪರಿಣಾಮಗಳ ಬಗ್ಗೆ ಗಮನಹರಿಸಿ
ಕಿವಿ ಹಣ್ಣು
Follow us on

ಕಿವಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ಮಾನವನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಕಿವಿ ಹಣ್ಣು ಎಲ್ಲರಿಗೂ ಸಮಾನವಾಗಿ ಪ್ರಯೋಜನವನ್ನು ನೀಡುವುದಿಲ್ಲ. ಕೆಲವರಿಗೆ ಈ ಹಣ್ಣಿನ ಸೇವನೆ ಉತ್ತಮ ಪರಿಣಾವನ್ನು ನೀಡಿದರೆ, ಮತ್ತೆ ಕೆಲವರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಈ ನಾಲ್ಕು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವವರು ಕಿವಿ ಹಣ್ಣುಗಳಿಂದ ದೂರವಿರುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಿಡ್ನಿ ಸಮಸ್ಯೆ
ಕಿಡ್ನಿ ಸಮಸ್ಯೆ ಇರುವವರು ಕಿವಿ ಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ಕಿವಿ ಹಣ್ಣಿನಲ್ಲಿ ವಾಸ್ತವವಾಗಿ ಪೊಟ್ಯಾಸಿಯಮ್ ಇರುತ್ತದೆ. ಇದು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಪೊಟ್ಯಾಸಿಯಮ್ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.  ಕಿವಿ ಹಣ್ಣಿನಲ್ಲಿ ನಿಂಬೆ ಮತ್ತು ಕಿತ್ತಳೆಗಿಂತ ಎರಡು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಆಸಿಡ್ ಅಂಶ ಇರುತ್ತದೆ. ಈ ಕಾರಣಕ್ಕಾಗಿ ಕಿವಿ ಹಣ್ಣು ಕಿಡ್ನಿ ರೋಗಿಗಳಿಗೆ ಒಳ್ಳೆಯದಲ್ಲ.

ಚರ್ಮಕ್ಕೆ ಹಾನಿ
ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮಕ್ಕೆ ಒಳ್ಳೆಯದು. ಆದರೆ ಅತಿಯಾಗಿ ತಿನ್ನುವುದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಎಸ್ಜಿಮಾ, ಚರ್ಮದ ದದ್ದು, ತುರಿಕೆ, ಜತೆಗೆ ನಾಲಿಗೆ, ತುಟಿ ಹೀಗೆ ನಾನಾ ಕಡೆ ಅಲರ್ಜಿ ಉಂಟು ಮಾಡುತ್ತದೆ. ಹೀಗಾಗಿ ಚರ್ಮದ ಸಮಸ್ಯೆ ಇದ್ದರೆ ಕಿವಿ ಹಣ್ಣು ತಿನ್ನುವುದನ್ನು ನಿಲ್ಲಿಸಿ.

ಗಂಟಲು ನೋವು
ಗರ್ಭಿಣಿಯರು ದಿನಕ್ಕೆ ಎರಡು ಅಥವಾ ಮೂರು ಕಪ್ ಗಿಂತ ಹೆಚ್ಚು ಕಿವಿ ಹಣ್ಣು ತಿನ್ನಬಾರದು. ಕಿವಿ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆಮ್ಲೀಯತೆ, ಚರ್ಮದ ದದ್ದು ಮತ್ತು ಗಂಟಲು ನೋವಿಗೆ ಕಾರಣವಾಗಬಹುದು.

ಜೀರ್ಣಕ್ರಿಯೆ ಸಂಬಂಧಿತ ಕಾಯಿಲೆ
ಜಠರದುರಿತ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಕಿವಿ ಹಣ್ಣು ತಿನ್ನಬೇಡಿ. ಕಿವಿ ಹಣ್ಣಿನಲ್ಲಿರುವ ಆಮ್ಲವು ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ, ಇದು ತಲೆತಿರುಗುವಿಕೆ, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಅಲರ್ಜಿ ಇರುವವರು ಕಿವಿ ಹಣ್ಣಿನಿಂದ ದೂರವಿರಲು ಸೂಚಿಸಲಾಗಿದೆ. ಮುಖ್ಯವಾಗಿ ಕಿವಿ ಹಣ್ಣು ಅಥವಾ ಕಿವಿ ಹಣ್ಣಿನಿಂದ ತಯಾರಿಸಿದ ಉತ್ಪನ್ನಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಇದನ್ನೂ ಓದಿ:

ಸೂರ್ಯಕಾಂತಿ ಬೀಜಗಳ ಸೇವನೆಯ ಆರೋಗ್ಯ ಪ್ರಯೋಜನಗಳು; ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಉತ್ತಮ ಮಾರ್ಗ

Custard Apple: ಸೀತಾಫಲ ಹಣ್ಣು ಸೇವಿಸುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ