ಚಳಿಗಾಲವನ್ನು ಸಾಮಾನ್ಯವಾಗಿ ಹೆಚ್ಚಿನ ಜನರು ಇಷ್ಟಪಡುತ್ತಾರೆ. ತುಂಬಾ ಚಳಿಯಾದ ತಕ್ಷಣ ಜನರು ಬೆಚ್ಚಗೆ ಇರಲು ಹೊದಿಕೆ ಅಥವಾ ಸ್ವೆಟರ್ ಧರಿಸಲು ಇಷ್ಟಪಡುತ್ತಾರೆ. ಸದ್ಯ ಚಳಿಗಾಲ (Winter), ಈಗ ಉತ್ತಮ ಆಹಾರದ ಜತೆಗೆ ಸ್ವೆಟರ್ ಬೇಕೇ ಬೇಕು. ವಿಪರೀತ ಚಳಿಯಿಂದಾಗಿ ನಮ್ಮಲ್ಲಿ ಹಲವರು ರಾತ್ರಿಯಲ್ಲಿ ಸ್ವೆಟರ್ ಧರಿಸಿ ಮಲಗುವುದು ಇದೇ ಕಾರಣಕ್ಕಾಗಿ. ಆದರೆ ನೀವು ದಪ್ಪವಾದ ಸ್ವೆಟರ್ (Sweater) ಧರಿಸಿ ರಾತ್ರಿಯಲ್ಲಿ ಮಲಗುತ್ತಿದ್ದರೆ, ಇಂದೇ ಇದನ್ನು ನಿಲ್ಲಿಸಿ. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಚಳಿಗಾಲದಲ್ಲಿ ಚಳಿಯಿಂದ ನಮ್ಮನ್ನು ರಕ್ಷಿಸುವ ಸ್ವೆಟರ್‌ಗಳನ್ನು ಮಲಗುವಾಗಲೂ ಧರಿಸುವುದು ಆರೋಗ್ಯಕ್ಕೆ ಹಾನಿಕಾರಕ.
ರಾತ್ರಿಯಲ್ಲಿ ಸ್ವೆಟರ್ ಧರಿಸುವುದರಿಂದ ಆಗುವ ಅಪಾಯಗಳು:
ದೇಹದಲ್ಲಿ ಉಂಟಾಗುವ ಅತಿಯಾದ ಶಾಖದಿಂದ ಹಾನಿ
ರಾತ್ರಿ ಮಲಗುವಾಗ ಉಣ್ಣೆಯ ಸ್ವೆಟರ್‌ಗಳನ್ನು ಧರಿಸುವುದರಿಂದ ದೇಹದಿಂದ ಹೆಚ್ಚಿನ ಶಾಖ ಅಥವಾ ಉಷ್ಣತೆ ಉಂಟಾಗುತ್ತದೆ. ಇದು ನಿಮ್ಮ ಚರ್ಮದಲ್ಲಿ ಅನಗತ್ಯ ಶುಷ್ಕತೆಯನ್ನು ಉಂಟುಮಾಡಬಹುದು. ಇದು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಇದಲ್ಲದೆ, ರಾತ್ರಿಯಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ಚಿಕ್ಕ ಮಕ್ಕಳಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.
ಅಲರ್ಜಿಯನ್ನು ಉಲ್ಬಣಗೊಳಿಸಬಹುದು
ರಾತ್ರಿಯಲ್ಲಿ ಸ್ವೆಟರ್ ಧರಿಸುವುದು ಚರ್ಮದ ಅಲರ್ಜಿ ಉಂಟಾಗಬಹುದು. ಈ ಉರಿಯೂತದಿಂದಾಗಿ ಚರ್ಮದ ಮೇಲೆ ದದ್ದು ಆಗಬಹುದು. ಆದ್ದರಿಂದ ನಾವು ಯಾವಾಗಲೂ ಜಾಗರೂಕರಾಗಿರಬೇಕು. ಹೀಗಾಗಿ ರಾತ್ರಿಯಲ್ಲಿ ಉಣ್ಣೆಯ ಬಟ್ಟೆಗಳಿಂದ ದೂರವಿರಬೇಕು.
ರಕ್ತದೊತ್ತಡ ಸಮಸ್ಯೆ
ರಾತ್ರಿಯ ವೇಳೆ ದೇಹವನ್ನು ಅತಿಯಾಗಿ ಸ್ವೆಟರ್ ಆವರಿಸುವುದರಿಂದ ಬೆವರುವುದು ಶುರುವಾಗುತ್ತದೆ. ಇದರಿಂದಾಗಿ ರಕ್ತದೊತ್ತಡದಲ್ಲಿ ಇಳಿಕೆ ಮತ್ತು ತಲೆತಿರುಗುವಿಕೆ ಕೂಡ ಉಂಟಾಗುತ್ತದೆ. ಅಷ್ಟೇ ಅಲ್ಲ ಅನೇಕರಿಗೆ ನಿದ್ರೆಯ ಸಮಸ್ಯೆಯೂ ಎದುರಾಗುತ್ತದೆ. ನೀವು ರಾತ್ರಿಯಲ್ಲಿ ಬಿಗಿಯಾದ ಉಣ್ಣೆಯ ಬಟ್ಟೆಗಳನ್ನು ಧರಿಸಿದರೆ, ಉಸಿರಾಟದ ಸಮಸ್ಯೆಯೂ ಉಂಟಾಗಬಹುದು.
ಅಸ್ತಮಾವನ್ನು ವೇಗಗೊಳಿಸುತ್ತದೆ
ಉಣ್ಣೆಯ ಬಟ್ಟೆಗಳು ಅಥವಾ ಸ್ವೆಟರ್‌ಗಳು ಅಸ್ತಮಾದ ಸಮಸ್ಯೆಯನ್ನು ಹೆಚ್ಚಿಸಬಹುದು. ಇದು ಅಲರ್ಜಿಗಳಿಗೆ ಒಡ್ಡಿಕೊಳ್ಳುವುದನ್ನು ಹೆಚ್ಚಿಸುತ್ತದೆ. ಜತೆಗೆ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ನೀವು ಹೆಚ್ಚು ಜಾಗೃತಿ ವಹಿಸಿ.
ಬ್ಯಾಕ್ಟೀರಿಯಾದ ಸೋಂಕು
ಸ್ವೆಟರ್‌ಗಳ ಹೊರತಾಗಿ, ನೀವು ರಾತ್ರಿಯಲ್ಲಿ ಸ್ವೆಟರ್‌ಗಳು ಮತ್ತು ಬೆಚ್ಚಗಿನ ಸಾಕ್ಸ್‌ಗಳನ್ನು ಧರಿಸಿದರೆ, ನಿಮ್ಮ ಚರ್ಮವು ಸಹ ಸಮಸ್ಯೆಗೆ ಗುರಿಯಾಗುತ್ತದೆ. ಸಾಕ್ಸ್ ಬೆವರುವಿಕೆಯಿಂದ ಬ್ಯಾಕ್ಟೀರಿಯಾದ ಸೋಂಕಿನ ಸಾಧ್ಯತೆಗಳು ತುಂಬಾ ಹೆಚ್ಚು. ಆದ್ದರಿಂದ ಮಲಗುವಾಗ ಸ್ವೆಟರ್ ಮತ್ತು ಸಾಕ್ಸ್‌ಗಳಿಂದ ದೂರವಿರಬೇಕು.
ಇದನ್ನೂ ಓದಿ:
Skin Care Tips: ಚಳಿಗಾಲದಲ್ಲಿ ಕಿರಿಕಿರಿ ಉಂಟು ಮಾಡುವ ತ್ವಚೆಯ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಿ
Hair care: ಚಳಿಗಾಲದಲ್ಲಿ ತಲೆ ಕೂದಲ ಕಾಳಜಿ ಹೇಗೆ? ಗೊಂದಲ ಬೇಡ ಸರಳ ವಿಧಾನ ಇಲ್ಲಿದೆ ನೋಡಿ