Hair care: ಚಳಿಗಾಲದಲ್ಲಿ ತಲೆ ಕೂದಲ ಕಾಳಜಿ ಹೇಗೆ? ಗೊಂದಲ ಬೇಡ ಸರಳ ವಿಧಾನ ಇಲ್ಲಿದೆ ನೋಡಿ

ತಲೆಹೊಟ್ಟು, ತಲೆಯಲ್ಲಿ ತುರಿಕೆ ಮತ್ತು ತಲೆಯಲ್ಲಿ ನೋವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಲ್ಲದೇ ಕೂದಲಿಗೆ ಸಂಬಂಧಿಸಿದ ಸಮಸ್ಯೆಯೂ ಹೆಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಕೂದಲು ಮತ್ತು ನೆತ್ತಿಯನ್ನು ಪೋಷಿಸುವ ಅನೇಕ ಮನೆಮದ್ದುಗಳನ್ನು ಪ್ರಯತ್ನಿಸಬಹುದು.

Hair care: ಚಳಿಗಾಲದಲ್ಲಿ ತಲೆ ಕೂದಲ ಕಾಳಜಿ ಹೇಗೆ? ಗೊಂದಲ ಬೇಡ ಸರಳ ವಿಧಾನ ಇಲ್ಲಿದೆ ನೋಡಿ
ಸಾಂಕೇತಿಕ ಚಿತ್ರ
Follow us
| Updated By: preethi shettigar

Updated on: Jan 05, 2022 | 7:35 AM

ತಲೆ ಕೂದಲು ರೇಷ್ಮೆಯಂತೆ ಹೊಳೆಯಬೇಕಾದರೆ ಹಲವು ಮಾರ್ಗಗಳನ್ನು ಅನುಸರಿಸಬೇಕು ಎಂಬುವುದು ನಿಜ. ಆದಾಗ್ಯೂ, ಕೆಲವರು ವರ್ಷವಿಡೀ ಒಣ ನೆತ್ತಿಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಇದು ಹೆಚ್ಚಾಗಿ ಚಳಿಗಾಲ (Winter) ಮತ್ತು ಬೇಸಿಗೆಯಲ್ಲಿ ಬರುವ ಋತುಮಾನದ ಸಮಸ್ಯೆಯಾಗಿದೆ. ಈ ಸಮಯದಲ್ಲಿ ತಲೆಹೊಟ್ಟು, ತಲೆಯಲ್ಲಿ ತುರಿಕೆ ಮತ್ತು ತಲೆಯಲ್ಲಿ ನೋವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಲ್ಲದೇ ಕೂದಲಿಗೆ ಸಂಬಂಧಿಸಿದ ಸಮಸ್ಯೆಯೂ ಹೆಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಕೂದಲು (Hair) ಮತ್ತು ನೆತ್ತಿಯನ್ನು ಪೋಷಿಸುವ ಅನೇಕ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಚಳಿಗಾಲದಲ್ಲಿ ತಲೆ ಕೂದಲಿನ ಕಾಳಜಿಗೆ ಈ ಸಲಹೆಗಳನ್ನು ಅನುಸರಿಸಿ.

ತೆಂಗಿನ ಎಣ್ಣೆ, ಮೊಸರು 2-3 ಟೇಬಲ್ಸ್ಪೂನ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತಾಜಾ ಮೊಸರು ಮಿಶ್ರಣ ಮಾಡಿ. ಎರಡನ್ನೂ ಸೇರಿಸಿ ಹೇರ್ ಮಾಸ್ಕ್ ತಯಾರಿಸಿ. ಇದನ್ನು ತಲೆ ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ನಂತರ ಬೆರಳುಗಳಿಂದ ಲಘುವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ತಲೆ ಸ್ನಾನ ಮಾಡಿ. ಚಳಿಗಾಲದಲ್ಲಿ ನೆತ್ತಿ ಒಣಗದಂತೆ ನೋಡಿಕೊಳ್ಳಲು ನೀವು ವಾರಕ್ಕೆ 1 ರಿಂದ 2 ಬಾರಿ ಈ ಹೇರ್ ಮಾಸ್ಕ್ ಅನ್ನು ಬಳಸಬಹುದು.

ಬಾಳೆಹಣ್ಣು, ಆಲಿವ್ ಎಣ್ಣೆ ಬಾಳೆಹಣ್ಣು ರುಬ್ಬಿ ಇದಕ್ಕೆ 2-3 ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಪೇಸ್ಟ್​ ರೀತಿಯಲ್ಲಿ ಇದನ್ನು ಮಾಡಿ  ತಲೆ ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ನಂತರ ಕೂದಲನ್ನು ಸಡಿಲವಾದ ಬನ್‌ನಲ್ಲಿ ಕಟ್ಟಿಕೊಳ್ಳಿ ಮತ್ತು ಶವರ್ ಕ್ಯಾಪ್ ಧರಿಸಿ. 30 -40 ನಿಮಿಷದ ಬಳಿಕ ಶಾಂಪೂ ಬಳಸಿ ತಲೆ ಸ್ನಾನ ಮಾಡಿ. ಚಳಿಗಾಲದಲ್ಲಿ ಒಂದು ಅಥವಾ ಎರಡು ಬಾರಿ ಹೀಗೆ ಮಾಡಿ.

ಅಲೋವೆರಾ, ಜೇನುತುಪ್ಪ ಚಳಿಗಾಲದಲ್ಲಿ ತಲೆಯ ನೆತ್ತಿ ಭಾಗ ಚೆನ್ನಾಗಿರಲು ಒಂದು ಬಟ್ಟಲಿನಲ್ಲಿ 2-3 ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ತಲೆಯ ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ. ಬಳಿಕ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಬಿಡಿ. ನಂತರ ಸ್ನಾನ ಮಾಡಿ.

ಕ್ಯಾಸ್ಟರ್ ಆಯಿಲ್ ಬಳಕೆ ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಕ್ಯಾಸ್ಟರ್ ಆಯಿಲ್ ತೆಗೆದುಕೊಳ್ಳಿ. ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. ಎರಡು ಗಂಟೆಗಳ ಕಾಲ ಬಿಟ್ಟು ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ನೀವು ವಾರದಲ್ಲಿ ಎರಡು ಅಥವಾ ಮೂರು ಬಾರಿ ಬಳಸಬಹುದು. ಚಳಿಗಾಲದಲ್ಲಿ ನೆತ್ತಿಯ ಶುಷ್ಕತೆಯನ್ನು ತಡೆಯಲು ಸುಲಭವಾದ ಮಾರ್ಗವೆಂದರೆ ಕ್ಯಾಸ್ಟರ್ ಆಯಿಲ್.

ಇದನ್ನೂ ಓದಿ: ಪ್ರೀತಿಪಾತ್ರರ ಜತೆಗಿನ ಸಂಬಂಧ ಕಳೆದುಕೊಳ್ಳುವ ಆತಂಕ ಇದೆಯೇ? ತಪ್ಪು ಯೋಚನೆಗೆ ಇರಲಿ ಒಂದು ಪೂರ್ಣವಿರಾಮ

ಕಿಡ್ನಿ ಸಮಸ್ಯೆ ಎದುರಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ; ಆರೋಗ್ಯ ಕಾಳಜಿಗಾಗಿ ಫೋಟೋ ಸಹಿತ ಮಾಹಿತಿ ಇದೆ ನೋಡಿ

Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ