ಬ್ರೈನ್ ಸ್ಟ್ರೋಕ್ ಎಂದರೇನು? ಚಳಿಗಾಲದಲ್ಲೇ ಏಕೆ ಇದರ ಅಪಾಯ ಹೆಚ್ಚು ಇಲ್ಲಿದೆ ಗಮನಿಸಿ

| Updated By: preethi shettigar

Updated on: Dec 25, 2021 | 7:30 AM

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದರೆ ಸ್ಟ್ರೋಕ್​ ಹೆಚ್ಚಾಗುತ್ತದೆ. ತಣ್ಣೀರು ತಲೆಯ ಮೇಲೆ ಬಿದ್ದ ತಕ್ಷಣ, ಅದು ಅಡ್ರಿನಾಲಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮೆದುಳಿನ ತಾಪಮಾನವನ್ನು ತ್ವರಿತವಾಗಿ ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಪಾರ್ಶ್ವವಾಯು ಬರುತ್ತದೆ.

ಬ್ರೈನ್ ಸ್ಟ್ರೋಕ್ ಎಂದರೇನು? ಚಳಿಗಾಲದಲ್ಲೇ ಏಕೆ ಇದರ ಅಪಾಯ ಹೆಚ್ಚು ಇಲ್ಲಿದೆ ಗಮನಿಸಿ
ಸಾಂದರ್ಭಿಕ ಚಿತ್ರ
Follow us on

ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಬ್ರೈನ್ ಸ್ಟ್ರೋಕ್ (Brain stroke) ಜೀವಕ್ಕೆ ಅಪಾಯಕಾರಿ ಸ್ಥಿತಿಯಾಗಿದೆ. ಸ್ನಾನ ಮಾಡುವಾಗ ಅದರ ಹೆಚ್ಚಿನ ಪರಿಣಾಮ ಕಂಡುಬರುತ್ತದೆ. ಇದನ್ನು ‘ಬಾತ್‌ರೂಮ್ ಸ್ಟ್ರೋಕ್’ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಚಳಿಗಾಲದಲ್ಲಿ (Winter) ತಣ್ಣೀರಿನಿಂದ ಸ್ನಾನ ಮಾಡಿದರೆ ಸ್ಟ್ರೋಕ್​ ಹೆಚ್ಚಾಗುತ್ತದೆ. ತಣ್ಣೀರು ತಲೆಯ ಮೇಲೆ ಬಿದ್ದ ತಕ್ಷಣ, ಅದು ಅಡ್ರಿನಾಲಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮೆದುಳಿನ ತಾಪಮಾನವನ್ನು ತ್ವರಿತವಾಗಿ ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಪಾರ್ಶ್ವವಾಯು ಬರುತ್ತದೆ. ಇದಲ್ಲದೇ ಸ್ಥೂಲಕಾಯತೆ, ಹೃದ್ರೋಗ, ಮಧುಮೇಹ, ಅಧಿಕ ಬಿಪಿ, ಕೊಲೆಸ್ಟ್ರಾಲ್ ಇತ್ಯಾದಿಗಳಿಂದಲೂ ಪಾರ್ಶ್ವವಾಯು ಅಥವಾ ಸ್ಟ್ರೋಕ್​ ಸಮಸ್ಯೆ ಬರಬಹುದು.

ಸಾಮಾನ್ಯವಾಗಿ 80 ಪ್ರತಿಶತದಷ್ಟು ಪಾರ್ಶ್ವವಾಯು ಪ್ರಕರಣಗಳು ಹೆಪ್ಪುಗಟ್ಟುವಿಕೆಯಿಂದ ಕೂಡಿದ್ದರೆ, 20 ಪ್ರತಿಶತ ರಕ್ತಸ್ರಾವದಿಂದ ಕೂಡಿದೆ. ಹೀಗಾಗಿ ಸ್ಟ್ರೋಕ್​ ಆದ ಕೂಡಲೇ ರೋಗಿಯನ್ನು ತಡಮಾಡದೆ ವೈದ್ಯರ ಬಳಿಗೆ ಕರೆದೊಯ್ಯಬೇಕು. ನೀವು ತಿಳಿದುಕೊಳ್ಳಬೇಕಾದ ಮೆದುಳಿನ ಸ್ಟ್ರೋಕ್‌ಗೆ ಸಂಬಂಧಿಸಿದ ಪ್ರಮುಖ ವಿಷಯಗಳು ಈ ಕೆಳಗಿನಂತಿದೆ.

ಬ್ರೈನ್​ ಸ್ಟ್ರೋಕ್ ಲಕ್ಷಣಗಳು
ಪಾರ್ಶ್ವವಾಯು ಲಕ್ಷಣಗಳನ್ನು ನೋಡುವ ಮೂಲಕ ಬ್ರೈನ್ ಸ್ಟ್ರೋಕ್ ಹೇಗೆ ಆಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ವಾಸ್ತವವಾಗಿ ಮೆದುಳು ಎರಡು ಭಾಗಗಳನ್ನು ಹೊಂದಿದೆ. ಮೆದುಳಿನ ಬಲಭಾಗವು ದೇಹದ ಎಡಭಾಗವನ್ನು ನಿಯಂತ್ರಿಸುತ್ತದೆ ಮತ್ತು ಎಡಭಾಗವು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೆದುಳಿನ ಬಲಭಾಗದಲ್ಲಿ ಪಾರ್ಶ್ವವಾಯು ಬಂದರೆ, ದೇಹದ ಎಡಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ ಮತ್ತು ಪಾರ್ಶ್ವವಾಯು ಮೆದುಳಿನ ಎಡಭಾಗದಲ್ಲಿ ಬಿದ್ದರೆ, ದೇಹದ ಬಲಭಾಗದಲ್ಲಿ ಪಾರ್ಶ್ವವಾಯು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ರೋಗಲಕ್ಷಣಗಳನ್ನು ಗುರುತಿಸಿ
ದೇಹದ ಒಂದು ಭಾಗದಲ್ಲಿ ದೌರ್ಬಲ್ಯ, ಕೈಕಾಲು ಮರಗಟ್ಟುವಿಕೆ, ಧ್ವನಿ ತೊದಲುವಿಕೆ, ಮಾತು ಅರ್ಥಮಾಡಿಕೊಳ್ಳಲು ತೊಂದರೆಯಾಗುವುದು, ಮೂರ್ಛೆ, ಬಾಯಿ, ಕಣ್ಣುಗಳ ವಕ್ರತೆ ಇತ್ಯಾದಿ ಬ್ರೈನ್ ಸ್ಟ್ರೋಕ್‌ನ ಲಕ್ಷಣಗಳಾಗಿವೆ.

ಬಾತ್ರೂಮ್ ಸ್ಟ್ರೋಕ್ ಅಪಾಯಕ್ಕೆ ವಯಸ್ಸಾದವರು ಹೆಚ್ಚು ಬಲಿಯಾಗುತ್ತಾರೆ
ಬಾತ್ರೂಮ್ ಸ್ಟ್ರೋಕ್​ಗೆ ಯಾರಾದರೂ ಬಲಿಯಾಗಬಹುದು. ಆದರೆ ವಯಸ್ಸಾದವರು ಇದಕ್ಕೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಿನೊಂದಿಗೆ ಮೆದುಳಿನ ಕೋಶಗಳು ಸಹ ದುರ್ಬಲಗೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ರಕ್ತದೊತ್ತಡದ ಹೆಚ್ಚಳದಿಂದಾಗಿ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬರುತ್ತದೆ. ಕೆಲವೊಮ್ಮೆ ರಕ್ತಸ್ರಾವದ ಸ್ಥಿತಿಯೂ ಉಂಟಾಗುತ್ತದೆ. ಮೆದುಳಿನ ಅಭಿಧಮನಿ ಸಿಡಿಯುತ್ತದೆ. ಇದು ಬಹಳ ಗಂಭೀರವಾದ ಪರಿಸ್ಥಿತಿ. ಈ ಹಂತದಲ್ಲಿ ರೋಗಿಯು ಕೋಮಾಗೆ ಹೋಗಬಹುದು. ತಡವಾದರೆ ಪ್ರಾಣವೂ ಹೋಗಬಹುದು.

ಚಿಕಿತ್ಸೆಯ ಬಗ್ಗೆ ತಿಳಿಯಿರಿ
ಪಾರ್ಶ್ವವಾಯು ಸಂಭವಿಸಿದ ಮೂರು ಗಂಟೆಗಳ ಒಳಗೆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದರೆ, ನಂತರ ತಜ್ಞರು ಅವರಿಗೆ ಟಿಪಿಎ ಇಂಜೆಕ್ಷನ್ ನೀಡುತ್ತಾರೆ. ಈ ಕಾರಣದಿಂದಾಗಿ, ತಲೆಯಲ್ಲಿ ಹರಿಯುವ ರಕ್ತವು ತೆಳುವಾಗುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಕ್ರಮೇಣ ಕೊನೆಗೊಳ್ಳುತ್ತದೆ. ಇದಲ್ಲದೆ, ತಜ್ಞರು ಔಷಧಿಗಳು ಮತ್ತು ಚುಚ್ಚುಮದ್ದಿನ ಮೂಲಕ ಹೆಪ್ಪುಗಟ್ಟುವಿಕೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಾರೆ. ಔಷಧಿಗಳ ಮೂಲಕ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕದಿದ್ದರೆ, ಶಸ್ತ್ರಚಿಕಿತ್ಸೆಯ ಅಗತ್ಯ ಉಂಟಾಗುತ್ತದೆ. ಪಾರ್ಶ್ವವಾಯು ಸಮಸ್ಯೆಯನ್ನು ಗುಣಪಡಿಸಲು ಫಿಸಿಯೋಥೆರಪಿಸ್ಟ್ ಸಹಾಯವನ್ನು ಪಡೆದುಕೊಳ್ಳಿ ಮತ್ತು ತಜ್ಞರ ನಿರ್ದೇಶನದಂತೆ ಔಷಧಿಗಳನ್ನು ತೆಗೆದುಕೊಳ್ಳಿ.

ಸ್ನಾನ ಮಾಡುವಾಗ ಈ ವಿಷಯವನ್ನು ನೆನಪಿನಲ್ಲಿಡಿ
ಚಳಿಗಾಲದಲ್ಲಿ ಸ್ನಾನಕ್ಕೆ ತಣ್ಣೀರು ಬಳಸಬೇಡಿ. ಬದಲಿಗೆ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇದಲ್ಲದೇ ನೇರವಾಗಿ ತಲೆಗೆ ನೀರು ಹಾಕಬೇಡಿ. ಮೊದಲು ಪಾದಗಳಿಗೆ ನೀರು ಹಾಕಿ, ಮೊಣಕಾಲು, ತೊಡೆ, ಹೊಟ್ಟೆಯನ್ನು ಸ್ವಚ್ಛಗೊಳಿಸಿದ ನಂತರ ದೇಹಕ್ಕೆ ನೀರು ಸುರಿದು ಕೊನೆಗೆ ತಲೆಗೆ ನೀರು ಸುರಿಯಬೇಕು.

ಇದನ್ನೂ ಓದಿ:
ಬಾಳೆಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇದನ್ನು ಬಳಸುವ ಕ್ರಮ ಹೀಗಿದೆ ನೋಡಿ

ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದೆಯೇ? ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ ವಹಿಸಿ