ಅತಿ ವಿಶೇಷ ನಕ್ಷತ್ರ ಶ್ರವಣ… ಈ ನಕ್ಷತ್ರದಲ್ಲಿ ಜನಿಸಿದವರು ಪುಣ್ಯಾತ್ಮ

ಶ್ರವಣ ನಕ್ಷತ್ರವು ಮೂರು ನಕ್ಷತ್ರಗಳ ಸಮೂಹವಾಗಿದ್ದು, ಮಹಾವಿಷ್ಣುವಿನ ಅಧಿಪತ್ಯದಲ್ಲಿದೆ. ಇದು ಶುಭ ನಕ್ಷತ್ರವೆಂದು ಪರಿಗಣಿಸಲ್ಪಟ್ಟಿದೆ. ಶ್ರವಣ ನಕ್ಷತ್ರದಲ್ಲಿ ಜನಿಸಿದವರು ವಿದ್ಯಾಸಕ್ತಿ, ನಿರಂತರತೆ, ಒಳ್ಳೆಯ ಮಾತು, ಸಜ್ಜನ ಪ್ರೀತಿ, ಸಂಸಾರ ಸಂಪತ್ತು ಮತ್ತು ವಿಧೇಯತೆಗಳಿಂದ ಕೂಡಿರುತ್ತಾರೆ. ಪುರಾಣಗಳಲ್ಲಿ ಆಸಕ್ತಿ ಹೊಂದಿರುವುದು ಇವರ ವಿಶೇಷ.

ಅತಿ ವಿಶೇಷ ನಕ್ಷತ್ರ ಶ್ರವಣ... ಈ ನಕ್ಷತ್ರದಲ್ಲಿ ಜನಿಸಿದವರು ಪುಣ್ಯಾತ್ಮ
ಸಾಂದರ್ಭಿಕ ಚಿತ್ರ
Edited By:

Updated on: Apr 23, 2025 | 5:33 PM

ಇಪ್ಪತ್ತೇಳು ನಕ್ಷತ್ರಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಸಕಲ ಶುಭ ಕಾರ್ಯಗಳಿಗೆ ಪ್ರಶಸ್ತವಾದ ನಕ್ಷತ್ರಗಳಲ್ಲಿ ಇದೂ ಒಂದು. ಅದು ಯಾವುದೆಂದರೆ ಬಾಣಾಕಾರದಲ್ಲಿ ಕಾಣಿಸುವ ಮೂರು ನಕ್ಷತ್ರಗಳ ಸಮೂಹ ಶ್ರವಣಾ ನಕ್ಷತ್ರ (Shravana Nakshatra). ಈ ನಕ್ಷತ್ರದ ಅಧಿಪತಿ ಮಹಾವಿಷ್ಣು. ‌ಶ್ರವಣಾ ನಕ್ಷತ್ರದಂದು ಹುಣ್ಣಿಮೆ‌ ಬಂದರೆ ಅದು ಶ್ರಾವಣ‌ಮಾಸ. ಹಬ್ಬಗಳು ಆರಂಭವಾಗುವುದು ಇದೇ ತಿಂಗಳಿಂದ. ಆದ್ದರಿಂದ ಶ್ರಾವಣ ಮಾಸ, ಶ್ರವಣಾ ನಕ್ಷತ್ರ ಶುಭ.

ಇದು ದೇವಗಣಕ್ಕೆ ಸೇರಿದ್ದಾಗಿದ್ದು, ಕಫ ಪ್ರಕೃತಿಯದ್ದಾಗಿದೆ. ಇದರ ನಾಡಿ ಅಂತ್ಯ. ಮಕರ ರಾಶಿಯಲ್ಲಿ ನಕ್ಷತ್ರದ ನಾಲ್ಕೂ ಪಾದಗಳು ಇರಲಿದ್ದು ಶಿ ಶೂ ಶೇ ಶೋ ನಾಮಾಕ್ಷರವಾಗಿರಲಿದೆ. ಈ ನಕ್ಷತ್ರಲ್ಲಿ‌‌ ಜನಿಸಿದವರು ಹೀಗೆಲ್ಲ ಇರುತ್ತಾರೆ –

ವಿದ್ಯಾಸಕ್ತಿ :

ಇವರಿಗೆ ಯಾವುದರಲ್ಲಿ ಆಸಕ್ತಿ ಇರುವುದೋ ಇಲ್ಲವೇ ನಿರಂತರ ಅಧ್ಯಯನದ ಕಡೆ ಗಮನವಿರಲಿದೆ. ಏನನ್ನಾದರೂ ಕಲಿಯುತ್ತಲೇ ಇರುವರು. ವಿಶೇಷವಾಗಿ ಶಾಸ್ತ್ರ, ಸಂಪ್ರದಾಯದಲ್ಲಿ ತೊಡಗಿಕೊಳ್ಳುವರು.

ನೈರಂತರ್ಯ :

ಮಾಡುವುದು ಯಾವುದೇ ಕೆಲಸ ಆದರೂ ನಿರಂತರತೆ ಬೇಕು. ಅಂತಹ ನಿರ್ಗಳತೆ ಈ ನಕ್ಷತ್ರದವರಿಗೆ ಹೆಚ್ಚು. ಹಿಡಿದ ಕೆಲಸವನ್ನು ಬಿಡದೇ ಮುಕ್ತಾ ಮಾಡುವರು.‌ ಮೊಸಳೆಯ ಲಕ್ಷಣವನ್ನು ಇಲ್ಲಿ‌ ನೋಡಬಹುದು.

ಒಳ್ಳೆಯ ಮಾತು :

ಇವರ ಬಗ್ಗೆ ಒಳ್ಳೆಯ ಮಾತು ಕೇಳುತ್ತಿದ್ದರೆ, ಸುಮ್ಮನೆ ಆಲಿಸುವಿರಿ. ಮತ್ತಷ್ಟು ಕೇಳಲು ಖುಷಿಯಾಗುವುದು. ಇದು ಮಕರ ರಾಶಿಯ ಪೂರ್ವಾರ್ಧದ ಜಿಂಕೆಯ ಭಾಗ. ಅದಕ್ಕೆ ಇಂಪಾದ ನಾದ ಕೇಳಿಸಿದರೆ ಹಾಗೇ ನಿಂತಲ್ಲಿ‌ ನಿಲ್ಲುವುದು. ಈ ನಕ್ಷತ್ರದವರೂ ಹಾಗೆಯೇ.

ಸಜ್ಜನಪ್ರಿಯ :

ಸಜ್ಜನ ವ್ಯಕ್ತಿಗಳಿಗೆ ಇವರು ಪ್ರಿಯವಾಗುವರು. ಅವರ ಸೇವೆಯಲ್ಲಿ ತೊಡಗುವರು. ಜಿಂಕೆಯ ಚರ್ಮವನ್ನು ತಪಸ್ಸಿಗೆ ಬಳಸುವುದು ಪದ್ಧತಿ. ಶ್ರವಣಾ ನಕ್ಷತ್ರವು ಮಕರ ರಾಶಿ ಇರುವುದು ಎಲ್ಲ ಅಂಶಗಳೂ ಹೊಂದಾಣಿಕೆಯಾಗುತ್ತವೆ.

ಸಂಸಾರಸಂಪತ್ತು :

ಪಶು, ಪುತ್ರ, ಸೇವಕರು, ಸಂಪತ್ತಿನಿಂದ ಕೂಡಿದವರು ಇವರು. ಸಮೃದ್ಧ ಸಂಸಾರದಿಂದ ಕೂಡಿ, ಉತ್ತಮ ಜೀವನವನ್ನು ನಡೆಸುವರು.

ವಿಧೇಯಪಕ್ಷ :

ಯಾರು ವಿಧೇಯರಾಗಿ ಬರುತ್ತಾರೋ ಅವರಿಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವಲ್ಲಿ ನಿರತ. ಆಶ್ರಯ ಕೇಳಿ ಬಂದವರಿಗೆ ಅಶ್ರಯ ದಾತಾ.

ಇದನ್ನೂ ಓದಿ: ಅಕ್ಷಯ ತೃತೀಯದಂದು ಅಪರೂಪದ ಯೋಗಗಳು; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ಸತ್ಪಾತ್ರಭಕ್ತಿ :

ಇವರು ಯಾರ ಮೇಲೋ ಗೌರವ, ಶ್ರದ್ಧೆ ಇಡುವುದಿಲ್ಲ. ಇವರ ಮನಸ್ಸಿಗೆ ಶ್ರೇಷ್ಠ ಭಾವ ಬಂದಾಗ ಮಾತ್ರ ಗೌರವಿಸುವರು. ಯಾರದೋ ಮಾತಿನ ಆಧಾರದ ಮೇಲೆಲ್ಲ.

ವಿಜಿತಾರಿಪಕ್ಷ :

ಶತ್ರುಗಳು ಇಲ್ಲದಂತೆ ಮಾಡಿಕೊಳ್ಳುವ ಸ್ವಭಾವ ಇವರದು. ನ್ಯಾಯಸಮ್ಮತವಾದ ಮಾರ್ಗದಲ್ಲಿ ಮಾಡಿದರೆ, ಇನ್ನೊಂದು ತಮ್ಮ ಮಾತಿನಿಂದ ಯಾವುದೂ ಇಲ್ಲದಂತೆ ಮಾಡಿಕೊಳ್ಳುವರು. ವಿಷ್ಣುವಿನ ನಕ್ಷತ್ರ ಆದ ಕಾರಣ ಅಲ್ಪ ಗುಣಗಳು ಅದರಿಂದಲೂ ಬರುತ್ತವೆ.

ಪುರಾಣಶ್ರವಣ :

ಇವರ ಅಪರೂಪದ ಗುಣವೆಂದರೆ ಪ್ರಾಚೀನ ಇತಿಹಾಸ ಪುರಾಣಗಳನ್ನು ಕೇಳಲು ಇಷ್ಟಪಡವರು. ಅದನ್ನು ಹೇಳುವುದು ಕೂಡ ಆಸಕ್ತಿಕರವಾಗಿರುವುದು. ಹೀಗೆ ಅನೇಕ ಸದ್ಗುಣಗಳಿಂದ ಕೂಡದ ನಕ್ಷತ್ರ ಶ್ರವಣ.

– ಲೋಹಿತ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ