ಈ ವರ್ಷ ನಿಮಗೆ ಮಿಶ್ರಫಲಪ್ರದವಾಗಿದೆ. ವರ್ಷ ಮಧ್ಯದ ವರೆಗೆ ಏರಿಳಿತಗಳಿಲ್ಲದೇ ನೌಕೆಯಲ್ಲಿ ಸಂಚರಿಸುವಂತೆ ಸಂಚರಿಸಬಹುದು. ಆದರೆ ಅನಂತರ ಅಲ್ಪ ಕಷ್ಟ ನಿಮ್ಮ ಪಾಲಿಗೆ ಕಾಣಿಸಿಕೊಳ್ಳುವುದು. ರಾಶಿಯ ಅಧಿಪತಿ ಕುಜನು ಚತುರ್ಥ ರಾಶಿಯಲ್ಲಿ ಇದ್ದು ಇವನು ವರ್ಷಾರಂಭದ ಆರು ತಿಂಗಳು ಪ್ರತಿಕೂಲನು. ಇವನಿಂದ ಏನನ್ನೂ ನಿರೀಕ್ಷಿಸಲಾಗದು. ಸಾಡೇ ಸಾಥ್ ಶನಿಯ ಆರಂಭವಾಗಲಿದ್ದು ದೈವವನ್ನು ನಂಬಿ ಕಾರ್ಯವನ್ನು ಮಾಡಿ. ಒಳ್ಳೆಯ ಫಲ ಅಂತಿಮವಾಗಿ ಇದೆ. ಇನ್ನು ರಾಹು ಕೇತುಗಳೂ ಸ್ಥಾನವನ್ನು ಬದಲಾಯಿಸಲಿವೆ. ಐದು ಗ್ರಹಗಳೂ ದೀರ್ಘ ಕಾಲದಿಂದ ಉಪಸ್ಥಿತರಿದ್ದ ರಾಶಿಯಿಂದ ಕೆಲವೇ ದಿನಗಳ ಅನಂತರದಲ್ಲಿ ತಮ್ಮ ಸ್ಥಾನವನ್ನು ಬದಲಿಸಲಿವೆ.
ಈ ವರ್ಷದಲ್ಲಿ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಬೇಡ. ಅಂತಹ ಹೆಚ್ಚಿನ ವ್ಯತ್ಯಾಸವೇನೂ ಆಗದು. ಸಣ್ಣ ನೋವು ದೇಹಪೀಡೆಗಳು ಕಾಣಿಸಿಕೊಳ್ಳುವುದು ಸಹಜ. ಸಣ್ಣ ಔಷಧದೊಂದಿಗೆ ಮುಕ್ತಾಯವಾಗಲಿದೆ. ಯಾವುದೇ ದೀರ್ಘವಿಶ್ರಾಂತಿಯ ರೋಗಗಳು ನಿಮ್ಮನ್ನು ಬಾಧಿಸಲಾರವು.
ಹಿರಿಯರಿಂದ ನಿಶ್ಚಿತವಾದ ಅಥವಾ ಪ್ರೇಮ ವಿವಾಹವನ್ನು ಏಪ್ರಿಲ್ ತಿಂಗಳ ಒಳಗೆ ಮಾಡಿಕೊಳ್ಳುವುದು ಸೂಕ್ತ. ಅನಂತರ ಗುರು ಬಲ ನಿಮಗೆ ಇರದು. ಜೂನ್ ಅನಂತರ ಪ್ರಯತ್ನ ಪಟ್ಟ ಪ್ರೇಮವು ಕೈಸೇರವುದು. ಅದನ್ನು ಉಳಿಸಿಕೊಳ್ಳುವ ಪರೀಕ್ಷೆಗಳು ಬರಲಿದ್ದು ಉತ್ತೀರ್ಣರಾಗಬೇಕಾಗುವುದು. ನಿರ್ವಹಣೆಯನ್ನು ಬಹಳ ಜಾಗರೂಕತೆಯಿಂದ ಮಾಡಿ.
ಉದ್ಯೋಗಾಧಿಪತಿ ಶನಿ ಈ ವರ್ಷದ ಮಧ್ಯದಲ್ಲಿ ದ್ವಾದಶ ಸ್ಥಾನಕ್ಕೆ ಬರಲಿದ್ದಾನೆ. ಉದ್ಯಮ ಅಥವಾ ವೃತ್ತಿಯಲ್ಲಿ ಕೆಲಸ ಹೆಚ್ಚು ಆದಾಯ ಕಡಿಮೆ. ಶ್ರಮವಹಿಸಿ ಸೋಲುವ ಸ್ಥಿತಿ. ಉದ್ಯಮದಲ್ಲಿ ಎಲ್ಲ ಕೆಲಸವನ್ನು ನೀವೇ ಮಾಡಿಕೊಂಡು ಉದ್ಯಮವನ್ನು ಉಳಿಸಿಕೊಳ್ಳುವ ಕಾತರತೆ ಇರವುದು. ಯಾರದ್ದೋ ಸಹಕಾರವನ್ನು ವಿಧಿಯಿಲ್ಲದೇ ಪಡೆಯುವಿರಿ.
ಕುಟುಂಬದಲ್ಲಿ ಕಿರಿಕಿರಿ ಇರಲಿದೆ. ಕುಜನು ನೀಚನಾಗಿ ಸೌಹಾರ್ದ ಭಾವವನ್ನು ಕೊಡುವುದು ಕಷ್ಟ. ನಿಭಾಯಿಸುವ ಕೌಶಲವಿದ್ದರೆ ಅದರ ಪರಿಣಾಮವು ಅಷ್ಟಾಗಿ ಅನುಭವಕ್ಕೆ ಬಾರದು. ಸಂಗಾತಿಯ ಜೊತೆ ಹೆಚ್ಚು ಮನಸ್ತಾಪ ಕಾಣಿಸುವುದು. ನಕಾರಾತ್ಮಕ ಆಲೋಚನೆಯನ್ನು ಮಾಡಬೇಕಾಗಿಬರುವುದು.
ವರ್ಷದ ಮಧ್ಯದ ವರೆಗೆ ಯಾವುದೇ ಶತ್ರುತ್ವ ಕಾಣಿಸದು. ಅನಂತರ ನಿಮ್ಮವರೇ ನಿಮ್ಮ ಮೇಲೆ ಬೇಡದ್ದನ್ನು ಮಾಡುವರು. ಶತ್ರುಗಳಿಂದ ಕಾಪಾಡಿಕೊಳ್ಳಲು ಹಣವನ್ನೂ ಖರ್ಚುಮಾಡಬೇಕಾಗುವುದು. ಬಲಿಷ್ಠ ವೈರತ್ವವಿಲ್ಲದೇ ಇದ್ದರೂ ನಿಮಗೆ ಒತ್ತಡ ತರುವಷ್ಟು ಇರಲಿದೆ.
ಇದನ್ನೂ ಓದಿ: 2025ರಲ್ಲಿ ವೃಷಭ ರಾಶಿಯವರ ಭವಿಷ್ಯ ಹೇಗಿರಲಿದೆ? ಲಾಭವೋ, ನಷ್ಟವೋ?
ಈ ವರ್ಷ ನಿಮಗೆ ಅದೃಷ್ಟದ ಬಾಗಿಲು ಅರ್ಧ ತೆರೆದಿದೆ ಎನ್ನಬಹುದು. ನವಮಾಧಿಪತಿ ಏಪ್ರಿಲ್ ನಿಂದ ಶತ್ರುವಿನ ರಾಶಿಯನ್ನು ಪ್ರವೇಶಿಸುವನು. ಹಾಗಾಗಿ ಅಕಸ್ಮಾತ್ ಏನೋ ಘಟಿಸುವುದು ಎಂಬ ಭ್ರಮೆ ಬೇಡ. ನಿಮ್ಮ ಪ್ರಯತ್ನವೇ ಮುಖ್ಯವಾಗಿ ಇರಬೇಕಾಗುವುದು.
ಈ ವರ್ಷ ಶನಿಯ ಪೀಡೆಯಿಂದ ರಕ್ಷಣೆ ಪಡೆಯಲು ಶಿವಕವಚ, ಶನಿಸ್ತೋತ್ರವನ್ನು ಮಾಡಿ. ಉದ್ಯೋಗಕ್ಕೆ ತೆರಳುವ ಮೊದಲು ಮರೆಯದೇ ಮಾಡಿ. ವರ್ಷದ ಆರಂಭದಿಂದಲೇ ಇದನ್ನು ಮಾಡಿ.
-ಲೋಹಿತ ಹೆಬ್ಬಾರ್, ಇಡುವಾಣಿ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: