ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿರುತ್ತದೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನಿಮ್ಮ ಕೆಲಸ, ವ್ಯವಹಾರ, ವಹಿವಾಟುಗಳು, ಕುಟುಂಬ, ಸ್ನೇಹಿತರೊಂದಿಗಿನ ಸಂಬಂಧ, ಆರೋಗ್ಯ ಮತ್ತು ದಿನವಿಡೀ ನಡೆಯುವ ಮಂಗಳಕರ ಮತ್ತು ಅಶುಭ ಘಟನೆಗಳ ಬಗ್ಗೆ ಇಂದಿನ (2023 ಡಿಸೆಂಬರ್ 05) ಭವಿಷ್ಯದಲ್ಲಿ ತಿಳಿಯಿರಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ 04:37 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:34 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:23 ರಿಂದ 01:48ರ ವರೆಗೆ.
ಮೇಷ ರಾಶಿ: ಯಾರನ್ನೋ ಮೆಚ್ಚಿಸಲು ಯಾರನ್ನೋ ಅವಮಾನಿಸುವಿರಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರುವಿರಿ. ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ನಿಮ್ಮ ಪರೀಕ್ಷೆಯ ಕಾಲವೂ ಇದಾಗಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಕೆಲವನ್ನು ನೀವು ಜಾಡ್ಯದಿಂದಲೇ ಕಳೆದುಕೊಳ್ಳುವಿರಿ. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ಸಂಗಾತಿಯ ಮಾತಿಗೆ ಎದುರು ಮಾತನಾಡಬೇಡಿ. ಹತ್ತಿರದವರ ಬಗ್ಗೆ ನಿಮಗೆ ಸಭ್ಯಭಾವವು ಇರದು. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ.
ವೃಷಭ ರಾಶಿ: ಹೂಡಿಕೆಗೆ ನಿಮ್ಮ ಹಣವನ್ನು ಹಾಕುವುದು ತಪ್ಪಾಗುವುದು. ತಾರತಮ್ಯ ಭಾವವು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುವುದು. ಯಾರಿಗಾದರೂ ದಾನವನ್ನು ಮಾಡುವಿರಿ. ವಾಹನ ಚಾಲನೆಯಲ್ಲಿ ಹಿಂಜರಿಯುವಿರಿ. ಮನಶ್ಚಾಂಚಲ್ಯದಿಂದ ಕೆಲಸದಲ್ಲಿ ತೊಂದರೆ ಆಗುವುದು. ಸಾವಧಾನತೆಯನ್ನು ನೀವು ರೂಢಿಸಿಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಕ್ಕಳಿಗೆ ತಂದೆಯಿಂದ ಸಹಾಯವು ಸಿಗಬಹುದು. ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಮಯವನ್ನು ಕೊಡುವಿರಿ. ದಿನದ ಕಾರ್ಯಕ್ಕೆ ಸಮಯ ಸಾಲದೇ ಇರಬಹುದು. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ.
ಮಿಥುನ ರಾಶಿ: ಬೇಡದ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ನಿಮಗೆ ಆಗದವರನ್ನು ದೂರ ಮಾಡಿಕೊಳ್ಳಲು ಇಷ್ಟಪಡುವಿರಿ. ಬೇಕೆಂದೇ ಕಲಹವನ್ನು ತಂದುಕೊಳ್ಳುವಿರಿ. ಜೀವನದ ಬಗ್ಗೆ ಒಂಟಿಯಾಗಿ ಕುಳಿತು ಗಂಭೀರ ಚಿಂತನೆಯನ್ನು ಮಾಡುವಿರಿ. ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ಇರುವುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುವರು. ಯಾರನ್ನೂ ದೂಷಿಸುತ್ತ ಇರಬೇಡಿ. ಇನ್ನೊಬ್ಬರ ನಂಬಿಕೆಯನ್ನು ಘಾಸಿಮಾಡುವಿರಿ. ನಿಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವವು ಉತ್ತಮವಾದುದು. ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪಾಲುದಾರಿಕೆಯಲ್ಲಿ ನಿಮ್ಮ ಮಾತೇ ಅಂತಿಮವಾಗುವುದು. ಇನ್ನೊಬ್ಬರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವುದು ತಪ್ಪಾದೀತು.
ಕಟಕ ರಾಶಿ: ಯಾರ ಸ್ವಭಾವವನ್ನೂ ನೀವು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಮೇಲಧಿಕಾರಿಗಳ ಮಾತಿಗೆ ನೀವು ಅನಾದರ ತೋರಿಸುವಿರಿ. ಮಾತನ್ನು ಮಿತವಾಗಿ ಆಡಬೇಕಾದೀತು. ಅವಶ್ಯಕವಿರುವಷ್ಟೇ ಆಹಾರವನ್ನು ಪಡೆಯುವಿರಿ. ಯಾರ ಸಹವಾಸವೂ ಬೇಡವೆನಿಸಬಹುದು. ಮೋಹದಲ್ಲಿ ನೀವು ಬೀಳುವಿರಿ. ಯಾರನ್ನೂ ನಂಬುವ ಸ್ವಭಾವವು ನಿಮ್ಮದಲ್ಲ. ಖರ್ಚಿನಿಂದ ನೀವು ಆತಂಕಗೊಳ್ಳುವಿರಿ. ನಿಮ್ಮ ಸಮಯವನ್ನು ಸಹೋದ್ಯೋಗಿಗಳು ಹಾಳು ಮಾಡುವರು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ. ಒಂದನ್ನೇ ಸಾಧಿಸುವ ಗುಣವನ್ನು ಬಿಟ್ಟುಬಿಡುವುದು ಉತ್ತಮ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ಇನ್ನೊಬ್ಬರ ಯೋಚನೆಯನ್ನು ಕದಿಯಬಹುದು.
ಸಿಂಹ ರಾಶಿ: ನಿಮ್ಮ ವಸ್ತುವೇ ಆದರೂ ಅದನ್ನು ಯೋಗ್ಯ ರೀತಿಯಲ್ಲಿ ಬಳಸಿ. ಮಿತಿ ಮೀರಿದ ಅನಾರೋಗ್ಯದಿಂದ ನಿಮಗೆ ಕಷ್ಟವಾಗಲು ಶುರುವಾದೀತು. ವೈದ್ಯ ವೃತ್ತಿಯಲ್ಲಿ ಒತ್ತಡವು ಅಧಿಕವಾಗಿ ಇರುವುದು. ನಿಮ್ಮನ್ನು ಅನಾದರ ಮಾಡಿದಂತೆ ಅತ್ತ ಕಡೆ ಹೋಗುವುದಿಲ್ಲ. ಸುಮ್ಮನೇ ಮೊಂಡು ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ಹೊಸ ಮನೆಯ ಖರೀದಿಯ ಯೋಚನೆ ಮಾಡುವಿರಿ. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ದಿನದಂತೆ ಇರುವುದಿಲ್ಲ. ನಿಮ್ಮದಾದ ಕಾರ್ಯದಲ್ಲಿ ನೀವು ಮಗ್ನರಾಗುವುದು ಉತ್ತಮ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವುದು ಬೇಡ. ವಿವಾಹ ಜೀವನಕ್ಕೆ ಒಗ್ಗಿಕೊಳ್ಳುವಿರಿ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು. ನಿಮಗೆ ಹೂಡಿಕೆಯ ಬಗ್ಗೆ ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು.
ಕನ್ಯಾ ರಾಶಿ: ಆಸಕ್ತಿಯಿಂದ ಮಾಡುತ್ತಿರುವ ಕೆಲಸಕ್ಕೆ ಮಧ್ಯದಲ್ಲಿ ವಿಘ್ನವು ಬರುವುದು. ಸರಳತೆಯನ್ನು ನೀವು ರೂಢಿಸಿಕೊಳ್ಳುವುದು ಉತ್ತಮ. ವಿವಾಹದ ವಿಚಾರಕ್ಕೆ ಮನೆಯಲ್ಲಿ ಶಾಂತಿಯು ಹಾಳಾಗಲಿದೆ. ಎಲ್ಲ ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ಕಪಟಿಯ ಪಟ್ಟವೂ ನಿಮಗೆ ಸಿಗಬಹುದು. ನಿಮ್ಮ ಆದಾಯವನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಸರ್ಕಾರಿ ಕಾರ್ಯವು ವಿಳಂಬವಾಗಬಹುದು. ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು. ತಾಯಿಯ ಪ್ರೀತಿಯು ನಿಮಗೆ ಉತ್ಸಾಹವನ್ನು ಕೊಡುವುದು.
ತುಲಾ ರಾಶಿ: ಆಗಬೇಕಾದ ಕಾರ್ಯಕ್ಕೆ ಜನರ ವಿಶ್ವಾಸವನ್ನು ಪಡೆಯುವಿರಿ. ನಿಮ್ಮ ಮಾತು ವಿಶ್ವಾಸಕ್ಕೆ ಯೋಗ್ಯವಾದಂತೆ ಕಾಣಿಸುವುದು. ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸ್ನೇಹಿತರು ನಿಮ್ಮ ಪ್ರೇಮಪ್ರಾರ್ಥನೆಯನ್ನು ಸ್ವೀಕರಿಸುವರು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ವೃತ್ತಿಯಲ್ಲಿ ಇಂದು ಆಡಿದ ಮಾತು ನಿಮ್ಮನ್ನು ವಿಚಲಿತಗೊಳಿಸಬಹುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ. ಪ್ರಭಾವೀ ವ್ಯಕ್ತಿಗಳ ಸಹಕಾರದಿಂದ ನಿಮಗೆ ಜೀವನದ ಉತ್ತಮ ಮಾರ್ಗವು ಕಾಣಿಸುವುದು. ಇಂದು ಯಾರನ್ನೂ ನೋಯಿಸಲು ಮನಸ್ಸಾಗದು. ಅಭದ್ರತೆಯು ಕಾಣಿಸಿಕೊಳ್ಳಬಹುದು.
ವೃಶ್ಚಿಕ ರಾಶಿ: ಕೋಪವನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಕಷ್ಟವಾದೀತು. ವಿವಾಹದ ದೋಷಗಳನ್ನು ದೈವಜ್ಞರಿಂದ ಪರಿಹರಿಸಿಕೊಳ್ಳಿ. ಉದ್ಯಮದಲ್ಲಿ ನೀವು ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಇಂದು ವಿವಾಹದ ಮಾತುಕತೆಯನ್ನು ಮನೆಯಲ್ಲಿ ಆಡುವಿರಿ. ನಿಮ್ಮ ಪ್ರೇಮದ ವಿಚಾರವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ನಿಮಗೆ ಇಂದು ಸಮಯವು ವ್ಯರ್ಥವಾದಂತೆ ತೋರುವುದು. ಧನದ ಹರಿವಿನಿಂದ ಅಹಂಕಾರವೂ ಬಂದೀತು. ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕಾಗಬಹುದು. ಫಲಾಪೇಕ್ಷೆ ಇಲ್ಲದೇ ಕಾರ್ಯದಲ್ಲಿ ತೊಡಗುವಿರಿ. ಹಿಂದೆ ಮುಂದೆ ಆಲೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ. ನಿಮ್ಮದಲ್ಲದ ವಿಷಯವೂ ನಿಮ್ಮನ್ನು ಕಾಡಬಹುದು. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಸಂಗಾತಿಯು ದೂರ ಪ್ರಯಾಣ ಹೋಗಲು ಆಹ್ವಾನಿಸಬಹುದು.
ಧನು ರಾಶಿ: ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ವ್ಯವಹಾರವನ್ನು ಕೆಡಿಸಿಕೊಳ್ಳುವಿರಿ. ಭೋಗ ವಸ್ತುಗಳನ್ನು ಅಧಿಕವಾಗಿ ಖರೀದಿಸುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಸಾಲವನ್ನು ಮಾಡಬೇಕಾಗುವುದು. ಕಾರಣಾಂತರದಿಂದ ನಿಮ್ಮ ಪ್ರಯಾಣವು ಸ್ಥಗಿತವಾಗಬಹುದು. ಇಂದು ನಿಮಗೆ ಪೂರಕವಾದ ಅಂಶಗಳೇ ಹೆಚ್ಚು ಇರುವುವು. ಮಕ್ಕಳನ್ನು ಖುಷಿಯಿಂದ ಇಡಲು ಹೊಸ ಪ್ರಯತ್ನವನ್ನು ಮಾಡುವಿರಿ. ಹಿರಿಯರ ಮಾತನ್ನು ಪಾಲಿಸುವಿರಿ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯ ಸಿಗುವುದು. ಪೂರ್ವಜನ್ಮದ ಪುಣ್ಯವು ರಕ್ಷಿಸುವುದು. ಅತಿಯಾದ ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವಾದೀತು. ಸ್ವಂತ ಉದ್ಯೋಗದಿಂದ ಒತ್ತಡವು ಅಧಿಕವಾಗಿ ಬರಬಹುದು. ಮನೆಯ ಕೆಲಸವನ್ನು ಮಾಡಿಕೊಳ್ಳಲು ನಿಮಗೆ ಸಮಯ ಸಾಕಾಗದು. ನಿಮ್ಮ ಮಾತುಗಳಿಂದ ಅನರ್ಥವಾಗಬಹುದು.
ಮಕರ ರಾಶಿ: ಮಹಿಳೆಯರು ಹಣದಿಂದ ವಂಚಿತರಾಗಬಹುದು. ಉನ್ನತ ಸ್ಥಾನದತ್ತ ನಿಮ್ಮ ಕಣ್ಣು ಇರುವುದು. ವಿವಿಧ ಕಡೆಗಳಿಂದ ಧನಾಗಮನವಾಗಬಹುದು. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ನೂತನ ವಾಹನವನ್ನು ಖರೀದಿ ಮಾಡುವಿರಿ. ದೈಹಿಕ ಶ್ರಮದಿಂದ ನಿಮಗೆ ಆಯಾಸವಾಗುವುದು. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುವಿರಿ. ನಿಮ್ಮ ಮನಸ್ಸನ್ನು ಬಹಳ ವಿಚಲಿತವಾಗಿದ್ದು ಸ್ಥಿರತ್ವವನ್ನು ತಂದುಕೊಳ್ಳುವುದು ಕಷ್ಟವಾದೀತು. ನಿಮ್ಮಅಲ್ಪ ಜ್ಞಾನವನ್ನು ಎಲ್ಲರೆದುರು ತೋರಿಸುವುದು ಬೇಡ. ಮಾಡುವ ಕೆಲಸವನ್ನೇ ಹೊಸರೀತಿಯಲ್ಲಿ ಮಾಡುವಿರಿ. ನಿಮ್ಮ ಆಸ್ತಿಯನ್ನು ಇನ್ನೊಬ್ಬರು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ. ಸಹೋದರನ ಬೆಂಬಲವಿದ್ದರೂ ನಿಮಗೆ ಸ್ವಾಭಿಮಾನದಿಂದ ಹೊರಬರಲು ಆಗದು.
ಕುಂಭ ರಾಶಿ: ಸಂತೋಷದಲ್ಲಿ ಇಂದಿನ ಕಾರ್ಯಯೋಜನೆಯನ್ನು ಮರೆತುಬಿಡುವಿರಿ. ದೈವಾನುಗ್ರಹವನ್ನು ಪ್ರಾರ್ಥಿಸಿ ಕಾರ್ಯಾರಂಭವನ್ನು ಮಾಡಿ. ಜೂಜು ಮೊದಲಾದ ಲೇವಾದೇವಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ದೇವಾಲಯವು ನಿಮಗೆ ಇಂದು ನೆಮ್ಮದಿಯ ಸ್ಥಾನವಾಗುವುದು. ಆರೋಗ್ಯದಲ್ಲಿ ಅಸಮಾಧಾನವು ಇರಲಿದೆ. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ನಿಮ್ಮ ರಹಸ್ಯವನ್ನು ಯಾರಾದರೂ ತಿಳಿದುಕೊಳ್ಳಲು ಬಯಸುವರು. ಹೊಗಳಿಕೆಯ ಮಾತಿಗೆ ಮರುಳಾಗುವಿರಿ. ಅವರಸದಲ್ಲಿ ಏನನ್ನೂ ಖರೀದಿ ಮಾಡುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸದೇ ಇರಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ. ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಕಾಡಡಬಹುದು. ಸೌಂದರ್ಯದ ಬಗ್ಗೆ ಅತಿಯಾದ ಕಳಜಿ ಕಾಣಿಸುವುದು.
ಮೀನ ರಾಶಿ: ಇಂದು ನೀವು ಬಹಳ ಗಡಿಬಿಡಿಯಲ್ಲಿ ಇರುವಂತೆ ತೋರುತ್ತದೆ. ವಿದ್ಯಾರ್ಥಿಗಳು ಬಂದಷ್ಟೇ ಅಂಕಗಳಿಗೆ ತೃಪ್ತಿಪಡಬೇಕಾಗುತ್ತದೆ. ಮನಸ್ಸಿನ ಅಸ್ಥಿರತೆಯಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳುವಿರಿ. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಮಾತಿನ ಬಿರುಸು ಅಧಿಕವಾಗಿ ಇರುವುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನವಾಗಲಿದೆ. ಯಂತ್ರೋಪಕರಣಗಳ ಮಾರಾಟದಿಂದ ತೃಪ್ತಿ ಇರವುದು. ನೌಕರರ ವರ್ತನೆಯ ಮೇಲೆ ನಿಮ್ಮ ಕಣ್ಣಿಡಿ. ಬಂಧುಗಳ ಜೊತೆ ಕಲಹವಾಗುವುದು. ಸಂಗಾತಿಯ ನೆರವನ್ನು ನೀವು ನಿರೀಕ್ಷಿಸುವಿರಿ. ಆದ್ಯತೆಯ ಮೇಲೆ ನಿಮ್ಮ ಕಾರ್ಯಗಳು ಇರಬಹುದು. ವಿಳಂಬವು ನಿಮಗೆ ಇಷ್ಟವಾಗದು. ಅಧಿಕಾರಿಗಳ ಮನವನ್ನು ಒಲಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಕ್ಕಳಿಂದ ಶುಭ ಸಮಾಚಾರವು ನಿಮಗೆ ಬರಲಿದೆ.
ಲೋಹಿತಶರ್ಮಾ – 8762924271 (what’s app only)