Horoscope: ರಾಶಿಭವಿಷ್ಯ, ಸ್ವತಃ ಉದ್ಯೋಗ ಮಾಡುವ ಆಲೋಚನೆ ಬರುವುದು
2023 ಡಿಸೆಂಬರ್ 04ರ ರಾಶಿ ಭವಿಷ್ಯ ಹೇಗಿದೆ? ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಡಿಸೆಂಬರ್ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಇಂದಿನ (2023 ಡಿಸೆಂಬರ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ ಎಂಬ ಮಾಹಿತಿ ಇಲ್ಲಿದೆ. ಅದೇ ರೀತಿಯಾಗಿ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ ಎಂದು ತಿಳಿಯಲು ಮುಂದೆ ಓದಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮಘಾ, ಯೋಗ: ವೈಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆಗೆ, ರಾಹು ಕಾಲ ಬೆಳಗ್ಗೆ 08:09 ರಿಂದ 09:34 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:23ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:47 ರಿಂದ 03:12ರ ವರೆಗೆ.
ಮೇಷ ರಾಶಿ: ವಿದೇಶದಲ್ಲಿ ಇರುವವರಿಗೆ ಅನಾಥ ಪ್ರಜ್ಞೆಯು ಕಾಡಬಹುದು. ಮನೆಯ ಬಗ್ಗೆ ಹೆಚ್ಚು ಆಲೋಚನೆ ಮಾಡುವಿರಿ. ಸ್ನೇಹವು ಕಡಿಮೆಯಾಗಬಹುದು. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡದಿಂದ ಅದು ಸಾಧ್ಯವಾಗದು. ವೃತ್ತಿಯ ಸ್ಥಳದಲ್ಲಿ ನಿಮ್ಮದಲ್ಲದ ಕೆಲಸವನ್ನು ಮಾಡಬೇಕಾಗುವುದು. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು.
ವೃಷಭ ರಾಶಿ: ನಿವೃತ್ತಿಯನ್ನು ಪಡೆದ ಕಾರಣ ಮನಸ್ಸಿನಲ್ಲಿ ನಾನಾ ಪ್ರಕಾರದ ಆಲೋಚನೆಗಳು ಬರುವುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಸ್ವತಃ ಉದ್ಯೋಗವನ್ನು ಮಾಡುವ ಆಲೋಚನೆಯು ಬರಬಹುದು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಸಾಲದು. ಇಂದು ಕಛೇರಿಯಲ್ಲಿ ಆದ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗುವುದು. ತಮಾಷೆಯ ಮಾತುಗಳು ಗಂಭೀರ ರೂಪವನ್ನು ಪಡೆಯಬಹುದು.
ಮಿಥುನ ರಾಶಿ: ಪ್ರೇಮ ವಿವಾಹಕ್ಕೆ ಮನೆಯಲ್ಲಿ ವಿರೋಧ ಬರಬಹುದು. ನಿಮ್ಮ ಹಣವು ಮನೆಯ ಕಾರ್ಯಗಳಿಗೆ ಉಪಯೋಗಕ್ಕೆ ಬರಲಿದೆ. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಸಜ್ಜನರ ಸಹವಾಸವು ಅನಿರೀಕ್ಷಿತವಾಗಿ ಸಿಗುವುದು. ಮನಸ್ಸಿನಲ್ಲಿ ಯಾವುದಾದರೂ ಭೀತಿಯು ಕಾಡಬಹುದು. ಅತಿಯಾಯದೆ ಆಸೆಯಿಂದ ನಿಮಗೆ ದುಃಖವಿದೆ. ಕಾರ್ಯದಲ್ಲಿ ಗೊಂದಲವಿದ್ದರೆ ಅದನ್ನು ಮಾಡುವುದು ಬೇಡ.
ಕರ್ಕ ರಾಶಿ: ಸಮಸ್ಯೆಯ ಜೊತೆ ಜೀವಿಸಬೇಕಾಗುವುದು. ಕೆಲವೊಮ್ಮೆ ನಿಮ್ಮ ವರ್ತನೆಯೇ ನಿಮಗೆ ಮುಳುವಾಗುವುದು. ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಹಿರಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ಇಂದಿನ ಕಾರ್ಯವನ್ನು ಸರಿಯಾಗಿ ಯೋಜಿಸಿಕೊಂಡು. ಇಲ್ಲವಾದರೆ ತಿರುಗಾಟವಾದೀತು. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಕಡಿಮೆ ಆದೀತು. ಅಸಭ್ಯ ಮಾತುಗಳಿಂದ ನಿಮ್ಮ ನಡವಳಿಕೆಯು ಗೊತ್ತಾಗುವುದು.