Horoscope 14 April: ರಾಶಿ ಭವಿಷ್ಯ; ಇತರರನ್ನು ದ್ವೇಷಿಸುವ ಸ್ವಭಾವವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ

Rashi Bhavishya: 2024 ಏಪ್ರಿಲ್​​ 14 ಭಾನುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 14 April: ರಾಶಿ ಭವಿಷ್ಯ; ಇತರರನ್ನು ದ್ವೇಷಿಸುವ ಸ್ವಭಾವವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 14, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:12 ರಿಂದ 06:45ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:33 ರಿಂದ 02:06 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ.

ಮೇಷ ರಾಶಿ: ಸಮಾಜ ಗುರುತಿಸುತ್ತಿಲ್ಲ‌ ಎಂಬ ಕೊರಗು ಇಂದು ಅತಿಯಾಗಿ ಕಾಡಬಹುದು. ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ಇರಲಿದೆ. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಇಂದು ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಉದ್ಯಮವನ್ನು ಮಿತಿಮೀರಿದ ನಿರೀಕ್ಷೆಯಲ್ಲಿ ಮುಂದುವರಿಯುವುದು ಬೇಡ. ಅನಂತರ ಕಷ್ಟವಾದೀತು. ಸಂಕೀರ್ಣ ಸ್ಥಿತಿಯನ್ನು ನೀವು ತಿಳಿಯಾಗಿಸುವಿರಿ. ವಿಶ್ವಾಸದಲ್ಲಿ‌ ಕೊರತೆ ಇರದು. ವ್ಯಾಪಾರದ ಕೆಲವು ನಿರ್ಧಾರಗಳಿಗೆ ಅಪರಿಚಿತರಿಂದ ಸಲಹೆಯು ಸಿಗುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲವನ್ನು ನೀವು ಮನಃಪೂರ್ವಕವಾಗಿಯೇ ಕಡೆಗಣಿಸುವಿರಿ.

ವೃಷಭ ರಾಶಿ: ಸಮಸ್ಯೆಗೆ ಪರಿಹಾರವೆಂದು ಇನ್ನಷ್ಟು ಸಮಸ್ಯೆಯನ್ನು ಮಾಡಬಹುದು. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಕಡಿಮೆ ಇರಲಿದೆ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ನೀವು ಯಾರನ್ನಾದರೂ ವೃಥಾ ಸಂಶಯಿಸುವಿರಿ. ವಾದಗಳಲ್ಲಿ ಸಮಯ ಮತ್ತು ಹಣ ಕಳೆದುಹೋಗುತ್ತದೆ. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ. ವಿವಾಹದ ಸಂಬಂಧವನ್ನು ನೀವು ತಳ್ಳಿಹಾಕುವಿರಿ. ಯಾರ ಮಾತುಗಳೂ ನಿಮಗೆ ಪಥ್ಯವಾದೀತು. ದ್ವಂದ್ವ ನಿಲುವನ್ನು ನೀವು ಸರಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು.

ಮಿಥುನ ರಾಶಿ: ಇನ್ನೊಬ್ಬರ ಗೋಜಿಗೆ ಹೋಗದೇ, ನಿಮ್ಮ ಗೋಜಿಗೆ ಬಂದವರನ್ನು ಸುಮ್ಮನೆ‌ ಬಿಡುವ ಛಾತಿ ನಿಮ್ಮದಾಗಿರದು. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ರಮಣೀಯ ಸ್ಥಳಗಳನ್ನು ನೋಡಲು ಬಯಸುವಿರಿ. ಯಾರೆದುರೂ ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ.

ಕರ್ಕ ರಾಶಿ: ಇಂದು ಪ್ರಯಾಣದ ಆಯಾಸವು ಆಲಸ್ಯಕ್ಕೆ ಕಾರಣವಾಗುವುದು. ಮಾತನ್ನು ಆಡುವಾಗ ಎಚ್ಚರವಿರಲಿ. ಬೇರೆಯವರ ನಾಶವನ್ನು ಮಾಡಲು ಹೋಗಿ ನಿಮ್ಮದೇ ಯಶಸ್ಸು ನಾಶವಾಗಬಹುದು. ಮಕ್ಕಳ ಅನಾರೋಗ್ಯದಿಂದ ನಿಮಗೂ ಸಮಾಧಾನವಿರದು. ನಿದ್ರೆಯು ಚೆನ್ನಾಗಿ ಆಗದು. ಸಮಾಧಾನದ ಮನಃಸ್ಥಿತಿಯು ಉಂಟಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ ಮತ್ತು ನೀವು ಜನರಿಂದ ಬೆಂಬಲವನ್ನು ಪಡೆಯುತ್ತೀರಿ. ಬಂಧುಗಳೂ ನಿಮ್ಮನ್ನು ಇಷ್ಟಪಡುವರು. ಕೈಯಲ್ಲಿ ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ. ಕೋಪಗೊಂಡು ಇಡೀ ದಿನವನ್ನು ಹಾಳುಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು.

ಸಿಂಹ ರಾಶಿ: ಇಂದು ನಿಮ್ಮ ಭೂಮಿಯ ವ್ಯವಹಾರದಲ್ಲಿ ಕುದುರಬಹುದು. ಹೊಸ ಉತ್ಸಾಹದ ದಿನವಾಗಿ ಇರಲಿದೆ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ದುಃಖಿಸಬೇಕಾದೀತು. ದಾಂಪತ್ಯ ಸುಖವು ಹೆಚ್ಚಾಗುವುದು. ಸಂಕೀರ್ಣ ಕಾರ್ಯಗಳನ್ನು ಸರಳ ಮಾಡಿಕೊಂಡು ಕಾರ್ಯಗತಗೊಳಿಸಲಾಗುವುದು. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು.

ಕನ್ಯಾ ರಾಶಿ: ಇಂದು ನಿಮ್ಮ ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವು ಎದುರಾಗಲಿದೆ. ಸಂಗಾತಿಯ ಮುನಿಸಿಗೆ ನೀವು ಆಹಾರವಾಗುವಿರಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ಕೆಲವು‌ ನಿಮಿಷಗಳಲ್ಲಿ ಇದು ಸರಿಯಾಗಲಿದೆ. ವಿದ್ಯಾರ್ಥಿಗಳು ಓದಿನಲ್ಲಿ‌ ಮನಸ್ಸನ್ನು ಇಡಬಹುದು. ಪಿರ್ತಾರ್ಜಿತ ಆಸ್ತಿಯನ್ನು ಗೊಂದಲಗಳು ಇರಬಹುದು. ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಇಂದು ಶುಭಕರವಾಗಿದ್ದು ಅಹಿತಕರ ವಾತಾವರಣಕ್ಕೆ ಆಸ್ಪದವನ್ನು ಕೊಡಲಾರಿರಿ. ನಿಮ್ಮ ಮೇಲಿನ ಪ್ರಕರಣಗಳು ಒಂದೊಂದಾಗಿ ಬಗೆಹರಿಯುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು.

ತುಲಾ ರಾಶಿ: ನಿಮ್ಮ ಸೌಂದರ್ಯದ ಬಗ್ಗೆ ಅಧಿಕ ಅಭ್ಯಾಸ ಮಾನವಿರುವುದು. ಯಾರ ಭಾವನೆಗಳನ್ನು ಕ್ಷುಲ್ಲಕವಾಗಿ ಕಾಣುವುದು ಬೇಡ. ಸಂಪಾದನೆಗೆ ಉತ್ತಮಮಾರ್ಗವು ನಿಮಗೆ ಗೊತ್ತಾಗಲಿದೆ. ಮಂದಿರಗಳಿಗೆ ಭೇಟಿ ನೀಡಿ ಸ್ವಲ್ಪ ಸಮಯವನ್ನು ಅಲ್ಲಿ ಕಳೆದು ಬರುವುದು ಒಳಿತು. ಅಲ್ಲಿನ ಸಕಾರಾತ್ಮಕ ವಾತಾವರಣವು ನಿಮ್ಮ ಮನೋಬಲವನ್ನು ಹೆಚ್ಚಿಸುವುದು. ಇಂದು ಶುಭವನ್ನು ನೀವು ನಿರೀಕ್ಷಿಸಿದರೂ ನಿಮಗೆ ಹತಾಶೆಯು ಬರಬಹುದು. ಇಂದು ನೀವು ನಿಮ್ಮ ಕುಟುಂಬದ ಜೊತೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಿರಿ. ಅನಪೇಕ್ಷಿತ ಚರ್ಚೆಯು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ: ಇಂದು ಯಾವುದಾದರೂ ಹೊಸ ವಿಚಾರಗಳು ನಿಮ್ಮ ಗಮನ ಸೆಳೆಯಬಹುದು. ಆನಾರೋಗ್ಯದಿಂದ ವ್ಯತ್ಯಾಸವಾದ ನಿಮ್ಮ ದೇಹ, ಮನಸ್ಸುಗಳು ಸ್ವಸ್ಥವಾಗುವ ಕಡೆಗೆ ಹೋಗುತ್ತಿವೆ. ಅಪ್ರಿಯಾವಾದ ಆಪಾದನೆಗಳು ಬರಬಹುದು. ಹಠದ ಸ್ವಭಾವವು ನಿಮ್ಮನ್ನು ಒಂಟಿಗನನ್ನಾಗಿ ಮಾಡುತ್ತದೆ‌. ಸರ್ಕಾರಿ ಉದ್ಯೋಗಿಗಳಿಗೆ ಉನ್ನತ ಪದವಿಗೆ ಆಹ್ವಾನ ಬರಬಹುದು. ಸಜ್ಜನರ ಸಂಯೋಗದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅನುಭವಗಳನ್ನು ನೀವು ಪಡೆಯುತ್ತೀರಿ. ಪ್ರತಿಭೆಯ ಖ್ಯಾತಿಯನ್ನು ನೀವು ಪಡೆಯಬಹುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ.

ಧನು ರಾಶಿ: ಆಗದವರನ್ನು ದ್ವೇಷಿಸುವ ಸ್ವಭಾವವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಗೊತ್ತಿಲ್ಲದೇ ನಿಮ್ಮ ಸಮಯವು ವ್ಯರ್ಥವಾಗಬಹುದು. ಸಂಗಾತಿಯ ಜೊತೆಗೆ ಸಣ್ಣ ಕಲಹವು ಆಗಬಹುದು. ಹಣವನ್ನು ಮಿತವಾಗಿ ವ್ಯಯ ಮಾಡಿ. ನೀವು ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ಕೆಲವು ಅಹಿತಕರ ಘಟನೆಯಿಂದ ಮನಸ್ಸು ಅತೃಪ್ತವಾಗಿರುತ್ತದೆ. ಸುಖ-ದುಃಖಗಳನ್ನು ಸಮಾನವಾಗಿ ಪರಿಗಣಿಸಿ, ಎಲ್ಲವನ್ನೂ ವಿಧಿಗೆ ಬಿಟ್ಟುಬಿಡಿ. ನಿಮ್ಮ ಪಾಲಿನ ಕರ್ತವ್ಯಗಳನ್ನು ಮುಂದುವರಿಸಿ. ನಿಮ್ಮ ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು.

ಮಕರ ರಾಶಿ: ಇಂದು ನಿಮಗೆ ನೀವು ದುರ್ಬಲರಂತೆ ಕಾಣಿಸಬಹುದು. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ಅದಕ್ಕೆ ಇಲ್ಲವೆನ್ನಬೇಡಿ. ನಿಮಗೆ ಇಂದು ಗೌರವವನ್ನು ಪಡೆಯುವ ದಿನವಾಗಿರುತ್ತದೆ. ಎಲ್ಲವೂ ನಿಮಗೆ ಅನಿರೀಕ್ಷಿತವಾಗಿ ಘಟಿಸುವುದು. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ನಿರ್ಧಾರ ತೆಗೆದುಕೊಂಡು ಕಷ್ಟಪಡುವಿರಿ. ಸಾಲ ಮಾಡುವ ವಿಚಾರವು ನಿಮಗೆ ಕಹಿಯಾಗಬಹುದು. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು.

ಕುಂಭ ರಾಶಿ: ಇಂದು ಕೆಲವು ವಿಚಾರಗಳು ಶತ್ರುಗಳು ರಾಜಿಯಾಗಲು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯವು ಮುನ್ನಡೆದರೆ ಸೊಗಸು. ನ್ಯಾಯಾಲಯದಲ್ಲಿ ವಾದ-ವಿವಾದಗಳನ್ನು ಮಾಡಲಿದ್ದೀರಿ. ದೂರಪ್ರಯಾಣವನ್ನು ಮಾಡಿ ಆಯಾಸಗೊಳ್ಳಬೇಡಿ. ಭೂಮಿ, ವಾಹನ‌ ಖರೀದಿಯ ಪ್ರಸ್ತಾಪವು ಆಗಬಹುದು. ಎಲ್ಲರೂ ನಿಮ್ಮ ನಗುಮೊಗವನ್ನು ಕಂಡು ಖುಷಿಪಡಲಿದ್ದಾರೆ. ಇಂದಿನ‌ ನಿಮ್ಮ ಅತಿಯಾದ ಉತ್ಸಾಹ ಮತ್ತು ಆತುರವು ಕೆಲಸವನ್ನು ಹಾಳುಮಾಡಬಹುದು. ಅನಗತ್ಯ ಅನುಮಾನಗಳನ್ನು ತಪ್ಪಿಸಿ. ತಪ್ಪು ಮಾರ್ಗಗಳಿಂದ ಹಣ ಸಂಪಾದನೆಯು ಬೇಡ. ಸಂತೃಪ್ತಿಯಿಂದ ನೀವು ನಿಮ್ಮ ಹಳೆಯ ಎಲ್ಲವನ್ನೂ ಮರೆಯುವಿರಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಕೃಷಿಯಲ್ಲಿ ನೆಮ್ಮದಿಯನ್ನು ಕಾಣುವಿರಿ.

ಮೀನ ರಾಶಿ: ಇಂದು ದಿನದ ಆರಂಭದಿಂದ ಅಂತ್ಯದವರೆಗೂ ಉತ್ಸಾಹದಿಂದಲೇ ಇರುವಿರಿ. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳುವಿರಿ. ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ಶ್ರಮದ ಫಲವನ್ನು ಉಣ್ಣುವ ಕಾಲ ಬಂದಿರುತ್ತದೆ. ಇಂದು ನೀವು ಅಪರಿಚಿತರಿಂದ ಬೆಂಬಲ ಪಡೆಯಬಹುದು. ಲಾಭದ ಹಾದಿಯು ಅಡ್ಡಿಯಿಂದ ಚಿಂತೆ ಕಾಡಬಹುದು. ಕಠಿಣ ಪರಿಶ್ರಮ ಅಗತ್ಯವಾಗಿ ಬೇಕಾಗುವುದು. ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ.

ಲೋಹಿತ ಹೆಬ್ಬಾರ್ – 8762924271 (what’s app only)

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ