ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2023 ಡಿಸೆಂಬರ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶಿವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:43 ರಿಂದ 11:07 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:20ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:55 ರಿಂದ 08:19ರ ವರೆಗೆ.
ಮೇಷ ರಾಶಿ: ಇಂದು ನೀವು ಭಾವನಾತ್ಮಕ ವಿಚಾರಗಳಿಂದ ಕುಗ್ಗುವಿರಿ. ಅತಿಯಾದ ಜಾಣ್ಮೆಯಿಂದ ನಿಮಗೇ ತೊಂದರೆಯಾಗಬಹುದು. ತಂದೆಯು ನಿಮ್ಮ ಪ್ರಗತಿಯನ್ನು ನಿರೀಕ್ಷಿಸುವರು. ಯೋಜನೆಯು ಮಸುಕಾಗಿದ್ದು ಮುಂದಿನ ದಾರಿ ಸರಿಯಾಗಿ ಗೊತ್ತಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಸಣ್ಣ ಕಾರಣಕ್ಕೆ ನೆರೆಯವರ ಜೊತೆ ಕಲಹವಾಗಬಹುದು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಇಂದು ಮಾತುಗಳನ್ನು ಕಡಿಮೆ ಆಡುವಿರಿ. ಸಂಪತ್ತಿನ ನಿರ್ವಹಣೆಯಲ್ಲಿ ಸೋಲಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾಗಬಹುಸು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ.
ವೃಷಭ ರಾಶಿ: ನೂತನ ಉದ್ಯೋಗದ ಅನ್ವೇಷಣೆಯನ್ನು ನೀವು ಮಾಡಬೇಕಾಗುವುದು. ಸಾಲವನ್ನು ದಿನದ ಮೊದಲೇ ತೀರಿಸಿ ಪ್ರಶಂಸೆ ಗಳಿಸುವಿರಿ. ಎರಡೆರಡು ಕಾರ್ಯವನ್ನು ಮಾಡುವ ಸಂದರ್ಭವು ಬರಬಹುದು. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಮನಸ್ಸಿನಲ್ಲಿ ಯಾವುದೋ ಆತಂಕವು ಇರಲಿದ್ದು ಹೊರಹಾಕಲು ಪ್ರಯತ್ನಿಸುವಿರಿ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಬಂಗಾರದ ಖರೀದಿಗೆ ಉತ್ಸಾಹವನ್ನು ತೋರುವಿರಿ. ಸದಾ ಉತ್ಸಾಹದಿಂದ ಇರಲು ನೀವು ನಿಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುವುದು ಉತ್ತಮ. ಕುಟುಂಬದ ಪ್ರೀತಿಯು ಸಿಗಲಿದೆ. ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಆಸೆ ಪಡುವುದು ಬೇಡ.
ಮಿಥುನ ರಾಶಿ: ನಿಮ್ಮ ಸಂಗಾತಿಯ ಜೊತೆ ಉತ್ತಮ ಬಾಂಧವ್ಯವು ಇರಲಿದ್ದು ಎಲ್ಲ ರೀತಿಯ ಸಹಕಾರವೂ ಇದರಿಂದ ಸಿಗಲ್ಲಿದೆ. ನಿಮ್ಮ ಮಾತು ಹಲವರ ಬಾಯಿಗೆ ಆಹಾರವಾದೀತು. ಹಣದ ವಿಚಾರದಲ್ಲಿ ಅತಿಯಾದ ಮುಂದಾಲೋಚನೆಯನ್ನು ಮಾಡುವಿರಿ. ಹೊಸ ಕಲಿಕೆಯ ಬಗ್ಗೆ ಆಸಕ್ತಿ ಉಂಟಾಗಬಹುದು. ಒಂದೇ ರೀತಿಯ ಕೆಲಸವನ್ನು ಮಾಡಿ ಬೇಸರವಾದೀತು. ಹೊಸ ವಸ್ತುಗಳನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ವಾಹನವನ್ನು ಚಲಾಯಿಸುವ ಬೇರೆಯ ಯಾವ ಚಟುವಟಿಕೆಗಳನ್ನು ಮಾಡುವುದು ಬೇಡ. ಆಹಾರದಿಂದ ಆರೋಗ್ಯವು ಕೆಡಲಿದೆ. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ಕಾರ್ಯ ಮಾಡುವ ಸುಲಭದ ಉಪಾಯಗಳು ನಿಮ್ಮ ಬುದ್ಧಿಗೆ ತೋಚದೇ ಹೋಗಬಹುದು.
ಕರ್ಕ ರಾಶಿ: ನೀವು ನಿಮ್ಮವರನ್ನು ಗ್ರಹಿಸುತ್ತ ಇರುವಿರಿ. ನಿಮಗೆ ಯಾರಿಂದಲಾದರೂ ಪ್ರಶಂಸೆಯನ್ನು ಪಡೆಯಬೇಕೆನ್ನಿಸಬಹುದು. ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ನಿಮ್ಮ ಅದೃಷ್ಟದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಇಕ್ಕಟ್ಟಿನಿಂದ ಹೊರಬರಲು ಮನಸ್ಸು ಮಾಡುವಿರಿ. ಆದರೂ ಕಷ್ಟವಾದೀತು. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆಪ್ತರ ಒಡನಾಟವು ಖುಷಿಯನ್ನು ಕೊಡಬಹುದು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿತಶತ್ರುಗಳನ್ನು ಅವರಿಗೆ ಗೊತ್ತಾಗದಂತೆ ದೂರವಿಡಿ. ಸಿಟ್ಟಿನಿಂದ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಬೇಡ.
ಸಿಂಹ ರಾಶಿ: ಕೆಲವರು ನಿಮ್ಮ ಪ್ರಮುಖ ಕೆಲಸದ ಮೇಲೆ ಅಡ್ಡಿಪಡಿಸಲು ಪ್ರಯತ್ನಿಸಬಹುದು. ನೀವು ವಿಚಲಿತರಾಗದೇ ಮುಂದುವರಿಯುವುದು ಉತ್ತಮ. ನಿಮ್ಮದಲ್ಲದ ವಸ್ತುವೊಂದು ನಿಮ್ಮನ್ನು ಬಂದು ಸೇರಬಹುದು. ಮಲಿನ ವಸ್ತ್ರವನ್ನು ಅಜ್ಞಾನದಿಂದ ಧರಿಸಿದರೂ ಎಲ್ಲರೂ ಅಪಹಾಸ್ಯ ಮಾಡಬಹುದು. ನಿಮ್ಮ ಕೆಲಸಗಳಿಗೆ ಯಾರ ಸಹಕಾರವೂ ಇಲ್ಲ ಎಂದು ಬೇಸರ ಮಾಡಿಕೊಳ್ಳುವುದು ಬೇಡ. ಸಹೋದರನ ಕುಟುಂಬದಲ್ಲಿ ನಿಮ್ಮ ಮಧ್ಯಪ್ರವೇಶವು ಆಗಬೇಕಾಗಬಹುದು. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ತೊಡಗುವಿಕೆ ಹೆಚ್ಚಿರುವುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಧಾರ್ಮಿಕ ಮುಖಂಡರಿಗೆ ಅಪವಾದ ಬರುವ ಸಾಧ್ಯತೆ ಇದೆ. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸಾಲದ ಕಾರಣಕ್ಕೆ ತಲೆ ಮರೆಸಿಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರಲಿದ್ದು ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾದೀತು. ವೃತ್ತಿಯ ಸ್ಥಳದಲ್ಲಿ ರೋಚಕ ಅನುಭವವು ಇರಲಿದೆ. ಅನ್ನಿಸಿದ್ದನ್ನು ಹೇಳಲು ನಿಮಗೆ ಅವಕಾಶವು ಸಿಗದೇ ಹೋಗಬಹುದು.
ಕನ್ಯಾ ರಾಶಿ: ಕಠಿಣ ಪರಿಶ್ರಮದ ಕಡೆ ನಿಮ್ಮ ಮನಸ್ಸು ತೆರೆದುಕೊಳ್ಳುವುದು. ಸ್ನೇಹಿತರ ಜೊತೆ ಮನೋರಂಜನೆಯಿಂದ ದಿನವನ್ನು ಕಳೆಯುವಿರಿ. ನಿಮ್ಮ ಕೃಷಿಗೆ ಉತ್ಪನ್ನಗಳಿಗೆ ಉತ್ತಮ ಲಾಭವು ಸಿಗುವುದು. ಮನೆಯ ಖರ್ಚನ್ನು ಕಡಿಮೆ ಮಾಡುವ ಚಿಂತನೆಯಲ್ಲಿ ಇರುವಿರಿ. ದೇವರ ಕೃಪೆಯನ್ನು ಬೇಡಿ ಇಂದು ನೀವು ಮಾಡುವ ಕೆಲಸಕ್ಕೆ ಕೇಳಿಕೊಳ್ಳಿ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ವಕೀಲವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿತಿರುವಿರಿ. ಮನಸ್ಸಿನಲ್ಲಿ ಹತಾಶೆಯ ಭಾವವು ಪುನಃ ಪುನಃ ಬರಲಿದೆ. ಗೊಂದಲಗಳಿಂದ ಏನನ್ನೂ ಮಾಡಲಾಗದ ಸ್ಥಿತಿಯು ಬರಲಿದೆ. ಹೊಸ ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರ ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇರದು. ಎಲ್ಲರ ಮಾತಿಗೂ ನಿಮ್ಮ ಕೋಪ ಮಾಡಿಕೊಳ್ಳುವಿರಿ. ನಿಮ್ಮ ಎಲ್ಲ ನಿರ್ಧಾರಗಳೂ ನಿಮಗೇ ನಕಾರಾತ್ಮಕವಾಗಿ ಇರುವಂತೆ ತೋರುವುದು.
ತುಲಾ ರಾಶಿ: ನಿಮ್ಮ ಜ್ಞಾನಕ್ಕಿಂತ ಅಹಂಕಾರವೇ ಹೆಚ್ಚು ಕಾಣಿಸುವುದು. ಹಾಗಾಗಿ ನಿಮ್ಮನ್ನು ಕಡೆಗಾಣಿಸಬಹುದು. ಹಣದ ಉಳಿತಾಯವು ಸಾಕೆಂದು ಅನ್ನಿಸದು. ನೀವು ಮಾಡುವ ಕೆಲಸದಲ್ಲಿ ಜಾಣ್ಮೆಯು ಅವಶ್ಯಕವಾಗಿರುವುದು. ಹಿತಮಿತವಾದ ಮಾತುಗಾರಿಕೆಯಿಂದ ಎಲ್ಲರಿಗೂ ಹಿತವಾಗುವುದು. ಯಾರ ಜೊತೆಗೂ ಹುಡುಗಾಟವನ್ನು ಮಾಡುವುದು ಬೇಡ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು. ಸಂಗಾತಿಗೆ ನೀವು ಉತ್ತಮ ಕೆಲಸವು ಕೊಡಿಸುವಿರಿ. ಸರಳತೆಯೇ ನಿಮ್ಮ ಪ್ರಶಂಸೆಗೆ ಕಾರಣವಾಗುವುದು. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ತಿಳಿಯಿರಿ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ಒತ್ತಾಯ ಮಾಡಬಹುದು.
ವೃಶ್ಚಿಕ ರಾಶಿ: ಹಣಕ್ಕೆ ಸಂಬಂಧಿಸಿದ ಆತಂಕವು ಇರಲಿದ್ದು, ಯಾರ ಬಳಿಯೂ ಹೇಳಿಕೊಳ್ಳಲಾರಿರಿ. ಇಂದಿನ ಕಾರ್ಯವನ್ನು ಮಾಡಲು ಹಣವು ಬೇಕಾದೀತು. ಕೂಡು ಕುಟುಂಬದಲ್ಲಿ ಅಸಮಾಧಾನ ಬರಬಹುದು. ಅನೇಕ ರೀತಿಯ ಫಲಗಳನ್ನು ನೀವು ಪಡೆಯಲಿದ್ದು ಕೋಪ ನಿಯಂತ್ರಿಸಬೇಖಾಗುವುದು. ಪ್ರವಾಸದಲ್ಲಿ ಇರುವವರಿಗೆ ಆಹಾರದ ವ್ಯತ್ಯಾಸದಿಂದ ಕಷ್ಟವಾಗುವುದು. ಸಂಶೋಧನೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯದಲ್ಲಿ ಪ್ರವೃತ್ತರಾಗುವರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಯಶಸ್ಸು ಸಿಗುವುದು. ನಿಮ್ಮನ್ನು ಅನುಕರಣೆ ಮಾಡಬಹುದು. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಮಾತು ನಡೆಯುತ್ತದೆ ಎನ್ನುವ ಕಲ್ಪನೆ ಬೇಡ. ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಸಮಯಪ್ರಜ್ಞೆಯಿಂದ ಆಗುವ ತಪ್ಪನ್ನು ಸರಿ ಮಾಡಿಕೊಳ್ಳುವಿರಿ. ವೃತ್ತಿಯ ಕೆಲಸಗಳ ನಡುವೆ ಮನೆಯ ಕೆಲಸವೂ ನಿಮಗೆ ಕಷ್ಟವಾದೀತು.
ಧನು ರಾಶಿ: ತಂದೆಯ ಜೊತೆ ವೈಮನಸ್ಯವಾಗಿದ್ದು ಇಂದು ಸಂಬಂಧವು ಸುಧಾರಿಸುವುದು. ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗಿರುವುದು. ವ್ಯವಹಾರದಲ್ಲಿ ಅಸಾಧ್ಯವನ್ನು ಸಾಧಿಸುವ ಛಲ ಬೇಡ. ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಯಾರಿಂದಲಾದರೂ ಪಡೆಯುವರು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು. ಭೂಮಿಯ ವ್ಯವಹಾರವು ಪಾಲುದಾರರ ಸಹಕಾರದಿಂದ ಸುಗಮವಾಗಿ ಸಾಗಲಿದೆ. ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಮತ್ತು ದೀರ್ಘ ಕಾಲದಿಂದ ಬಾಕಿ ಉಳಿದಂತಹ ಯೋಜನೆ ಪೂರ್ಣಗೊಳ್ಳುವುವು. ಆರ್ಥಿಕ ಸಮಸ್ಯೆಯನ್ನು ಹೆಚ್ಚಿಸಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವುದು ಕಷ್ಟವಾದೀತು.
ಮಕರ ರಾಶಿ: ಮನೆಯಲ್ಲಿ ಹಿರಿಯರಾದ ನಿಮಗೆ ಗೌರವಗಳು ಅಧಿಕವಾದೀತು. ಇದು ನಿಮಗೆ ಅಚ್ಚರಿಯನ್ನೂ ಕೊಟ್ಟೀತು. ನಿಮ್ಮ ಸಂಗಾತಿಯು ಹೆಚ್ಚಿಸಬಹುದು. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಭದ್ರವಾಗಿರುವುದು. ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ. ಕಚೇರಿಯಲ್ಲಿ ಉತ್ತಮವಾದ ವಾತಾವರಣದ ಉತ್ಸಾಹದಿಂದ ಇರುವಿರಿ. ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು. ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭವಾಗಲಿದೆ. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ನಿರೀಕ್ಷಿತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವು ಸಿಗಬಹುದು.
ಕುಂಭ ರಾಶಿ: ಇಂದಿನ ಕೆಲಸವನ್ನು ಕುಲದೇವರ ಸ್ಮರಣೆಯ ಜೊತೆ ಆರಂಭಿಸಿ. ನೀವು ಮಾಡುವ ಕೆಲಸ ಕೆಲಸದಿಂದ ಲಾಭ ಪಡೆಯುವಿರಿ. ಕುಟುಂಬದಲ್ಲಿ ನಿಮ್ಮ ವಿವಾಹದ ಕುರಿತು ಚರ್ಚೆಯಾಗುವುದು. ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಇಂದು ನಡೆಯುವ ತಪ್ಪಿಗೆ ನೀವೇ ಕಾರಣರಾಗುವಿರಿ. ಸಮಯದ ಹೊಂದಾಣಿಕೆಯಿಂದ ಕಾರ್ಯವನ್ನು ಸಾಧಿಸಬಹುದು. ಹೂಡಿಕೆಯನ್ನು ಅನೇಕ ಜನರು ಸೇರಿ ಮಾಡುವವರಿದ್ದೀರಿ. ನಿಮ್ಮ ಒರಟಾದ ಮಾತು ಇನ್ನೊಬ್ಬರಿಗೆ ಬೇಸರವನ್ನು ಕೊಡುವುದು. ವಸ್ತುಗಳ ಖರೀದಿಗೆ ಹಣವನ್ನು ಖರ್ಚು ಮಾಡಬಹುದು. ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ. ಹೊಸ ಉದ್ಯೋಗಕ್ಕೆ ಅವಕಾಶವು ಪ್ರಾಪ್ತವಾಗಲಿದೆ. ಹೊಸ ಉದ್ಯೋಗವನ್ನು ಉತ್ಸಾಹದಿಂದ ಮಾಡುವಿರಿ. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು. ಸಹೋದರಿಯ ನಡುವೆ ವಾಗ್ವಾದ ಮಾಡುವಿರಿ.
ಮೀನ ರಾಶಿ: ಇಂದು ಒಳ್ಳೆಯ ದಿನವಾಗಿದ್ದು ಸಂಗಾತಿಯ ಜೊತೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ನಿಮ್ಮ ಮನೆಯಲ್ಲಿ ಇರುವಂತಹ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆದಾಯದ ಮೂಲವು ಬದಲಾಗಬಹುದು. ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಓಡಾಟವಾಗಬಹುದು. ಆಸ್ತಿ ವ್ಯವಹಾರದಲ್ಲಿ ಹಿನ್ನಡೆಯಾದಂತೆ ಅನ್ನಿಸಬಹುದು. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು. ವಾಹನ ಖರೀದಿಗೆ ಹಣವನ್ನು ಹೊಂದಿಸುವುದು ಸವಾಲಾಗಬಹುದು. ಅಪಘಾತ ಭೀತಿಯು ಕಾಡುವುದು. ನಿಮಗೆ ಸಂಬಂಧವಿಲ್ಲದೇ ಇರುವ ವಿಚಾರಕ್ಕೆ ಮಧ್ಯ ಪ್ರವೇಶ ಬೇಡ.
-ಲೋಹಿತ ಹೆಬ್ಬಾರ್ – 8762924271 (what’s app only)