Astrology: ಈ ರಾಶಿಯವರ ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 03, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 03 ಜುಲೈ​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Astrology: ಈ ರಾಶಿಯವರ ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ
ದಿನಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜುಲೈ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:37 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:46 ರಿಂದ ಬೆಳಿಗ್ಗೆ09:23ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:00 ರಿಂದ 12:37ರ ವರೆಗೆ.

ಮೇಷ ರಾಶಿ : ಇಂದು ನೀವು ಮಾಡಿದ ಉಪಕಾರವು ನಿಮಗೆ ಮರಳಿಬರಬಹುದು. ದೀರ್ಘಕಾಲದಿಂದ ಮಾಡುತ್ತಿದ್ದ ಕೆಲಸಗಳು ಮುಕ್ತಾಯವಾಗುವುವು. ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು‌. ಭೂಮಿಗೆ ಸಂಬಂಧಿಸಿದ ವಿಚಾರವು‌ ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ಸಕಾರಾತ್ಮಕೆ ಬರಲು ದೇವಾಲಯ ಅಥವಾ ಪ್ರಭಾವೀ ವ್ಯಕ್ತಿಗಳ ಮಾತು ಸಹವಾಸವನ್ನು ಮಾಡಿ. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಸುಪ್ತವಾದ ಪ್ರತಿಭೆಯು ಅನಾವರಣಕ್ಕೆ ಸ್ಥಳ ಹುಡುಕುವುದು. ಚಿಂತಿಸದೇ ಅನ್ಯ ಮಾರ್ಗವನ್ನು ಹಿಡಿಯಿರಿ. ನಿಮ್ಮ ತೊಂದರೆಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.

ವೃಷಭ ರಾಶಿ : ಸ್ವಯಂ‌ಕೃತ ಅಪರಾಧಕ್ಕೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವುದು ಬೇಡ. ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈ ಮೀರಿ ಹೋಗುವ ಸಂದರ್ಭವೇ ಇರುವುದು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ಹಿರಿಯರ ಮಾತನನ್ನು ಅಹಂಕಾರದಿಂದ ಮುರಿಯಬೇಡಿ. ಬಿಸಿ ರಕ್ತವು ಆರಿದ ಮೇಲೆ ಪಶ್ಚಾತ್ತಾಪ ಪಡಬೇಕಾದೀತು. ಯಾರದೋ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನ ಫಲಿಸದು. ಮಾನಸಿಕ‌ ಆಲಸ್ಯ ಇಂದು ಸರಿಯಾದ ಕೆಲಸ ಸಿಗಲಿದ್ದು, ಅದನ್ನು ಅನಿವಾರ್ಯವಾಗಿ ಮಾಡುವಿರಿ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವಿರಿ.

ಮಿಥುನ ರಾಶಿ : ನಿಮ್ಮ ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವೂ ಆಗದು. ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬಗೆ ಅರಿಯದಾದೀತು. ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ನಿಮ್ಮವರ ಮೇಲೆ ಕಾಳಜಿ ಹೆಚ್ಚಿರುವುದು. ಅಧಿಕಾರದ ಪಡೆಯಲು ವಾಮಮಾರ್ಗವನ್ನು ಬಳಸಬಹುದು. ಬೇರೆಯವರ ಮೇಲೆ ಪ್ರಭಾವ ಬೀರುವ ಸಂದರ್ಭಬರಬಹುದು. ಹಣಕಾಸಿನ ಹೂಡಿಕೆಯು ಕಾನೂನುಬದ್ಧವಾಗಿರಲಿ. ರಾಜಕೀಯ ವ್ಯಕ್ತಿಗಳಾಗಿದ್ದರೆ ಒಂದು ಸಕಾರಾತ್ಮಕ ಸಂಚಲನವನ್ನು ತರುವಿರಿ. ಅಪರಿಚರ ಒಡನಾಟ ಕಡಿಮೆ ಮಾಡಿ. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.

ಕಟಕ ರಾಶಿ : ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವಿರಿ. ವಾಹನದಿಂದ‌ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ. ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮಗೆ ಎಲ್ಲವೂ ಬಂಧನದಂತೆ ಅನ್ನಿಸುವುದು. ಎಲ್ಲರನ್ನೂ ಸುಮ್ಮನೇ ಅನುಮಾನದ ದೃಷ್ಟಿಯಿಂದ ನೋಡಬೇಡಿ. ಉದ್ಯೋಗದಲ್ಲಿ ಒಪ್ಪಂದವನ್ನು ಸರಿಯಾಗಿ ಮಾಡಿಕೊಳ್ಳಿ. ಮೋಸವಾಗುವ ಸಾಧ್ಯತೆ ಇದೆ. ಕಷ್ಟದಿಂದ ಸಂಪಾದಿಸಿದ್ದನ್ನು ಕಳೆದುಕೊಳ್ಳುವಿರಿ. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.