
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪಂಚಮೀ ನಿತ್ಯನಕ್ಷತ್ರ : ಆರ್ದ್ರಾ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ – 06 : 10 am, ಸೂರ್ಯಾಸ್ತ – 06 : 48 pm, ಇಂದಿನ ಶುಭಾಶುಭಕಾಲ: ರಾಹು ಕಾಲ 10:55 – 12:30, ಯಮಘಂಡ ಕಾಲ 15:39 – 17:14, ಗುಳಿಕ ಕಾಲ 07:46 – 09:20
ತುಲಾ ರಾಶಿ: ಮಕ್ಕಳ ಪ್ರಶಂಸೆಯಿಂದ ನಿಮಗೆ ಹೆಮ್ಮೆ. ಇಂದು ಮನಸ್ಸನ್ನು ಕಾರ್ಯದಲ್ಲಿ ನಿಲ್ಲಿಸಲಾಗದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ಅಮೂಲ್ಯ ವಸ್ತುಗಳ ಖರೀದಿ ಹಾಗೂ ಹೂಡಕೆಯಾಗಿಯೂ ಇಡುವಿರಿ. ನಿಮ್ಮ ಸೃಜನಶೀಲತೆ ಮತ್ತು ಕಷ್ಟಪಟ್ಟು ಮಾಡಿದ ಕೆಲಸವು ಗುರುತಿಸಲ್ಪಡುತ್ತದೆ, ಆದರೆ ಕನಸಿನ ಯೋಜನೆಗಳ ಫಲಿತಾಂಶಕ್ಕೆ ಸಮಯ ಬೇಕಾಗಿದೆ. ಸುಪ್ತ ಪ್ರತಿಭೆಯ ಅನಾವರಣವಾಗಲಿದೆ. ಇಂದು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ, ಆದರೆ ನಿರಾಸೆಗೊಳ್ಳದೇ ಮುಂದೆ ಸಾಗುವುದು ಮುಖ್ಯ ಹೊಸ ಯೋಜನೆಗಳಿಗೆ ಹೆಚ್ಚು ಖರ್ಚು ಮಾಡಬೇಕಾದರೂ, ಬಜೆಟ್ ನ ಜಾಗರೂಕತೆ ವಹಿಸಿ. ದೀರ್ಘಕಾಲದ ಯಶಸ್ಸಿಗೆ ಗಮನಹರಿಸಿ. ವ್ಯಾಪಾರವು ನಿಮಗೆ ಲಾಭವನ್ನು ತರಿಸುವುದು. ಓಡಾಟವೂ ವ್ಯರ್ಥವಾದೀತು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ವೈದ್ಯರನ್ನು ಭೇಟಿಯಾಗಿ ಶಾರೀರಿಕ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಿ.
ವೃಶ್ಚಿಕ ರಾಶಿ: ನಿಮಗೆ ತೊಂದರೆ ಕೊಟ್ಟವರನ್ನು ಸುಮ್ಮನೆ ಬಿಡಲಾರಿರಿ. ನಿಮ್ಮ ಬಳಿ ಇರುವ ಸಂಸತ್ತನ್ನು ಸಹಾಯಕ್ಕಾಗಿ ನೀಡಬಹುದು. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಅಜ್ಞಾತವಾಸದಿಂದ ಹೊರಬರಲಿದ್ದಾರೆ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ವಿಶ್ಲೇಷಣಾ ಮತ್ತು ಅನುಷ್ಠಾನ ಸಾಮರ್ಥ್ಯ ಇಂದು ನಿಮಗೆ ಮಹತ್ತರವಾದ ಸಹಾಯ ಮಾಡಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡಲಿದ್ದೀರಿ. ಹಣಕಾಸಿನ ಬಗ್ಗೆ ಸರಿಯಾಗಿ ವಿಶ್ಲೇಷಿಸಿ ಹೆಜ್ಜೆ ಇಡಿ. ನೂತನ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಮುಂದಿನ ದಿನಕ್ಕೆ ಲಾಭವೂ ಆಗಲಿದೆ. ಕುಟುಂಬದ ಕೀರ್ತಿಯನ್ನು ಬೆಳೆಸುವವರಿದ್ದೀರಿ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಆಯತಪ್ಪಿ ಬಿದ್ದು ದೊಡ್ಡ ಗಾಯಮಾಡಿಕೊಳ್ಳಲಿದ್ದೀರಿ. ಅನಿರೀಕ್ಷಿತ ಧನವ್ಯಯವು ಆಗಬಹುದು. ವಿದ್ಯಾರ್ಥಿಗಳು ನಿಮ್ಮ ಮುಂದಿನ ವಿಷಯಗಳ ಕುರಿತು ಚರ್ಚೆಗಳನ್ನು ಮಾಡಿ ಮುಂದುವರಿಯಿರಿ. ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ ಮೇಲೆ ಪ್ರಭಾವವನ್ನು ಬೀರಲಿದೆ.
ಧನು ರಾಶಿ: ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳಲಿದ್ದು ಅದುನ್ನು ನೀವೇ ಗುರುತಿಸಿಕೊಳ್ಳಿ, ವೈದ್ಯರನ್ನು ಭೇಟಿಮಡಿ. ನೀವು ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿ ಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯ ರಿಪೇರಿ ಮಾಡಿಸಲಿದ್ದೀರಿ. ಹಣವನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾಗುವುದು. ನಿಮ್ಮ ಸಾಮರ್ಥ್ಯವನ್ನು ಇನ್ನೊಬ್ಬರು ಗುರಿತಿಸಲಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡುವ ಚಿಂತನೆಯನ್ನು ಮಾಡುವಿರಿ. ಎಲ್ಲವೂ ಕ್ಷಣದಲ್ಲಿ ಆಗಬೇಕು ಎನ್ನುವ ಉದ್ವೇಗವವನ್ನು ಬಿಟ್ಟು ಬಿಡಿ. ಭವಿಷ್ಯಕ್ಕೋಸ್ಕರ ಹಣವನ್ನು ಕೂಡಿಡುವ ಯೋಚನೆಯನ್ನು ಮಾಡುವಿರಿ. ಸಮಾಜದಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಅನಾರೋಗ್ಯದಿಂದ ಕಂಗೆಡಬಹುದು. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಕಛೇರಿಯ ಆಪ್ತತೆಯು ಮುಳುವಾಗಬಹುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾದ್ಯತೆ ಇದೆ. ಶತ್ರುಗಳು ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬರಬಹುದು.
ಮಕರ ರಾಶಿ: ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಆತಂಕದ ಭಯವೂ ಅಧಿಕವಾಗಿ ಕಾಡಲಿದೆ. ಇಂದು ಸಹೋದರರ ಜೊತೆ ಪ್ರೀತಿಯಿಂದ ಇರುವಿರಿ. ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗಿರಬಹುದು. ನಿಮ್ಮ ಕಾರ್ಯಕ್ಕೆ ಸಂಬಂಧಿಸಿದ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಇದು ಯಶಸ್ಸಿಗೆ ದಾರಿಮಾಡುತ್ತದೆ. ನಿರಂತರ ಕೆಲಸದಿಂದ ಬಳಲಿದರೂ, ವಿಶ್ರಾಂತಿ ತೆಗೆದುಕೊಂಡು ಸಿದ್ಧರಾಗುವಿರಿ. ಆಧುನಿಕ ಉಪಕರಣಗಳ ಬಳಕೆಯನ್ನು ಹೆಚ್ಚು ಮಾಡುವಿರಿ. ಉದ್ಯೋಗದಲ್ಲಿ ತಡೆಯೊಡ್ಡುವ ಸಮಸ್ಯೆಗಳು ಬಂದರೂ ಚಿಂತೆ ಇರದು. ನೌಕರರ ಅಲಕ್ಷ್ಯದಿಂದ ನಿಮ್ಮ ಉದ್ಯಮದಲ್ಲಿ ನಷ್ಟವಾಗಬಹುದು. ತಂದೆ ಮತ್ತು ಮಕ್ಕಳಲ್ಲಿ ಸ್ವಲ್ಪಮಟ್ಟಿಗೆ ಕಲಹವಿರುವುದು. ಇಂದಿನ ನಿಮ್ಮ ಕೆಲಸಗಳು ಆಯಾಸವನ್ನು ತರಿಸುವುದು. ಕಲಾವಿದರು ಅವಕಾಶಗಳನ್ನು ಸೃಷ್ಟಿಕೊಳ್ಳಲಿದ್ದಾರೆ. ಗೃಹನಿರ್ಮಾಣದ ಪ್ರಸ್ತಾಪವು ಇರಲಿದೆ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು.
ಕುಂಭ ರಾಶಿ: ನಿಮ್ಮವರೇ ಯಶಸ್ಸು ತಡೆಯುವರು. ಹತ್ತಿರದ ಪ್ರದೇಶಕ್ಕೆರಿ ಪ್ರಯಾಣವನ್ನು ಮಾಡುವಿರಿ. ನೀವು ಇಂದು ಅದೃಷ್ಟವಂತರಾಗಿದ್ದರೂ ನಿರೀಕ್ಷಿತ ಫಲಿತಾಂಶಕ್ಕಾಗಿ ಹೆಚ್ಚಿನ ಪರಿಶ್ರಮ ಅಗತ್ಯ. ಒಳ್ಳೆಯ ಕಾರ್ಯವು ನಿಮ್ಮ ಉದ್ಯೋಗದಲ್ಲಿ ತಪ್ಪುಗಳಾದಂತೆ ಸಹಾಯ ಮಾಡುತ್ತದೆ. ನಿರೀಕ್ಷಿಸದ ಆರ್ಥಿಕ ಸಹಾಯವು ದೀರ್ಘಕಾಲದ ಯೋಜನೆಗೆ ಅವಕಾಶ ತೆರಯುವುದು. ಅಚ್ಚರಿಯ ಕೆಲವು ಸಂಗತಿಗಳು ನಿಮಗೆ ಕಾದಿರಬಹುದು. ಅಪರಿಚಿತರ ಭೇಟಿಯಿಂದ ಸ್ವಲ್ಪ ಹಿಂದುಳಿಯಿರಿ. ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇದ್ದು ಪ್ರಂಶಸೆಯೂ ಸಿಗಬಹುದು. ನಿಯಮಗಳನ್ನು ಮುರಿಯಬೇಕು ಎನ್ನುವ ಮನಃಸ್ಥಿತಿಯು ಇರಲಿದೆ. ದಾಂಪತ್ಯದಲ್ಲಿ ಸಣ್ಣ ಕಿರಿಯಾಗಬಹುದು. ನಿಮ್ಮ ಹಳೆಯ ಪ್ರೇಮವು ಮತ್ತೆ ಹೊರಬರಬಹುದು. ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದು ಬೇಡ. ಕ್ರೀಡಾಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ಪಿತ್ತಾಧಿಕ್ಯದಿಂದ ಖಾಯಿಲೆಗಳು ಬರಬಹುದು. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ.
ಮೀನ ರಾಶಿ: ನಿಮ್ಮ ಪರವಾಗಿ ಮಾತನಾಡುವವರಿಂದ ಧೈರ್ಯ ಹೆಚ್ಚಾಗುವುದು. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವಿರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳಿ. ನಿಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸುವುದರಿಂದ ಪ್ರೀತಿಯಲ್ಲಿ ಯಶಸ್ಸು. ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯವು ಲಾಭದಾಯಕ. ಕುಟುಂಬ ಸಮಸ್ಯೆಗಳು ನಿಮ್ಮ ಗಮನವನ್ನು ಸೆಳೆಯಬಹುದು. ಇವುಗಳನ್ನು ಸಮಾಧಾನದಿಂದ ನಿರ್ವಹಿಸಿ. ನಿಮ್ಮ ಧೈರ್ಯವೇ ಮಾರ್ಗವನ್ನು ತೋರಿಸಬಹುದು. ಆಲಸ್ಯದಿಂದ ಬಂದಿರುವ ಅವಕಾಶವನ್ನು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ನಿಮ್ಮ ನಿರ್ಧಾರಕ್ಕೆ ಹಿಂದಿನ ಅನುಭವಗಳೇ ನಿಮಗೆ ಸಹಾಯವಾಗಲಿವೆ. ಇರುವವರನ್ನು ಬಿಟ್ಟು ಇನ್ನೊಬ್ಬರ ನಂಬಿ ಮೋಸಹೋಗಬೇಡಿ. ಆಪ್ತರ ಸಹಕಾರವು ಸಿಗಲಿದೆ. ದಾಯಾದಿ ಕಲಹವು ನ್ಯಾಯಾಲಯದ ವರಗೂ ಹೋಗಬಹುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ.