ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯ ನಕ್ಷತ್ರ: ಆರ್ದ್ರಾ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ ಸಂಜೆ 01:54, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:24ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:54 ರಿಂದ 10:54 ರ ವರೆಗೆ.
ಧನು ರಾಶಿ : ಬಂಧುಗಳ ಮನೆಗೆ ಇಂದು ತೆರಳುವಿರಿ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ದಾನದಲ್ಲಿ ನೀವು ಬಹಳ ಹಿಂಗೈಯುಳ್ಳವರಾಗುವಿರಿ. ಇಂದು ನಿಮಗೆ ರುಚಿಸುವ ಸಂಗತಿಗಳನ್ನೇ ಮಾತನಾಡುತ್ತಾರೆ ಎಂದು ತಿಳಿಯುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ ಮೌನವು ಮಾತಾಗಿ ಬಾರದು. ಸಂಗಾತಿಯನ್ನು ಪಡೆಯಲು ನೀವು ಬಹಳ ಶ್ರಮವಹಿಸುವಿರಿ. ಕೃಷಿಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಇಂದಿನ ಕೆಲವು ಸ್ಥಿತಿಯನ್ನು ಸಮಾಧಾನದಿಂದ ಅರಗಿಸಿಕೊಳ್ಳಬೇಕು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವು ಬಹಳ ಉತ್ಸಾಹದಿಂದ ಸಾಗುವುದು. ಮಕ್ಕಳಿಗೆ ಪ್ರೀತಿಯನ್ನು ತೋರಿಸಲು ಸಮಯದ ಅಭಾವ ಆಗಬಹುದು. ಕೃಷಿಯಲ್ಲಿ ಸಾಧಿಸುವ ಛಲವು ಬಂದೀತು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ಇಂದು ಉತ್ಪಾದನೆಯಲ್ಲಿ ಇರುವವರಿಗೆ ಲಾಭ.
ಮಕರ ರಾಶಿ : ಹಳೆಯ ವಸ್ತುಗಳನ್ನು ಮಾರಾಡ ಮಾಡಿದರೆ ಉತ್ತಮ ಬೆಲೆ ಸಿಗುವುದು. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ನಿಮ್ಮವರೇ ಆದರೂ ನೀವು ನಂಬಿಕೆಯನ್ನು ಇಡಲಾರಿರಿ. ಹೊಸತನ್ನು ಕಲಿಯುವ ಹಂಬಲವು ಕಡಿಮೆಯಾಗಬಹುದು. ನಿಮ್ಮದೇ ರೀತಿಯ ಮಾರ್ಗದಲ್ಲಿ ನೀವು ಮುಂದುವರಿಯುವಿರಿ. ಯಾರ ಮಾತನ್ನೂ ಕೇಳುವ ತಾಳ್ಮೆ ಕಡಿಮೆ ಆಗಬಹುದು. ನಿಮ್ಮ ಹೇಳಿಕೆಯನ್ನು ಬದಲಾಯಿಸವುದು ಬೇಡ. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬರದಿರುವುದು ಬೇಸರವನ್ನು ತರಿಸುವುದು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು. ಮನಸ್ಸಿನ ಸ್ಥಿರತೆಯನ್ನು ತಂದುಕೊಳ್ಳುವುದು ಕಷ್ಟವಾದೀತು. ಪರನಿಂದನೆಯಿಂದ ಆಚೆ ಬರುವುದು ಉತ್ತಮ. ಯಾರನ್ನೂ ಎದುರಿಸುವ ಧೈರ್ಯವನ್ನು ಇಂದು ತೋರಿಸುವಿರಿ. ಇದು ನಿಮ್ಮ ಎಲ್ಲ ನೋವನ್ನು ಮರೆಸಬಹುದು. ಮಾಡಬೇಕಾದುದನ್ನು ಮಾಡಿಯೇ ತೀರುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ವ್ಯವಹಾರದಲ್ಲಿ ಏರುಗತಿಯು ನಿಮಗೆ ಸಮಾಧಾನ ಕೊಡುವುದು.
ಕುಂಭ ರಾಶಿ : ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಜಯವು ಸಿಗಲಿದೆ. ಯಾದ್ದಾದದರೂ ಕಣ್ತಪ್ಪಿಸಿ ಏನನ್ನಾದರೂ ಮಾಡಲಾಗದು. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮುಖಂಡರಾಗಿ ಪಕ್ಷಪಾತವನ್ನು ಮಾಡುವುದು ಯೋಗ್ಯವಾಗದು. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕು ಎಂದನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಬರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ವೃತ್ತಿಯಲ್ಲಿ ಗಟ್ಟಿಯಾಗಿ ನಿಲ್ಲುವತನಕ ಸ್ವಲ್ಪ ಗೊಂದಲವು ಇರುವುದು. ಖರ್ಚಿಗಾಗಿ ತಂದೆಯಿಂದ ಹಣವನ್ನು ಪಡೆಯುವಿರಿ. ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ನೀಡುವಿರಿ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಏನೇ ಬಂದರೂ ಸಂತೋಷದಿಂದ ಸ್ವೀಕರಿಸಿ, ಆನಂದಿಸಿರಿ.
ಮೀನ ರಾಶಿ : ಬೇಸರದಲ್ಲಿ ಇರುವ ನಿಮಗೆ ಮತ್ತೆ ಬೇಸರ ತರಿಸುವ ಕೆಲಸವನ್ನು ಮಾಡಿಸಬಹುದು. ಇಂದು ನಿಮ್ಮನ್ನು ಭೇಟಿ ಮಾಎಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ಅನಿವಾರ್ಯ ಕಾರಣದಿಂದ ನಿಮ್ಮ ಇಂದಿನ ಯೋಜನೆಯನ್ನು ಬದಲಿಸಬೇಕಾಗುವುದು. ಸಿಟ್ಟುಗೊಳ್ಳುವ ಸಂದರ್ಭದಲ್ಲಿ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವುದು ಬೇಡ. ಒಳ್ಳೆಯ ಕರ್ಮದಿಂದ ಪುಣ್ಯದ ಫಲವನ್ನು ಸಂಪಾದಿಸುವಿರಿ. ಸಂಗಾತಿಯನ್ನು ನೀವು ಬೇಸರಿಸಿ ಸಮಾಧಾನ ಮಾಡುವಿರಿ. ನಿದ್ರೆಯನ್ನು ಅಧಿಕವಾಗಿ ಮಾಡಲಿದ್ದೀರಿ. ಸಹೋದರರ ಭೇಟಿಯು ಸಂತಸವನ್ನು ನೀಡುವುದು. ನೌಕರರಿಂದ ನಿಮ್ಮ ಕೆಲಸವು ಸುಲಭವಾಗುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ವಾಯುವಿಹಾರವನ್ನು ಸ್ನೇಹಿತರ ಜೊತೆ ಮಾಡುವಿರಿ. ಒತ್ತಡವನ್ನು ಉಪಾಯದಿಂದ ಕಡಿಮೆ ಮಾಡಿಕೊಳ್ಳುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಸಾಲದ ಬಗ್ಗೆ ಭಯವಿರುವುದು. ದಿಡೀರ್ ಬದಲಾವಣೆಯನ್ನು ವ್ಯವಸ್ಥೆ ಒಪ್ಪಿಕೊಳ್ಳದು.
-ಲೋಹಿತ ಹೆಬ್ಬಾರ್-8762924271 (what’s app only)