Horoscope: ಈ ರಾಶಿಯವರು ಆಪ್ತರಿಂದ ಸಹಾಯವನ್ನು ಬಯಸುವಿರಿ
ಸೆಪ್ಟೆಂಬರ್ 25, 2024ರ ನಿಮ್ಮ ರಾಶಿಭವಿಷ್ಯ: ಇಂದು ನಿಮ್ಮ ಕಛೇರಿಯ ಕಾರ್ಯಗಳು ಬೇಗನೆ ಮುಕ್ತಾಯವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುವಿರಿ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ನೀವು ಇಂದು ಅಸರಂಭಿಸಿದ ಕಾರ್ಯವನ್ನು ಪೂರ್ಣ ಆಗುವವರೆಗೂ ಬಿಡುವವರಲ್ಲ. ಹಾಗಾದರೆ ಸೆಪ್ಟೆಂಬರ್ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯ ನಕ್ಷತ್ರ: ಆರ್ದ್ರಾ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ ಸಂಜೆ 01:54, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:24ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:54 ರಿಂದ 10:54 ರ ವರೆಗೆ.
ಮೇಷ ರಾಶಿ : ಸಿಟ್ಟು ಮಾತ್ರ ತೋರಿಸಿದರೆ ನಿಮ್ಮ ಕೆಲಸವಾಗದು. ನಿಮ್ಮ ಹಲವು ದಿನಗಳ ಮನಸ್ಸಿನ ಗೊಂದಲವು ಪರಿಹಾರವಾಗುವುದು. ಇಂದು ನಿಮ್ಮ ಅನೇಕ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ಬೇರೆ ಕಡೆಗೆ ಇರಲು ಬಯಸುವಿರಿ. ಆರ್ಥಿಕತೆಯ ಹಿನ್ನಡೆಯಿಂದಾಗಿ ಕಾರ್ಯಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯವನ್ನು ಬಯಸುವಿರಿ. ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ. ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ತಾಯಿಯಿಂದ ನಿಮಗೆ ಪ್ರೀತಿ ಹೆಚ್ಚು ಸಿಗುವುದು. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ಮಾತನ್ನು ಉಳಿಸಿಕೊಳ್ಳುವಿರಿ. ನಿಮ್ಮದಾದ ವಸ್ತುಗಳನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸಿ. ಅಪರಿಚಿತರ ವ್ಯಕ್ತಿಗಳಿಂದ ನೀವು ಸಂತೋಷಗೊಳ್ಳುವಿರಿ. ಸಹೋದರರಲ್ಲಿ ಸಾಮರಸ್ಯ ಕಾಣಿಸುವುದು.
ವೃಷಭ ರಾಶಿ : ಯಾರದೋ ಒತ್ತಾಯಕ್ಕಾಗಿ ಮಾಡುವ ಕಾರ್ಯಗಳು ಹಾಳಾಗುವುದು. ಇಂದು ಮಹಿಳೆಯರ ಸಂಘವು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಸ್ತ್ರೀಯರಿಂದ ಸಹಾಯವು ನಿಮಗೆ ಸಿಗಲಿದೆ. ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನು ಕೊಡಲಾಗದು. ಒತ್ತಡದ ನಿವಾರಣೆ ಸುತ್ತಾಡಿ ಬರುವ ಮನಸ್ಸಾದೀತು. ನಿಮ್ಮ ನಷ್ಟದ ಉದ್ಯೋಗಕ್ಕೆ ಆಪ್ತರ ಸಲಹೆಯು ಉಪಯೋಗಕ್ಕೆ ಬರಬಹುದು. ಉನ್ನತಮಟ್ಟದ ಅಧಿಕಾರಿಗಳ ಸಹಾಯವನ್ನು ನೀವು ಬಯಸುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಇಂದು ಹೊಸಬರ ಗೆಳೆತನವಾಗಲಿದೆ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಉಪಾಯದಿಂದ ನಿಮ್ಮ ಕಾರ್ಯವನ್ನು ಮಾಡುವುದು ಉತ್ತಮ. ಕೃತಜ್ಞತೆಯಿಂದ ವ್ಯವಹರಿಸಿದರೆ ವಿಶ್ವಾಸ ಉಳೊಯುವುದು.
ಮಿಥುನ ರಾಶಿ : ಅಕಾರಣ ಸಂತೋಷದಿಂದ ನಿಮಗೆ ಉತ್ಸಾಹದಿಂದ ಇರುವಿರಿ. ಇಂದು ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವು ಕಡಿಮೆ ಸಿಗಲಿದೆ. ಯಾರದೋ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿರಿ. ಆರ್ಥಿಕ ನಷ್ಟದ ಹಾಗೂ ಸಮಯದ ನಷ್ಟವಾಗಿ ಬೇಸರಿಸುವಿರಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿಕೊಂಡು, ಮಾತನಾಡಿ. ಯಾರ ಜೊತೆಗೂ ಕಟುವಾದ ಮಾತುಗಳನ್ನು ಆಡುವುದು ಬೇಡ.. ಆಪ್ತರು ನೀಡುವ ಹಣಕ್ಕಾಗಿ ನೀವು ಇಂದು ಕಾಯುವಿರಿ. ವಾಹನದ ನಷ್ಟವು ನಿಮಗೆ ನಿಮಗೆ ಹೊರೆಯಾದೀತು. ಇನ್ನೊಬ್ಬರ ವಸ್ತುವನ್ನು ಮರಳಿಕೊಡಲು ನೀವು ಮರೆತಿದ್ದು ಇಂದು ಹಿಂದಿರುಗಿಸುವಿರಿ. ಸಾಮಾಜಿಕ ಗೌರವವನ್ನು ನೀವಿಂದು ಪಡೆಯುವಿರಿ. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು.
ಕರ್ಕಾಟಕ ರಾಶಿ : ಇಂದು ನಿಮ್ಮ ಕಛೇರಿಯ ಕಾರ್ಯಗಳು ಬೇಗನೆ ಮುಕ್ತಾಯವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುವಿರಿ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ನೀವು ಇಂದು ಅಸರಂಭಿಸಿದ ಕಾರ್ಯವನ್ನು ಪೂರ್ಣ ಆಗುವವರೆಗೂ ಬಿಡುವವರಲ್ಲ. ಸಂಗಾತಿಯ ಜೊತೆ ಸಮಯ ಕಳೆಯುವ ಮನಸ್ಸಾಗುವುದು. ಮನೆ ಬಳಕೆಗೆ ಬೇಕಾದ ವಸ್ತುವನ್ನು ಕಡಿಮೆ ಬೆಲೆಗೆ ಪಡೆಯುವಿರಿ. ವಿದೇಶದ ಸ್ನೇಹಿತನ ಪರಿಚಯವಾಗುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಹೇಳಿ ಪಡೆದುಕೊಳ್ಳುವಿರಿ. ನಿಮ್ಮ ಗೆಳೆತನವು ಸಂಗಾತಿಗೆ ಅಸೂಯೆಯನ್ನು ಉಂಟುಮಾಡಬಹುದು. ದೀರ್ಘಕಾಲ ನಂಬಿದರಿಂದ ವಂಚನೆ ಸಾಧ್ಯವಿದೆ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ಯಾರಿಂದಲೂ ಆಗದ್ದನ್ನು ನೀವು ಮಾಡುವುದು ಬೇಡ. ಅಲದಪ ಸಾಲವನ್ನು ಮರುಪಾವತಿಸುವಿರಿ. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು.