AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Career Predictions: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಉದ್ಯೋಗ ದೊರೆಯುವ ಸಾಧ್ಯತೆಯಿದೆ

ಜನವರಿ 25-31, 2026ರ ವಾರವು ಅಧಿಕಾರಿಗಳ ಆಳ್ವಿಕೆಯಲ್ಲಿರಲಿದ್ದು, ಕೆಲವರಿಗೆ ಶ್ರಮ ಹೆಚ್ಚಾದರೂ ದೈವದ ರಕ್ಷಣೆ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು, ಐಟಿ ಮತ್ತು ತಾಂತ್ರಿಕ ವೃತ್ತಿಪರರಿಗೆ ಪ್ರಗತಿ ನಿರೀಕ್ಷಿಸಬಹುದು. ಸ್ವಂತ ಉದ್ಯಮಿಗಳು ನಷ್ಟ ತುಂಬಿಕೊಳ್ಳುವ ಚಿಂತೆಯಲ್ಲಿ ಅಡ್ಡ ದಾರಿಗಳನ್ನು ತಪ್ಪಿಸಬೇಕು. ಪ್ರಾಮಾಣಿಕ ಪ್ರಯತ್ನಕ್ಕೆ ಗೌರವ ಸಿಗಲಿದೆ.

Weekly Career Predictions: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಉದ್ಯೋಗ ದೊರೆಯುವ ಸಾಧ್ಯತೆಯಿದೆ
Career Predictions
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 22, 2026 | 11:24 AM

Share

25-01-2026ರಿಂದ 31  ರವರೆಗೆ ವೃತ್ತಿಯು ಅಧಿಕಾರಿಗಳ ಆಳ್ವಿಕೆಯಲ್ಲಿ ಇರಲಿದೆ. ಕೆಲವರಿಗೆ ಮುಂದಿನ ದಾರಿ ಕತ್ತಲೆನಿಸುವ ಸ್ಥಿತಿ. ಶ್ರಮ ಅಧಿಕವಾಗಲಿದೆ. ಸ್ವಂತ ಉದ್ಯಮಿಗಳಿಗೆ ನಷ್ಟವನ್ನು ತುಂಬಿಕೊಳ್ಳುವ ಯೋಚನೆ ಬರಲಿದ್ದು ಅಡ್ಡ ದಾರಿಗಳು ಗಮನ ಸೆಳೆಯಬಹುದು‌. ಸರಿಯಾದ ಮಾರ್ಗವಿದ್ದರೆ ಭಯದ ಅವಶ್ಯಕತೆ ಇಲ್ಲ. ದೈವ ನಿಮ್ಮನ್ನು ಕಾಪಾಡುತ್ತದೆ.

ಮೇಷ ರಾಶಿ:

ಈ ವಾರ ವೃತ್ತಿಜೀವನ ಹೊಸ ಎತ್ತರಕ್ಕೆ ಏರಲಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭ ಸುದ್ದಿ ಸಿಗಲಿದೆ.

ವೃಷಭ ರಾಶಿ:

ನಿಮಗೆ ಕೆಲಸದ ಸ್ಥಳದಲ್ಲಿ ಈ ವಾರ ಸ್ಥಿರತೆ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಬಲವಾದ ಲಕ್ಷಣಗಳಿವೆ. ಹಿರಿಯ ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ.

ಮಿಥುನ ರಾಶಿ:

ಮೂರನೇ ರಾಶಿಗೆ ಈ ವಾರ ಒಂದಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ಎದುರಾಗಬಹುದು. ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಪ್ರಗತಿ ಕಂಡುಬರಲಿದೆ.

ಕರ್ಕಾಟಕ ರಾಶಿ:

ನಿಮ್ಮ ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಗೌರವ ಸಿಗಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ.

ಸಿಂಹ ರಾಶಿ:

ಈ ವಾರ ನಿಮ್ಮ ಕೆಲಸದ ಬಗ್ಗೆ ಇತರರಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಕಚೇರಿ ರಾಜಕೀಯದಿಂದ ದೂರವಿರುವುದು ಉತ್ತಮ.

ಕನ್ಯಾ ರಾಶಿ:

ಆರನೇ ರಾಶಿಗೆ ವೃತ್ತಿಯಲ್ಲಿ ಪ್ರಾಯೋಗಿಕ ನಿರ್ಧಾರಗಳು ಮುಖ್ಯ. ಕೆಲಸದ ಹೊರೆ ಹೆಚ್ಚಾದರೂ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರುತ್ತದೆ.

ತುಲಾ ರಾಶಿ:

ನೀವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ. ವ್ಯಾಪಾರಸ್ಥರಿಗೆ ಈ ವಾರ ಸಾಧಾರಣ ಲಾಭ ಇರಲಿದೆ.

ವೃಶ್ಚಿಕ ರಾಶಿ:

ಈ ವಾರ ರಹಸ್ಯ ಮೂಲಗಳಿಂದ ಬಂದ ಅವಕಾಶಗಳು ನಿಮ್ಮ ವೃತ್ತಿಯ ದಿಕ್ಕನ್ನೇ ಬದಲಿಸಬಹುದು. ಸಂಶೋಧನೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಇರುವವರಿಗೆ ಯಶಸ್ಸು ಸಿಗಲಿದೆ.

ಧನು ರಾಶಿ:

ನಿಮಗೆ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ.

ಮಕರ:

ಹತ್ತನೇ ರಾಶಿಯವರಿಗೆ ನಿಮ್ಮ ಕಾರ್ಯಕ್ಷಮತೆಗೆ ಹಿರಿಯರ ಆಶೀರ್ವಾದ ಸಿಗಲಿದೆ. ದೂರ ಪ್ರಯಾಣದ ಕೆಲಸಗಳಲ್ಲಿ ಲಾಭದಾಯಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಕುಂಭ ರಾಶಿ:

ಶನಿಯ ಆಧಿಪತ್ಯದ ಈ ರಾಶಿಗೆ ಶಿಕ್ಷಕ ವೃತ್ತಿ ಅಥವಾ ಬಟ್ಟೆ ವ್ಯಾಪಾರದಲ್ಲಿ ಇರುವವರಿಗೆ ಈ ವಾರ ಅತ್ಯಂತ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯಲಿದೆ.

ಮೀನ ರಾಶಿ:

ಈ ವಾರ ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಸಹೋದ್ಯೋಗಿಗಳ ಜೊತೆ ಕಿರಿಕಿರಿ ಉಂಟಾಗದಂತೆ ಎಚ್ಚರವಹಿಸಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
ಆಂಧ್ರಪ್ರದೇಶ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಜೀವ ದಹನ
ಆಂಧ್ರಪ್ರದೇಶ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಜೀವ ದಹನ
ಓಲಾ ಸ್ಕೂಟರ್​ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ
ಓಲಾ ಸ್ಕೂಟರ್​ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ
ದರ್ಶನ್-ವಿಜಯಲಕ್ಷ್ಮೀ ಮದುವೆ ಆದ ಜಾಗದಲ್ಲೇ ಉಗ್ರಂ ಮಂಜು ವಿವಾಹ
ದರ್ಶನ್-ವಿಜಯಲಕ್ಷ್ಮೀ ಮದುವೆ ಆದ ಜಾಗದಲ್ಲೇ ಉಗ್ರಂ ಮಂಜು ವಿವಾಹ
ಕೆಆರ್ ಪುರಂ ಬಳಿ ಬೈಕ್ ಶೋರೂಮ್‌ನಲ್ಲಿ ಅಗ್ನಿ ದುರಂತ: 13 ಬೈಕ್‌ಗಳು ಭಸ್ಮ
ಕೆಆರ್ ಪುರಂ ಬಳಿ ಬೈಕ್ ಶೋರೂಮ್‌ನಲ್ಲಿ ಅಗ್ನಿ ದುರಂತ: 13 ಬೈಕ್‌ಗಳು ಭಸ್ಮ
ಕೇರಳ, ತಮಿಳುನಾಡಲ್ಲೂ ರಾಜ್ಯಪಾಲ VS ಸರ್ಕಾರ ಸಂಘರ್ಷ! ಅಲ್ಲಿ ಏನೇನಾಗಿತ್ತು?
ಕೇರಳ, ತಮಿಳುನಾಡಲ್ಲೂ ರಾಜ್ಯಪಾಲ VS ಸರ್ಕಾರ ಸಂಘರ್ಷ! ಅಲ್ಲಿ ಏನೇನಾಗಿತ್ತು?
ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿಗೆ ಸಂಸದೆ ಪ್ರಿಯಾ ಖಡಕ್ ರಿಯಾಕ್ಷನ್
ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿಗೆ ಸಂಸದೆ ಪ್ರಿಯಾ ಖಡಕ್ ರಿಯಾಕ್ಷನ್