
07-12-2025ರಿಂದ 13-12-2025ರವರಗೆ ಈ ವಾರವು ಡಿಸೆಂಬರ್ ಎರಡನೇ ವಾರವಾಗಿದ್ದು ಮೇಷ ಹಾಗೂ ವೃಶ್ಚಿಕದ ಅಧಿಪತಿ ಕುಜನು ಧನುರಾಶಿಯಲ್ಲಿ ಇರಲಿದ್ದು ಗುರುವಿನ ದೃಷ್ಟಿಯೂ ಇರಲಿದೆ. ತಂತ್ರಜ್ಞರಿಗೆ ಮಾನ್ಯತೆ ಹಾಗೂ ಸರ್ಕಾರದ ಕಾರ್ಯಗಳನ್ನು ಮಾಡಿಕೊಡಬೇಕಾಗುವುದು. ಬದಲಾವಣೆ, ಸ್ಥಾನೋನ್ನತಿ, ಯಶಸ್ಸು, ಅವನತಿ, ಆದಾಯ ಏನೇ ಇದ್ದರೂ ಅದನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಮುಖ್ಯ. ಕರ್ಮಾಧಿಪತಿಯ ಅನುಗ್ರಹವನ್ನು ಪಡೆಯಲು ಶನಿಸ್ತೋತ್ರವನ್ನು ಪಡೆಯುವಿರಿ.
ಎರಡನೇ ವಾರದಲ್ಲಿ ನಿಮಗೆ ಕರ್ಮಾಧಿಪತಿಯ ಪ್ರಭಾವದಿಂದ ಕೆಲಸದ ವೇಗ ಕಡಿಮೆಯಾಗಲಿದೆ. ಆತಂಕಗೊಳ್ಳದೇ ಗುರಿಗಳನ್ನು ಸ್ಪಷ್ಟಗೊಳಿಸುವ ಸಮಯ. ವಾರದ ಮಧ್ಯದಲ್ಲಿ ನಿಮ್ಮ ಮೇಲಿನ ದಯೆಯಿಂದ ಅಧಿಕಾರಿಗಳ ಬೆಂಬಲ ಸಿಗುವ ಸಾಧ್ಯತೆ. ಹೊಸ ಅವಕಾಶಗಳು ಕೈಗೆ ಬಂದರೂ ತುರ್ತು ನಿರ್ಧಾರ ತಪ್ಪಿಸಿ. ಸಹೋದ್ಯೋಗಿಗಳೊಂದಿಗೆ ಸಮನ್ವಯ ಕಾಪಾಡಿದರೆ ನಿಮಗೆ ಉತ್ತಮ ಫಲ. ವಾರಾಂತ್ಯದಲ್ಲಿ ಸಂತೋಷಕಾರವಾದ ವೃತ್ತಿಯ ಅಭಿವೃದ್ಧಿಯ ಸೂಚನೆ.
ಈ ವಾರ ನಿಮ್ಮ ಕಚೇರಿ ವಾತಾವರಣ ಸಕಾರಾತ್ಮಕವಾಗಿರುವುದು. ಮಾತಿನ ಶಕ್ತಿ ಹೆಚ್ಚಾಗಿದ್ದು ಒಪ್ಪಂದಗಳು ಯಶಸ್ವಿಯಾಗುತ್ತವೆ. ಹಿರಿಯರಿಂದ ಪರಿಹಾರ ಅಥವಾ ಸಲಹೆ ದೊರೆಯುವ ವಾರ. ಹಣಕಾಸು ವಿಚಾರಗಳಲ್ಲಿ ಜಾಗರೂಕತೆ ಅಗತ್ಯ. ವಾರಾಂತ್ಯದಲ್ಲಿ ಹೊಸ ಕಾರ್ಯಯೋಜನೆ ಆರಂಭವಾಗಬಹುದು. ದಶಮಾಧಿಪತಿಯಿಂದ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕಲಿದೆ.
ಮೂರನೇ ರಾಶಿಯವರಿಗೆ ಈ ವರ ಹೊಸ ಪ್ರಾಜೆಕ್ಟ್ ಹಿಡಿದುಕೊಳ್ಳುವಲ್ಲಿ ಪ್ರಯತ್ನ ಸಫಲ. ಗುರುವಿನ ಆಗಮನ ಈ ರಾಶಿಗೆ ಆಗಲಿದ್ದು ತ್ವರಿತ ನಿರ್ಧಾರಕ್ಕೆ ಸಮಯ ತಾನಾಗಿಯೇ ಬರಲಿದೆ. ಕಾರ್ಯ ಮಾಡುವ ತಂಡದೊಂದಿಗೆ ಸೌಹಾರ್ದಯುತವಾಗಿ ನಡೆದರೆ ಪ್ರಭಾವ ಹೆಚ್ಚಾಗುತ್ತದೆ. ವಾರದ ಕೊನೆಯಲ್ಲಿ ಸಣ್ಣ ಯಶಸ್ಸು ದೊಡ್ಡ ಅವಕಾಶವನ್ನಾಗಿಸುವುದು.
ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಎರಡನೆಯ ವಾರ ಒತ್ತಡದಿಂದ ಮನಃಸ್ಥಿತಿ ಸ್ಥಿರವಾಗಿರದು. ಆದರೆ ಉದ್ಯೋಗದಲ್ಲಿ ಭದ್ರತೆಯ ಬಗ್ಗೆ ಗಮನವಿರದು. ಗುರುವಿನ ಕೃಪೆಯಿಂದ ದೂರವಿದ್ದ ನಿಮಗೆ ಕೆಲಸಗಳು ಬಂದರೂ ಯಶಸ್ಸು ಅನ್ಯರ ಪಾಲಾಗುವುದು. ಸಹೋದ್ಯೋಗಿಗಳ ಬೆಂಬಲ ಉತ್ತಮ. ಹಣಕಾಸು ವ್ಯವಹಾರಗಳಲ್ಲಿ ಅಜಾಗರೂಕತೆಯಿಂದ ಇರುವಿರಿ. ವಾರಾಂತ್ಯದಲ್ಲಿ ಹೊಸ ಸೂಚನೆಗಳು ಕಂಡುಬರುತ್ತವೆ. ದೀರ್ಘಕಾಲದ ಯೋಜನೆಗಳಿಗೆ ಶುಭಾರಂಭ.
ಈ ವಾರ ನಿಮಗೆ ದಶಮಾಧಿಪತಿ ಶುಕ್ರ ನಿಮ್ಮ ವೃತ್ತಿಯಲ್ಲಿ ಜಾಣ್ಮೆಯನ್ನು ಹೆಚ್ಚಿಸುತ್ತಾನೆ. ಯಾವುದಾದರೂ ನೇತೃತ್ವ ವಹಿಸಿಕೊಳ್ಳುವ ಅವಕಾಶಗಳು ಹೆಚ್ಚಾಗುವ ವಾರ. ಪ್ರತಿಸ್ಪರ್ಧಿಗಳು ನಿಮ್ಮ ಕಾರಣದಿಂದ ನಿಧಾನವಾಗಿ ಶಮನಗೊಳ್ಳುತ್ತಾರೆ. ವಾರದ ಮಧ್ಯದ ಬಳಿಕ ಕೆಲಸದ ವೇಗ ಮತ್ತು ಗೌರವ ಎರಡೂ ಹೆಚ್ಚಾಗುವ ಸೂಚನೆ. ಹೊಸ ಜವಾಬ್ದಾರಿಗಳು ಬಂದರೂ ಧೈರ್ಯದಿಂದ ನಿಭಾಯಿಸಿದರೆ ದೊಡ್ಡ ಲಾಭ.
ಡಿಸೆಂಬರ್ ತಿಂಗಳ ಈ ವಾರ ಶಾಂತವಾದ ವಿಶ್ಲೇಷಣೆ ವ್ಯಾಪಾರಕ್ಕೆ ಪೂರಕ. ನಿಮ್ಮ ಕಾರ್ಯನಿಷ್ಠೆಗೆ ಉಳಿದವರ ಅಸಮಾಧಾನ ಹೆಚ್ಚಾಗುತ್ತದೆ. ಪೇಪರ್‌ವರ್ಕ್‌ಗಳಲ್ಲಿ ಸ್ಪಷ್ಟತೆ ಇದ್ದರೆ ಪ್ರಸ್ತಾಪದಲ್ಲಿ ಭಯವಿರದು. ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲು ಸೂಚನೆ ಬರುವುದು. ಸಹೋದ್ಯೋಗಿಗಳ ಸಹಕಾರವನ್ನೂ ಅಪೇಕ್ಷಿಸುವಿರಿ. ಹಳೆಯ ಒಪ್ಪಂದದಲ್ಲಿ ಸ್ಪಷ್ಟತೆ ಅವಶ್ಯಕ ವಾರಾಂತ್ಯದಲ್ಲಿ ಸಣ್ಣ ಬೋನಸ್ ಸಿಕ್ಕಿ ಸಂತೋಷವಾಗಲಿದೆ.
ಈ ವಾರ ನಿಮಗೆ ಸಂಯಮವಿದ್ದರೆ ಉದ್ಯೋಗದಲ್ಲಿ ಸಮತೋಲನ ಶಕ್ತಿ ಬರುವುದು. ಸಂವಹನ ಕಾರ್ಯದಲ್ಲಿ ಗೊಂದಲವಿಲ್ಲದೇ ಸುಗಮ. ಹಣಕಾಸು ಸ್ಥಿರವಾಗದೇ ಮನಸ್ಸಿಗೆ ಕಿರಿಕಿರಿ. ಹೊಸ ವ್ಯಾಪಾರವನ್ನು ಜೋಡಿಸಿಕೊಳ್ಳಬೇಕಾಗುವುದು. ವಾರದ ಮಧ್ಯದಲ್ಲಿ ಒಂದೊಂದೇ ಗೊಂದಲ ಪರಿಹಾರವಾಗಲಿದೆ. ನಿಮ್ಮ ಸೌಜನ್ಯವು ಸ್ಥಾನಮಾನವನ್ನು ಹೆಚ್ಚಿಸುತ್ತದೆ.
ಡಿಸೆಂಬರ್ ತಿಂಗಳ ಎರಡನೇ ವಾರ ನಿಮ್ಮ ಪ್ರಭಾವದಿಂದ ಕೆಲಸದ ತೀವ್ರತೆ ಹೆಚ್ಚಾಗುತ್ತದೆ. ರಹಸ್ಯ ಯೋಜನೆಗಳು ಯಶಸ್ವಿಯಾಗಿ ಮುಕ್ತಾಯವಾಗಲಿದೆ. ಹಿರಿಯರಿಂದ ಒಲವು ಹೆಚ್ಚಾಗುತ್ತದೆ. ಹಣಕಾಸಿನ ಮಾತುಕತೆ ಬಂದಾಗ ಮೌನವಾಗುವಿರಿ. ವಾರ ಮಧ್ಯದಲ್ಲಿ ಒಂದು ಮಹತ್ವದ ನಿರ್ಣಯ ನಿಮಗೆ ಲಾಭ ತರುತ್ತದೆ. ಕೊನೆಯಲ್ಲಿ ಶಾಂತಿಯ ಅನುಭವವನ್ನು ಅಪೇಕ್ಷಿಸುವಿರಿ.
ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ವೃತ್ತಿಯ ಜೀವನದಲ್ಲಿ ವಿಸ್ತರಣೆಯನ್ನು ಅಪೇಕ್ಷಿಸುವಿರಿ. ವಿದೇಶ, ಶಿಕ್ಷಣ, ತರಬೇತಿಗಳಿಗೆ ಶುಭ. ಕಚೇರಿಯಲ್ಲಿ ನಿಮ್ಮ ಜ್ಞಾನಕ್ಕೆ ಗೌರವ ಪ್ರಾಪ್ತವಾಗಲಿದೆ. ದಶಮಾಧಿಪತಿ ಕಷ್ಟದಿಂದ ಕೆಲಸವನ್ನು ಮಾಡಿಸುವನು. ನಿಮ್ಮದಲ್ಲ ಕಾರ್ಯಗಳನ್ನು ಮಾಡಬೇಕಾಗುವುದು. ತಂಡದ ಜೊತೆ ಸಮಾಲೋಚನೆ ಮಾಡಿದರೆ ಯೋಜನೆ ಗಟ್ಟಿ. ಆದರೆ ಅದು ಈ ವಾರ ಸಾಧ್ಯವಾಗದು. ವಾರಾಂತ್ಯದಲ್ಲಿ ಹೊಸ ಅವಕಾಶದ ದಾರಿಗಳು ತೆರೆದುಕೊಳ್ಳುತ್ತವೆ.
ಎರಡನೇ ರಾಶಿಯವರಿಗೆ ಈ ವಾರ ಬೇಸರದ ಸ್ಥಿತಿಯಿಂದ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಈ ವಾರ ಹೊಸ ಜವಾಬ್ದಾರಿ ಬಂದರೂ ನಿಮಗೆ ಅನುಕೂಲವಾಗುತ್ತದೆ. ಅಧಿಕಾರಿಗಳ ವಿಶ್ವಾಸವನ್ನು ಹೇಗಾದರೂ ಮಾಡಿ ಪಡೆಯುವಿರಿ. ಕೆಲಸದ ಸ್ಥಾನ ನಿಮಗೆ ದೃಢವಾಗುತ್ತದೆ. ನಿಶ್ಚಲ ಮನಸ್ಸಿನಿಂದ ಮಾಡಿದ ಕೆಲಸ ಉತ್ತಮ ಫಲ ನೀಡುತ್ತದೆ. ವಾರಾಂತ್ಯದಲ್ಲಿ ಸಾರ್ಥಕ ಸುದ್ದಿ ನಿಮಗೆ ಕೇಳಿಸುವುದು.
ಈ ವಾರ ದಶಮಾಧಿಪತಿ ಏಕಾದಶಕ್ಕೆ ಬರಲಿದ್ದು ರಾಜ ಮಾನ್ಯತೆ ಸಿಗುವುದು. ಅನ್ಯರ ಪ್ರಭಾವದಿಂದ ನವೀನ ಕಲ್ಪನೆಗಳು ಬಲಗೊಳ್ಳುತ್ತವೆ. ತಂತ್ರಜ್ಞಾನ, ಸಂಶೋಧನೆಯಲ್ಲಿ, ಸೃಜನಾತ್ಮಕ ಕೆಲಸ. ಸಹೋದ್ಯೋಗಿಗಳ ಸಹಕಾರದಿಂದ ಯೋಜನೆಗಳು ಗುರಿಯತ್ತ ಗಮನ. ಸಾಂದರ್ಭಿಕ ನಿರ್ಧಾರಕ್ಕೆ ತಾಳ್ಮೆ ಅಗತ್ಯ. ವಾರದ ಕೊನೆಗೆ ಹಳೆಯ ಯೋಜನೆಯ ಪರಿಶೀಲನೆ ಅವಶ್ಯಕ.
ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ನಿಮ್ಮ ಮೃದು ಸ್ವಭಾವದಿಂದ ಗ್ರಾಹಕರ ಮೆಚ್ಚುಗೆ. ಕಲಾತ್ಮಕತೆಯ ಪ್ರದರ್ಶನ ಉದ್ಯೋಗಕ್ಕೆ ದಾರಿಯಾಗಲಿದೆ. ಹಣದ ಹರಿವು ನಿಧಾನವಾಗಿ ಬೆಳೆಸಿಕೊಳ್ಳುವಿರಿ. ತಂಡದೊಂದಿಗೆ ಸಂವಹನವನ್ನು ಸರಿಯಾಗಿ ಬೆಳೆಸಿಕೊಳ್ಳುವಿರಿ. ವಾರದ ಮಧ್ಯದಲ್ಲಿ ಹೊಸ ಚಿಕ್ಕ ಅವಕಾಶ ದೊಡ್ಡ ಫಲ ನೀಡುವುದು. ವಾರ ಅಂತ್ಯ ಶಾಂತ ಹಾಗೂ ತೃಪ್ತಿಕರವಾಗಲಿದೆ.
– ಲೋಹಿತ ಹೆಬ್ಬಾರ್ – 8762924271 (what’s app only)