AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕನಸಿನಲ್ಲಿ ಹಾವು ಕಚ್ಚಿದ್ರೆ ಅದರ ಅರ್ಥ ಏನು ಗೊತ್ತಾ?

Daily Devotional: ಕನಸಿನಲ್ಲಿ ಹಾವು ಕಚ್ಚಿದ್ರೆ ಅದರ ಅರ್ಥ ಏನು ಗೊತ್ತಾ?

ಅಕ್ಷಯ್​ ಪಲ್ಲಮಜಲು​​
|

Updated on:Dec 04, 2025 | 6:38 AM

Share

ಕನಸಿನಲ್ಲಿ ಹಾವು ಕಚ್ಚಿದ ಅನುಭವವಾದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಇದು ಕೆಲವು ಸೂಚನೆಗಳನ್ನು ನೀಡುತ್ತದೆ. ಇದು ಅನಾರೋಗ್ಯ, ಆರ್ಥಿಕ ನಷ್ಟ ಅಥವಾ ಗುಪ್ತ ಶತ್ರುಗಳ ಸಂಕೇತವಾಗಿರಬಹುದು. ಇಂತಹ ಸಂದರ್ಭದಲ್ಲಿ ಧನಾತ್ಮಕ ಚಿಂತನೆ, ಸುಬ್ರಹ್ಮಣ್ಯ ಆರಾಧನೆ ಮತ್ತು ನವನಾಗ ಸ್ತೋತ್ರ ಪಠಣದ ಮೂಲಕ ದೋಷ ನಿವಾರಣೆಗೆ ಪರಿಹಾರ ಕಂಡುಕೊಳ್ಳಬಹುದು.

ಕನಸಿನಲ್ಲಿ ಹಾವು ಕಚ್ಚಿದ (snake bite dream) ಅನುಭವವಾದರೆ, ಸ್ವಪ್ನ ಶಾಸ್ತ್ರದಲ್ಲಿ ಇದನ್ನು ವಿಭಿನ್ನ ಅರ್ಥಗಳಲ್ಲಿ ತಿಳಿಸಿದ್ದಾರೆ. ರಾತ್ರಿ 12 ಗಂಟೆಯ ನಂತರ ಹಾವು ಕಚ್ಚಿದ ಕನಸು ಬಿದ್ದರೆ, ಅದು ಅಶುಭದ ಸಂಕೇತವಾಗಿರಬಹುದು, ಇದು ಜಾಗರೂಕರಾಗಿರಬೇಕೆಂಬ ಎಚ್ಚರಿಕೆಯನ್ನು ನೀಡುತ್ತದೆ. ಇಂತಹ ಕನಸುಗಳು ಅನಾರೋಗ್ಯ, ಆರ್ಥಿಕ ನಷ್ಟ, ಕ್ರಿಯಾಶೀಲತೆಯ ಕೊರತೆ ಅಥವಾ ಗುಪ್ತ ಶತ್ರುಗಳ ಕಾಟವನ್ನು ಸೂಚಿಸಬಹುದು. ನಾಲಿಗೆ, ಹಣೆಯ ಮತ್ತು ಬೆನ್ನುಮೂಳೆಯಲ್ಲಿ ನಾಗನ ಅಂಶಗಳು ಇರುವುದರಿಂದ, ಮಾತಿನಲ್ಲಿ ಎಚ್ಚರಿಕೆ ಮತ್ತು ಶುಭ ಕಾರ್ಯಗಳಲ್ಲಿ ತೊಡಗುವುದು ಮುಖ್ಯ. ಇಂತಹ ಕನಸು ಬಿದ್ದಾಗ, ಪರಿಸ್ಥಿತಿಯನ್ನು ನಿಧಾನವಾಗಿ ನಿಭಾಯಿಸಬೇಕು ಮತ್ತು ಧನಾತ್ಮಕವಾಗಿ ಚಿಂತಿಸಬೇಕು. ಸುಬ್ರಹ್ಮಣ್ಯ ದೇವರ ಆರಾಧನೆ ಮತ್ತು “ನವನಾಗ ಸ್ತೋತ್ರ” ಪಠಣವು (ದಿನಕ್ಕೆ 21 ಬಾರಿ, 6 ದಿನಗಳವರೆಗೆ) ಈ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ನಿತ್ಯಭಕ್ತಿಯಲ್ಲಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Dec 04, 2025 06:13 AM