Daily Devotional: ಪೂಜಾಫಲ ತಕ್ಷಣಕ್ಕೆ ಸಿಗುವುದಿಲ್ಲಾ ಯಾಕೆ
ನಿತ್ಯ ಪೂಜೆ, ಜಪ, ತಪ ಮತ್ತು ದಾನಗಳ ಫಲಗಳು ತಕ್ಷಣಕ್ಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹಿಂದಿನ ಜನ್ಮದ ಕರ್ಮಗಳ ತೀವ್ರತೆಯನ್ನು ಕಡಿಮೆ ಮಾಡಲು ಪ್ರಸ್ತುತ ಸತ್ಕರ್ಮಗಳು ಸಹಕಾರಿ. ಈ ಆಚರಣೆಗಳು ವ್ಯರ್ಥವಾಗುವುದಿಲ್ಲ; ಅವು ಭವಿಷ್ಯದಲ್ಲಿ ಅಥವಾ ಈ ಜನ್ಮದ ಮುಂದಿನ ಹಂತದಲ್ಲಿ ಶುಭ ಫಲಗಳನ್ನು ತಂದುಕೊಡುತ್ತವೆ, ಮನಸ್ಸಿಗೆ ಶಾಂತಿ ನೀಡುತ್ತವೆ. ತಾಳ್ಮೆ ಮತ್ತು ಸಹನೆಯಿಂದ ಮುಂದುವರೆಯುವುದು ಮುಖ್ಯ.
ಬೆಂಗಳೂರು, ಡಿಸೆಂಬರ್ 03: ನಿತ್ಯಭಕ್ತಿ ಕಾರ್ಯಕ್ರಮಕ್ಕೆ ಸ್ವಾಗತ. ನಾವು ಮಾಡುವ ಪೂಜೆ, ಹೋಮ, ಹವನ, ಜಪ, ತಪ ಮತ್ತು ದಾನಗಳು ತಕ್ಷಣಕ್ಕೆ ಫಲ ನೀಡದೆ ಇರುವುದು ಹಲವರ ಪ್ರಶ್ನೆಯಾಗಿದೆ. ನಾವು ಯಾರಿಗೆ ತೊಂದರೆ ನೀಡದೆ ಒಳ್ಳೆಯವರಾಗಿದ್ದರೂ ಕಷ್ಟಗಳು ಏಕೆ ಎದುರಾಗುತ್ತವೆ ಎಂಬ ಚಿಂತೆಯೂ ಕಾಡುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ, ಯಾವುದೇ ಪೂಜೆ ಪುನಸ್ಕಾರಗಳು ವ್ಯರ್ಥವಾಗುವುದಿಲ್ಲ. ಮಾಡಿದ ಕರ್ಮದ ಫಲವು ತಕ್ಷಣವೇ ಸಿಗುವುದಿಲ್ಲ. ಪ್ರಸ್ತುತ ನಮ್ಮ ಜೀವನದಲ್ಲಿ ನಡೆಯುವ ಆಗುಹೋಗುಗಳು, ಐಶ್ವರ್ಯ, ಅಧಿಕಾರ ಮತ್ತು ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹಿಂದಿನ ಜನ್ಮದ ಸುಕೃತ ಅಥವಾ ಫಲವಾಗಿರುತ್ತದೆ.
ಈಗ ಮಾಡುತ್ತಿರುವ ಪೂಜೆಯು ವ್ಯರ್ಥವಲ್ಲ. ಅದು ಹಿಂದಿನ ಜನ್ಮದ ಕರ್ಮಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿ. ಜ್ಯೋತಿಷ್ಯದ ಪ್ರಕಾರ, ಹಿಂದಿನ ಕರ್ಮಗಳ ಪ್ರಭಾವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ, ನಮ್ಮ ನಿರಂತರ ಸತ್ಕರ್ಮಗಳು ಮುಂದಿನ ದಿನಗಳಲ್ಲಿ ನಮಗೆ ಶುಭ ಫಲವನ್ನು ತರುತ್ತವೆ. ಕಷ್ಟಗಳು ಬಂದಾಗ ತಾಳ್ಮೆ ಮತ್ತು ಸಹನೆ ಕಳೆದುಕೊಳ್ಳಬಾರದು. ತ್ರಿಕರಣ ಶುದ್ಧಿಯಿಂದ ಪೂಜೆ, ಪುನಸ್ಕಾರಗಳನ್ನು ಮುಂದುವರಿಸಿದರೆ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದು ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

