Horoscope Today 04 December: ಇಂದು ಈ ರಾಶಿಯವರಿಂದ ಅನೇಕರಿಗೆ ಮಾತಿನಿಂದ ಅಗೌರವ
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಚತುರ್ದಶೀ / ಪೂರ್ಣಿಮಾ ತಿಥಿ ಗುರುವಾರ ಅಭದ್ರತೆ, ನಿದ್ರಾಹೀನತೆ, ಆತುರತೆ, ಏಕಾಗ್ರತೆ, ಅನುಕೂಲ, ಆಧ್ಯಾತ್ಮಿಕತೆ, ವ್ಯಾಪಾರದಲ್ಲಿ ಸ್ಪರ್ಧಾತ್ಮಕತೆ ಇವೆಲ್ಲ ಇರಲಿದೆ. ಇಂದು ನೀವು ಎದುರಿಸಬಹುದಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ.

ಮೇಷ ರಾಶಿ:
ಭಾವನಾತ್ಮಕ ಚಡಪಡಿಕೆ ಇದ್ದರೂ ಕೆಲಸದಲ್ಲಿ ಶಾಂತಿಯಾಗಿ ಮುಂದಾದರೆ ಉತ್ತಮ ಫಲ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಇಂದು ನೀವು ಬಂಧುಗಳ ಬಳಿ ಸಾಲಕ್ಕೆ ಕೈ ಚಾಚುವು ಬೇಡ. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯನ್ನು ಪ್ರಶ್ನಿಸಬಹುದು. ಕುಟುಂಬದಲ್ಲಿ ಸಂತೈಸುವ ಮಾತು ಸಂದರ್ಭ ಸುಧಾರಿಸುತ್ತದೆ. ಸಂಬಂಧಗಳಲ್ಲಿ ನಂಬಿಕೆ ಹೆಚ್ಚಿಸಿ. ಧಾರ್ಮಿಕ ಚಿಂತನೆ ಹೆಚ್ಚಾಗುವ ಸಾಧ್ಯತೆ. ಸ್ನೇಹಿತರು ನಿಮ್ಮ ಜೊತೆಗಿರುವುದು ನಿಮಗೆ ಧೈರ್ಯ ಬರಲಿದೆ. ಯಾವದೇ ಉದ್ವೇಗಕ್ಕೆ ಒಳಗಾಗದೇ ಸಮಾಧಾನದ ಮನಃಸ್ಥಿತಿಯಲ್ಲಿ ಇರಿ. ಯಾರನ್ನೂ ಇಂದು ಸುಲಭವಾಗಿ ಹತ್ತಿರ ಸೇರಿಸಿಕೊಳ್ಳಲಾರಿರಿ.
ವೃಷಭ ರಾಶಿ:
ನಿದ್ರಾಹೀನತೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ. ಕುಟುಂಬದಲ್ಲಿ ಮಾತಿನ ಸ್ಪಷ್ಟತೆ ಅಗತ್ಯ. ಸ್ನೇಹ ವಲಯದಲ್ಲಿ ಒಳ್ಳೆಯ ಬೆಂಬಲ. ಅಧ್ಯಯನದಲ್ಲಿ ಹೊಸ ವಿಚಾರ ತಿಳಿಯುವ ಆಸಕ್ತಿ ಹೆಚ್ಚಳ. ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದು. ತಾಯಿಯ ಕಡೆಯಿಂದ ಧನದ ನಿರೀಕ್ಷೆಯಲ್ಲಿ ಇರುವಿರಿ. ಇನ್ನೊಬ್ಬರ ಸಂತೋಷಕ್ಕೆ ಸುಳ್ಳು ಹೇಳುವ ಸಾಧ್ಯತೆ ಇದೆ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸಬೇಕಾದೀತು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ. ಹೊಸ ಚಿಂತನೆಗಳು ಮೂಡಿ, ಉದ್ಯೋಗದಲ್ಲಿ ಪ್ರಶಂಸೆ. ಹಣಕಾಸಿನಲ್ಲಿ ನಿರೀಕ್ಷಿತ ಧನ ಆಗಮನ. ನಿಮ್ಮ ಕುಟುಂಬದ ವಿಚಾರವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ ಮಾಡಲು ಸಂಗಾತಿಗೆ ಹೇಳುವಿರಿ.
ಮಿಥುನ ರಾಶಿ:
ಎಲ್ಲರ ಜೊತೆ ಗಾಂಭೀರ್ಯದಿಂದ ವ್ಯವಹರಿಸುವ ದಿನ. ಕೆಲಸದಲ್ಲಿ ಪ್ರಮುಖ ಹೊಣೆಗಾರಿಕೆ. ಹಣಕಾಸಿನಲ್ಲಿ ಸ್ಥಿರತೆ. ಕುಟುಂಬದಲ್ಲಿ ಹಿರಿಯರ ಸಲಹೆ ಅನುಕೂಲ. ಆರೋಗ್ಯದಲ್ಲಿ ಗಂಟು ನೋವಿನ ಬಾಧೆ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು. ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಕುಟುಂಬಕ್ಕೆ ನಿಮ್ಮಿಂದ ಶುಭ ವಾರ್ತೆಯು ಬರಬಹುದು. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಸಂಬಂಧಗಳಲ್ಲಿ ನಿಧಾನ ಮಾತುಕತೆ ಉತ್ತಮ. ವಿದ್ಯಾರ್ಥಿಗಳಿಗೆ ದೃಢ ಮನಸ್ಸು. ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟ ಹಣವು ಸಾಕಾಗದೇ ಸಾಲವನ್ನು ಮಾಡಬೇಕಾದೀತು. ಇಂದು ನೀವು ಅಂದುಕೊಂಡಷ್ಟು ಕೆಲಸವು ಆಗುವತನಕ ಫಲವನ್ನು ಬಿಡುವುದಿಲ್ಲ.
ಕರ್ಕಾಟಕ ರಾಶಿ:
ಹಣಕಾಸಿನ ಲಾಭಕ್ಕಾಗಿ ಲಘು ಪ್ರಯತ್ನ. ಕುಟುಂಬದಲ್ಲಿ ಸಂತೋಷದ ವಿಚಾರ. ಸಂಬಂಧಗಳಲ್ಲಿ ಸತ್ಯತೆ ಮೆಚ್ಚುಗೆ ತರುತ್ತದೆ. ದೀರ್ಘ ಪ್ರವಾಸ ಬದಲಾವಣೆಯ ಚರ್ಚೆ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ವಿಳಂಬವಾಗಿ ನಡೆಯುವ ವಿವಾಹಕ್ಕೆ ಸಂತೋಷವಿರಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ದಾಂಪತ್ಯದಲ್ಲಿ ಬರುವ ಕಲಹವನ್ನು ಸುಮ್ಮನಿದ್ದು ಶಾಂಯಗೊಳಿಸಿ. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಸಾಧ್ಯವಾಗದು. ಸಂಕೋಚದ ಸ್ವಭಾವದಿಂದ ನೀವು ಬಂದ ಅವಕಾಶವನ್ನು ಕೈ ಬಿಡುವಿರಿ. ಕೆಲವರು ನಿಮ್ಮ ಮಾತನ್ನು ವಿರೋಧಿಸುವರು. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು. ಇಂದು ಸಾಮಾಜಿಕ ಗೌರವವನ್ನು ಬಯಸುವಿರಿ. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅದೇ ಉತ್ತಮವಾದುದೂ ಕೂಡ. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ.
ಸಿಂಹ ರಾಶಿ:
ಹಣಕಾಸಿನಲ್ಲಿ ಅನಿರೀಕ್ಷಿತ ಲಾಭ. ಕುಟುಂಬದಲ್ಲಿ ಒಬ್ಬರ ನೆರವು ಸಿಗುತ್ತದೆ. ಆರೋಗ್ಯದಲ್ಲಿ ರಕ್ತದೊತ್ತಡ ಗಮನಿಸಬೇಕು. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು. ವಿದ್ಯಾಭ್ಯಾಸದ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳುವಿರಿ. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಪಕ್ಷಪಾತ ಮಾಡದೇ ನೀವು ಸಮಾನಭಾವದಿಂದ ಕಾಣಬೇಕಾದೀತು. ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ. ನಿಮಗೆ ಇಂದು ಕಾರ್ಯಗಳನ್ನು ಮಾಡಿಸಲು ಆಗದು. ನಿಮ್ಮ ಮಾತನ್ನು ಯಾರೂ ಕೇಳರು. ಸಂಬಂಧಗಳಲ್ಲಿ ಆಳವಾದ ಮಾತುಕತೆ ಗಟ್ಟಿತನ ತರುತ್ತದೆ. ಆರೋಗ್ಯದಲ್ಲಿ ತೂಕ ನಿಯಂತ್ರಣಕ್ಕೆ ಒತ್ತು. ವಾಹನ ಖರೀದಿಸಲು ನಿಮಗೆ ಯಾರಾದರೂ ಒತ್ತಾಯಮಾಡಬಹುದು.
ಕನ್ಯಾ ರಾಶಿ:
ಕೆಲಸದಲ್ಲಿ ವಿಳಂಬ ಇದ್ದರೂ ಅಂತಿಮ ಫಲ ಸೂಕ್ತ. ಹಣಕಾಸು ವ್ಯವಹಾರದಲ್ಲಿ ಜಾಗ್ರತೆ. ಕುಟುಂಬದಲ್ಲಿ ಹಳೆಯ ಅಸಮಾಧಾನ ನಿವಾರಣೆ. ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ವಿನ್ಯಾಸಕಾರರಿಗೆ ಪೂರಕವಾದ ಕಾರ್ಯವು ಸಿಗುವುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಸತ್ಯವನ್ನು ನೀವು ಮಾರ್ಮಿಕವಾಗಿ ಹೇಳುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ. ಎಲ್ಲ ವಿಚಾರಕ್ಕೂ ನೀವು ಇನ್ನೊಬ್ಬರನ್ನು ಹಗುರಾಗಿ ಕಾಣುವಿರಿ. ಬಿಡುವಿನ ಸಮಯದಲ್ಲಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಸ್ವಂತ ಉದ್ಯಮವನ್ನು ಆರಂಭಿಸಲು ಚಿಂತಿಸುವಿರಿ. ಸಂಬಂಧಗಳಲ್ಲಿ ಅಭಿಮಾನ ಹೆಚ್ಚಳ. ಕಲೆ, ಸೃಜನಶೀಲತೆಯನ್ನು ಮುಂದುವರಿಸಲು ಸೂಕ್ತ ಸಮಯ. ನಿಮ್ಮ ಕೆಲವು ಮಾತುಗಳು ಕುಟುಂಬದ ಗೌರವವನ್ನು ತಗ್ಗಿಸೀತು. ಹೆಚ್ಚು ಆಹಾರದ ಸೇವೆಯಿಂದ ಕಷ್ಟವಾದೀತು. ನಿಮ್ಮ ಅಯ್ಕೆಯ ಉದ್ಯೋಗವೇ ನಿಮ್ಮನ್ನು ಪ್ರಯಾಣ ಮಾಡಿಸೀತು.
ತುಲಾ ರಾಶಿ:
ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯ ವೃದ್ಧಿ. ಹಣಕಾಸಿನಲ್ಲಿ ಖರ್ಚು ನಿಯಂತ್ರಿಸಬೇಕು. ಹೊಸ ಯೋಜನೆಗಳನ್ನು ನಿಧಾನವಾಗಿ ಆರಂಭಿಸಿದರೆ ಯಶಸ್ಸು. ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗುವುದು. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು. ಇಂದು ನೀವು ಕೃತಜ್ಞತೆಯನ್ನು ಮರೆಯುವಿರಿ. ಸಂಬಂಧಗಳ ಮಹತ್ತ್ವವನ್ನು ನೀವು ಅರಿತುಕೊಳ್ಳಲಾರಿರಿ. ಉದ್ಯೋಗದಲ್ಲಿ ನಿರ್ಧಾರಗಳಿಗೆ ಮೆಚ್ಚುಗೆ. ವ್ಯವಹಾರದಲ್ಲಿ ಸಣ್ಣ ಲಾಭ. ಕುಟುಂಬದಲ್ಲಿ ಗೊಂದಲ ನಿವಾರಣೆಗೆ ಶಾಂತಿಯುತ ಮಾತು. ಅಧಿಕಾರಿಗಳು ನಿಮಗೆ ತೊಂದರೆಯನ್ನು ಕೊಡಬಹುದು. ಯಾರೂ ನಿಮ್ಮ ಮಾತಿಗೆ ಲಕ್ಷ್ಯ ಕೊಡದೇಹೋಗಬಹುದು.
ವೃಶ್ಚಿಕ ರಾಶಿ:
ಆತ್ಮವಿಶ್ವಾಸ ತಾನಾಗಿಯೇ ಹೆಚ್ಚುವ ದಿನ. ನಾಯಕತ್ವ ಸ್ವಭಾವ ಸ್ಪಷ್ಟವಾಗುವುದು. ಹೊಸ ಕಾರ್ಯದಲ್ಲಿ ಶುಭಾರಂಭ. ಹಣಕಾಸು ಲಾಭ ಸಾಧ್ಯ. ಕುಟುಂಬದಲ್ಲಿ ಹಳೆಯ ವಿಷಯ ಪರಿಹಾರ. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ನಿಮ್ಮ ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ ಮೇಲೆ ಆಗದೇಹೋದೀತು. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ನಿಮ್ಮ ಇಂದಿನ ಮುಖ್ಯ ಕೆಲಸವೇ ಗೌಣವಾಗಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲ್ಲು ಪತ್ನಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗದ ಪಡೆಯಲು ನೀವು ಕಾದು ಸಮಯವನ್ನು ಹಾಳು ಮಾಡುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಉತ್ತಮ. ಕೂಡಿಬರುವ ವಿವಾಹಭಾಗ್ಯವನ್ನು ನೀವು ಒಪ್ಪಿಕೊಳ್ಳುವಿರಿ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು. ಆರೋಗ್ಯ ಉತ್ತಮವಾಗಿದ್ದರೂ ಹೆಚ್ಚು ಮಾತನಾಡುವುದು ದಣಿವು ತರಬಹುದು. ಸಂಬಂಧಗಳಲ್ಲಿ ಬುದ್ಧಿವಂತಿಕೆ ತೋರಿದರೆ ಬಂಧನ ಹಾಳಾಗಬಹುದು.
ಧನು ರಾಶಿ:
ಮನಸ್ಸಿಗೆ ನೆಮ್ಮದಿ ಹೆಚ್ಚಾಗಿ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ. ಮನೆಮಂದಿಯೊಂದಿಗೆ ಸುಖಕರ ಕ್ಷಣವನ್ನು ಕಳೆಯುವಿರಿ. ವ್ಯವಹಾರದಲ್ಲಿ ಸ್ವಲ್ಪ ನಿಧಾನವಾದರೂ ಸ್ಥಿರತೆ. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಅನಾಥಪ್ರಜ್ಞೆಯು ಕಾಡಲಿದ್ದು ದುಃಖವನ್ನು ನಿಯಂತ್ರಿಸುವಿರಿ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಕಡಿಮೆ ಆದೀತು. ಅಸಭ್ಯ ಮಾತುಗಳಿಂದ ನಿಮ್ಮ ನಡವಳಿಕೆಯು ಗೊತ್ತಾಗುವುದು. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಾಗುವುದರಿಂದ ಮಾತಿನಲ್ಲಿ ಮೃದುವಾಗಿರಬೇಕು. ಸರಿಯಾಗಿ ಯೋಜನೆ ಮಾಡಿಕೊಳ್ಳದೇ ಕಾರ್ಯವನ್ನು ಆರಂಭಿಸುವಿರಿ. ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಗೊತ್ತಾಗುವುದು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.
ಮಕರ ರಾಶಿ:
ಭವಿಷ್ಯದ ಆಲೋಚನೆಯ ಸಾಮರ್ಥ್ಯ ಹೆಚ್ಚು. ಕೆಲಸಗಳಲ್ಲಿ ಹೊಸ ಚಿಂತನೆಗಳು ಮೂಡಿ ಫಲದಾಯಕವಾಗುವುದು. ಕುಟುಂಬದಲ್ಲಿ ಒಬ್ಬರ ಮಾತಿಗೆ ಇನ್ನೊಬ್ಬರು ಒಪ್ಪದ ಕ್ಷಣ ಬಂದರೂ ಸಮಾಲೋಚನೆ ಶಾಂತಿ ತರುತ್ತದೆ. ಹೃದಯವನ್ನು ಅದು ಪ್ರವೇಶಿಸಲಿ, ತಲೆಯನ್ನಲ್ಲ. ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಮನಸ್ಸಿನಲ್ಲಿ ಯಾವುದಾದರೂ ಭೀತಿಯು ಕಾಡಬಹುದು. ಹಣಕಾಸು ಹೂಡಿಕೆಯಲ್ಲಿ ಎಚ್ಚರ. ಆರೋಗ್ಯದಲ್ಲಿ ತಲೆನೋವು ಸಾಧ್ಯ. ಇಂದು ಸ್ನೇಹ ವಲಯದಲ್ಲಿ ಹೊಸ ಪರಿಚಯ. ನಿಮ್ಮ ಬಗ್ಗೆ ನೀವು ಸ್ವಲ್ಪ ಅವಲೋಕನ ಮಾಡಿಕೊಳ್ಳಿ. ಎಲ್ಲವನ್ನೂ ನೀವು ಅತಿಯಾಗಿಸುವಿರಿ.
ಕುಂಭ ರಾಶಿ:
ಸಂಬಂಧಗಳಲ್ಲಿ ಅತಿಯಾದ ನಿರೀಕ್ಷೆ ತಪ್ಪಿಸಿ, ನಂಬಿಕೆ ಹೆಚ್ಚಿಸಿದರೆ ಉತ್ತಮ ಫಲ. ಹೊಸ ಯೋಜನೆಗಳಿಗೆ ಅನುಕೂಲ. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಆಪ್ತರ ಸಹವಾಸದಿಂದ ಉತ್ತಮ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ಇಂದು ಕಛೇರಿಯಲ್ಲಿ ಆದ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ. ವ್ಯವಹಾರದಲ್ಲಿ ಲಾಭದ ಸಂಕೇತ. ಕುಟುಂಬದಲ್ಲಿ ಆತ್ಮೀಯರ ಬೆಂಬಲ. ಆರೋಗ್ಯದಲ್ಲಿ ಜೀರ್ಣಕ್ರಿಯೆ ಗಮನಿಸಬೇಕು. ತಮಾಷೆಯ ಮಾತುಗಳೂ ನಿಮಗೆ ಸರಿಯಾದ ತೊಂದರೆ ತಂದೀತು. ಒಂದೇ ವಿಚಾರವನ್ನು ಹಲವರಿಂದ ಕೇಳುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು.
ಮೀನ ರಾಶಿ:
ಚುರುಕು ಹೆಚ್ಚಾಗಿ ಕೆಲಸಗಳಲ್ಲಿ ವೇಗ ಕಾಣುತ್ತದೆ. ವ್ಯವಹಾರದಲ್ಲಿ ಹೊಸ ಸಂಧಿಗಳು ದೊರೆಯಬಹುದು. ಕುಟುಂಬದಲ್ಲಿ ಅಲ್ಪ ಉದ್ವಿಗ್ನತೆ ಇದ್ದರೂ ಮಾತನಾಡುವಲ್ಲಿ ಸಮತೋಲನೆ ತರಿದರೆ ಸುಗಮ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಶಿಕ್ಷಣದಲ್ಲಿ ಮನಸ್ಸು ಏಕಾಗ್ರವಾಗುವುದು. ಆರೋಗ್ಯದಲ್ಲಿ ದೇಹದ ಜಡತೆಗೆ ಎಚ್ಚರ. ಹಣಕಾಸು ವ್ಯವಹಾರಗಳಲ್ಲಿ ಜಾಣ್ಮೆ ಅವಶ್ಯ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡದಿಂದ ಅದು ಸಾಧ್ಯವಾಗದು. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು. ನಿಮ್ಮ ಸಂತಸಕ್ಕೆ ಮಿತಿ ಇರದು. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ಮುಳುಗುವಿರಿ.
04 ಡಿಸೆಂಬರ್ 2025ರ ಗುರುವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಚತುರ್ದಶೀ / ಪೂರ್ಣಿಮಾ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವರಿಯಾನ್, ಕರಣ : ಗರಜ, ಸೂರ್ಯೋದಯ – 06 – 28 am, ಸೂರ್ಯಾಸ್ತ – 05 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:35 – 15:00, ಯಮಗಂಡ ಕಾಲ 06:29 – 07:54, ಗುಳಿಕ ಕಾಲ 09:19 – 10:45
-ಲೋಹಿತ ಹೆಬ್ಬಾರ್-8762924271 (what’s app only)




