Lunar Eclipse: ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹಣದ ಪ್ರಭಾವ ಹೇಗಿರುತ್ತದೆ?

ನ. 8 ರಾಹುಗ್ರಸ್ತ ಚಂದ್ರಗ್ರಹಣ ಯಾವ ರಾಶಿ ಮೇಲೆ ಪರಿಣಾಮ ಬೀಳುತ್ತೆ? ಚಂದ್ರಗಹಣದ ಸಮಯದಲ್ಲಿ ದೂರದ ಪ್ರಯಾಣ ಒಳ್ಳಯದೇ ? ಗ್ರಹಣದ ದಿನ ಬೆಲೆಬಾಳುವ ಒಡವೆ, ವಸ್ತು ಅನ್ಯರಿಗೆ ಕೊಡುವುದಕ್ಕಿಂತ ಮುಂಚೆ ಎಚ್ಚರವಾಗಿರಿ.

TV9 Web
| Updated By: Vinay Bhat

Updated on:Nov 08, 2022 | 7:44 AM

ರಾಹುಗ್ರಸ್ತ ಚಂದ್ರ ಗ್ರಹಣ ನವೆಂಬರ್ 8ನೇ ತಾರೀಕಿನಂದು ಇರುವುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಆ ದಿನ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣ ಇದೆ. ನಿಮಗೆ ಗೊತ್ತಿರಲಿ, ಚಂದ್ರ ಗ್ರಹಣವು ಹುಣ್ಣಿಮೆಗಳಲ್ಲಿ ಮತ್ತು ಸೂರ್ಯ ಗ್ರಹಣ ಅಮಾವಾಸ್ಯೆಗಳಲ್ಲಿ ಸಂಭವಿಸುತ್ತದೆ.  ಗ್ರಹಣ ಸ್ಪರ್ಶ ಕಾಲ: ಮಧ್ಯಾಹ್ನ 2.38, ಮಧ್ಯ ಕಾಲ: 4.29, ಮೋಕ್ಷ ಕಾಲ: 6.19. ಚಂದ್ರ ಗ್ರಹಣದಿಂದ ನಿಮ್ಮ ರಾಶಿ ಮೇಲೆ ಏನು ಪರಿಣಾಮ ಬೀರುತ್ತೆ ತಿಳಿದುಕೊಳ್ಳಿ.

Chandra Grahan Impact on 12 Zodiac Signs, Lunar Eclipse Details in Kannada

1 / 14
ಮೇಷ :
ಈ ಬಾರಿಯ ಚಂದ್ರ ಗ್ರಹಣವು ನಿಮ್ಮ ರಾಶಿಯಲ್ಲೇ ಸಂಭವಿಸಲಿದ್ದು, ಆರೋಗ್ಯ ವಿಚಾರಕ್ಕೆ ಪ್ರಮುಖವಾದಂಥ ಆದ್ಯತೆ ನೀಡಬೇಕು. ಗ್ರಹಣದ ದಿನ ದೂರ ಪ್ರಯಾಣವನ್ನು ಮಾಡದಿರುವುದು ಉತ್ತಮ. ಇನ್ನು ಆರಂಭದಲ್ಲೇ ಹೇಳಿದಂತೆ ನಿಮ್ಮ ರಾಶಿಯಲ್ಲೇ ಗ್ರಹಣ ಸಂಭವಿಸುವುದರಿಂದ ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಿ. ಈಗಾಗಲೇ ಗಂಭೀರ ಸ್ವರೂಪದ ಅಥವಾ ದೀರ್ಘಕಾಲದ ಕಾಯಿಲೆ- ಕಸಾಲೆಗಳಿಂದ ಬಳಲುತ್ತಿದ್ದಲ್ಲಿ ಅದು ಹೆಚ್ಚಾಗುವ ಅವಕಾಶಗಳಿವೆ.

Chandra Grahan Impact on 12 Zodiac Signs, Lunar Eclipse Details in Kannada

2 / 14
Chandra Grahan Impact on 12 Zodiac Signs, Lunar Eclipse Details in Kannada

ವೃಷಭ: ಈ ಬಾರಿಯ ಗ್ರಹಣವು ನಿಮ್ಮ ರಾಶಿಗೆ ಹನ್ನೆರಡನೇ ಸ್ಥಾನದಲ್ಲಿ ಸಂಭವಿಸುತ್ತಿದ್ದು, ಇದು ವ್ಯಯ ಸ್ಥಾನವಾಗುತ್ತದೆ. ಹೆಸರೇ ಸೂಚಿಸುವಂತೆ ನಷ್ಟ- ಹಾನಿಯನ್ನು ತಂದೊಡ್ಡುವ ಎಲ್ಲ ಸಾಧ್ಯತೆ ಇದೆ. ಚಿನ್ನ- ಬೆಳ್ಳಿ ಸೇರಿದಂತೆ ನಿಮ್ಮ ಬೆಲೆ ಬಾಳುವ ವಸ್ತುಗಳು, ದಾಖಲೆ- ಕಾಗದ ಪತ್ರಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ಅದೆಷ್ಟೇ ಬಿಡುವಿಲ್ಲದ ಕೆಲಸ ಅಂತಿದ್ದರೂ ಬೆಲೆಬಾಳುವ ವಸ್ತುಗಳನ್ನು ಇತರರನ್ನು ನಂಬಿ, ನೀಡಬೇಡಿ.

3 / 14
Chandra Grahan Impact on 12 Zodiac Signs, Lunar Eclipse Details in Kannada

ಮಿಥುನ: ಈ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ ಈ ಬಾರಿಯ ಚಂದ್ರ ಗ್ರಹಣ. ಏಕೆಂದರೆ ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ, ಅಂದರೆ ಲಾಭ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ವ್ಯಾಪಾರ- ವ್ಯವಹಾರಗಳಲ್ಲಿ ಲಾಭದ ಪ್ರಮಾಣವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಲಾಭ ಬರುವ ಸೂಚನೆ ಇದಲ್ಲಿ ಅದು ಬರುವುದು ಒಂದಿಷ್ಟು ತಡ ಆಗಬಹುದು. ಇನ್ನು ಈ ಹಿಂದೆ ನೀವು ಮಾಡಿದ್ದ ಷೇರು, ಮ್ಯೂಚುವಲ್ ಫಂಡ್ಸ್‌ ಹೂಡಿಕೆಗೆ ಈಗ ಲಾಭ ಬರುತ್ತದೆ.

4 / 14
Chandra Grahan Impact on 12 Zodiac Signs, Lunar Eclipse Details in Kannada

ಕರ್ಕಾಟಕ: ನಿಮ್ಮದೇ ರಾಶ್ಯಾಧಿಪತಿಯಾದ ಚಂದ್ರನು ಹತ್ತನೇ ಸ್ಥಾನದಲ್ಲಿ, ಅಂದರೆ ಕರ್ಮ ಸ್ಥಾನದಲ್ಲಿ ಇರುತ್ತದೆ. ಈ ಬಾರಿಯ ರಾಹುಗ್ರಸ್ತ ಚಂದ್ರ ಗ್ರಹಣದಿಂದ ಉದ್ಯೋಗದಲ್ಲಿ ಇಷ್ಟು ಸಮಯ ನೀವು ನಿರೀಕ್ಷೆ ಮಾಡುತ್ತಿದ್ದ ಪ್ರಮೋಷನ್, ವೇತನ ಹೆಚ್ಚಳ ಇತ್ಯಾದಿ ಅನುಕೂಲಗಳು ದೊರೆಯುವ ಅವಕಾಶಗಳಿವೆ. ಅದೇ ರೀತಿ ಈ ಹಿಂದೆ ನೀವು ಪಟ್ಟಿದ್ದ ಶ್ರಮವನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತ ಆಗಲಿದೆ. ಹತ್ತನೇ ಮನೆಯು ಉದ್ಯೋಗದ ಜತೆ ಕರ್ಮ ಸ್ಥಾನವೂ ಹೌದು. ಆದ್ದರಿಂದ ನಿಮ್ಮಿಂದ ಸತ್ಕರ್ಮಗಳಾಗುತ್ತವೆ.

5 / 14
Chandra Grahan Impact on 12 Zodiac Signs, Lunar Eclipse Details in Kannada

ಸಿಂಹ: ನಿಮ್ಮ ರಾಶಿಗೆ ಹನ್ನೆರಡನೇ ಮನೆಯ ಅಧಿಪತಿ ಚಂದ್ರ. ಈಗ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಇರುತ್ತದೆ. ಆದ್ದರಿಂದ ನಿಮ್ಮ ತಂದೆಯ ಹಾಗೂ ತಂದೆಗೆ ಸಮಾನ ಆದವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ. ಒಂದು ಕಡೆ ಪಿತ್ರಾರ್ಜಿತ ಆಸ್ತಿ ವಿಚಾರ, ಭೂಮಿಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥ ಆಗುವ ಅವಕಾಶಗಳಂತೂ ಇದ್ದೇ ಇದೆ. ಇದರ ಜತೆಗೆ ಈಗಾಗಲೇ ಕೋರ್ಟ್- ಕಟ್ಲೆಗಳಲ್ಲಿ ಇರುವ ವ್ಯಾಜ್ಯಗಳು ಸಂಧಾನದ ಮೂಲಕ ಪರಿಹರಿಸಿಕೊಳ್ಳುವ ಮಾರ್ಗ ದೊರೆಯಲಿದೆ.

6 / 14
Chandra Grahan Impact on 12 Zodiac Signs, Lunar Eclipse Details in Kannada

ಕನ್ಯಾ: ಈ ಬಾರಿಯ ಚಂದ್ರ ಗ್ರಹಣದ ಸಮಯದಲ್ಲಿ ಎಷ್ಟು ಎಚ್ಚರದಿಂದ ನೀವಿದ್ದರೂ ಸಾಲದು. ಏಕೆಂದರೆ ನಿಮ್ಮ ಆಯುಷ್ಯ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿದೆ. ಅಂದರೆ, ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ. ಆ ಕಾರಣಕ್ಕೆ ಕಡ್ಡಾಯವಾಗಿ ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ವಿಪರೀತ ಸಾಹಸಗಳನ್ನು ಮಾಡಬೇಡಿ. ಈ ಸಮಯದಲ್ಲಿ ದೈವಭಕ್ತಿ ಕೂಡ ಕಡಿಮೆ ಆಗುತ್ತದೆ. ಯಾರ ಮೇಲೂ ಸಿಟ್ಟಾಗಬೇಡಿ. ಬ್ಯೂಟಿ ಪಾರ್ಲರ್‌ಗೆ ಹೋಗುವವರು, ಹೊಸ ಹೊಸ ಉತ್ಪನ್ನಗಳನ್ನು ಬಳಸುವವರು ಚರ್ಮದ ಆರೋಗ್ದ ಕಡೆ ಲಕ್ಷ್ಯ ವಹಿಸಿ.

7 / 14
Chandra Grahan Impact on 12 Zodiac Signs, Lunar Eclipse Details in Kannada

ತುಲಾ: ನಿಮ್ಮ ರಾಶಿಯಿಂದ ಈಗ ಗ್ರಹಣ ಸಂಭವಿಸುತ್ತಿರುವ ಮೇಷ ರಾಶಿಯು ಏಳನೆ ಮನೆ ಆಗುತ್ತದೆ. ಅಂದರೆ ಅದು ಕಳತ್ರ ಸ್ಥಾನ. ಮನೆಯಲ್ಲಿ ಸಂಗಾತಿ ಜತೆಗೆ ಮಾತನಾಡುವಾಗ ಗೌರವ ನೀಡಿ. ಭಿನ್ನಾಭಿಪ್ರಾಯಗಳು, ಕೌಟುಂಬಿಕ ಕಲಹ ಬಾರದಂತೆ ಗಮನ ಹರಿಸಿ. ಆದರೆ ಇದರಲ್ಲಿ ಅನುಕೂಲ ಏನೆಂದರೆ, ವಿದೇಶಗಳಿಂದ ಅಥವಾ ದೂರದ ಪ್ರದೇಶಗಳಿಂದ ಶುಭ ಸುದ್ದಿಯನ್ನು ನೀವು ನಿರೀಕ್ಷೆ ಮಾಡುತ್ತಿದ್ದಲ್ಲಿ ಬರಲಿದೆ. ಮಿಶ್ರ ಫಲಿತಾಂಶವನ್ನು ಅನುಭವಿಸುತ್ತೀರಿ.

8 / 14
Chandra Grahan Impact on 12 Zodiac Signs, Lunar Eclipse Details in Kannada

ವೃಶ್ಚಿಕ: ಈ ಬಾರಿಯ ಖಂಡಗ್ರಾಸ ಚಂದ್ರ ಗ್ರಹಣವು ಆರನೇ ರಾಶಿಯಲ್ಲಿ ಸಂಭವಿಸಲಿದೆ. ಹೀಗೆ ಆರನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಅದು ರಿಪು ಅಥವಾ ಶತ್ರು ಸ್ಥಾನ. ನಿಮ್ಮ ಶತ್ರುಗಳು ತಮ್ಮತಮ್ಮಲ್ಲೇ ಭಾರೀ ಗೊಂದಲಕ್ಕೆ ಈಡಾಗುತ್ತಾರೆ. ಇನ್ನು ನೀವೇನಾದರೂ ಆಸ್ತಿಯನ್ನು ಮಾರಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ನಿರ್ಧಾರ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ.

9 / 14
Chandra Grahan Impact on 12 Zodiac Signs, Lunar Eclipse Details in Kannada

ಧನುಸ್ಸು: ಮೇಷ ರಾಶಿಯಲ್ಲಿ ಆಗುತ್ತಿರುವ ಈಗಿನ ಗ್ರಹಣವು ನಿಮ್ಮ ರಾಶಿಯಿಂದ ಐದನೇ ಮನೆ ಆಗುತ್ತದೆ. ಅಂದರೆ ಅದು ಮಕ್ಕಳು ಹಾಗೂ ಪೂರ್ವ ಪುಣ್ಯ ಸ್ಥಾನವನ್ನು ಪ್ರತಿನಿಧಿಸುತ್ತದೆ. ಈ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ಮಕ್ಕಳ ವಿಚಾರದಲ್ಲಿ, ಅದರಲ್ಲೂ ಅವರು ಯಾರ ಜತೆ ಸ್ನೇಹದಿಂದ ಇದ್ದಾರೆ, ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಜಾಗ್ರತೆ ವಹಿಸಿ. ಅದೇ ವೇಳೆ ಪೂರ್ವ ಪುಣ್ಯ ಸ್ಥಾನವಾದ್ದರಿಂದ ನೀವು ಇದಕ್ಕೂ ಮುನ್ನ ಮಾಡಿದ್ದ ಒಳ್ಳೆ ಕೆಲಸಗಳಿಂದ ಈಗ ಲಾಭ ಆಗಲಿದೆ.

10 / 14
Chandra Grahan Impact on 12 Zodiac Signs, Lunar Eclipse Details in Kannada

ಮಕರ: ನಿಮ್ಮ ರಾಶಿಗೆ ಏಳನೇ ಸ್ಥಾನದ ಅಧಿಪತಿ ಚಂದ್ರ, ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಇದು ಸುಖ ಸ್ಥಾನ ಹಾಗೂ ಅದೇ ರೀತಿ ತಾಯಿಯನ್ನು ಪ್ರತಿನಿಧಿಸುತ್ತದೆ. ನಿಮಗೆ ಗೊತ್ತಿರಲಿ, ಚಂದ್ರ ಹೇಗೆ ಮನೋಕಾರಕನೋ ಅದೇ ರೀತಿ ಜ್ಯೋತಿಷ್ಯದಲ್ಲಿ ಚಂದ್ರನನ್ನು ತಾಯಿ ಎನ್ನುತ್ತಾರೆ. ಆ ಕಾರಣಕ್ಕೆ ತಾಯಿಯ ಆರೋಗ್ಯದ ಕಡೆಗೆ ಗಮನ ವಹಿಸಿ. ಮಾಡುವ ಕೆಲಸದಲ್ಲಿ ಏಕಾಗ್ರತೆ ಮುಖ್ಯ. ನಿಮ್ಮಿಂದ ಆಗದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಮಾತು ನೀಡದಿರಿ.

11 / 14
Chandra Grahan Impact on 12 Zodiac Signs, Lunar Eclipse Details in Kannada

ಕುಂಭ: ನಿಮ್ಮ ರಾಶಿಗೆ ಆರನೇ ಸ್ಥಾನಾಧಿಪತಿ ಚಂದ್ರ. ಇದೀಗ ಮೂರನೇ ಮನೆಯಾದ ಮೇಷದಲ್ಲಿ ಗ್ರಹಣ ಸಂಭವಿಸುತ್ತಿದೆ. ಈ ಸ್ಥಾನ ಸೋದರ- ಸೋದರಿಯರನ್ನು ಪ್ರತಿನಿಧಿಸುತ್ತದೆ. ನಿಮಗೆ ಅವರಿಂದ ಹಣಕಾಸು ಅನುಕೂಲ ಆಗಬಹುದು ಅಥವಾ ಅವಕಾಶಗಳ ಬಗ್ಗೆ ಅವರ ಮೂಲಕವಾಗಿ ಮಾಹಿತಿ ದೊರೆಯಬಹುದು. ಸಾಡೇಸಾತ್ ಶನಿಯ ಪ್ರಭಾವದ ಮಧ್ಯೆ ಈಗಿನ ಗ್ರಹಣದಿಂದ ಒದಿಷ್ಟು ಹಣಕಾಸು ಅನುಕೂಲ ಆಗಲಿದೆ.

12 / 14
Chandra Grahan Impact on 12 Zodiac Signs, Lunar Eclipse Details in Kannada

ಮೀನ: ನಿಮ್ಮ ರಾಶಿಗೆ ಐದನೇ ಮನೆಯಾದ ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಇದೀಗ ಖಂಡಗ್ರಾಸ ಚಂದ್ರಗ್ರಹಣ ಎರಡನೇ ಮನೆಯಾದ ಮೇಷ ರಾಶಿಯಲ್ಲಿ ಸಂಭವಿಸಲಿದೆ. ಆದ್ದರಿಂದ ಹಣ ಬರುವುದಕ್ಕೆ ದಾರಿ ಕಂಡಂತೆಯೇ ಆಗುತ್ತದೆ, ಬರುತ್ತದೆ. ಅದನ್ನು ಸರಿಯಾಗಿ ವಿನಿಯೋಗ ಮಾಡುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಪ್ರತಿಷ್ಠೆಗಾಗಿ ಎಲ್ಲೆಂದರಲ್ಲಿ ಖರ್ಚು ಮಾಡುವ ಅವಕಾಶಗಳು ಇವೆ.

13 / 14
Chandra Grahan Impact on 12 Zodiac Signs, Lunar Eclipse Details in Kannada

4 ರಾಶಿಯವರು ಶುಭ, 4 ರಾಶಿಯವರು ಅಶುಭ ಹಾಗೂ 4 ರಾಶಿಯವರು ಮಿಶ್ರ ಫಲವನ್ನು ಈ ಗ್ರಹಣದಿಂದ ಪಡೆಯಲಿದ್ದಾರೆ. ರಾಹುಗ್ರಸ್ತ ಚಂದ್ರಗ್ರಹಣ ಇರುವ ಕಾರಣಕ್ಕೆ ರಾಹುವಿನ ಸಲುವಾಗಿ ಉದ್ದಿನ ಬೇಳೆ, ಚಂದ್ರನಿಗೆ ಸಂಬಂಧಿಸಿದಂತೆ ಭತ್ತ ಅಥವಾ ಅಕ್ಕಿ, ಇದರ ಜತೆಗೆ ಚಂದ್ರಬಿಂಬವನ್ನು ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ದಕ್ಷಿಣೆ ಸಹಿತವಾಗಿ ದಾನ ಮಾಡಬೇಕು.

14 / 14

Published On - 5:52 pm, Mon, 7 November 22

Follow us