AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ಅಪಘಾತಗಳು ಸಂಭವಿಸಬಹುದು-ಎಚ್ಚರ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಏಪ್ರಿಲ್ 17 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಅಪಘಾತಗಳು ಸಂಭವಿಸಬಹುದು-ಎಚ್ಚರ
ದಿನಭವಿಷ್ಯ
TV9 Web
| Edited By: |

Updated on: Apr 17, 2024 | 12:45 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಶೂಲಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:32 ರಿಂದ ಸಂಜೆ 02:06ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:52 ರಿಂದ 09:25 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:59 ರಿಂದ ಮಧ್ಯಾಹ್ನ 12:32ರ ವರೆಗೆ.

ಧನು ರಾಶಿ : ಹೊಸ ವಸ್ತುಗಳ ಮೇಲೆ ಪ್ರೀತಿ ಇರುವುದು. ಬಹಳ ಜತನದಿಂದ ನೋಡಿಕೊಳ್ಳುವಿರಿ. ವಿವಾಹವು ವಿಳಂಬವೆಂದು ಅನ್ನಿಸಬಹುದು. ಯಾರ ಬಳಿಯೂ ಹೇಳಿಕೊಳ್ಳಲಾಗದು. ತಂದೆಯ ಜೊತೆ ಜಗಳವನ್ನು ಮಾಡುವಿರಿ. ಮನೆಯಲ್ಲಿನ ಸಮಸ್ಯೆಗಳು ಹೆಚ್ಚಾದಂತೆ ತೋರುವುದು. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ಮಾಡುವವರಿಗೆ ಶುಭದಿನ ಇಂದು. ಆತ್ಮಪ್ರಶಂಸೆಗೆ ಸರಿಯಾಗಿ ಕಾರಣವಿರಲಿ. ನಿಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸ ಕಡಿಮೆ ಆಗಲಿದೆ. ಹಿತಶತ್ರುಗಳ ಚಾಡಿ ಮಾತಿನಿಂದ ಒಳ್ಳೆಯ ಅವಕಾಶಗಳು ಕೈ ತಪ್ಪಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ.‌ ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಪ್ರೇಮ ವಿವಾಹವು ನಿಮಗೆ ಖುಷಿಕೊಡದು. ಯಾರನ್ನಾದರೂ ಪ್ರೀತಿಸುವ ಮನಸ್ಸಾಗುವುದು.

ಮಕರ ರಾಶಿ : ಕಾನೂನಾತ್ಮಕ ವಿಚಾರದಲ್ಲಿ ಮುಳುಗಲಿದ್ದೀರಿ. ಹಳೆಯ ಘಟನೆಗಳು ನಿಮಗೆ ನೆನಪಾಗುವುದು. ನಿಮ್ನ ಸಕಾರಾತ್ಮಕತೆಯನ್ನು ಹೆಚ್ಚು ಬಳಸಿಕೊಳ್ಳುವರು. ಆಗಾಗ ಬರುವ ನೋವುಗಳು ನಿಮ್ಮನ್ನು ಪೀಡಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುವುವು. ಆಪ್ತರ ಜೊತೆ ಒಂದಿಷ್ಟು ಹರಟೆ ಹೊಡೆಯಿರಿ. ಹಣದ ಚಿಂತೆ ನಿಮ್ಮನ್ನು ಇಂದು ಕಾಡಲಿದೆ. ನಿಮ್ಮ ಕೆಲಸದಿಂದ ಮನೆಯ ಹಿರಿಯರು ಕೋಪಗೊಳ್ಳುವರು. ತಾಳ್ಮೆ ಹಾಗೂ ಏಕಾಗ್ರತೆಯಿಂದ ದಿನವನ್ನು ಮುನ್ನಡೆಸುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ನಿಮ್ಮ‌ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರನ್ನು ಅನುಸರಿಸುವ ಅವಶ್ಯಕತೆ ಇಲ್ಲ.

ಕುಂಭ ರಾಶಿ : ನಿಮ್ಮ ಪಾಲುದಾರಿಕೆಯಲ್ಲಿ ವೈಮನಸ್ಯ ತಲೆ ಹಾಕಬಹುದು. ಮೊದಲೇ ಸರಿ‌ಮಾಡಿಕೊಂಡರೆ ಒಳ್ಳೆಯದು. ದೂರದಲ್ಲಿ ವಾಸಿಸುವ ನೀವು ಇಂದು ಮನೆಗೆ ಹೋಗುವುದು ಪೋಷಕರಿಗೆ ಖುಷಿಯಾಗುವುದು. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ವೈದ್ಯರ ಸಲಹೆಯನ್ನು ನಿರಾಕರಿಸದೇ ಪಾಲಿಸಿ. ಪ್ರಯಾಣದ ಮನಸ್ಸಿದ್ದರೂ ಖರ್ಚಾಗುವ ಭಯದಿಂದ ಅದನ್ನು ನಿಲ್ಲಿಸಿದ್ದೀರಿ. ವಿದೇಶದ ಪ್ರವಾಸಕ್ಕೆ ಯೋಜನೆ ಮಾಡಿಕೊಳ್ಳುವಿರಿ. ಸಂಗಾತಿಯ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಮನೋರಂಜನೆಯ ಅವಧಿಯಲ್ಲಿ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಏನನ್ನಾದರೂ ಮಾಡಬೇಕು ಎಂಬ ಮಹತ್ತರವಾದ ಯೋಜನೆಯನ್ನು ತಯಾರಿಸುವಿರಿ.

ಮೀನ ರಾಶಿ : ಇಂದು ನೀವು ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನಕ್ಕೆ ಮೆಚ್ಚುಗೆ ಸಿಗಲಿದೆ. ಹಣವನ್ನು ಉಳಿಸಲು ಯತ್ನದಲ್ಲಿ ಸೋಲಾಗುವುದು. ಆದರೆ ಅದು ಮುಂದಿನ ಬಾಗಿಲಿನಿಂದ ಬಂದು ಹಿಂದಿನ ಬಾಗಿಲಿನಿಂದ ನಿಮಗೆ ಗೊತ್ತಾಗದಂತೆ ಹೋಗಿರುತ್ತದೆ. ಮಾತನ್ನು ಕಡಿಮೆ ಮಾಡಿ. ಶತ್ರುಗಳಿಂದ ಅಪಮಾನವಾಗಬಹುದು. ಹಿರಿಯರಾಡಿದ ಮಾತು ನಿಮಗೆ ಸತ್ಯವೆಂದು ಅರಿವಿಗೆ ಬರಲಿದೆ. ಇಂದು ನಿಮ್ಮ ಉಳಿತಾಯದ ಹಣವು ಯಾವುದೋ ಕಾರಣಾಂತರಗಳಿಂದ ಖಾಲಿಯಾಗಬಹುದು. ಆದಾಯ ವೃದ್ಧಿಗೊಳಿಸಲು ಕಾನೂನಿಗೆ ವಿರುದ್ಧವಾದ ಕಾರ್ಯಗಳ‌ ಕಡೆ ಗಮನವಿರುವುದು. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ