ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮಂಗಳವಾರ (ಮೇ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಬ್ರಹ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ 15:43ರಿಂದ 17:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:17 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 14:07ರ ವರೆಗೆ.
ಮೇಷ ರಾಶಿ :ನೀವು ಸ್ನೇಹಿತರನ್ನು ನಂಬಿ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳಬಹುದು. ಬಟ್ಟೆಯ ವ್ಯಾಪಾರಿಗಳು ಲಾಭವನ್ನು ಗಳಿಸಲಿದ್ದಾರೆ. ವಿವಾಹಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ವ್ಯಾಪಾರದಲ್ಲಿ ಉಂಟಾಗುವ ಕ್ಲೇಶಗಳನ್ನು ಕಂಡು ವ್ಯಾಪಾರವನ್ನು ಬಿಡುವ ಯೋಚನೆ ಮಾಡುವಿರಿ. ಯಾರ ಬಳಿಯಾದರೂ ಆದಾಯದ ಮೂಲವನ್ನು ಕೇಳಿ ಬೈಸಿಕೊಳ್ಳುವ ಸಾಧ್ಯತೆ ಇದೆ. ತಾಳ್ಮೆಯಿಂದ ಕೆಲಸವನ್ನು ಮಾಡುವುದು ಉತ್ತಮ. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ಯಾವ ಕೆಲಸ ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ. ಪರಿಚಿತರಿಗೆ ಹಣವನ್ನು ಕೊಡಲು ಸಂಗಾತಿಯಿಂದ ಒತ್ತಡ ಬರಬಹುದು.
ವೃಷಭ ರಾಶಿ :ಏನೂ ಕೆಲಸವಿಲ್ಲದೇ ಸಮಯವನ್ನು ಕಳೆಯುವಿರಿ. ಆದಕಾರಣ ಹತ್ತಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ನಿಮಗೆ ಸಮಯವನ್ನು ಕೊಟ್ಟವರನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ನಿಧಾನವಾಗಿ ಸಿಗಲಿದೆ. ಏನೋ ಹೊಸತನ್ನು ಸಾಧಿಸಲು ನಿಮಗೆ ಪ್ರೋತ್ಸಾಹ ಸಿಗುವುದು. ತಾಳ್ಮೆಯನ್ನು ಇಟ್ಟುಕೊಳ್ಳಿ. ಹೂಡಿಕೆಯ ಕಾರಣ ಆರ್ಥಿಕವಾಗಿ ಕಷ್ಟವಾಗಬಹುದು. ಕುಟುಂಬದ ಜೊತೆಗಿನ ನಿಮ್ಮ ಈ ದಿನವು ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಸಣ್ಣ ಅಂತರದಲ್ಲಿ ಅಪಾಯದಿಂದ ಹೊರಬರುವಿರಿ. ನೀವು ಹನಿಮ್ಮ ಆವಿಷ್ಕಾರಕ್ಕೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳಬಹುದು.
ಮಿಥುನ ರಾಶಿ :ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭ ಬರಬಹುದು. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಕಾಣಿಸುವುದು. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ನಿಮಗೆ ಆಸುರಕ್ಷತೆಯ ಭಯವು ಉಂಟಾಗಬಹುದು. ಕಛೇರಿಯಲ್ಲಿ ನಿಮ್ಮ ಯೋಜನೆಗಳನ್ನು ಮೆಚ್ಚಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ನೀವು ಸಮಯಕ್ಕೆ ಮಹತ್ತ್ವವನ್ನು ಕೊಡುವುದು ಬಹಳ ಇಷ್ಟದ ಸಂಗತಿಯಾಗಿದೆ. ನಿಮ್ಮ ಆಲೋಚನೆಗಳು ಅಸ್ಥಿರ ಮತ್ತು ದ್ವಂದ್ವಗಳಿಂದ ಕೂಡಿರುತ್ತದೆ. ಮಕ್ಕಳಿಗೆ ಭಯವನ್ನು ಕೊಡುವುದು ಬೇಡ. ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ.
ಕಟಕ ರಾಶಿ :ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಅಪರಿಚಿತ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಕಲಹವಾಗಲಿದೆ. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗುವಿರಿ. ಇದು ನಿಮಗೆ ಉಪಯೋಗವಾಗಲಿದೆ. ನಿಮ್ಮ ದೈಹಿಕ ಪೀಡೆಯನ್ನು ಯಾರ ಬಳಿಯೂ ಹೇಳಲಾರಿರಿ. ಅತಿಯಾದ ನಿಮ್ಮ ಸೂಕ್ಷ್ಮ ಸ್ವಭಾವದಿಂದ ನಿಮಗೇ ತೊಂದರೆಯಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮಗೆ ತಪ್ಪಿತಸ್ಥ ಭಾವವು ಮೂಡುವುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ.
ಸಿಂಹ ರಾಶಿ :ಇಂದು ನೀವು ಹೊರಗೆ ಸುತ್ತಾಡುವಾಗ ಎಚ್ಚರವಿರಲಿ. ಇನ್ನೊಬ್ಬರಿಂದ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ತಮ್ಮ ನಿರ್ಧಾರವನ್ನು ಗಟ್ಟಿ ಮಾಡಳ್ಳಬೇಕಿದೆ. ಅಪರಿಚಿತರ ವಾಹನವನ್ನು ಹತ್ತಬೇಡಿ. ವಿನಾಕಾರಣ ಸಂತೋಷವಾಗಿ ಇರುವಿರಿ. ಕಛೇರಿಯ ಕೆಲಸವು ನಿಧಾನವಾಗಿ ಮೇಲಧಿಕಾರಿಗಳಿಂದ ಬೈಯಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಕೆಲಸದಲ್ಲಿ ನಿರಾಸಕ್ತಿಯೂ ಆಗಲಿದೆ. ಬೇಡದ ವಿಚಾರಕ್ಕೆ ತಲೆ ಹಾಕುವುದು ಬೇಡ. ಈ ದಿನ ನೀವು ಆಲಸ್ಯದಿಂದ ಇರುವಿರಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ.
ಕನ್ಯಾ ರಾಶಿ :ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವಾಗಬಹುದು. ನಿಮ್ಮ ದಾಂಪತ್ಯದ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು ಅದಕ್ಕಾಗಿ ನಿಮ್ಮ ಹಣವನ್ನು ಖರ್ಚು ಮಾಡಬೇಕಾಗಿ ಬರಬಹುದು. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನೀವಿಂದು ಒಬ್ಬೊಂಟಿಯಾಗಿ ರಮಣೀಯ ಸ್ಥಳಕ್ಕೆ ಹೋಗಲಿದ್ದೀರಿ. ಯಾವುದನ್ನು ನಂಬಲು ಹಿಂದೇಟು ಹಾಕುವಿರಿ. ನೆಮ್ಮದಿಯು ನಿಮಗೆ ಆಗಲಿದೆ. ನಿಮ್ಮ ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡಬೇಕಿದೆ. ಮೋಸ ಹೋಗುವ ಸಾಧ್ಯತೆಯು ಇರಲಿದೆ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಇನ್ನೊಬ್ಬರ ಬಗ್ಗೆ ತೋರುವ ಸಹಾನುಭೂತಿಯು ಬೇರೆಯವರಿಗೆ ಇಷ್ಟವಾಗುವುದು. ನಿಮ್ಮ ಸಂಗಾತಿಗೆ ಒತ್ತಡಕ್ಕೆ ಇಂದಿನ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು. ಖ್ಯಾತಿಯನ್ನು ಪಡೆಯುವ ಆಸೆಯಾಗುವುದು.
ತುಲಾ ರಾಶಿ :ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಎಲ್ಲರೂ ಕುಳಿತು ಚರ್ಚಿಸುವರು. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ನಿಮಗೆ ಇಂದು ಆದರ್ಶವ್ಯಕ್ತಿತ್ವವು ಸಿಗಲಿದ್ದು ಅವರನ್ನು ಅನುಸರಿಸುವ ಸಾಧ್ಯತೆ ಇದೆ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ಸಮಯವನ್ನು ಕಳೆಯಲು ಬಹಳ ಪ್ರಯಾಸಪಡಲಿದ್ದೀರಿ. ಹೆಚ್ಚಿನ ಹೂಡಿಕೆಗೆ ಒತ್ತು ನೀಡುವಿರಿ. ಇಂದು ಮಹಿಳೆಯ ಪಾತ್ರ ನಿಮ್ಮ ಜೀವನದಲ್ಲಿ ಪ್ರಮುಖಗಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ಪ್ರೀತಿಯಿಂದ ನೀವು ಮೋಸಹೋಗುವ ಸಾಧ್ಯತೆ ಇದೆ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು.
ವೃಶ್ಚಿಕ ರಾಶಿ :ಇಂದು ಅಪರಿಚಿತ ಕರೆಗಳು ನಿಮ್ಮನ್ನು ಕೆಲಸಕ್ಕೆ ತೊಂದರೆಕೊಡಬಹುದು. ಸಂಪೂರ್ಣ ಮಾಹಿತಿಯ ಜೊತೆ ಕೆಲಸಕ್ಕೆ ಮುಂದುವರಿಯಿರಿ. ವ್ಯಕ್ತಿಗಳ ನಿಂದನೆಯನ್ನು ಮಾಡುವ ಕೆಲಸಕ್ಕೆ ವಿರಾಮವನ್ನು ಹೇಳಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟಿಕೊಂಡಿದ್ದೀರಿ. ಉದ್ಯೋಗದಲ್ಲಿ ಮೋಸವಾಗಬಹುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಮ್ಮ ಬಂಧುಗಳಿಗೆ ನಿಮ್ಮ ಬಗ್ಗೆ ಕೆಲವು ವಿಚಾರಗಳು ತಿಳಿಯಲಿವೆ. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ನೀವಾಡುವ ಮಾತುಗಳು ನಂಬಿಕೆ ಬರುವಂತಿರಲಿ. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು.
ಧನು ರಾಶಿ :ಇಂದು ನೀವು ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದುಕೊಳ್ಳುವಿರಿ. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಕಛೇರಿಯ ಕೆಲಸಗಳು ಒಂದು ಹಂತ ಮುಗಿದರೂ ಮತ್ತೊಂದಿಷ್ಟು ನಿಮಗೆ ಬರಲಿದೆ. ಹಿರಿಯರನ್ನು ಪ್ರೀತಿಯಿಂದ ಗೌರವಿಸಿ. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಭವಿಷ್ಯದ ಕುರಿತು ಯೋಚನೆಯನ್ನು ಮಾಡಲಿದ್ದೀರಿ. ನಿಮಗೆ ಇಷ್ಟವಾದ ಭೂಮಿಯ ಖರೀದಿಗೆ ಅನ್ಯಮಾರ್ಗವನ್ನು ಬಳಸಿಕೊಳ್ಳುವಿರಿ.ನಿಮ್ಮ ಸಿಟ್ಟಿನ ಸ್ವಭಾವದಿಂದ ಏನನ್ನೂ ಸಾಧಿಸಲಾಗದು. ಸಾಮಾಜಿಕ ಕಾರ್ಯಗಳಿಗೆ ಬೇಕಾದ ತಂಡವನ್ನು ಕಟ್ಟುವ ಆಸೆ ಇರುವುದು. ಯಾರನ್ನೋ ನೋಡಿ ನೀವು ಅಸೂಯೆ ಪಡೆಯುವುದು ಬೇಡ. ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಯಾವ ಸಂದರ್ಭದಲ್ಲೊಯೂ ಉದ್ವೇಗಕ್ಕೆ ಒಳಗಾಗುವುದು ಬೇಡ. ದೂರದ ಬಂಧುಗಳ ಸಮಾಗಮವಾಗಬಹುದು.
ಮಕರ ರಾಶಿ :ನಿಮಗೆ ಆಲೋಚನೆಯ ಕಾರಣದಿಂದ ಸರಿಯಾಗಿ ನಿದ್ರೆ ಬಾರದೇ ಎಲ್ಲವೂ ಅಸ್ತವ್ಯಸ್ತವಾಗಬಹುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಯಾವುದೇ ಯೋಜನೆಯಿಲ್ಲದೇ ಒಟ್ಟಾರೆ ಕೆಲಸ ಮಾಡುವಿರಿ. ಮನಸ್ಸು ಶಾಂತವಾಗುವುದು. ಇಲ್ಲ ಸಲ್ಲದ ಆಲೋಚನೆಗಳನ್ನು ಬಿಡಿ. ನಿಮ್ಮ ಕಾರ್ಯಕ್ಕೆ ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಶಿಸ್ತನ್ನು ಕಾಪಾಡಿಕೊಳ್ಳಲು ಬಯಸುವಿರಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. .
ಕುಂಭ ರಾಶಿ :ಇಂದು ಸಹೋದ್ಯೋಗಿಗಳು ನಿಮಗೆ ಸಿಗುವ ಜವಾಬ್ದಾರಿಯನ್ನು ಸಿಗದಂತೆ ಮಾಡುವರು. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಅನಾಯಾಸಕರವಾದ ಪ್ರಯಾಣವನ್ನು ಮಾಡಲಿದ್ದೀರಿ. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಿ ಇರಲಿವೆ. ಕಳೆದುಕೊಂಡ ವಸ್ತುಗಳನ್ನು ಹುಡುಕಿ ಸೋಲುವಿರಿ. ಸಂಗಾತಿಯ ಬಗ್ಗೆ ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವಿರಿ. ಬಹಳ ದಿನಗಳಿಂದ ಬಾರದೇ ಇರುವ ಹಣಕ್ಕೆ ಚಿಂತೆ ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಪ್ರಶಂಸೆಯು ನಿಮಗೆ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುವುದು. ನ್ಯಾಯ ಸಮ್ಮತವಾಗಿ ಇರಿ. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ.
ಮೀನ ರಾಶಿ :ನೀವು ಮಕ್ಕಳ ಜೀವನವನ್ನು ಕಂಡು ಸಂಕಟಪಡುವಿರಿ. ಅದಕ್ಕಾಗಿ ಏನಾದರೂ ಮಾಡಲು ಯೋಚಿಸುವಿರಿ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ನಿರೀಕ್ಷಿತ ಮಟ್ಟವನ್ನು ಇಂದು ನಿಮ್ಮಕೆಲಸವು ತಲುಪದು. ಹಿರಿಯರನ್ನು ಗೌರವಿಸುವುದು ನಿಮ್ಮ ಸ್ವಭಾವವಾಗಿರುತ್ತದೆ. ವೃತ್ತಿಯಲ್ಲಿ ಬರುವ ಸವಾಲುಗಳಿಂದ ಭಯಗೊಳ್ಳುವಿರಿ. ಎಲ್ಲ ಕಡೆಗಳಿಂದ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವಿರಿ. ಇಂದು ಬಿಡುವಿಲ್ಲದ ದಿನವಾಗಿರುವುದು. ಕೆಲವು ವಿಚಾರಕ್ಕೆ ತುಂಬಾ ಭಾವುಕರಾಗಬಹುದು. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)