Daily Devotional: ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ನಿದ್ರೆಯು ಮಾನವ ದೇಹಕ್ಕೆ ಅತ್ಯಗತ್ಯ. ಇದು ಆಯುಷ್ಯ ವೃದ್ಧಿಗೂ ಸಹ ಸಹಕಾರಿ. ಆದರೆ, ರಾತ್ರಿಯ ನಿದ್ರೆ ಮತ್ತು ಮಧ್ಯಾಹ್ನದ ನಿದ್ರೆಯ ನಡುವೆ ವ್ಯತ್ಯಾಸವಿದೆ. ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಪ್ರಕಾರ, ಮಧ್ಯಾಹ್ನದ ಹೊತ್ತು ನಿದ್ರಿಸುವುದು ಕೆಲವೊಮ್ಮೆ ಶುಭವಲ್ಲ. ವೃದ್ಧರು, ರೋಗಿಗಳು, ಮಕ್ಕಳು ಮತ್ತು ಮಕ್ಕಳನ್ನು ಹಡೆದ ತಾಯಂದಿರಿಗೆ ಮಧ್ಯಾಹ್ನದ ನಿದ್ರೆ ಅನ್ವಯಿಸುವುದಿಲ್ಲ. ಇನ್ನುಳಿದಂತೆ, ದೇಹಪುಷ್ಟಿಯಿಂದ ಕರ್ಮನಿರತರಾಗಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.
ಬೆಂಗಳೂರು, ಡಿಸೆಂಬರ್ 19: ನಿದ್ರೆಯು ಮಾನವ ದೇಹಕ್ಕೆ ಅತ್ಯಗತ್ಯ. ಇದು ಆಯುಷ್ಯ ವೃದ್ಧಿಗೂ ಸಹ ಸಹಕಾರಿ. ಆದರೆ, ರಾತ್ರಿಯ ನಿದ್ರೆ ಮತ್ತು ಮಧ್ಯಾಹ್ನದ ನಿದ್ರೆಯ ನಡುವೆ ವ್ಯತ್ಯಾಸವಿದೆ. ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಪ್ರಕಾರ, ಮಧ್ಯಾಹ್ನದ ಹೊತ್ತು ನಿದ್ರಿಸುವುದು ಕೆಲವೊಮ್ಮೆ ಶುಭವಲ್ಲ. ವೃದ್ಧರು, ರೋಗಿಗಳು, ಮಕ್ಕಳು ಮತ್ತು ಮಕ್ಕಳನ್ನು ಹಡೆದ ತಾಯಂದಿರಿಗೆ ಮಧ್ಯಾಹ್ನದ ನಿದ್ರೆ ಅನ್ವಯಿಸುವುದಿಲ್ಲ. ಇನ್ನುಳಿದಂತೆ, ದೇಹಪುಷ್ಟಿಯಿಂದ ಕರ್ಮನಿರತರಾಗಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.
ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯ ಸಮಯದಲ್ಲಿ ನಿದ್ರಿಸುವುದರಿಂದ ನವಗ್ರಹ ದೋಷಗಳು, ಗ್ರಹಕಾಟ, ನಕಾರಾತ್ಮಕ ಶಕ್ತಿಗಳ ಆವಾಹನೆ, ದೈವಬಲ ಕುಗ್ಗುವಿಕೆ ಮತ್ತು ಮೆದುಳಿನ ಜಾಗರೂಕತೆ ಕಡಿಮೆಯಾಗುವ ಸಾಧ್ಯತೆ ಇದೆ. ಕಚೇರಿಗಳಲ್ಲಿ ಕುರ್ಚಿಯ ಮೇಲೆ ನಿದ್ರಿಸುವುದು ಮಹಾದೋಷವೆಂದು ಪರಿಗಣಿಸಲಾಗುತ್ತದೆ. ನಿದ್ರೆಗೆ ಜಾರುವ ಸಂಭವ ಬಂದಾಗ, ಸ್ವಲ್ಪ ಓಡಾಡಿ, ಮುಖ ತೊಳೆದು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಮಧ್ಯಾಹ್ನದ ನಿದ್ರೆ ಶುಭವಲ್ಲ ಎಂಬುದು ಶಾಸ್ತ್ರಗಳ ನಂಬಿಕೆಯಾಗಿದೆ ಎಂದು ಗುರೂಜಿ ಹೇಳಿದ್ದಾರೆ.
