AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 20 December: ಇಂದು ಈ ರಾಶಿಯವರಿಗೆ ನಿಶ್ಚಿಂತೆ ಕೊಟ್ಟ ಮಾತಿನ ನೆರವೇರಿಕೆ

ದಿನ ಭವಿಷ್ಯ, 20, ಡಿಸೆಂಬರ್​​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಪ್ರತಿಪತ್ ತಿಥಿ ಶನಿವಾರ ಪಕ್ಷಪಾರದಿಂದ ಬೇಸರ, ಪ್ರಾಣಾಪಾಯದಿಂದ ರಕ್ಷೆ, ಹಿತಶತ್ರುಗಳ ಭೀತಿ, ಪ್ರಯಾಣ ಸಿದ್ಧತೆ, ವಿವಾಹಕ್ಕೆ ಗೊಂದಲ, ಅತಿಯಾದ ಆಸೆಯಿಂದ ದುಃಖ ಇವೆಲ್ಲ ಇಂದಿನ ವಿಶೇಷ.

Horoscope Today 20 December: ಇಂದು ಈ ರಾಶಿಯವರಿಗೆ ನಿಶ್ಚಿಂತೆ ಕೊಟ್ಟ ಮಾತಿನ ನೆರವೇರಿಕೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 20, 2025 | 12:38 AM

Share

ಮೇಷ ರಾಶಿ:

ಕಲ್ಪನೆಗಳನ್ನು ವಾಸ್ತವಕ್ಕೆ ಇಳಿಸುವ ಅಗತ್ಯ. ಭಾವನೆಗಳನ್ನು ನಿಯಂತ್ರಿಸಿ. ನಿಮ್ಮ ಭಾವಲೋಕಕ್ಕೆ ಗಡಿ ಹಾಕಿಕೊಳ್ಳಿ. ಬಹಳ ದಿನಗಳಿಂದ ಇದ್ದ ಆಸ್ತಿಯ ಮೇಲಿನ ಮೋಹವು ಕಡಿಮೆ ಆಗುವುದು. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ನಿರಂಕುಶದಂತೆ ವರ್ತಿಸುವುದು ಬೇಡ. ಇಂದಾಗುವ ಖರ್ಚನ್ನು ರೂಪಾಯಿಯಲ್ಲಿ ಲೆಕ್ಕವಿಡಲು ಸಾಧ್ಯವಾಗದು. ಶತ್ರುಗಳಿಗೆ ಏನನ್ನಾದರೂ ಮಾಡಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಗ್ರಾಹಕರಿಂದ‌ ಮೆಚ್ಚುಗೆ ಸಿಗಲಿದೆ. ಅಶಿಸ್ತು ನಿಮ್ಮ ಕಾರ್ಯವನ್ನು ಯೋರಿಸುತ್ತದೆ. ಸ್ವಂತ ಕಾರ್ಯದ‌ ಕಾರಣ ಕಛೇರಿಗೆ ವಿತಾಮ ಹೇಳುವಿರಿ. ಅಂತರಾಳದ ಮಾತು ಇಂದು ನಿಮ್ಮನ್ನು ಬಲ್ಲವರೆಗೆ ಸ್ಪಷ್ಟವಾಗಲಿದೆ. ಸೇವೆ, ದಾನದಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುವುದು. ಅಪಮಾನವಾದ ಸ್ಥಳದಲ್ಲಿಯೇ ಗೌರವ ಪಡೆಯುವಿರಿ. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು.

ವೃಷಭ ರಾಶಿ:

ಸಮಾಜಮುಖಿ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಮಯ. ನಿಮ್ಮ ಆಲೋಚನೆಗಳಿಗೆ ಸರಿಯಾದ ರೂಪ ಮತ್ತು ಜವಾಬ್ದಾರಿ ಬರಲಿದೆ. ಇಂದು ನೀವು ರಹಸ್ಯದ ಕಾರ್ಯಾಚರಣೆಯನ್ನು ಮಾಡುವಿರಿ. ನಿಮ್ಮ ಕೈ‌ಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿಲ್ಲ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ಸಣ್ಣ ಅಂತರದಲ್ಲಿ ನಿಮ್ಮ ಅಪಘಾತವು ತಪ್ಪಲಿದ್ದು ನಿಮ್ಮ ಅದೃಷ್ಟವು ಕೈ ಹಿಡಿಯಲಿದೆ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು. ಎಂತಹ ಸಂದರ್ಭವನ್ನೂ ಪ್ರತ್ಯಕ್ಷವಾಗಿ ನೋಡದೇ ತೀರ್ಮಾನಿಸಲಾಗದು. ವಿಭಿನ್ನ ಚಿಂತನೆಗೆ ಮನ್ನಣೆ ಸಿಗುತ್ತದೆ. ಸ್ನೇಹ ವಲಯದಿಂದ ಹೊಸ ಅವಕಾಶ ಬರಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಒಂದು ಕಡೆ ಬಾಗಲು ಮುಚ್ಚಿದರೆ ಇನ್ಮೊಂದು ಕಡೆ ಕಿಟಕಿ ತೆರುವುದು. ಓಡಾಟವು ನಿಮಗೆ ಅತಿಯಾದ ಆಯಾಸಪ್ರದವಾಗಲಿದೆ.

ಮಿಥುನ ರಾಶಿ:

ದೀರ್ಘಕಾಲದ ಯೋಜನೆಗೆ ಉತ್ತಮ ದಿನವಾಗಿದ್ದು, ಶ್ರಮ ವ್ಯರ್ಥವಾಗದು. ಕುಟುಂಬ ಅಥವಾ ಕೆಲಸದ ಭಾರ ಸಹನೀಯವಾಗುತ್ತದೆ. ನಿಮಗೆ ಪ್ರತಿಕೂಲದ ವಿಚಾರಗಳೇ ನೆನಪಾಗುವುದು. ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು.‌ ಅಧಿಕಾರಿಗಳಿಂದ ನಿಮ್ಮ ಆರ್ಥಿಕತೆಯು ಪರಿಶೀಲನೆಗೊಳ್ಳುವುದು. ದಾಂಪತ್ಯದಲ್ಲಿ ಹಣದ ವಿಚಾರಕ್ಕೆ ಕಹಿ ಮಾತುಗಳು ಬರಬಹುದು. ಕೆಲವು ಬಂಧನದಿಂದ ಬಿಡುಗಡೆ ಸಿಕ್ಕಿ ಹಗುರಾಗುವಿರಿ. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ, ಆದರೆ ಅದೇ ನಿಮ್ಮ ಗೌರವದ ಮೂಲ. ನಿಮ್ಮ ಸ್ಥೈರ್ಯ ಇನ್ನಷ್ಟು ಬಲವಾಗಲಿದೆ. ಕಲಾವಿದೆಯು ನಿಮ್ಮ ಬಾಳ ಸಂಗಾತಿಯಾಗಿ‌ ಬರುವ ಸಾಧ್ಯತೆ ಇದೆ. ಕಛೇರಿಯಲ್ಲಿ ಇಂದು ಯಾವುದೇ ಜವಾಬ್ದಾರಿಯನ್ನು ಮೈಮೇಲೆ ಹಾಕಿಕೊಂಡು ಹೋಗುವ ಮನಸ್ಸು ಇರದು. ನಿಮ್ಮ ತಪ್ಪನ್ನು ಒಪ್ಪಿಕೊಂಡರೆ ಸಣ್ಣವರೇನು ಆಗುವುದಿಲ್ಲ.

ಕರ್ಕಾಟಕ ರಾಶಿ:

ಅತಿಯಾದ ಆಶಾವಾದವನ್ನು ತಪ್ಪಿಸಬೇಕು. ನಿಮ್ಮ ದೃಷ್ಟಿ ಭೂಮಿಗೆ ಬಂದು, ಜ್ಞಾನದ ತಿಳಿವಳಿಕೆ ಗಟ್ಟಿಯಾಗುತ್ತದೆ. ಆರ್ಥಿಕ ಸ್ಥಿತಿಯು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಸ್ಥಿತಿಯು ಹಾಸ್ಯವೆನಿಸುವುದು. ನಿಮ್ಮ ದೇಹಕ್ಕೆ ವಿರುದ್ಧವಾದ ಕೆಲಸಗಳಿಂದ ತೊಂದರೆಯಾಗಲಿದೆ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ನಿಮ್ಮ ಮಾತನ್ನು ದುರುಪಯೋಗ ಮಾಡಬಹುದು. ಸಂಗಾತಿಯು ನಿಮ್ಮ ಯೋಜನೆಯನ್ನು ಪ್ರೋತ್ಸಾಹಿಸಬಹುದು. ಅನುಭವವೇ ಇಂದು ನಿಮ್ಮ ಗುರು. ಹಳೆಯ ಪಾಠ ಹೊಸ ಅರ್ಥ ನೀಡುತ್ತದೆ. ದೂರದ ವಿಚಾರಗಳು ಅಥವಾ ಪ್ರಯಾಣ ಯೋಚನೆ ಮನಸ್ಸನ್ನು ಸೆಳೆಯುತ್ತವೆ. ಅಪರಿಚಿತ ಕರೆಗಳಿಗೆ ಸ್ಪಂದನೆ ಬೇಡ. ನಿಮ್ಮ ಸಂತೋಷವನ್ನು ಕೆಲವರಿಗೆ ನೋಡುವುದು ಕಷ್ಟವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ.

ಸಿಂಹ ರಾಶಿ:

ಆಂತರಿಕ ಪರಿವರ್ತನೆ ತಾನಾಗಿಯೇ ಆಗಲಿದೆ. ಹಣಕಾಸು ನಿರ್ಧಾರಗಳಲ್ಲಿ ಎಚ್ಚರ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಕಾಲ ಇಂದು. ಹೊಸ ವಿಚಾರವನ್ನು ಕಲಿಯುವ ಉಮೇದು ಮಾಡುವಿರಿ. ಕೆಲವು ಸಂದರ್ಭಗಳು ನಿಮ್ಮ‌ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಕುಟುಂಬದಿಂದ ವೃತ್ತಿಯ ಬದಲಾವಣೆಗೆ ಒತ್ತಾಯ ಬರಬಹುದು. ಅಧಿಕ ಆದಾಯವನ್ನು ನಿಮ್ಮಿಂದ ನಿರೀಕ್ಷಿಸಬಹುದು. ಕೈ ತಪ್ಪುವ ಕಾರ್ಯವನ್ನು ನೀವೇ ಶ್ರಮದಿಂದ ಪಡೆಯುವಿರಿ. ಮೂರ್ಖರಂತೆ ಬರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ತಾಳ್ಮೆಯನ್ನು ಕಳೆದುಕೊಂಡು ಎಲ್ಲರೆದುರು ಸಣ್ಣವರಾಗಬೇಕಾದೀತು. ಗುಪ್ತ ವಿಷಯಗಳು ಸ್ಪಷ್ಟವಾಗುವ ಸೂಚನೆ. ಭಯಕ್ಕಿಂತ ಧೈರ್ಯ ಆಯ್ಕೆಮಾಡಿ. ಇಂದು ಸತ್ಯ ನಿಮ್ಮ ಶಕ್ತಿಯಾಗುತ್ತದೆ. ಹೊಳೆಯುವುದೆಲ್ಲ ನಕ್ಷತ್ರವಲ್ಲ ಎಂಬುದು ಎಡವಿದ‌ ಮೇಲೆ ಗೊತ್ತಾಗುವುದು.

ಕನ್ಯಾ ರಾಶಿ:

ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ಆಯಾಮಗಳನ್ನು ತೂಗಿ ನೋಡಿ. ಕಲಾತ್ಮಕ ಚಿಂತನೆಗೆ ಅವಕಾಶ. ನಿಮ್ಮ ನ್ಯಾಯಬುದ್ಧಿಯನ್ನು ಬಲಪಡಿಸಿ ಒಳಗಿನ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಕ್ರೀಡೆಯಲ್ಲಿ ಮುನ್ನಡೆಯುವ ಆಸಕ್ತಿಯನ್ನು ತೋರಿಸುವಿರಿ. ಹತ್ತಾರೂ ಆಲೋಚನೆಗಳು ಒಂದಾದಮೇಲೆ‌‌ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು. ಜೊತೆಗಿರುವವರನ್ನು ಸಂತೋಷದಲ್ಲಿ ಇಡುವಿರಿ. ದ್ವಿಚಕ್ರವಾಹನದಲ್ಲಿ ಸಚರಿಸುವುದು ಬೇಡ. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ‌ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ‌ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು.‌ ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ವಿದೇಶದ ವ್ಯಾಮೋಹವು ನಿಮಗೆ ದೂರಾಗುವುದು. ಯಾರಿಂದಲೂ ಏನನ್ನೂ ಕಸಿದುಕೊಳ್ಳಲು ಹೋಗುವುದು ಬೇಡ. ಮನಶ್ಚಾಂಚಲ್ಯದಿಂದ ಇಂದು ಅಶಿಸ್ತಿನಿಂದ‌ ಕಾರ್ಯವನ್ನು ಮಾಡುವಿರಿ.

ತುಲಾ ರಾಶಿ:

ಕೆಲಸದಲ್ಲಿ ನಿಖರತೆಯಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಶ್ರಮಕ್ಕೆ ಗಂಭೀರ ಫಲವನ್ನು ನಿಧಾನವಾಗಿ ಪಡೆಯುವಿರಿ. ನಿಮಗೆ ಇಂದು ಯಾರಾದರೂ ಧೈರ್ಯ ತುಂಬುವವರ ಅವಶ್ಯಕತೆ ಇರಲಿದೆ. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಸಾಲ ಕೊಟ್ಟವರು ನಿಮ್ಮನ್ನು‌ ನಾನಾ ಪ್ರಕಾರವಾಗಿ ಜರಿಯಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಯಾರೋ ಆಡಿದ ನಕಾರಾತ್ಮಕ ಮಾತಿಗೆ ಸತ್ತ್ವವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ತಪ್ಪು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ. ಕ್ರಮಬದ್ಧತೆ ಇಂದು ದೊಡ್ಡ ಸಹಾಯ. ಸಮತೋಲನವೇ ದಿನದ ಸಾರ.

ವೃಶ್ಚಿಕ ರಾಶಿ:

ಕೆಲಸದ ಒತ್ತಡ ಇದ್ದು ಫಲ ಅಸ್ಪಷ್ಟವಾಗಿ ಗೋಚರಿಸುವುದು. ಅಹಂಕಾರ ತಾನಾಗಿಯೇ ಪ್ರಕಟವಾಗಲಿದೆ. ಧ್ಯಾನ ನಿಮ್ಮ ಮನಸ್ಸಿಗೆ ಆಯಾಸವನ್ನು ಮೀರುವ ಶಕ್ತಿ ನೀಡುತ್ತದೆ. ನಿಮ್ಮ ನಾಯಕತ್ವವನ್ನು ಸರಿಮಾಡಿಕೊಳ್ಳಿ. ನೀವು ಯಾವ ಸೋಲನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಸಮಯೋಚಿತ ಕಾರ್ಯದಿಂದ ನಿಮಗೆ ಉನ್ನತ ಅಧಿಕಾರಗಳು ಬರಬಹುದು. ಇಂದು ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ನಿಮ್ಮ ನೋವನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳುವಿರಿ. ಸಂಗಾತಿಯನ್ನು ದೂರ ಕಳಿಸಿ ಸಂಕಟಪಡುವಿರಿ‌. ಅಧಿಕಾರಕ್ಕಿಂತ ಕರ್ತವ್ಯ ಮುಖ್ಯವಾಗುವ ದಿನ. ವಿನಯ ತೋರಿಸಿದರೆ ಗೌರವ ಸ್ವಯಂ ಬರುತ್ತದೆ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು.

ಧನು ರಾಶಿ:

ಕುಟುಂಬದ ವಿಷಯಗಳಿಗೆ ಆದ್ಯತೆ ನೀಡಿ. ಹಳೆಯ ಸಂಬಂಧ ಪುನಃ ಸಂಪರ್ಕಕ್ಕೆ ಬರಬಹುದು. ನಿಮ್ಮ ಆತ್ಮಬಲ ಜಾಗೃತಗೊಂಡು ಸ್ಥಿರತೆಯತ್ತ ಕರೆದೊಯ್ಯುತ್ತದೆ. ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಬಯಕೆ ಇರುವುದು. ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಕಷ್ಟವಾಗುವುದು. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು‌ ಪ್ರಯತ್ನಶೀಲರಾಗುವಿರಿ. ಭಾವನೆಗಳು ತೀವ್ರವಾಗುವ ದಿನ. ಮನಸ್ಸಿನ ಭಾರವನ್ನು ಹೊರ ಹಾಕಿದರೆ ಹಗುರಾಗುತ್ತದೆ. ಕಾನೂನಿನ ತೊಂದರೆಯನ್ನು ಕಾನೂನಾತ್ಮಕವಾಗಿಯೇ ಸರಿ ಮಾಡಿಕೊಳ್ಳುವಿರಿ.

ಮಕರ ರಾಶಿ:

ಒಂದೇ ನಿರ್ಧಾರ ಭವಿಷ್ಯದ ದಿಕ್ಕು ಬದಲಾಯಿಸಬಹುದು. ಸಂಜೆ ಆತ್ಮಾವಲೋಕನಕ್ಕೆ ಅವಕಾಶವಾಗಕಿದೆ. ನಿಮ್ಮ ಬುದ್ಧಿಗೆ ಗಂಭೀರತೆ ಬರಲಿದೆ. ಆರ್ಥಿಕಮಟ್ಟವನ್ನು ಯಾರಾದರೂ ತುಲನೆ ಮಾಡಬಹುದು. ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ‌ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಮಾತು ಬೇರೆ ಅರ್ಥವನ್ನು ಕೊಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದೆ. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಯೋಚನೆಗಳೇ ಇಂದು ನಿಮ್ಮ ಶಕ್ತಿ. ಬರವಣಿಗೆ, ಮಾತುಕತೆ, ಅಧ್ಯಯನಕ್ಕೆ ಅನುಕೂಲ. ಆದರೆ ಅನಗತ್ಯ ಚರ್ಚೆ ತಪ್ಪಿಸಿ. ಆಪ್ತರ ಸಲಹೆಯನ್ನು ಕೇಳಲು ನಿಮಗೆ ಇಷ್ಟವಾಗದು. ನೀವು ಸಂಬಂಧವಿಲ್ಲದ ವಿಚಾರಕ್ಕೆ ಗಮನವನ್ನು ಕೊಡುವಿರಿ.

ಕುಂಭ ರಾಶಿ:

ಮಾತಿಗಿಂತ ನಡೆ ಮುಖ್ಯ. ನಿಮ್ಮ ಸಹನೆಯನ್ನು ಪರೀಕ್ಷಿಸಿ, ಅಂತಿಮವಾಗಿ ಭರವಸೆಯು ಫಲ ನೀಡುವುದು. ಖಾಸಗಿ ಸಂಸ್ಥೆಯ ಜವಾಬ್ದಾರಿಯನ್ನು ನೀವು ನಿರ್ವಹಿಸಲು ಕಷ್ಟವಾಗುವುದು.‌ ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಕೆಲಸವು ಪೂರ್ಣವಾಗದೇ ಹಣವನ್ನು ಪಡೆಯಲಾರಿರಿ. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ಸ್ಥಿರತೆಯೇ ನಿಮ್ಮ ರಕ್ಷಾಕವಚ. ಹಳೆಯ ಹೂಡಿಕೆ ಅಥವಾ ಪ್ರಯತ್ನ ಇಂದು ನೆನಪಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಯಾವ ಸಹಾಯವನ್ನು ಕೇಳಿದರೂ ಇಲ್ಲ ಎನ್ನುವ ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.

ಮೀನ ರಾಶಿ:

ಹಿರಿಯರ ಸಲಹೆ ನಿರ್ಲಕ್ಷ್ಯಿಸಬೇಡಿ. ಹಣಕಾಸಿನಲ್ಲಿ ಎಚ್ಚರ ಅಗತ್ಯ. ಸಂಜೆ ವೇಳೆಗೆ ಮನಸ್ಸು ಶಾಂತವಾಗುತ್ತದೆ. ಶ್ರಮಕ್ಕೆ ತಡವಾದರೂ ನ್ಯಾಯ ಸಿಗಲಿದೆ. ಸಂಬಂಧಕ್ಕಿಂತ ಹಣವೇ ಮುಖ್ಯವಾಗಿ ಕಾಣಿಸುವುದು. ಅ‌ನ್ಯರ ಕಾರಣದಿಂದ ನಿಮಗೆ ಒಂದು ಸಿಟ್ಟು ಬರುವುದು. ಇಂದಿನ ಎಂತ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಅನಂತರದ ಹತಾಶೆಯಿಂದ ಕಷ್ಟವಾದೀತು. ಸುಳ್ಳಿನಲ್ಲಿ ಸಿಕ್ಕಿಬೀಳುವ ಸಂದರ್ಭವಿದೆ. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಆತುರವೇ ಮುಖ್ಯ ಅಡ್ಡಿ. ಕೆಲಸ ನಿಧಾನವಾಗಿ ನಡೆದರೂ ಅಡಿಪಾಯ ಗಟ್ಟಿಯಾಗುತ್ತದೆ. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಇರಲಿದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಕಷ್ಟವಾದೀತು. ಕಲಾವಿದರಾಗುವ ದೃಢವಾದ ಮನಸ್ಸಿನಲ್ಲಿ ನೆಲೆಸುವುದು.

20 ಡಿಸೆಂಬರ್​​ 2025ರ ಶನಿವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಮೂಲಾ, ಯೋಗ : ಸುಕರ್ಮ, ಕರಣ : ಶಕುನಿ, ಸೂರ್ಯೋದಯ – 06 – 44 am, ಸೂರ್ಯಾಸ್ತ – 05 – 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:57 – 12:22, ಯಮಗಂಡ ಕಾಲ 15:10- 16:35, ಗುಳಿಕ ಕಾಲ 08:09 – 09:33

-ಲೋಹಿತ ಹೆಬ್ಬಾರ್ – 8762924271 (what’s app only)

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ