Daily Devotional: ಶೀಘ್ರ ವಿವಾಹಕ್ಕಾಗಿ ವೈಭವ ಲಕ್ಷ್ಮಿ ವೃತದ ಮಹತ್ವ

Updated on: Dec 10, 2025 | 7:11 AM

ಮದುವೆ ವಿಳಂಬವಾಗುವುದು ಅಥವಾ ಎಷ್ಟೇ ಪ್ರಯತ್ನಪಟ್ಟರೂ ವಿವಾಹ ಕಾರ್ಯಗಳು ಮುಂದೂಡಲ್ಪಡುವುದು ಅನೇಕರಿಗೆ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕುಜದೋಷ ಅಥವಾ ಕುಟುಂಬದಂತಹ ಕಾರಣಗಳಿಂದ ವಿವಾಹಕ್ಕೆ ಅಡಚಣೆಗಳು ಎದುರಾಗಬಹುದು. ಇಂತಹ ಸಮಸ್ಯೆಗಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಿಹಾರಗಳಲ್ಲಿ ಶ್ರೀ ವೈಭವ ಲಕ್ಷ್ಮಿ ವ್ರತವು ಅತ್ಯಂತ ಪ್ರಮುಖವಾಗಿದೆ. ಇದು ಶೀಘ್ರ ವಿವಾಹಕ್ಕೆ ಅತ್ಯಂತ ಪರಿಣಾಮಕಾರಿ ವ್ರತವೆಂದು ಹೇಳಲಾಗುತ್ತದೆ.

ಬೆಂಗಳೂರು, ಡಿಸೆಂಬರ್ 10: ಮದುವೆ ವಿಳಂಬವಾಗುವುದು ಅಥವಾ ಎಷ್ಟೇ ಪ್ರಯತ್ನಪಟ್ಟರೂ ವಿವಾಹ ಕಾರ್ಯಗಳು ಮುಂದೂಡಲ್ಪಡುವುದು ಅನೇಕರಿಗೆ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ಕುಜದೋಷ ಅಥವಾ ಕುಟುಂಬದಂತಹ ಕಾರಣಗಳಿಂದ ವಿವಾಹಕ್ಕೆ ಅಡಚಣೆಗಳು ಎದುರಾಗಬಹುದು. ಇಂತಹ ಸಮಸ್ಯೆಗಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಿಹಾರಗಳಲ್ಲಿ ಶ್ರೀ ವೈಭವ ಲಕ್ಷ್ಮಿ ವ್ರತವು ಅತ್ಯಂತ ಪ್ರಮುಖವಾಗಿದೆ. ಇದು ಶೀಘ್ರ ವಿವಾಹಕ್ಕೆ ಅತ್ಯಂತ ಪರಿಣಾಮಕಾರಿ ವ್ರತವೆಂದು ಹೇಳಲಾಗುತ್ತದೆ.

ವೈಭವ ಲಕ್ಷ್ಮಿ ವ್ರತವನ್ನು ಕನ್ಯೆಯರು, ಮದುವೆಯಾದವರು ಮತ್ತು ನವದಂಪತಿಗಳು ಸಹ ಆಚರಿಸಬಹುದು. ಈ ವ್ರತವು ಕೇವಲ ಶೀಘ್ರ ವಿವಾಹಕ್ಕೆ ಮಾತ್ರವಲ್ಲದೆ, ಸಂತಾನ ಪ್ರಾಪ್ತಿ, ಕುಟುಂಬದ ಏಳಿಗೆ, ಸಿರಿ ಸಂಪತ್ತು, ಆರ್ಥಿಕ ಸಮಸ್ಯೆಗಳ ನಿವಾರಣೆ ಮತ್ತು ಕೀರ್ತಿ-ಪ್ರತಿಷ್ಠೆಗಳಿಗೂ ಶ್ರೇಯಸ್ಸನ್ನು ನೀಡುತ್ತದೆ. ಇದನ್ನು ಮನೆಯಲ್ಲೇ ಸರಳ ವಿಧಿ-ವಿಧಾನಗಳೊಂದಿಗೆ ಆಚರಿಸಬಹುದು. ಶುಕ್ರವಾರದಂದು ಶುಚಿರ್ಭೂತರಾಗಿ, ಮನೆಯನ್ನು ಶುದ್ಧಿ ಮಾಡಿ, ಕೆಂಪು ವಸ್ತ್ರದ ಮೇಲೆ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಮುಖ್ಯ. ಶ್ರದ್ಧೆಯಿಂದ ಐದು ಅಥವಾ ಏಳು ಶುಕ್ರವಾರಗಳ ಕಾಲ ಈ ವ್ರತವನ್ನು ಆಚರಿಸಿದವರಿಗೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

Published on: Dec 10, 2025 07:08 AM