Daily Devotional: ದೈವಂ ಮಾನುಷ್ಯರೂಪೇಣ ಇದರ ಹಿಂದಿನ ರಹಸ್ಯ ಗೊತ್ತಾ?
ದೈವಂ ಮಾನುಷ ರೂಪೇಣ ಎಂದರೆ ದೇವರು ಮನುಷ್ಯ ರೂಪದಲ್ಲಿರುತ್ತಾನೆ ಎಂಬುದು. ಕಷ್ಟದಲ್ಲಿರುವವರಿಗೆ ಅನ್ನ, ವಿದ್ಯೆ, ವಸ್ತ್ರ ನೀಡಿ ಸಹಾಯ ಮಾಡುವುದು ದೇವರಿಗೆ ಸಲ್ಲಿಸಿದ ಸೇವೆಗೆ ಸಮ. ದೇವಾಲಯಗಳಲ್ಲಿ ವಿಗ್ರಹ ಪೂಜೆಗಿಂತಲೂ, ಮಾನವರಲ್ಲಿ ದೈವತ್ವವನ್ನು ಕಂಡು ಸೇವೆಗೈಯುವುದರಿಂದ ಭಗವಂತನ ಕೃಪೆಗೆ ನೇರವಾಗಿ ಪಾತ್ರರಾಗಬಹುದು.
ಬೆಂಗಳೂರು, ನವೆಂಬರ್ 15:ನಿತ್ಯಭಕ್ತಿ ಕಾರ್ಯಕ್ರಮದಲ್ಲಿ “ದೈವಂ ಮಾನುಷ ರೂಪೇಣ” ಎಂಬ ಮಹಾವಾಕ್ಯದ ರಹಸ್ಯವನ್ನು ಕುರಿತು ಚರ್ಚಿಸಲಾಗಿದೆ. ಸರ್ವಾಂತರಯಾಮಿ, ಸರ್ವವ್ಯಾಪಿ, ಸರ್ವಶಕ್ತನಾದ ದೇವರು ಎಲ್ಲಾ ಕಡೆ ಇದ್ದರೂ, ಮನುಷ್ಯ ರೂಪದಲ್ಲಿ ಹೆಚ್ಚು ಪ್ರಕಟಗೊಳ್ಳುತ್ತಾನೆ ಎಂಬುದು ಇದರ ತಾತ್ಪರ್ಯ. ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು, ಶ್ರೀಧರ ಸ್ವಾಮಿಗಳು, ಹಾಗೂ ನಡೆದಾಡುವ ದೇವರಾದ ಡಾ. ಶಿವಕುಮಾರ್ ಸ್ವಾಮಿಗಳಂತಹ ಮಹನೀಯರು ಈ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ.
ಮಹನೀಯರು ವಿದ್ಯೆ, ಅನ್ನ, ಆಶ್ರಯ ನೀಡಿ ಅನೇಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮೂಲಕ ದೈವತ್ವವನ್ನು ಪ್ರಕಟಿಸಿದ್ದಾರೆ. ನಾವು ಯಾರಿಗಾದರೂ ಅನ್ನ, ವಿದ್ಯೆ, ಅಥವಾ ವಸ್ತ್ರದ ರೂಪದಲ್ಲಿ ಸಹಾಯ ಮಾಡಿದರೆ, ಅದು ನೇರವಾಗಿ ಭಗವಂತನಿಗೆ ಸಲ್ಲುತ್ತದೆ. ನಮ್ಮ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವಗಳನ್ನು ಅನಾಥರು ಅಥವಾ ಅಭಾಗ್ಯರೊಂದಿಗೆ ಆಚರಿಸುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ. ಆಸ್ಪತ್ರೆಗಳಲ್ಲಿ ಅಥವಾ ಅನಾಥಾಲಯಗಳಲ್ಲಿ ಕರುಣೆ ತೋರುವುದರಿಂದ ನಮ್ಮ ಕರ್ಮಗಳು ಕಡಿಮೆಯಾಗಿ ಶುಭವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭಗವಂತನ ಅಂಶವಿದೆ ಎಂಬ ನಂಬಿಕೆಯಿಂದ ಯಾರಿಗೂ ಕೀಳಾಗಿ ಕಾಣದೆ, ಅಪಹಾಸ್ಯ ಮಾಡದೆ ವರ್ತಿಸಬೇಕು. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವವರು ಭಗವಂತನ ಸ್ವರೂಪವೇ ಆಗಿರುತ್ತಾರೆ.
Video: ಹಾಸ್ಟೆಲ್ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ

