Daily Devotional: ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದ ಆರಂಭದೊಂದಿಗೆ, ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು ಎಂಬ ಸಾಮಾನ್ಯ ಪ್ರಶ್ನೆ ಉದ್ಭವಿಸುತ್ತದೆ. ಧನುರ್ಮಾಸವು ಕೇವಲ ಚಳಿಯ ಮಾಸವಾಗಿರುವುದರಿಂದ ಶುಭ ಕಾರ್ಯಗಳನ್ನು ನಿಷಿದ್ಧವೆಂದು ಭಾವಿಸುವುದು ಸರಿಯಲ್ಲ. ಬದಲಾಗಿ, ಇದರ ಹಿಂದೆ ಆಳವಾದ ಜ್ಯೋತಿಷ್ಯದ ಕಾರಣವಿದೆ. ವಿವಾಹ, ಗೃಹಪ್ರವೇಶ, ಹೊಸ ಆಸ್ತಿ ಖರೀದಿ ಅಥವಾ ವಾಹನ ಖರೀದಿ ಸೇರಿದಂತೆ ಯಾವುದೇ ಶುಭ ಕಾರ್ಯಕ್ಕೆ ಗುರುಬಲ ಅತ್ಯಗತ್ಯ.
ಬೆಂಗಳೂರು, ಡಿಸೆಂಬರ್ 16: ಧನುರ್ಮಾಸದ ಆರಂಭದೊಂದಿಗೆ, ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಏಕೆ ಮಾಡಬಾರದು ಎಂಬ ಸಾಮಾನ್ಯ ಪ್ರಶ್ನೆ ಉದ್ಭವಿಸುತ್ತದೆ. ಧನುರ್ಮಾಸವು ಕೇವಲ ಚಳಿಯ ಮಾಸವಾಗಿರುವುದರಿಂದ ಶುಭ ಕಾರ್ಯಗಳನ್ನು ನಿಷಿದ್ಧವೆಂದು ಭಾವಿಸುವುದು ಸರಿಯಲ್ಲ. ಬದಲಾಗಿ, ಇದರ ಹಿಂದೆ ಆಳವಾದ ಜ್ಯೋತಿಷ್ಯದ ಕಾರಣವಿದೆ.
ವಿವಾಹ, ಗೃಹಪ್ರವೇಶ, ಹೊಸ ಆಸ್ತಿ ಖರೀದಿ ಅಥವಾ ವಾಹನ ಖರೀದಿ ಸೇರಿದಂತೆ ಯಾವುದೇ ಶುಭ ಕಾರ್ಯಕ್ಕೆ ಗುರುಬಲ ಅತ್ಯಗತ್ಯ. ಜ್ಯೋತಿಷ್ಯದ ಪ್ರಕಾರ, ಗುರುಗ್ರಹವೇ ಎಲ್ಲಾ ಶುಭ ಕಾರ್ಯಗಳಿಗೆ ಅಧಿಪತಿ. ಧನುರ್ಮಾಸದಲ್ಲಿ ಸೂರ್ಯನು ಗುರುಗ್ರಹದ ಧನುರ್ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ತನ್ನ ಮನೆಯಲ್ಲಿ ಇಲ್ಲದಿದ್ದಾಗ, ಮನೆಯ ಅಧಿಪತಿಯಾದ ಗುರುವಿನ ಶಕ್ತಿ ಅಥವಾ ಬಲ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಗುರುವಿಗೆ ಶಕ್ತಿ ಕಡಿಮೆಯಾದಾಗ ಕೈಗೊಳ್ಳುವ ಯಾವುದೇ ಮಹತ್ವದ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುವ ಸಾಧ್ಯತೆಗಳಿರುತ್ತವೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.
Published on: Dec 16, 2025 07:04 AM
