AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 17 December: ಇಂದು ಈ ರಾಶಿಯವರಿಗೆ ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವರು

ದಿನ ಭವಿಷ್ಯ, 17, ಡಿಸೆಂಬರ್​​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ತ್ರಯೋದಶೀ ತಿಥಿ ಬುಧವಾರ ದೈಹಿಕ ಶ್ರಮ, ನಿಷ್ಕಾಳಜಿ, ಬಾಂಧವ್ಯ ಗಟ್ಟಿ, ಅತ್ಯತ್ಸಾಹ, ಅಪನಂಬಿಕೆ, ಗುರಿಯ ನಿರ್ಧಾರ, ಪುಣ್ಯಸ್ಥಳಕ್ಕೆ ಗಮನ, ಅಧಿಕಾರದಲ್ಲಿ ಅತೃಪ್ತಿ, ಹಣಕ್ಕಾಗಿ ಹಪಹಪಿಕೆ ಇವೆಲ್ಲ ಇಂದಿನ ವಿಶೇಷ.

Horoscope Today 17 December: ಇಂದು ಈ ರಾಶಿಯವರಿಗೆ ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 17, 2025 | 12:40 AM

Share

ಮೇಷ ರಾಶಿ:

ಇಂದು ಸುಪ್ತಭಾವನೆಯೇ ದಿಕ್ಕು ತೋರಿಸುವುದು. ಕನಸು ಸೂಚನೆ ಕೊಡುತ್ತದೆ, ತಳ್ಳಿಬಿಡಬೇಡಿ. ಇಂದು ಮನೆಯಿಂದ ದೂರವಿರಬೇಕಾದ ಸ್ಥಿತಿ ಬರುವುದು. ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರಲಿದೆ. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವಂತೆ ನೋಡಿಕೊಳ್ಳುವಿರಿ. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ನೂತನ ಗೃಹನಿರ್ಮಾಣವನ್ನು ಮಾಡಲು ಚಿಂತಿಸುವಿರಿ. ಸೇವೆಗೆ ಮನಸ್ಸನ್ನು ಕರಗಿಸುವ ಶಕ್ತಿ ಬರುತ್ತದೆ. ನಿಮಗೆ ಸಿಗಬೇಕಾದುದನ್ನು ಧೈರ್ಯದಿಂದ‌‌ ಕೇಳಿ ಪಡೆದುಕೊಳ್ಳಿ. ಯಾರಾದರೂ ಸಂಗಾತಿಯ ಬಗ್ಗೆ ಕಿವಿಚುಚ್ಚಬಹುದು.

ವೃಷಭ ರಾಶಿ:

ಅದೇ ಕಾರ್ಯವಾದರೂ ವಿಚಿತ್ರ ಆಲೋಚನೆ ಇಂದು ಪ್ರಶಂಸೆ ಕೊಡಲಿದೆ. ಸಾಮಾನ್ಯ ಮಾರ್ಗ ಬಿಟ್ಟು ಬೇರೆ ದಾರಿ ಹಿಡಿದರೆ ಲಾಭ. ಇಂದು ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಸಂತೋಷದಿಂದ ಮಾಡುವುದನ್ನು ಕಷ್ಟಪಟ್ಟು ಮಾಡುವಿರಿ. ಸಂಚಾರದಲ್ಲಿ ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಿ. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಉದ್ಯೋಗದ ಬಗ್ಗೆ ಅನೇಕ ಸಲಹೆಗಳು ಬರಬಹುದು. ಒಂಟಿತನದಲ್ಲೇ ಹೊಸ ದೃಷ್ಟಿ. ಸಮಾಜಕ್ಕೆ ಸಂಬಂಧಿಸಿದ ಯೋಚನೆಗೆ ಮೆಚ್ಚುಗೆ. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಆಲಿಸಿ. ನಿಮ್ಮ ನೋವಿಗೆ ಯಾರೂ ಸ್ಪಂದಿಸದಿರುವುದು ನಿಮಗೆ ಬೇಸರವಾಗುವುದು. ಕಷ್ಟವಾದರೂ ಇಂದು ವೃತ್ತಿಯನ್ನು ಮಾಡುವಿರಿ. ಇಂದು ನಿಮ್ಮ ಸಾಮರ್ಥ್ಯದ ಮೇಲೆ ಪೂರ್ಣವಿಶ್ವಾಸವು ಇರದು.

ಮಿಥುನ ರಾಶಿ:

ಭಾರ ಹೊತ್ತ ಕೈಗಳೇ ಗುರಿ ತಲುಪಿಸುತ್ತವೆ. ವಿಳಂಬವಾಗಿ ಬಂದ ಫಲ ಹೆಚ್ಚು ಸ್ಥಿರ. ಅಪ್ರಾಮಾಣಿಕತೆಯಿಂದ ಆದ ಲಾಭವು ಸದ್ಯಕ್ಕೆ ಸಂತೋಷವನ್ನು ಕೊಡುವುದು. ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಸಹೋದ್ಯೋಗಿಗಳ ಸಹಾಕಾರವು ನೀವು ನಿರೀಕ್ಷಿಸಿದಂತೆ ಸಿಗಲಿದೆ. ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಅಧ್ಯಾತ್ಮದ ಮಾನಸಿಕೆ ನಿಮ್ಮೊಳಗೆ ರೂಪತಾಳುವುದು. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಕೇಳಿ ಸರಿ ಮಾಡಿಕೊಳ್ಳಿ. ಹಿರಿಯರ ಮೌನವನ್ನು ಅನುಮೋದನೆ ಎಂದು ಭಾವಿಸುವಿರಿ. ಶ್ರಮದ ಹಿಂದೆ ಕಾಣದ ರಕ್ಷಣೆ ಇದೆ. ನೀವು ಕುಟುಂಬದ ಬಗ್ಗೆ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿಯಾಗುವುದು. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ಗಣ್ಯರ ಭೇಟಿಯು ಸಂತೋಷವನ್ನು ನೀಡುವುದು.

ಕರ್ಕಾಟಕ ರಾಶಿ:

ಅಲ್ಪ ಸಮಯವನ್ನು ಸಮಾಜದ ಕಾರ್ಯಕ್ಕೆ ಕೊಡಬೇಕೆನಿಸುವುದು. ಅನ್ಯರ ದೋಷವನ್ನೇ ಹುಡುಕುತ್ತ ಇರುವುದು ಸರಿಯಾಗದು. ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ವ್ಯಾಪಾರದಲ್ಲಿ ಅನುಕೂಲತೆ ಇದ್ದರೂ ಉದರ ಪೀಡಿಯು ನಿಮ್ಮ ವ್ಯಾಪಾರದ ಉತ್ಸಾಹವನ್ನು ಕಡಿಮೆ ಮಾಡುವುದು. ನಿಮ್ಮ ಅಭಿಪ್ರಾಯವು ಸ್ಪಷ್ಟವಾಗಿ ಇರಲಿ. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಇನ್ನೊಬ್ಬರನ್ನು ನೂಕಿ ಆಳ ನೋಡುವ ಜಾಯಮಾನ ಬೇಡ. ಯಾರನ್ನಾದರೂ ಪ್ರೀತಿಸುವ ಮನಸ್ಸಾಗುವುದು. ಮನೆಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ದೂರದ ಚಿಂತನೆ ನಿಮ್ಮನ್ನು ಎತ್ತರಕ್ಕೆ ಏರಿಸುತ್ತದೆ. ಆತುರ ಬೇಡ, ಸಮಯ ನಿಮ್ಮ ಪಾಲಿನದ್ದಾಗಲಿದೆ. ಇಂದು ನೀವು ಕೇಳುವ ಪ್ರಶ್ನೆಗಿಂತ ಪಡೆದ ಉತ್ತರವೇ ಅತಿ ಮುಖ್ಯ. ಅಂತರಂಗದಲ್ಲಿ ಸಾತ್ತ್ವಿಕ ಬೀಜ ಬಂದು ಬೀಳಬಹುದು.

ಸಿಂಹ ರಾಶಿ:

ರಹಸ್ಯ ಕಾರ್ಯಾಚರಣೆ ಫಲ ನೀಡುವ ದಿನ. ಯಾರಿಗೂ ಗೊತ್ತಾಗದಂತೆ ಮಾಡಿದ ನಿರ್ಧಾರವು ನಿಮ್ಮ ಮೇಲೆ ಅನುಮಾನ ಬರುವಂತೆ ಮಾಡುತ್ತದೆ. ಅಪರಿಚಿತರ ಮಾತಿಗೆ ಮನಸೋಲುವಿರಿ. ಪ್ರೀತಿ ಶುರುವಾಗಬಹುದು. ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಪರಪುರುಷರಿಂದ ಏನಾದರೂ ತೊಂದರೆಗಳು ಆಗಬಹುದು. ಧ್ಯಾನದ ಪರಿಣಾಮ ನಿಮ್ಮ ಮೇಲಾಗಲಿದೆ. ಶಾಂತ ಶಕ್ತಿಯನ್ನು ನಿಮ್ಮ ಆಯುಧ ಮಾಡಿಕೊಳ್ಳುವಿರಿ. ಕಾರ್ಯದಲ್ಲಿ ಗೊಂದಲವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಅವರ ಮಾತಿಗೆ ಕಿವಿಯಾಗಿ.

ಕನ್ಯಾ ರಾಶಿ:

ಸಮತೋಲನವನ್ನು ಹೊರಗೆಲ್ಲಿಲ್ಲ ನಿಮ್ಮೊಳಗೆ ಕಂಡುಕೊಳ್ಳಿ. ಇಂದು ನೀವು ಉತ್ತರಿಸಬೇಕಾದ ವಿಚಾರಕ್ಕೆ ಹೌದು ಅಥವಾ ಇಲ್ಲ ಸ್ಪಷ್ಟವಾಗಿ ಹೇಳಿ. ಸಂಗಾತಿಯನ್ನು ಸಂಭಾಳಿಸಲು ಸೋಲಾಗಬಹುದು. ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ಮೇಲಧಿಕಾರಿಗಳ ಜೊತೆ ದೂರ ಪ್ರಯಾಣವನ್ನು ಮಾಡಬೇಕಾಗುವುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಬಂಧುಗಳು ನಿಮ್ಮ‌ ಬಗ್ಗೆ ಸಲ್ಲದ ಅಭಿಪ್ರಾಯವನ್ನು ಹೇಳಿಯಾರು. ಯಾರ ಮೇಲೂ ಪಕ್ಷಪಾತ ಮಡುವುದು ಬೇಡ. ಸಂಬಂಧದಲ್ಲಿ ಹೊಸ ಹಂತ ತೆರೆದುಕೊಳ್ಳುವುದು. ಸೌಂದರ್ಯ ಮನಸ್ಸನ್ನು ಸ್ಥಿರಗೊಳಿಸುತ್ತದೆ. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗಬೇಕಾಗುವುದು. ದೂರ ಪ್ರಯಾಣವು ನಿಮ್ಮ ಆರೋಗ್ಯದ ಮೇಲೆ‌ ಪರಿಣಾಮ ಬೀರಬಹುದು. ಸಂಗಾತಿಯ ಎದುರು ಇಂದು ಮೌನವಾಗಿರುವಿರಿ.

ತುಲಾ ರಾಶಿ:

ಸಣ್ಣ ಬದಲಾವಣೆಯಿಂದ ದೊಡ್ಡ ಫಲವನ್ನು ಕಾಣುವಿರಿ. ಸರಿಯಾದ ಆರೋಗ್ಯ, ದಾಖಲೆ, ಲೆಕ್ಕ ಇವೆ ನಿಮ್ಮ ರಕ್ಷಣೆಯ ವೃತ್ತ. ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ಆಪ್ತರ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ನೀವು ಹಣದ ಸುಳಿವನ್ನು ಪಡೆದು ಪ್ರಪಾತಕ್ಕೆ ಬೀಳುವಿರಿ. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ಸರ್ಕಾರದ ಕಾರ್ಯವು ಬಹಳ ದಿನಗಳಿಂದ ಹಾಗೆಯೇ ಉಳಿದಿದ್ದು ನಿಮಗೆ ಇದರಿಂದ ಬೇಸರವಾಗುವುದು. ಸೇವೆ ಮಾಡಿದರೆ ಗುರುತು ಬೇಡ; ಅದಕ್ಕೆ ತೃಪ್ತಿಯೇ ಫಲ. ಕ್ರಮಬದ್ಧತೆ ನಿಮ್ಮ ಕವಚವಾಗಿರಲಿದೆ. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಹಿಂಜರಿಯುವಿರಿ. ಸ್ತ್ರೀಯರು ನೂತನ ವಸ್ತುಗಳನ್ನು ಖರೀದಿಸಿ ಸಂತೋಷಪಡುವರು. ನಿಮ್ಮ ಅಕ್ಕಪಕ್ಕದವರ ಮೇಲೆ‌ಅಲ ಸದಭಿಪ್ರಾಯವು ಇರದು.

ವೃಶ್ಚಿಕ ರಾಶಿ:

ಇಂದು ನಿಮ್ಮೊಳಗಿನ ಬೆಳಕು ಪ್ರದರ್ಶನಕ್ಕಲ್ಲ, ಮಾರ್ಗದರ್ಶನಕ್ಕೆ ಮಾತ್ರ. ನೀವು ಗಂಭೀರವಾಗಿದ್ದಷ್ಟೂ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಗೃಹ ನಿರ್ಮಾಣಕ್ಕೆ ಯಾರಿಂದಲಾದರೂ ಸಹಕಾರ ಸಿಗಲಿದೆ. ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನು ತರುವುದು. ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಕೆಲವರ ಮಾತು ಶಾಪವಾದರೂ ವರವಾಗಬಹುದು. ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಅಧಿಕಾರಕ್ಕಿಂತ ನಂಬಿಕೆ ಗೆಲ್ಲುವ ದಿನ. ಅಹಂ ಬಿಟ್ಟ ಕ್ಷಣದಲ್ಲೇ ಜಯ ಸ್ಪಷ್ಟ. ಚರಾಸ್ತಿಯು ನಿಮಗೆ ಗೊತ್ತಾಗದಂತೆ ನಿಮ್ಮ ಕೈತಪ್ಪಿ ಹೋಗಲಿದೆ.

ಧನು ರಾಶಿ:

ಅಪರಿಚಿತರು ಆಗಮನ ಆಗಬಹುದು, ಹೃದಯ ಬಾಗಿಲನ್ನು ನಿಧಾನವಾಗಿ ತೆಗೆಯಿರಿ. ಹಳೆಯ ನೋವು ಇಂದು ಶಕ್ತಿ ಆಗುತ್ತದೆ. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧನಾ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸವು ನಿಮ್ಮ ಕಾರ್ಯವನ್ನು ಹಾಳುಮಾಡಬಹುದು. ವ್ಯವಸ್ಥೆ ವ್ಯವಹಾರದಿಂದ ಚುರುಕುತನದ ಅವಶ್ಯಕತೆ ಇರುವುದು. ನಿಮ್ಮ‌ ಮಾತು ನೇರವಾಗಿಯೂ ಸ್ಪಷ್ಟವಾಗಿಯೂ ಇರಲಿ.‌ ಮನೆಯನ್ನು ಬದಲಿಸುವಿರಿ. ಕುಟುಂಬದ ಒಬ್ಬರ ಮೌನವೇ ಸತ್ಯ ಹೇಳುತ್ತದೆ. ಆಗಾಧ ನೀರಿನ ಹತ್ತಿರ ಕಳೆದ ಸಮಯ ನಿಮ್ಮ ಆಂತರಿಕ ಭಾರವನ್ನ ಇಳಿಸುತ್ತದೆ. ನೀವು ನಿಮ್ಮನ್ನೇ ಪ್ರಶಂಸಿಸಿಕೊಳ್ಳುವುದು ಸರಿ ಕಾಣಿಸದು.

ಮಕರ ರಾಶಿ:

ಇಂದು ಉತ್ತರ ಮಾತಿನಲ್ಲಿ ಇಲ್ಲ, ಕೇಳುವಿಕೆಯಲ್ಲಿರಲಿದೆ. ನೀವು ಮರೆತ ವಿಚಾರ ಮತ್ತೆ ಸ್ಮರಣೆಗೆ ಬರಲಿದೆ. ಚಿಕ್ಕ ತಪ್ಪು ದೊಡ್ಡ ಪಾಠವಾಗಲಿದೆ. ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಅನಿವಾರ್ಯವಾಗಿ ಸಣ್ಣ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ಮಂಗಲ ಕಾರ್ಯಕ್ಕೆ ಬಹಳ ಸಿದ್ಧತೆಯನ್ನು ಮಾಡುವಿರಿ. ಪ್ರಯಾಣದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ಕಳುಹಿಸಬಹುದು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಬಹಳ ಚಿಂತೆಯಿಂದ ಇರುವಿರಿ. ಇಂದು ನಿಮಗೆ ಕುಟುಂಬದ ಜೊತೆ ಇರುವುದು ಖುಷಿ ಕೊಡದು. ಎರಡು ದಾರಿಗಳಲ್ಲಿ ಒಂದನ್ನು ಮನಸ್ಸಲ್ಲ, ಅನುಭವ ಆಯ್ಕೆಮಾಡುತ್ತದೆ. ಆರ್ಥಿಕತೆಯ ವಿಚಾರದಲ್ಲಿ ನೀವು ನಿಷ್ಠುರತೆ ಇರಲಿದೆ. ಸಂಗಾತಿಯ ಬೇಸರವನ್ನು ಸಾಂತ್ವನ ಮಾಡಿ ಬಗೆಹರಿಸುವಿರಿ. ಆಕಸ್ಮಿಕವಾಗಿ ಅಸದ ಧನಲಾಭವನ್ನು ಬಿಟ್ಟುಕೊಡುವಿರಿ.

ಕುಂಭ ರಾಶಿ:

ನಿಮ್ಮ ಸಹನೆಯೇ ಇಂದು ಮೌನವಾಗಿ ವಿಜಯವನ್ನು ಸಾಧಿಸುವುದು. ಕೈಗೆ ಸಿಗದೆಂದುಕೊಂಡ ವಿಷಯವೇ ಹತ್ತಿರ ಬರುತ್ತದೆ. ಕಾರ್ಯದಲ್ಲಿ ಒತ್ತಡವು ಒಮ್ಮೆಲೆ ಅಧಿಕವಾಗಿ ಬಂದು ದಿಕ್ಕು ಕಾಣದಾಗಬಹುದು. ನಿಮ್ಮವರನ್ನು ಕಂಡು ನೀವೇ ಅಸೂಯೆಪಡುವಿರಿ. ನಿಮ್ಮೆದುರು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಆಹಾರವು ನಿಮಗೆ ರುಚಿಸದೇ ಹೋಗುವುದು. ಮಕ್ಕಳಿಗೆ ಜೊತೆ ಇದ್ದು ಕಲಿಕೆಗೆ ಬೇಕಾದ ಸಹಾಯವನ್ನು ಮಾಡುವಿರಿ. ದೂರ ಪ್ರಯಾಣದಿಂದ ಆರೋಗ್ಯವು ಹದಗೆಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ಭೂಮಿಯ ಮಣ್ಣು, ಅಲ್ಲಿ ಬೆಳೆದ ಸಸ್ಯಗಳು ನಿಮ್ಮ ದುಃಖದ ಮನಸ್ಸನ್ನು ಗುಣಪಡಿಸುತ್ತದೆ. ಹಣಕ್ಕಿಂತ ಮೌಲ್ಯಕ್ಕೆ ಮಹತ್ವ ಸಿಗುತ್ತದೆ. ಯಾವುದೇ ಕಾರ್ಯಕ್ಕೂ ನೀವು ಮುನ್ನುಗ್ಗುವುದು ಇಷ್ಟವಾಗದು. ವ್ಯವಹಾರದಲ್ಲಿ ನೀವು ಸರಿಯಾಗಿ ಇರದೇ ಇರುವುದು ನಿಮಗೆ ಕಷ್ಟವಾಗಬಹುದು.

ಮೀನ ರಾಶಿ:

ಇಂದು ನಿಮ್ಮೊಳಗೆ ಉತ್ತರ ಮೊದಲು ಹುಟ್ಟುತ್ತದೆ, ಅನಂತರ ಪ್ರಶ್ನೆ. ಧೈರ್ಯದಿಂದ ಹಿಂದೆ ಸರಿದರೇ ಇಂದು ಲಾಭ. ಕೆಲವಷ್ಟನ್ನು ಗಮನಿಸಿದರೆ ಸಾಕು. ಇಂದು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮವರನ್ನು ನೀವು ಬಿಟ್ಟಕೊಡಲು ಇಷ್ಟಪಡುವುದಿಲ್ಲ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಹೆಚ್ಚು ಖುಷಿಕೊಡುವುದು. ಯಾರೋ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂಬುದೇ ನಿಮಗೆ ಮತ್ತೆ ಮತ್ತೆ ಅನ್ನಿಸುವುದು. ಸಂಜೆಯ ಹೊತ್ತಿಗೆ ನಿರ್ಧಾರ ಮತ್ಯಾರದೋ ಪಾಲಾಗುತ್ತದೆ. ಸಂಗಾತಿಯ ಕೆಲವು ಮಾತುಗಳು ನಿಮಗೆ ಸರಿ ಎನಿಸದು. ಶುಭ ಸುದ್ದಿಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ.

17 ಡಿಸೆಂಬರ್​​ 2025ರ ಬುಧವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಸ್ವಾತೀ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ – 06 – 43 am, ಸೂರ್ಯಾಸ್ತ – 05 – 58 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:21 – 13:45, ಯಮಗಂಡ ಕಾಲ 08:07 – 09:32, ಗುಳಿಕ ಕಾಲ 10:56 – 12:21

-ಲೋಹಿತ ಹೆಬ್ಬಾರ್ – 8762924271 (what’s app only)