Daily Horoscope 19 July 2024: ತುಲಾ ರಾಶಿಯವರು ಇಂದು ಸಾಲ ಮಾಡಬೇಕಾಗುವುದು; ದಿನ ಭವಿಷ್ಯ ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2024 | 12:15 AM

ಜುಲೈ 19,​​ 2024ರ​​ ನಿಮ್ಮ ರಾಶಿಭವಿಷ್ಯ: ಅನೇಕ ಜನರು ಮನರಂಜನೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಘಟಿಸುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ. ಹಾಗಾದರೆ ಜುಲೈ 19ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 19 July 2024: ತುಲಾ ರಾಶಿಯವರು ಇಂದು ಸಾಲ ಮಾಡಬೇಕಾಗುವುದು; ದಿನ ಭವಿಷ್ಯ ಇಲ್ಲಿದೆ
ರಾಶಿ ಭವಿಷ್ಯ
Follow us on

ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ (Horoscope) ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಐಂದ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 11:03ರಿಂದ 12:39ರ ವರೆಗೆ, ಯಮಘಂಡ ಕಾಲ 15:52ರಿಂದ 17:28ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:50ರಿಂದ 09:26ರ ವರೆಗೆ.

ಮೇಷ ರಾಶಿ : ಅನಾರೋಗ್ಯವನ್ನು ನಗಣ್ಯ ಮಾಡುವುದು ಬೇಡ. ಉಚಿತ ಚಿಕಿತ್ಸೆಯಿಂದ ಆರಂಭದಲ್ಲಿಯೇ ಪರಿಹಾರ ಮಾಡಿಲೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿರೋಧಿಗಳು ತಡಯಬಹುದು. ಬಂಧುಗಳ ಸಹಕಾರದಿಂದ ನಿಮ್ಮ‌ಋಣ ಬಾಧೆ ಸದ್ಯ ತೀರುವುದು. ಹದಗೆಟ್ಟ ಆರೋಗ್ಯವು ಸರಿಯಾಗುವುದು. ಧಾರ್ಮಿಕ ನಾಯಕರಿಗೆ ಸುಕಾಲ. ಮಾನಸಿಕವಾಗಿ ನೀವು ಸ್ವಲ್ಪ ಕುಗ್ಗುವಿರಿ. ಆಲಸ್ಯದಿಂದ ಅವಕಾಶವಂಚಿತರಾಗುವ ಸಾಧ್ಯತೆ ಇದೆ. ನಿಕಟವರ್ತಿಗಳ ಮಾತನ್ನು ನಿರ್ಲಕ್ಷ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಅಲಕ್ಷ್ಯ ಮಾಡಿದರೆ ಉತ್ತಮ. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ದೂರ ಪ್ರಯಾಣವನ್ನು ಜಾಗರೂಕತೆಯಿಂದ ಮಾಡುವುದು ಅವಶ್ಯಕ. ನಿಮ್ಮ ತೀರ್ಮಾನಕ್ಕೆ ಬದ್ಧರಾಗಿರಿ.

ವೃಷಭ ರಾಶಿ : ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ವಾಹನದ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆಕಸ್ಮಿಕ ಧನಲಾಭವು ನಿಮ್ಮನ್ನು ಖುಷಿಯಾಗಿಡಲಿದೆ. ರಾಜಕೀಯವಾಗಿ ಪ್ರೇರಿತವಾದ ಮಾತುಗಳು ನಿಮ್ಮಿಂದ ಬರಬಹುದು. ನಿಮ್ಮಿಂದಾದ ತಪ್ಪನ್ನು ನೀವೇ ಸರಿಮಾಡಿಕೊಳ್ಳಬೇಕು. ಶ್ರದ್ಧೆ ಇಲ್ಲದೇ ಇದ್ದರೂ ಕಾರ್ಯಗಳನ್ನು ಮಾಡಬೇಕಾದೀತು. ಮನಸ್ಸು ಚಂಚಲವಾದಾಗ ಹಿರಿಯರ ಮಾತುಗಳನ್ನು ಕೇಳಿ. ಅದು ನಿಮಗೆ ಹಿತವೆನಿಸೀತು. ದೂರದ ಬಂಧುಗಳು ಇಂದು ಪರಿಚಿತರಾಗಿ ಹತ್ತಿರವಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ. ಉತ್ತಮ ಕಾರ್ಯಕ್ಕೆ ಯಾರಿಂದಲಾದರೂ ಪ್ರೇರಣೆ ಪಡೆಯಬೇಕಾಗಬಹುದು.

ಮಿಥುನ ರಾಶಿ : ಸಂಗಾತಿಯನ್ನು ನಿಂದಿಸುವುದು ಕಲಹಕ್ಕೆ ಕಾರಣವಾಗುವುದು. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯವು ಸುದೃಢವಾಗಿ ಇರಲಿದೆ. ಸಂಬಂಧಗಳನ್ನು ಕೂಡಿಸಿಕೊಳ್ಳುವ ಪ್ರಯತ್ನ ಮಾಡಿ. ಉತ್ಸಾಹದ ರಹಸ್ಯವನ್ನು ಹೇಳುವುದು ಬೇಡ. ತಾಯಿಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಸಮಾರಂಭದಲ್ಲಿ ಪ್ರಭಾವೀ ಜನರ ಭೇಟಿಯಾಗಲಿದೆ. ಬಾಂಧವ್ಯದಲ್ಲಿ ಬಿರುಕು ಬಂದಿದ್ದು ಅದನ್ನು ಸರಿ ಮಾಡಿಕೊಳ್ಳುವಿರಿ. ಗುಂಪಿನಲ್ಲಿ ಕೆಲಸ ಮಾಡುವುದನ್ನು ಇಷ್ಟಪಡುವಿರಿ. ಕೇಳಿದರೆ ಮಾತ್ರ ಉತ್ತರಿಸಿದರೆ ಸಾಕು. ಎಲ್ಲದಕ್ಕೂ ಮೂಗು ತೂರಿಸುವ ಅವಶ್ಯಕತೆ ಇಲ್ಲ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು.

ಕಟಕ ರಾಶಿ : ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಅನ್ಯರ ತಪ್ಪಿದ್ದರೂ ಅದನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡಿ. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಮಾಡಬೇಕಾದೀತು. ಹಣವನ್ನು ಸಂಪಾದಿಸಬೇಕು ಎನ್ನುವ ಅತಿಯಾದ ಆಸೆ ನಿಮ್ಮ ಮನಸ್ಸಿನಲ್ಲಿ ಬೇರೂರುವುದು. ವಿದೇಶದ ಬಂಧುಗಳು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ನಿಮಗೆ ಬರಬೇಕಾದುದನ್ನು ಹೋರಾಟದಿಂದ ಪಡೆದುಕೊಳ್ಳುವಿರಿ. ದುರಭಿಮಾನದಿಂದ ಸಹಾಯವೂ ಸಿಗದೇಹೋಗಬಹುದು. ನೀವು ಸಂಗಾತಿ ದೌರ್ಬಲ್ಯಗಳನ್ನು ಅಸ್ತ್ರಮಾಡಿಕೊಳ್ಳುವಿರಿ. ಆಪ್ತರ ಬಗ್ಗೆ ನಿಮ್ಮ ಭಾವನೆ ನಕಾರಾತ್ಮಕವಾಗಿ ಇರುವುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ಇರುವ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಮುಖ್ಯ.

ಸಿಂಹ ರಾಶಿ : ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಹಲವು ದಿಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ. ಮಾನಸಿಕ ಸ್ವಾಸ್ಥ್ಯವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ವಾರ್ತೆಗಳು ನಿಮಗೆ ಸಂತೋಷವನ್ನು ತರುವುದು. ಪ್ರೇಮವು ಯಾವುದೇ ಗೊಂದಲವನ್ನು ಸೃಷ್ಟಿಸಬಹುದು. ಸಣ್ಣ ಕೆಲಸವಾದರೂ ಇಂದೇ ಮುಗಿಸಿಕೊಳ್ಳಿ. ಅನಂತರವಾದರೆ ಅನ್ಯ ಕಾರ್ಯಗಳ ನಡುವೆ ವ್ಯಸ್ತರಾಗಬೇಕಾದೀತು. ಸಂಗಾತಿಯ ಅನಾರೋಗ್ಯದಿಂದ ಮನಸ್ಸು ಕುಗ್ಗಬಹುದು. ನಿರುದ್ಯೋಗದಿಂದ ಮಾನಸಿಕವಾಗಿ ಕುಗ್ಗುವಿರಿ. ಸಣ್ಣ ವ್ಯಾಪಾರಿಗಳಿಗೆ ಇಂದು ಲಾಭದ ದಿನ. ಇಂದು ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಪ್ರಯಾಣದಲ್ಲಿ ಜಾಗರೂಕತೆಯಿಂದ ಇರಿ. ಕಷ್ಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ಸಿಗದೇ ಹೋಗಬಹುದು.

ಕನ್ಯಾ ರಾಶಿ : ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ಸಮಯ ಸಿಕ್ಕಾಗ ನೀವು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಇಂದು ಸಂಬಂಧಗಳಿಗೆ ಬೆಲೆ ಕೊಡದೇ ಹಣದ ಹಿಂದೆ ಹೋಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಭೂಮಿಯ ಖರೀದಿಗೆ ಉತ್ತಮ ಕಾಲ. ಬೇರೆಯವರ ಮಾತನ್ನು ನಂಬಿ ಮೋಸಹೋಗುವ ಸಾಧ್ಯತೆ ಇದೆ. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲಬಹುದು. ಅಶಿಸ್ತು ನಿಮಗೆ ಕಿರಿಕಿರಿಯನ್ನು ತರಿಸೀತು. ಸಂಗಾತಿಗೆ ನಿಮ್ಮಿಂದ ಸಂತೋಷ ಸಿಗಲಿದೆ. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಯಾವ ಕಾರ್ಯಕ್ಕೂ ಸಹಾಯ ಸಿಗದೇ ಕಷ್ಟವಾದೀತು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ಯಾರನ್ನೂ ವಿನಾಕಾರಣ ದೂರ ಮಾಡಿಕೊಳ್ಳುವುದು ಬೇಡ.

ತುಲಾ ರಾಶಿ : ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಮತ್ತೊಂದು ಕಡೆ ಸಾಲವನ್ನು ಮಾಡಬೇಕಾಗಬಹುದು. ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಇಂದು ಮನಸ್ಸಿನಲ್ಲಿ ಭಯ ಮತ್ತು ಖಿನ್ನತೆಯಂತಹ ವಿಷಯಗಳಿಗೆ ಕಾರಣವಾಗಬಹುದು. ಒಂದು ಅಪಾಯವನ್ನು ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ಅಪಾಯಕ್ಕೆ ಬೀಳುವ ಸಾಧ್ಯತೆ ಇದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಳ್ಳಿ. ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ನಿಮ್ಮ ದೌರ್ಬಲ್ಯಗಳು ಇತರರಿಗೆ ಸಹಾಯವಾದೀತು. ಸಹೋದರನ ಜೊತೆ ಆಪ್ತ ಮಾತುಕತೆ ನಡೆಯಲಿದೆ. ಸ್ನೇಹಿತರ ಸಹಾಯ ಪಡೆಯಲು ಧನವನ್ನು ವ್ಯಯಿಸಬೇಕಾಗುವುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಯಾವುದನ್ನೇ ಆದರೂ ಸ್ವಾಭಿಮಾನವನ್ನು ಬಿಟ್ಟು ಇರಲಾಗದು. ನಿಮ್ಮ ಘನತೆಗೆ ಧಕ್ಕೆ ಬರುವುದು. ಸಹೋದ್ಯೋಗಿಯ ಜೊತೆ ದೂರ ಪ್ರಯಾಣ ಮಾಡುವಿರಿ.

ವೃಶ್ಚಿಕ ರಾಶಿ : ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಕೆಲವು ವೈಫಲ್ಯಗಳಿಂದ ನೀವು ಪಾಠವನ್ನು ಕಲಿಯಬೇಕಾಗಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮವರ ಮಾತುಗಳಿಂದ ಗಾಬರಿಯಾಗಲಿದ್ದೀರಿ. ಊಹಿಸದೇ ಇರುವ ಮಾತುಗಳನ್ನು ಕೇಳಬೇಕಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಮನೆಯಿಂದ ದೂರ ಇರುವರು. ಮಕ್ಕಳ ಸಾಧನೆಯು ನಿಮಗೆ ಖುಷಿ ಕೊಡುವುದು. ತಪ್ಪಿನ ಬಗ್ಗೆ ನಿಮಗೆ ಅಂಜಿಕೆ ಬರಬಹುದು. ಅಧೀರರಾಗಿ ಹಿಂದೇಟು ಹಾಕುವುಸು ಬೇಡ. ಉದ್ಯಮದಿಂದ ಸಾಕಷ್ಟು ಲಾಭವಿದ್ದರೂ ಅಸಮಾಧನವು ಕಾಡಬಹುದು. ಸಂಗಾತಿಯ ವಿಚಾರಕ್ಕೆ ನೀವು ತಲೆ ಹಾಕಬೇಡಿ. ಪಾಲುದಾರಿಕೆ ವಿಷಯವು ಪ್ರಸ್ತಾಪವಾದಾಗ ಪ್ರಯೋಜನವನ್ನು ತಿಳಿದುಕೊಳ್ಳಿ. ಆಸ್ತಿಯ ಹಂಚಿಕೆಯು ನಿಮಗೆ ಸಮಾಧಾನ ತರದು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಿಕೊಡುವುದು ಉತ್ತಮ.

ಧನು ರಾಶಿ : ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ಮನಸ್ಸೂ ಸಮಾಧಾನದಿಂದ ಇರುವುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಆರಂಭದ ಉತ್ಸಾಹವು ಅಂತ್ಯದ ವರೆಗೆ ಇರಲಾರದು. ಆಹಾರವು ನಿಮ್ಮನ್ನು ಉತ್ಸಾಹದಿಂದ ಇಡುವುದು. ಇತರರಿಗೆ ಧನಸಹಾಯ ಮಾಡಿ ಕಳೆದುಕೊಳ್ಳುವಿರಿ. ಗುರಿಯ ಸಾಧನೆಗೆ ಯಾರನ್ನಾದರೂ ಮಾದರಿಯಾಗಿ ಮಾಡಿಕೊಳ್ಳುವ ಅವಶ್ಯಕತೆ ಇರಲಿದೆ. ಮಕ್ಕಳಿಗೆ ಔದಾರ್ಯ ತೋರಿ, ಅವರ ದೃಷ್ಟಿಯಲ್ಲಿ ದೊಡ್ಡವರಾಗುವಿರಿ. ಶಾರೀರಿಕ ಆಯಾಸವನ್ನು ವಿಶ್ರಾಂತಿಯಿಂದ ಪರಿಹರಿಸಿಕೊಳ್ಳಿ. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ನಿಮ್ಮ ತಿಳುವಳಿಕೆಯ ಬಗ್ಗೆ ಅಹಂಕಾರ ಬೇಡ. ಪ್ರಶಂಸೆಯಿಂದ ಅಹಂಕಾರವು ಬರುವುದು. ‌ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಅಲ್ಪ ಆದಾಯವನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವ ಯೋಚನೆ ಮಾಡುವಿರಿ.

ಮಕರ ರಾಶಿ : ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಮೋಜಿಗಾಗಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಳ್ಳುವ ಉದ್ಯಮಿಗಳಿಗೆ ಕಳೆದ ಆರಂಭದ ದಿನಗಳನ್ನು ನೆನೆದು ಸಂತೋಷವಾಗಲಿದೆ. ಬಹಳಷ್ಟು ಖರ್ಚಿದ್ದು ಹಣದ ಹೊಂದಾಣಿಕೆ ಕಷ್ಟವಾದೀತು. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಬಯಸುವಿರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ನಂಬಿಕೆಯನ್ನು ಸರಿಯಾದ‌ ಕಡೆಯಲ್ಲಿ ಇರಿಸಿ. ಅದನ್ನು ವಿಚಲಿತಗೊಳಿಸುವುದು ಬೇಡ. ಕಛೇರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಪ್ರೀತಿಯನ್ನು ಇಷ್ಟಪಡುವುದಿಲ್ಲ. ಸ್ವಂತ್ರವಾಗಿರಲು ಇಚ್ಛಿಸುವಿರಿ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ. ಖುಷಿಯನ್ನು ನೀವೇ ಇಮ್ಮಡಿಸಿಕೊಳ್ಳುವಿರಿ. ಅನವಶ್ಯಕವಾಗಿ ಆಡುವ ಮಾತುಗಳು ನಿಮ್ಮ ಮೇಲಿನ ಗೌರವವನ್ನು ಕಡಿಮೆ ಮಾಡಿಸೀತು. ತಾರತಮ್ಯ ಭಾವವನ್ನು ಬಿಡಬೇಕಾಗುವುದು.

ಕುಂಭ ರಾಶಿ : ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಪ್ರಯತ್ನ ಮಾಡುವಿರಿ. ಹೊಸತನವನ್ನು ತಂದುಕೊಳ್ಳುವಲ್ಲಿ ನೀವು ಸದಾ ಪ್ರಯತ್ನಶೀಲರು. ಆದರೆ ಆಲಸ್ಯವನ್ನು ಬಿಡಬೇಕಾದೀತು. ಪ್ರೀತಿಗೋಸ್ಕರ ಹಣವನ್ನು ಖರ್ಚುಮಾಡುವಿರಿ. ಸುಮ್ಮನೇ ಕುಳಿತರೂ ನಿಮ್ಮನ್ನು ಕೆರಳಿಸಬಹುದು. ಅಪರಿಪೂರ್ಣ ಕೆಲಸದ ಯಾದಿಯನ್ನು ತಯಾರಿಸಿ ಮುಂದುವರಿಯಿರಿ. ಅಧ್ಯಾತ್ಮದಲ್ಲಿ ಆಸಕ್ತಿ ಇದ್ದರೂ ಸಮಯದ ಅಭಾವದಿಂದ ಅದು ಅಸಾಧ್ಯವಾದೀತು. ಗುರುಜನರ ಭೇಟಿಯಿಂದ ಮನಸ್ಸು ನೆಮ್ಮದಿಯಿಂದ ಇರಬಹುದು. ಇಂದು ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇರದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ.

ಮೀನ ರಾಶಿ : ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಯಾವುದಾದರೂ ಒಂದನ್ನು ಕಳೆದುಕೊಳ್ಳಬೇಕಾಗುವುದು. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಉತ್ಸಾಹವು ನಿಮ್ಮಲ್ಲಿ ಇರುವುದು. ಅಪ್ರಯೋಜಕ ಕೆಲಸಗಳನ್ನು ಮಾಡಲು ನೀವು ಹಿಂದೇಟು ಹಾಕಬಹುದು. ಸ್ನೇಹಿತರ ಸಜವಾಸದಿಂದ‌ನಿಮಗೆ ಅಪವಾದ ಬರಬಹುದು. ಪ್ರಯಾಣ ಮಾಡಬೇಕಾಗಿದ್ದರೂ ಭಯವು ನಿಮ್ಮನ್ನು ಕಾಡಬಹುದು. ಸಂಗಾತಿಗೆ ನಿಮ್ಮಿಂದ ಧೈರ್ಯದ ಅವಶ್ಯಕತೆ ಇರಲಿದೆ. ಇಂದು ಶುಭದ ನಿರೀಕ್ಷೆಯಲ್ಲಿ ಇರುವಿರಿ. ಕೊಟ್ಟ ಸಾಲವು ಮರಳಿ ಬರುವ ಸಾಧ್ಯತೆ ಇದೆ. ಇದು ನಿಮ್ಮನ್ನು ಸಂತೋಷವಾಗಿ ಇಡಬಲ್ಲದು. ಕೆಲಸದ ಸ್ಥಳವನ್ನು ಶಿಸ್ತಿನಿಂದ ಇಟ್ಟುಕೊಳ್ಳುವಿರಿ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ಅನಾರೋಗ್ಯದಿಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ಬಹಳ‌ ಪ್ರಯತ್ನದಿಂದ ಪಡೆಯುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)