Horoscope: ದಿನ ಭವಿಷ್ಯ; ಅನಗತ್ಯ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 21 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನ ಭವಿಷ್ಯ; ಅನಗತ್ಯ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ
ದಿನ ಭವಿಷ್ಯ; ಅನಗತ್ಯ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ

Updated on: May 21, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ 15:42 ರಿಂದ 17:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17ರಿಂದ ಬೆಳಗ್ಗೆ10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:06ರ ವರೆಗೆ.

ಸಿಂಹ ರಾಶಿ: ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಹೆಚ್ಚು ಇರಲಿದೆ. ನಿಮಗಿಷ್ಟವಾದ ಸಮಾರಂಭಕ್ಕೆ ಭೇಟಿ ಕೊಡುವಿರಿ. ಆಪ್ತರನ್ನು ಭೇಟಿಯಾಗುವಿರಿ. ನಿಮ್ಮ ವಿರುದ್ಧ ಮಾತನಾಡಿದವರಿಗೆ ಬಹಳ ವೇಗವಾಗಿ ಪ್ರತಿಕ್ರಿಯೆ ನೀಡುವಿರಿ. ಸ್ನೇಹಕ್ಕೆ ಬೆಂಬಲವನ್ನು ಕೊಡಲು ಇಚ್ಛಿಸುವಿರಿ. ನಿಮ್ಮವರಿಂದ ಇಂದು ಯಾವುದನ್ನೂ ನಿರೀಕ್ಷಿಸದೇ ಇದ್ದರೂ ತಾನಾಗಿಯೇ ಬಂದು ಒದಗುವುದು. ತಪ್ಪು ಹಾದಿಗೆ ಯಾರಿಂದಲಾದರೂ ಪ್ರೇರಣೆ ಸಿಗಲಿದೆ. ನಿಮ್ಮ ವಿವೇಕವನ್ನು ಬಳಸಿ. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ಯಾರದ್ದಾದರೂ ಪ್ರಭಾವವನ್ನು ಬಳಸಿಕೊಂಡು ಅಧಿಕಾರವನ್ನು ಪಡೆಯುವಿರಿ.

ಕನ್ಯಾ ರಾಶಿ: ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುಬಿರಿ. ಯಾವದೇ ತಾಳ್ಮೆಯಿಂದ ಅವುಗಳನ್ನು ತಣ್ಣಗಾಗಿಸಿ. ಹೆಚ್ಚು ಮಾತನಾಡಿ ಇನ್ನೊಂದಕ್ಕೆ ನಾಂದಿ ಹಾಡಬೇಡಿ. ಭವಿಷ್ಯದ ಕುರಿತು ಅತಿಯಾದ ಚಿಂತನೆಯನ್ನು ಮಾಡಲಿದ್ದೀರಿ. ಕೆಲಸದ ಆಯಾಸವು ನಿಮಗೆ ನಿದ್ರೆಯ ಬೇಗ ತರುಸುತ್ತದೆ. ಕುಟುಂಬ ಜೀವನ ಸಾಮಾನ್ಯವಾಗಿರಲಿದೆ. ಎಲ್ಲದಕ್ಕೂ ಅಡ್ಡದಾರಿಯಲ್ಲೇ ಹೋಗಬೇಕು ಎಂಬ ತೀರ್ಮಾನ ಬೇಡ. ವಿಳಂಬವಾದರೂ ತೊಂದರೆ ಇಲ್ಲ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.

ತುಲಾ ರಾಶಿ: ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ಮತ್ತೆಲ್ಲವೂ ಮಾಯವಾಗುತ್ತದೆ. ಸಾರ್ವಜನಿಕವಾಗಿ ನಿಮಗೆ ಗೌರವಗಳು ಸಿಗಲಿವೆ. ವಿದ್ಯುದುಪಕರಣದಿಂದ ಹಣವು ಖರ್ಚಾಗುವುದು. ಮಕ್ಕಳಿಂದ ಸಂತಸದ ವಾತಾವರಣ ಇರಲಿದೆ. ದಾಂಪತ್ಯದಲ್ಲಿ ಬಿರುಕು ಸರಿಯಾಗಿ ಸಂತೋಷವನ್ನು ಅನುಭವಿಸುವಿರಿ. ಓದಿನ‌ ಕಡೆ ಮನಸ್ಸನ್ನು ಕೊಡಲಾಗದು. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೆರೆಹೊರೆಯರ ಜೊತೆ ಹೊಂದಾಣಿಕೆಯ ಮನಃಸ್ಥಿತಿಯಲ್ಲಿಯೇ ಇರಬೇಕಾಗುವುದು. ಅತಿಯಾದ ಲೋಭವು ನಿಮ್ಮ ಕಾರ್ಯವನ್ನು ಹಾಳು ಮಾಡುವುದು. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು.

ವೃಶ್ಚಿಕ ರಾಶಿ: ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚ‌ನೆಗಳು ಒಂದೊಂದಾಗಿಯೇ ಬರಬಹುದು. ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಏನಾದರೂ ಕಾರ್ಯವನ್ನು ಮಾಡುತ್ತಲೇ ಇರಿ. ನಿಮಗಿಂದು ಹೆಚ್ಚು ಜವಾಬ್ದಾರಿಯ ಕೆಲಸ ಸಿಗಲಿದೆ. ಅನಗತ್ಯ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ. ಸರ್ಕಾರದ ಕೆಲಸವು ಸ್ವಲ್ಪ ವೇಗವನ್ನು ಪಡೆದುಕೊಳ್ಳುವುದು. ಇಷ್ಟುದಿನ ಮಾಡುತ್ತಿದ್ದವರ ಬಳಿಯಿಂದ ಹಣಕಾಸಿನ ವ್ಯವಹಾರವನ್ನು ಬದಲಾಯಿಸುವಿರಿ. ನಿಮ್ಮ ಕಾರ್ಯದ ವೇಗವು ಹೆಚ್ಚುವ ಅವಶ್ಯಕತೆ ಇದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಯಾರದೋ ಕಾರಣಕ್ಕೆ ನೀವು ಸಿಟ್ಟಗುವಿರಿ.