ಶನಿವಾರ, ಜುಲೈ 27: ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು (Horoscope) ತಿಳಿಯಲು ಜನರು ಕುತೂಹಲರಾಗಿದ್ದಾರೆ. ಹೀಗಾಗಿ ಎಲ್ಲರು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವು ಜನರು ಯಾವ ಜ್ಯೋತಿಷ್ಯವನ್ನು ನಂಬುವುದಿಲ್ಲ. ಹಾಗಾದ್ರೆ ಜುಲೈ 27 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:28 ರಿಂದ ಮಧ್ಯಾಹ್ನ 03:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:16ರಿಂದ 07:52ರ ವರೆಗೆ.
ಮೇಷ ರಾಶಿ: ನಿಮಗೆ ಸಾಧ್ಯವಿರುವ ಕಾರ್ಯಗಳನ್ನು ಮಾತ್ರ ಮಾಎಇ. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಇಂದು ನಿಮ್ಮ ಅನಪೇಕ್ಷಿತ ಹಸ್ತಕ್ಷೇಪದಿಂದಾ ಲಾಭದ ಹಾದಿಯ ಮೇಲೆ ವಿಪರೀತ ಪರಿಣಾಮ ಉಂಟಾಗಬಹುದು. ಎಲ್ಲವನ್ನೂ ನೀವು ನಿಭಾಯಿಸಲು ಸಾಧ್ಯವಾಗದು. ಎಷ್ಟೋ ದಿನಗಳಿಂದ ಅನುಭವಿಸಬೇಕಾದುದನ್ನು ನೀವು ಇಂದು ಅನುಭವಿಸುವಿರಿ. ಇಂದು ಬರುವ ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸೀತು. ಯಾರಿಗೇ ಆದರೂ ಅನಿವಾರ್ಯತೆಯನ್ನು ನೋಡಿ ಹಣವನ್ನು ಕೊಡಿ. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ನಿಮ್ಮ ಮಾತೇ ನಿಮಗೆ ಮುಳುವಾಗಬಹುದು.
ವೃಷಭ ರಾಶಿ: ಇಂದು ನಿಮ್ಮ ಬಗ್ಗೆ ತಿಳಿಯದೇ ಸುಮ್ಮನೇ ಕುಖ್ಯಾತಿ ಬರುವುದು. ಒಮ್ಮೆಲೆ ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಇಂದು ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ತೊಂದರೆಗಳು ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ಒಯ್ಯಬಹುದು. ಅತಿಯಾದ ಉತ್ಸಾಹ ಹಾಗೂ ಸಿದ್ಧತೆಯಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಹ ಭಂಗವನ್ನು ಮಾಡುವುದು. ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿ ಇರುವಿರಿ. ಸಂಪತ್ತನ್ನು ಅನ್ಯ ಮಾರ್ಗದಿಂದ ಸಂಪಾದಿಸಲು ಅವಕಾಶಗಳು ಬರಬಹುದು. ನಿಮ್ಮ ಶ್ರಮವು ನ್ಯಾಯಯುತವಾದ ಹಾದಿಯಲ್ಲಿ ಇರಲಿ. ಅತಿಥಿಗಳ ಆಗಮನವು ಸಂತಸ ತರುವುದು. ಯಾರ ಮಾತನ್ನೂ ನಿರ್ಲಕ್ಷ್ಯ ಮಾಡಬೇಡಿ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ. ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡುವುದು ಬೇಡ.
ಮಿಥುನ ರಾಶಿ: ನಿಮಗೆ ಇಂದು ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಈ ದಿನ ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇರುವುದರಿಂದ ಅಲ್ಲಿಯೇ ಅದು ಮುಕ್ತಾಯವಾಗಬಹುದು. ಅನವಶ್ಯಕ ಮಾತುಗಳಿಗೆ ಅವಕಾಶ ಮಾಡಿಕೊಡವುದು ಬೇಡ. ಆರ್ಥಿಕತೆಯ ವಿಚಾರದಲ್ಲಿ ನಿಮಗೆ ಇಂದು ಸೂಚಿಸದೇ ಹೋದೀತು. ನಿಮ್ಮ ಕೆಲಸವನ್ನು ಟೀಕೆ ಮಾಡುವ ಸಾಧ್ಯತೆ ಇದೆ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಬಹುದು. ವ್ಯಕ್ತಪಡಿಸುವ ವಿಧಾನವು ಬೇರೆ ರೀತಿಯಾಗಿರುತ್ತದೆ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಒಬ್ಬೊಂಟಿಯಂತೆ ಅನ್ನಿಸಬಹುದು.
ಕಟಕ ರಾಶಿ: ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ಅಷ್ಟೇ ಅಲ್ಲದೇ ಸಾಲ ಕೊಟ್ಟವರೂ ನಿಮ್ಮನ್ನು ದಿನವೂ ಕೇಳುವರು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ದಿನ ನೀವು ಕಠಿಣ ಪರಿಶ್ರಮದ ಅನಂತರ ಅಂದುಕೊಂಡಿದ್ದನ್ನು ಅಲ್ಪ ಸಾಧಿಸುವಿರಿ. ನೀವು ಇಂದು ಸುಳ್ಳನ್ನಾಡಬೇಕಾಗಿ ಬರವುದು. ಇಂದಿನ ಘಟನೆಗಳು ಮಾನಸಿಕವಾಗಿ ಕಿರಿಕಿರಿಯನ್ನು ಮಾಡುತ್ತವೆ. ಇದರಿಂದ ಮನಸ್ಸು ನಿರಾಸೆಗೊಳ್ಳಬಹುದು. ನಿಮ್ಮ ಅಪೂರ್ಣ ಕಾರ್ಯಗಳು ಇಂದು ಮುಂದಿವರಿಯಲಿವೆ. ಅದಲ್ಲಿ ಕೆಲವು ಪೂರ್ಣವಾಗುವುದು. ಇಂದಿನ ಸಂತೋಷಕ್ಕೆ ಅತಿಯಾಗಿ ಹಿಗ್ಗುವುದು ಬೇಡ, ಸಮತೋಲನವಿರಲಿ. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಅಸಮತೋಲನ ಕಾಣಿಸಿಕೊಳ್ಳುವುದು. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ.
ಸಿಂಹ ರಾಶಿ: ಇಂದು ಉದ್ಯೋಗವನ್ನು ಅರಸುತ್ತ ಇದ್ದರೆ ಇಂದು ಉತ್ತಮ ಉದ್ಯೋಗವು ಸುಳಿವು ಸಿಗಲಿದೆ. ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ಈ ದಿನ ನೀವು ಶುಭ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಆಹಾರದಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳುವಿರಿ. ಪ್ರೇಮದಲ್ಲಿ ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ನಿರೀಕ್ಷಿತ ಕೆಲಸದಲ್ಲಿ ಹಿನ್ನಡೆಯಾದರೂ ಸ್ವಲ್ಪಮಟ್ಟಿನ ಸಮಾಧಾನ ಇರಲಿದೆ. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಿ. ಪ್ರೇಮವ್ಯವಹಾರದಲ್ಲಿ ಜಾಗರೂಕತೆ ಇರಲಿ. ಬಿಟ್ಟು ಹೋಗುವ ಸಾಧ್ಯತೆ ಇದೆ. ಆಕಸ್ಮಿಕ ತಿರುವುಗಳಿಗೆ ನೀವು ಇಂದು ತಯಾರಿರಬೇಕಾದೀತು. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ದುಸ್ವಪ್ನದಿಂದ ವಿಚಲಿತರಾಗುವಿರಿ. ಕೆಲವರ ಸ್ವಭಾವು ಇಷ್ಟವಾಗದೇ ಅವರಿಂದ ದೂರವಿರಲು ಪ್ರಯತ್ನಿಸುವಿರಿ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ.
ಕನ್ಯಾ ರಾಶಿ: ಇಂದು ಹಲವಾರು ದಿನಗಳ ವಾಹನ ಖರೀದಿಯ ಆಸೆಯು ಪೂರ್ಣಗೊಳ್ಳುವುದು. ವಿನಾಕಾರಣ ವಾಗ್ವಾದವನ್ನು ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನೀವು ಈ ದಿನ ಕೆಲಸದ ಸ್ಥಳದಲ್ಲಿ ಕೊಪವನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ವೈದ್ಯಕೀಯ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸುವ ಯೋಜನೆ ಇರುವುದು. ಹಣಕಾಸಿನ ವಿಚಾರದಲ್ಲಿ ನೀವು ದಂಡ ತೆರಬೇಕಾದೀತು. ಸರಿಯಾದ ಸಲಹೆಯನ್ನು ಪಡೆಯಿರಿ. ಹೊಟ್ಟೆ ನೋವಿನಿಂದ ನೀವು ಇಂದು ಬಳಲಬಹುದು. ಇದು ಕೆಲಸದ ಪ್ರದೇಶದಲ್ಲಿ ನಿಮ್ಮ ಮನಸ್ಸಿನ ಏಕಾಗ್ರತೆಯನ್ನು ಭಂಗ ಮಾಡೀತು. ಯಾವುದನ್ನೂ ಇಂದು ಅತಿಯಾಗಿ ಮಾಡಲು ಹೋಗಬೇಡಿ. ಅಪರಿಚಿತರ ಮಾತನ್ನು ಕೇಳಿ ಎಲ್ಲ ಕಾರ್ಯವನ್ನೂ ಹಾಳುಮಾಡಿಕೊಳ್ಳುವಿರಿ. ಮಿತಿಯಲ್ಲಿ ಎಲ್ಲವೂ ಇರಲಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಚಾತುರ್ಯದಿಂದ ನಡೆದ ಘಟನೆಯು ನಿಮ್ಮನ್ನು ಕಾಡಬಹುದು.
ತುಲಾ ರಾಶಿ: ಇಂದು ನಿಮಗೆ ಕಾರ್ಯದಿಂದ ತೃಪ್ತಿ ಸಿಗಲಿದೆ. ನಿಮ್ಮ ದಾಂಪತ್ಯದಲ್ಲಿ ಹೆಚ್ಚಿನ ಸುಖವು ಸಿಗುವ ಸೂಚನೆ ಇರುವುದು. ಕೆಲಸಗಳನ್ನು ಬಹಳ ಸಂಕೀರ್ಣ ಮಾಡಿಕೊಳ್ಳುವಿರಿ. ಸರಳವಾದ ಆಲೋಚನೆಯಿಂದ ನಿಮ್ಮ ಕೆಲಸಗಳು ಸಲೀಸಾಗಬಹುದು. ಭೂಮಿಗೆ ಸಂಬಂಧಿಸಿದಂತೆ ನೆರೆಯವರ ಮಧ್ಯದಲ್ಲಿ ಬಿಸಿಬಿಸಿ ಮಾತುಗಳು ಆಗಬಹುದು. ಕಾನೂನಿನ ಮಾರ್ಗದಲ್ಲಿ ನಡೆಯುವುದು ಉತ್ತಮ. ಇನ್ನೊಬ್ಬರಿಗೆ ಮಾನಸಿಕ ಒತ್ತಡವನ್ನು ಕೊಡುವಿರಿ. ಅಹಿತಕರ ಘಟನೆಗಳಿಗೆ ಆಸ್ಪದವನ್ನು ಕೊಡುವುದು ಬೇಡ. ಮಕ್ಕಳನ್ನು ಪ್ರೀತಿಯಿಂದ ಕಾಣುವಿರಿ. ಬೇಕಾದುದನ್ನು ಅವರಿಗೆ ನೀಡಿ ಖುಷಿಪಡಿಸುವಿರಿ. ಭಕ್ತಿಯಲ್ಲಿ ಚಾಂಚಲ್ಯವು ಅಧಿಕವಾದೀತು. ನಿಮ್ಮಿಂದ ಪಾಲಕರಿಗೆ ತೊಂದರೆಯಾಗುವುದು. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ನಿಮಗೆ ಇಷ್ಟವಾದವರ ಜೊತೆ ನಿಮ್ಮ ವಾಯವಿಹಾರ ಮಾಡುವಿರಿ. ಇಂದು ಬಾಯಿ ಚಪಲಕ್ಕೆ ಅಹಿತಕರಚಮವಾದ ಆಹಾರವನ್ನು ಸೇವಿಸುವಿರಿ. ಈ ದಿನ ಸಹಜವಾಗಿ ಮುನ್ನಡೆಯುವುದು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಕುಳಿತುಕೊಳ್ಳುವಿರಿ. ಒಳ್ಳೆಯ ಉದ್ದೇಶಕ್ಕೆ ಮಾಡಿದ ಕಾರ್ಯವು ದುರುಪಯೋಗವಾಗಲಿದೆ. ಖರ್ಚನ್ನು ನಿಯಂತ್ರಿಸಲು ಅಥವಾ ಹೆಚ್ಚಿನ ಸಂಪಾದನೆಗೆ ಮನೆಯಲ್ಲಿಯೇ ಕೆಲಸ ಮಾಡುವ ಉದ್ಯೋಗವನ್ನು ಹುಡುಕುವಿರಿ. ಸಂಬಂಧಿಕರ ದೂರವಾಣಿ ಕರೆಗಳು ನಿಮಗೆ ತೊಂದರೆಯನ್ನು ಉಂಟುಮಾಡಿದರೂ ವ್ಯಕ್ತಪಡಿಸದೇ ಒಲ್ಲದ ಮನಸ್ಸಿನಿಂದ ಮಾತನಾಡುವಿರಿ. ಹಳೆಯ ಮನೆಯ ರಿಪೇರಿ ಕೆಲಸ ಮಾಡುವಿರಿ. ನೂತನ ಉದ್ಯೋಗವನ್ನು ಆರಂಭಿಸಲು ಭಯವಿರುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು. ಭಯದಿಂದ ಕೆಲಸ ಮಾಡಿಸಿಕೊಳ್ಳುವಿರಿ.
ಧನು ರಾಶಿ: ಇಂದು ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಅಧರ್ಮ ಮಾರ್ಗದಲ್ಲಿ ಹೋಗಲು ಯಾರದರೂ ಪ್ರೇರಣೆ ಕೊಡಬಹುದು. ಈ ದಿನ ನಿಮಗೆ ವಾಹನ ಮತ್ತು ವಸತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ನೀವು ಉದ್ಯೋಗದ ನಿಮಿತ್ತ ಅಪರಿಚಿತ ಪ್ರದೇಶಕ್ಕೆ ಹೋಗುವಿರಿ. ಬಂಧುಗಳ ಜೊತೆ ಅನಗತ್ಯ ಮಾತು ಬೇಡ. ನಿಮಗೆ ಉತ್ಸಾಹ ಕೊರತೆಯಾದರೆ ಸ್ನೇಹಿತರು ಅದನ್ನು ಹೆಚ್ಚಿಸಿಯಾರು. ಯಾರಿಗಾದರೂ ಸಹಾಯವನ್ನು ಮಾಡಿ. ಹೊಸದಾಗಿ ಆರಂಭಿಸಿದ ಕಾರ್ಯಗಳನ್ನು ನಿಲ್ಲಿಸುವ ಯೋಚನೆಯು ಬರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ನಿಮ್ಮವರು ಸಲಹೆ ಕೊಡಬಹುದು. ನಿಮ್ಮ ಹಣವನ್ನು ಪರಿಚಿತರು ಕೇಳಬಹುದು. ನಿಮ್ಮ ಸೌಂದರ್ಯ ನಿಮಗೆ ತೊಂದರೆ ಕೊಡಬಹುದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ನಿಮ್ಮ ಪ್ರತಿಕ್ರಿಯೆ ಯೋಗ್ಯವಾಗಿರಲಿ. ಯಾವುದನ್ನೂ ಸುಲಭವಾಗಿ ಪಡೆಯಲಾಗದು.
ಮಕರ ರಾಶಿ: ಇಂದು ನೀವು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಇಂದು ನೀವು ಧೈರ್ಯವನ್ನು ಕಳೆದುಕೊಳ್ಳದೇ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಕಛೇರಿಯಲ್ಲಿ ಕಲಹವಾದೀತು. ದಾಖಲೆಗಳನ್ನು ಸರಿಯಾಗಿ ಇಡಿ. ಧೈರ್ಯವೇ ನಿಮ್ಮ ಕೆಲಸವನ್ನು ಕೊನೆಗಾಣುವಂತೆ ಮಾಡುತ್ತದೆ. ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ಳಿ. ಸತತ ಕೆಲಸವು ವಿಶ್ರಾಂತಿಯನ್ನು ಬಯಸುವುದು. ಗಾಯ ಮಾಡಿಕೊಳ್ಲುವ ಸಾಧ್ಯತೆ ಇದೆ. ಅಪರಿಚಿತರ ಮೇಲೆ ಭರವಸೆ ಬಂದೀತು. ಪ್ರಭಾವಗಳು ನಿಮ್ಮ ಮಾತನ್ನು ಪುರಸ್ಕರಿಸುವರು. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ಮಕ್ಕಳಿಗೆ ಪ್ರೀತಿ ತೋರಿಸುವ ಅವಶ್ಯಕತೆ ಇರುವುದು.
ಕುಂಭ ರಾಶಿ: ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಎಂದೋ ಹೂಡಿದ ಹಣವು ಇಂದು ಉಪಯೋಗಕ್ಕೆ ಬರಲಿದೆ. ಇಂದು ನೀವು ಹಣಕಾಸಿನ ವ್ಯವಹಾರಕ್ಕೆ ವಾದ ಮಾಡುವ ಹಾಗೆ ಆಗಬಹುದು. ನಿಮ್ಮ ಕಾರ್ಯಕ್ರಮಗಳು ಎಲ್ಲವೂ ವ್ಯತ್ಯಾಸವಾಗಲಿದೆ. ಯಾರನ್ನೂ ಸಹಿಸಿಕೊಳ್ಳುವ ಸ್ಥಿತಿ ಇರದು. ಪೂರ್ವಾರ್ಜಿತ ಸಂಪತ್ತಿಗೆ ಬೆಲೆ ಕೊಡಿ. ಕೆಲವು ಸಮಸ್ಯೆಗಳನ್ನು ಅನಗತ್ಯವಾಗಿ ತಂದುಕೊಳ್ಳುವಿರಿ. ನಿಮ್ಮ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗುವ ಕಾಲ ತುಂಬ ದೀರ್ಘವಿದೆ. ಕಾಲವು ಬಹಳ ನಿಧಾನ ಎಂದು ಅನ್ನಿಸಬಹುದು. ಸಂಪನ್ಮೂಲವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸಂಕುಚಿತ ಭಾವವು ಇಷ್ಟವಾಗದು. ಅವರ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ದಾನದಿಂದ ನಿಮಗೆ ಸಂತೋಷವಾಗಲಿದೆ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು. ಭೂ ವ್ಯವಹಾರಕ್ಕೆ ಪ್ರಯಾಣ ಸಾಧ್ಯತೆ ಇದೆ.
ಮೀನ ರಾಶಿ: ಇಂದು ನಿಮಗೆ ಎಲ್ಲ ಕಾರ್ಯದಲ್ಲಿಯೂ ಉತ್ಸಾಹವು ಕಡಿಮೆ ಇರುವುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿಕೊಳ್ಳದೇ ದಿನವನ್ನು ಕಳೆಯುವಿರಿ. ಇಂದು ನಿಮ್ಮ ಸಮಯವು ಸದುಪಯೋಗವಾಗಿದೆ ಎಂದು ಅನ್ನಿಸಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆದುಕೊಳ್ಳಬಹುದು. ಮಾತುಗಳಿಂದ ನಿಮ್ಮನ್ನು ಅಳೆಯಬಹುದು. ಇಂದಿನ ಹೆಚ್ಚಿನ ವಿಚಾರಗಳು ನಿಮಗೆ ಸಂಬಂಧವಿಲ್ಲದಿದ್ದರೂ ಅನಿವಾರ್ಯವಾಗಿ ಮಾತನಾಡಬೇಕಾಗಬಹುದು. ಎಲ್ಲರೂ ನಿಮ್ಮ ಮಾತನ್ನು ಕೇಳುವುದಿಲ್ಲ. ಕೇಳುವವರ ಬಳಿ ಹೇಳಬೇಕಾದುದನ್ನು ಹೇಳಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಬೇಕಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಅಧಿಕ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ ಕಷ್ಟವನ್ನು ಆಪ್ತರ ಜೊತೆ ಹಂಚಿಕೊಳ್ಳುವುದೂ ಮನಸ್ಸಾಗದು.
ಲೋಹಿತ ಹೆಬ್ಬಾರ್-8762924271 (what’s app only)