ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಬ್ರಹ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:38 ರಿಂದ ಸಂಜೆ 08:05 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:16 ರಿಂದ 03:44ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:11 ರಿಂದ 04:38 ರವರೆಗೆ.
ಮೇಷ ರಾಶಿ: ನಿಮ್ಮ ದಾಖಲೆಗಳು ಕಳ್ಳತನವಾಗುವ ಸಾಧ್ಯತೆ ಇದೆ. ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ನಿಮ್ಮ ಕೈಯ್ಯಲ್ಲಿ ಒಗ್ಗೂಡಿಸುವಿಕೆ ಇರಲಿದೆ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಕುಳಿತು ಮಾತನಾಡುವಿರಿ. ವ್ಯವಹಾರದಲ್ಲಿ ಸಡಿಲಮಾಡಿಕೊಳ್ಳುವಿರಿ. ಮನಸ್ಸು ಹಗುರರಾಗಿದ್ದು ಉತ್ಸಾಹವು ನಿಮ್ಮ ಮುಖದಲ್ಲಿ ಕಾಣುವುದು. ನಿಮ್ಮ ನಿಯಮಗಳೇ ನಿಮಗೆ ಹಿಂಸೆಯಾಗುವುದು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳಲು ಕಷ್ಟವಾದೀತು. ಎಲ್ಲರ ಮೇಲಿನ ನಂಬಿಕೆಯನ್ನು ನೀವು ಕಳೆದುಕೊಂಡು ಆರಾಮಾಗಿ ಇರುವಂತೆ ನಟಿಸುವಿರಿ. ಇಂದಿನ ಮಂದಗತಿಯ ಕೆಲಸಗಳಿಗೆ ಚುರುಕು ನೀಡುವಿರಿ. ಸಮಾರಂಭಕ್ಕೆ ಆಪ್ತರು ಒತ್ತಾಯ ಮಾಡಬಹುದು. ಸಹೋದರನಿಂದ ನಿಮಗೆ ಸಲಹೆಗಳು ಸಿಗಬಹುದು. ಕಛೇರಿಯಲ್ಲಿ ಇಂದು ಕೆಲಸ ಮಾಡಲು ಆಸಕ್ತಿ ಕಡಿಮೆ ಇರಲಿದೆ.
ವೃಷಭ ರಾಶಿ: ಕಛೇರಿಯ ಕೆಲಸವನ್ನು ಬಿಡುವಿನ ವೇಳೆಯಲ್ಲಿ ಮಾಡುವಿರಿ. ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ದಿನವನ್ನು ಕಳೆಯುವಿರಿ. ಮನೆಯ ಕಾರ್ಯಕ್ಕಾಗಿ ನೀವು ಓಡಾಟ ಮಾಡಬೇಕಾಗುವುದು. ಹೆಚ್ಚಿನ ಶ್ರಮವು ವಿದ್ಯಾರ್ಥಿಗಳಿಗೆ ಅವಶ್ಯಕ. ಕೆಟ್ಟವರನ್ನೇ ಮತ್ತು ನಂಬುವ ಸ್ಥಿತಿ ಬರಬಹುದು. ಇಂದು ಹೆಚ್ಚಿನ ಸಮಯವನ್ನು ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ಕಳೆಯುವಿರಿ. ನಿಮ್ಮ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ಪರರ ಭಾವನೆಗೆ ಅನಾದರ ತೋರುವುದು ಬೇಡ. ಅನಿವಾರ್ಯವಾಗಿ ಬೇರೆ ಸ್ಥಳದಲ್ಲಿ ವಾಸಮಾಡಬೇಕಾಗುವುದು. ತೆರೆಯಲ್ಲಿರುವುದನ್ನು ಕಾಣಲು ಪರದೆ ಸರಿಯಬೇಕು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.
ಮಿಥುನ ರಾಶಿ: ವ್ಯಾಪಾರದ ಆಗುಹೋಗುಗಳನ್ನು ಬೇರೆ ರೀತಿಯಲ್ಲಿ ಸರಿಮಾಡಿಕೊಳ್ಳುವಿರಿ. ಇನ್ನೊಬ್ಬರ ವೈಯಕ್ತಿಕ ಬದುಕನ್ನು ಆಡಿಕೊಳ್ಳುವಿರಿ. ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಸಂಗಾತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಬಳಿ ಪಡೆಯುವಿರಿ. ಅಪರೂಪದ ಬಂಧುಗಳ ಜೊತೆ ಸಮಯ ಕಳೆಯುವುದು. ಏಕಾಂಗಿಯಾಗಿ ಎಲ್ಲಿಗಾದರೂ ದೂರ ಹೋಗುವಿರಿ. ಅಶಿಸ್ತಿನಿಂದ ವರ್ತಿಸಿದ್ದಕ್ಕೆ ನಿಮಗೆ ಎಲ್ಲರೆದುರು ಅಪಮಾನವಾಗಬಹುದು. ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ನೀವು ಮಗ್ನರಾಗುವಿರಿ. ಅಂದುಕೊಂಡಿದ್ದು ಹಾಗೆಯೇ ಆಗಿದ್ದು ನಿಮಗೂ ಅಚ್ಚರಿಯಾಗಲಿದೆ. ಯಾರನ್ನೂ ಮೆಚ್ಚಿಸುವುದು ನಿಮಗೆ ಇಷ್ಟವಾಗದು. ದುಷ್ಕೃತ್ಯಕ್ಕೆ ಅಪ್ರತ್ಯಕ್ಷವಾಗಿ ಅನುಮೋದನೆ ಸಿಗಲಿದೆ. ಕೊಟ್ಟ ಹಣವನ್ನು ಹೊಂಪಡೆಯುವುದು ಕಷ್ಟ.
ಕರ್ಕಾಟಕ ರಾಶಿ: ವೃತ್ತಿಗಿಂತ ಹೆಚ್ಚು ಬೇರೆ ಕೆಲಸದಿಂದ ಹಣವನ್ನು ಗಳಿಸುವಿರಿ. ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬರಲಿದೆ. ಮನೆಯಿಂದ ಹೊರ ಹೋಗುವುದು ನಿಮಗೆ ಇಂದು ನಿಮಗೆ ಇಷ್ಟವಾಗದು. ಶರೀರವು ದುರ್ಬಲವಾಗಲು ಬಿಡದೇ ಬೇಕಾದ ಆಹಾರವನ್ನು ಕೊಡಿ. ಯಾರ ಒತ್ತಡಕ್ಕೂ ನೀವು ಮಣಿಯದವರು ಇಂದು ಮಣಿಯುವಿರಿ. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಬಂದಾಗ ನೀವು ತಪ್ಪಿಸಿಕೊಳ್ಳುವಿರಿ. ಮನಸ್ಸು ಭಾರವಾಗಿದ್ದು ಎಲ್ಲರಿಂದ ದೂರವಿರಲು ಇಷ್ಟಪಡುವಿರಿ. ಹೊಸ ಮನೆಯ ಖರೀದಿಗೆ ಸಣ್ಣ ಹೆಜ್ಜೆಯನ್ನು ಇಡುವಿರಿ. ಆದಾಯವು ಮತ್ತಷ್ಟು ಬೇಕೆನಿಸುವುದು. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಿಸಬಹುದು. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವಾದೀತು. ಅಪರಿಚಿತ ಸ್ತ್ರೀಯಿಂ ಮೋಸ ಹೋಗುವಿರಿ.
ಸಿಂಹ ರಾಶಿ; ನಿಮ್ಮೊಳಗೆ ಎಲ್ಲವನ್ನೂ ಬಿಡುವ ಆಲೋಚನೆ ಬರುವುದು. ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ಸಹೋದ್ಯೋಗಿಗಳ ಕಿರಿಕಿರಿಯನ್ನು ಸಹಿಸಿಕೊಳ್ಳಲು ಕಷ್ಟವಾಗುವುದು. ಸ್ನೇಹಿತರ ಸಹಕಾರದಿಂದ ಪ್ರವಾಸ ಹೋಗುವಿರಿ. ದೂರದ ಬಂಧುಗಳ ಭೇಟಿಯು ಸಂತೋಷ ಕೊಡುವುದು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಕಲಹವಾಗುವುದು. ಶಕ್ತಿಮೀರಿ ದುಡಿಯಲು ಹೋಗುವುದು ಬೇಡ. ನಿಮಗೆ ಇಂದು ಕಲೆಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆಯಾಗುವುದು. ಉದ್ಯೋಗವನ್ನು ಬದಲಾಯಿಸುವ ಯೋಚನೆ ಇರಲಿದೆ. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ. ಆಕಸ್ಮಿಕ ಓಡಾಟದಿಂದ ಆಯಾಸವಾಗುವುದು. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಕಲಹವಾಗವುದು.
ಕನ್ಯಾ ರಾಶಿ: ನಿಮಗೆ ಇಂದು ಮಾಡಲಾಗದ ಕಾರ್ಯವನ್ನು ಇನ್ನೊಬ್ಬರಿಗೆ ವಹಿಸಿಕೊಡುವಿರಿ. ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಹಣದ ಹೂಡಿಕೆಯನ್ನು ಮಾಡುವ ಆಲೋಚನೆಯು ಇರಲಿದೆ. ಪ್ರೇಮದಲ್ಲಿ ನೀವು ಬೀಳಲಿದ್ದೀರಿ. ಸರಿಯಾದ ತಜ್ಞರ ಜೊತೆ ಆರೋಗ್ಯವನ್ನು ತೋರಿಸಿ. ಹಳೆಯ ಖಾಯಿಲೆಯು ಕಾಣಿಸಿಕೊಳ್ಳಬಹುದು. ರಪ್ತು ವ್ಯವಹಾರದಲ್ಲಿ ಪ್ರಗತಿ ಕಾಣಿಸುವುದು. ಹಿರಿಯರ ಮಾತನ್ನು ನಿರ್ಲಕ್ಷಿಸುವಿರಿ. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂದು ಅಂದುಕೊಳ್ಳುವಿರಿ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ವೆಚ್ಚಕ್ಕೆ ನೀವು ಕಡಿವಾಣ ಹಾಕಲಿದ್ದೀರಿ. ಮಕ್ಕಳ ಸಂತೋಷದಲ್ಲಿ ಭಾಗಿಯಾಗುವಿರಿ. ಉತ್ತಮ ಆಹಾರವನ್ನು ಸ್ವೀಕರಿಸುವಿರಿ. ನಿಮ್ಮ ಕೆಲವು ಮಾತುಗಳು ಬೇರೆಯವರಿಗೆ ಬೇಸರ ತರಿಸಬಹುದು. ಮಕ್ಕಳನ್ನು ಪಡೆಯುವ ಆಸೆಯಾಗಲಿದೆ. ನೌಕರರಿಂದ ಅಸಮಾಧಾನವಾಗಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ.
ತುಲಾ ರಾಶಿ: ಸಮಸ್ಯೆಗಳನ್ನು ಹುಡುಕುವ ಪ್ರಯತ್ನವನ್ನು ಮೊದಲು ಮಾಡಿ. ಇಂದು ಕುರುಡ ಕತ್ತವನ್ನು ಹೊಸೆದಂತೆ ಆಗಬಹುದು. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ದಾನವಾಗಿ ಕೊಟ್ಟಿದ್ದನ್ನು ಎಲ್ಲಿಯೂ ಹೇಳಲಾರಿರಿ. ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಇಂದಿನ ಸುತ್ತಾಟವು ನಿಮಗೆ ಆಯಾಸವನ್ನು ಕೊಡಲಿದೆ. ಔಷಧ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಹೆಚ್ಚಿನ ಮೌಲ್ಯವನ್ನು ನಿರೀಕ್ಷಿಸುವಿರಿ. ಸಮೂಹದಲ್ಲಿ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಆರೋಗ್ಯದ ಸುಧಾರಣೆಯಿಂದ ಮನೋಬಲವು ಹೆಚ್ಚಾಗುವುದು. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವಿರಾದರೂ ಕೇಳುವ ಮನಃಸ್ಥಿತಿಯು ಯಾರಲ್ಲಿಯೂ ಇರದು. ನಿಮ್ಮನ್ನು ದ್ವೇಷಿಸುವ ಜನರನ್ನು ನೀವು ನಿರ್ಲಕ್ಷಿಸಿ ಮುನ್ನಡೆದರೆ ಉತ್ತಮ. ಎನಗಿಂತ ಕಿರಿಯರಿಲ್ಲ ಎನ್ನುವ ಸ್ಥಿತಿ ಇರಲಿ.
ವೃಶ್ಚಿಕ ರಾಶಿ: ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಅನಾವರಣವಾಗಲಿದೆ. ಇಂದು ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡಿ ಮುಂದುವರಿಯುವಿರಿ. ಅನವರತ ಕಾರ್ಯಗಳಿಂದ ದೇಹವು ಆಯಾಸಗೊಳ್ಳಬಹುದು. ಸುಂದರ ದಿನದ ನಿರೀಕ್ಷೆಯಲ್ಲಿ ಇರುವಿರಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ತೆಗೆದುಕೊಳ್ಳಿ. ಕಾಲಹರಣಕ್ಕೆ ಇನ್ನೊಬ್ಬರ ವಿಚಾರವೇ ಬೇಕಾಗುವುದು. ಭವಿಷ್ಯದ ಬಗ್ಗೆ ನಿಮಗೆ ಸ್ಪಷ್ಟವಾದ ನಿಲುವು ಸಿಗದು. ಯಾರೋ ಮಾಡಿದ ತಪ್ಪು ಕೆಲಸದಿಂದ ನಿಮಗೆ ಪಶ್ಚಾತ್ತಾಪವಾಗಲಿದೆ. ನೀವೇ ಸಂಗಾತಿಯ ಮನಸ್ಸನ್ನು ನೋಯಿಸಿ ಸರಿಪಡಿಸುವಿರಿ. ತಂದೆಯನ್ನು ನೋಡುವ ಬಯಕೆಯಾಗಬಹುದು. ಮರಗೆಲಸದವರಿಗೆ ಲಾಭ ಕಾಣಿಸುವುದು. ಇಂದಿನ ಖರ್ಚಿನ ಲೆಕ್ಕಾಚಾರವು ಬುಡಮೇಲಾಗವುದು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ವೇಗದಲ್ಲಿ ಸಿಗುವ ಯಶಸ್ಸೇ ನಿಮಗೆ ತೊಂದರೆ ಕೊಡುವುದು.
ಧನು ರಾಶಿ: ಇಂದು ಬೇರೆಯವರು ಮಾಡುತ್ತಾರೆ ಎಂದು ನೀವೂ ಮಾಡುವುದು ಬೇಡ. ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಹಣಕಾಸಿನ ವಿಚಾರದಲ್ಲಿ ನೀವು ಹತಾಶಭಾವದಿಂದ ಇರುವಿರಿ. ಭೂಮಿಯ ಖರೀದಿಗೆ ಹುಡುಕಾಟ ಮಾಡುವಿರಿ. ನಿಮಗೆ ಸ್ಥಿರ ಬುದ್ಧಿಯನ್ನು ತಂದುಕೊಳ್ಳಲು ಆಗದು. ಹತ್ತಾರು ಯೋಚನೆಗಳು ಒಂದಾದಮೇಲೆ ಒಂದರಂತೆ ಬರುವುದು. ನೀವು ಮಾಡಿದ ಕೆಲಸವು ನಿಮಗೇ ಇಷ್ಟವಾಗದು. ತಾಯಿಯ ಮಾತನ್ನು ನೀವು ಅಸಡ್ಡೆಯಿಂದ ಕೇಳುವಿರಿ. ಸುಂದರ ಸ್ಥಳಗಳು ನಿಮ್ಮ ಗಮನವನ್ನು ಸೆಳೆಯಬಹುದು. ಸಾಹಸಮಯವಾದ ಕೆಲಸಕ್ಕೆ ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳುವಿರಿ. ನಿಮ್ಮ ಕೌಶಲವನ್ನು ಕೆಲಸದಲ್ಲಿ ತೋರಿಸಿ. ಯಾರ ಜೊತೆಗೋ ವಾಗ್ವಾದಕ್ಕೆ ಹೋಗಿ ನೀವೇ ಸಿಕ್ಕಿಕೊಳ್ಳುವಿರಿ. ಉತ್ತಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ. ಹಿರಿಯರ ಜೊತೆ ವಾಗ್ವಾದಕ್ಕೆ ಹೋಗಿ ಮನಸ್ಸನ್ನು ಹಾಳಾಗುವುದು.
ಮಕರ ರಾಶಿ: ಇಂದು ಮಾಡಬೇಕಾದ ಕಾರ್ಯವನ್ನು ಕಾರಣಾಂತರಗಳಿಂದ ಮುಂದೂಡುವಿರಿ. ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಉದ್ಯೋಗವನ್ನು ಪ್ರಾಮಾಣಿಕತೆಯಿಂದ ಮಾಡುವಿರಿ. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ಆಸ್ತಿಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯ ಕೊರತೆ ಇರಲಿದೆ. ಮನಸ್ಸಿನಲ್ಲಿ ಇರುವು ವಿಚಾರವನ್ನು ಯಾರ ಜೊತೆಗಾದರೂ ಹೇಳಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದಿಸಲು ಸಿಗುವರು. ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ಉಂಟಾದ ಪ್ರೀತಿಯನ್ನು ಹಾಗೆಯೇ ಇರಿಸಿಕೊಂಡು ನೋಡಿ, ಸತ್ಯವೇ ಸುಳ್ಳೆ ಎಂದು. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ.
ಕುಂಭ ರಾಶಿ; ಹಳೆಯ ಕಾರ್ಯಕ್ಕೆ ಹೊಸ ತಂತ್ರವನ್ನು ಬಳಸಿ ಕಾರ್ಯವನ್ನು ಸಾಧಿಸುವಿರಿ. ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಹೋಗುವಿರಿ. ವಿದ್ಯಾರ್ಥಿಗಳು ಕೌಶಲವನ್ನು ಪ್ರದರ್ಶಿಸುವರು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸುವಿರಿ. ವೈವಾಹಿಕ ಮಾತುಕತೆಗೆ ನಿಮ್ಮನ್ನು ಯಾರಾದರೂ ಕೇಳಿಕೊಂಡುಬರಬಹುದು. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸಿ ಸಮಾಧಾನ ಮಾಡುವಿರಿ. ಅಸಮಯದ ಭೋಜನದಿಂದ ನಿಮಗೆ ಆರೋಗ್ಯವು ಹಾಳಾಗುವುದು. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ನಿಮ್ಮ ತಪ್ಪನ್ನೂ ನೀವೇ ಸಮರ್ಥಿಸಿಕೊಳ್ಳುವಿರಿ. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ.
ಮೀನ ರಾಶಿ: ಅಲೆಗಳು ಶಾಂತವಾಗುತ್ತವೆ. ಆದರೆ ಅಲ್ಲಿಯವರೆಗೆ ಕಾಯುವಿಕೆ ಬೇಕು. ಕಲ್ಲೆಸೆಯಬಹುದು ಯಾರಾದರೂ. ಇಂದು ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ಹೆಚ್ಚು ಖುಷಿಯಾಗಿ ಇಂದು ಇರಲಿದ್ದೀರಿ. ಒಬ್ಬರೇ ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾದೀತು. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಜಾಗರೂಕತೆ ಇರಲಿ. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಆರ್ಥಿಕ ಮೌಲ್ಯವನ್ನು ನೀವು ತಿಳಿದುಕೊಳ್ಳುವಿರಿ. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೆ ಬೇಸರಿಸುವಿರಿ. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಎಲ್ಲ ಗೊತ್ತಿದೆ ಎಂದು ಹುಂಬುತನವನ್ನು ಮಾಡುವುದು ಬೇಡ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)