ಸೋಮವಾರ, ಜುಲೈ 29: ಜ್ಯೋತಿಷ್ಯವನ್ನು ಅಥವಾ ನಿತ್ಯ ಭವಿಷ್ಯವನ್ನು (Horoscope) ತಿಳಿಯಲು ಜನರು ಕುತೂಹಲರಾಗಿದ್ದಾರೆ. ಹೀಗಾಗಿ ಎಲ್ಲರು ನಿತ್ಯ ತಮ್ಮ ರಾಶಿ ಭವಿಷ್ಯವನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವು ಜನರು ಯಾವ ಜ್ಯೋತಿಷ್ಯವನ್ನು ನಂಬುವುದಿಲ್ಲ. ಹಾಗಾದಾರೆ ಜುಲೈ 29 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:52 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:15ರಿಂದ 03:50ರ ವರೆಗೆ.
ಮೇಷ ರಾಶಿ: ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಇಂಸದು ನಿಮಗೆ ಒಳ್ಳೆಯ ಲಾಭದ ನಿರೀಕ್ಷೆಯನ್ನು ಮಾಡಬಹುದು. ಇಂದು ನಿಮ್ಮ ಅಪೂರ್ಣ ಕಾರ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದು. ಪೂರ್ಣವಾಗವ ತನಕ ಸಮಾಧನಾವೇ ಇರದು. ಹೊಸ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಇದೆ. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನೀವು ಓಡಾಟಮಾಡಬೇಕಾದೀತು. ಹಣವನ್ನೂ ಈ ವಿಚಾರಕ್ಕೆ ಖರ್ಚು ಮಾಡುವಿರಿ. ಸಂತೋಷದಿಂದ ಎಲ್ಲರ ಜೊತೆ ಒಡನಾಡುವಿರಿ. ಸಂಬಂಧಗಳಿಗೆ ಬೆಲೆಯನ್ನು ಕೊಡಬೇಕು ಎಂದು ಅನ್ನಿಸಬಹುದು. ಅಗ್ನಿಯ ಭೀತಿಯು ಕಾಡುವುದು. ಕುಟುಂಬದ ಜೊತೆ ಸಂತೋಷದಲ್ಲಿ ಭಾಗಿಯಾಗುವಿರಿ. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಹಿರಿಯರ ಪ್ರೀತಿಗೆ ಪಾತ್ರರಾಗುವಿರಿ. ನಿಮ್ಮ ಪ್ರಭಾವವನ್ನು ಯಾರಾದರೂ ಬಳಸಿಕೊಳ್ಳಬಹುದು.
ವೃಷಭ ರಾಶಿ: ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಭವಿಷ್ಯದ ಬಗ್ಗೆ ಒಳ್ಳೆಯ ಯೋಜನೆಯನ್ನು ತಯಾರಿಸುವಿರಿ. ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ. ಚೌಕಟ್ಟನ್ನು ಬಿಟ್ಟು ವರ್ತಿಸುವುದು ಬೇಡ. ಇಂದು ನಿಮಗಾದ ವಿಶ್ವಾಸದ್ರೋಹವು ನಿಮ್ಮನ್ನು ಸಿಟ್ಟಿಗೇಳಿಸೀತು. ನಿಮ್ಮ ಸುಳ್ಳನ್ನು ನೀವೇ ಸತ್ಯ ಮಾಡಬೇಕಾಗಬಹುದು. ಇಂದಿನ ನಿಮ್ಮ ಸಣ್ಣ ಓಡಾಟವೂ ಕಾರ್ಯವನ್ನು ಮಾಡಿಸುವುದು. ಹಳೆಯ ಸ್ನೇಹಿತನು ನಿಮ್ಮನ್ನು ಭೇಟಿಯಾಗಲು ಇಚ್ಛಿಸುವನು. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಯಾವುದನ್ನೂ ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕು.
ಮಿಥುನ ರಾಶಿ: ಕಾರ್ಯದ ಒತ್ತಡದಿಂದ ಆರೋಗ್ಯವು ಹದ ತಪ್ಪಬಹುದು. ಅಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನೀವು ಇಂದು ಬೆಲೆಬಾಳುವ ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ಇದು ನಿಮ್ಮ ನಿರೀಕ್ಷೆಯನ್ನು ದಾಟಿ ಮುಂದೆ ಹೋಗುವುದು. ನಿಮ್ಮನ್ನು ಹೊಗಳಬೇಕೆಂಬ ಆಸೆ ಇರುವುದು. ಯಾರದೋ ಒತ್ತಾಯಕ್ಕೆ ಮಣಿದು ಅವರ ಜೊತೆ ಪ್ರಯಾಣ ಮಾಡುವಿರಿ. ತಾಯಿಯ ಬಂಧುಗಳ ಜೊತೆ ಇಂದು ಹೆಚ್ಚು ಸಮಯವನ್ನು ಕಳೆಯುವಿರಿ. ಸಹೋದರರ ಸಹಭಾಗಿತ್ವದಲ್ಲಿ ಹೊಸ ಉದ್ಯಮವನ್ನು ಆರಂಭಿಸಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ಸಿಕ್ಕೇ ಸಿಗುತ್ತದೆ. ಒಳ್ಳೆಯ ಕಾರ್ಯಕ್ಕೆ ಧನನಷ್ಟವಾಗಲಿದೆ. ನಿಮ್ಮ ನಿಶ್ಚಿತ ಬುದ್ಧಿಯಂತೆ ನಿಮ್ಮ ಕೆಲಸಗಳನ್ನು ಮಾಡಿ ಮುಗಿಸುವಿರಿ. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಬಾಯಿ ತಪ್ಪಿ ಕೆಟ್ಟದ್ದನ್ನು ಆಡುವಿರಿ.
ಕಟಕ ರಾಶಿ: ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸೂಕ್ಷ್ಮ ಮತಿಯಿಂದ ವ್ಯವಹಾರವನ್ನು ಮಾಡಬೇಕಾಗುವುದು. ವಿವೇಚನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ. ಯಾವ ಮಾತನ್ನೂ ನೋವಾಗುವಂತೆ ಆಡಬೇಡಿ. ನಿಮ್ಮ ಜ್ಞಾನದ ಬಗ್ಗೆ ನಿಮಗೇ ಹೆಮ್ಮಯಾಗಬಹುದು. ನಿಮ್ಮ ವಸ್ತುವನ್ನು ಯಾರಿಗಾದರೂ ಕೊಟ್ಟಬಿಡಿ. ಪುಣ್ಯ ಸ್ಥಳಗಳು ನಿಮಗೆ ಸಂತೋಷವನ್ನು ಕೊಡುವುದು. ಮತ್ತೆ ಅದರ ಬಗ್ಗೆ ಚಿಂತೆ ಬೇಡ. ಅವರು ಅಂದುಕೊಂಡಿದ್ದನ್ನು ಸಾಧಿಸಲು ಬಿಡಿ. ಕಾಯಲು ದೇವರಿರುವಾಗ ನಿಮಗೇಕೆ ಆ ತೊಂದರೆ? ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ಹೂಡಿಕೆಯಲ್ಲಿ ಅಲ್ಪ ಲಾಭ ಸಿಗುವುದು. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಕೆಲಸದ ನಿಮ್ಮಿತ್ತ ನೀವು ಮನೆಯಿಂದ ದೂರ ಹೋಗಬೇಕಾಗುವುದು.
ಸಿಂಹ ರಾಶಿ: ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಯಾರಾದರೂ ಅಪಮಾನ ಮಾಡಬಹುದೆಂಬ ಭಯವೂ ಕಾಡುವುದು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಮನಸ್ತಾಪಗಳು ನಿಮಗೆ ಇಂದು ಅಧಿಕವಾಗಬಹುದು. ಎಲ್ಲವೂ ಗೊಂದಲವಾಗಿ ಯಾವದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಲವಿಲನೆ ಒದ್ದಾಡಬಹುದು. ವ್ಯವಹಾರದ ಅಭಿವೃದ್ಧಿಗೆ ಮಾಡಿದ ಪ್ರಯತ್ನಗಳು ಫಲಪ್ರದವಾಗಿಲ್ಲ ಎಂಬ ಕೊರಗು ಮತ್ತೊಂದೆಡೆ ಬಾಧಿಸುವುದು. ನಿಮ್ಮವರ ಅನುಪಸ್ಥಿಯು ಕಾಡಬಹುದು. ವಿರಾಮದ ಸುಖವು ದುಃಖವಾಗಿ ಪರಿವರ್ತನೆ ಆಗಬಹುದು ಎಲ್ಲವೂ ನಿಮ್ಮ ವಿರುದ್ಧವಿದ್ದಂತೆ ಅನ್ನಿಸುವುದು. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕೇಳಿದಷ್ಟೇ ವಿಚಾರಕ್ಕೆ ಉತ್ತರಿಸಿದರೆ ಸಾಕು.
ಕನ್ಯಾ ರಾಶಿ: ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ನಿಮ್ಮ ಮೇಲಧಿಕಾರಿಗಳ ಜೊತೆ ಚರ್ಚಿಸಿ. ಹಣವನ್ನು ಕೊಟ್ಟಾದರೂ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಕರ್ತವ್ಯಲೋಪವಿಲ್ಲದೇ ಮಾಡಿದ ಕೆಲಸದಿಂದ ನಿಮಗೆ ಈ ಧೈರ್ಯವು ಸಿದ್ಧವಾಗಿದೆ. ನೀವು ಇತರರಿಗೆ ಶುಭವನ್ನೇ ಬಯಸುವಿರಿ. ಇಂದು ನಿಮ್ಮ ಕುಟುಂಬದಲ್ಲಿ ಎದ್ದ ವೈಮನಸ್ಯದ ಬಿರುಗಾಳಿಯನ್ನು ಪ್ರಶಾಂತಗೊಳಿಸಲು ಸಮರ್ಥರಾಗುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಸಹಸ್ಥಿಗೆ ಬರಲಿದೆ. ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಹೇಳಿಕೊಳ್ಳುವಷ್ಟು ಸುಲಭವಾಗಿ ಯಾವುದನ್ನೂ ಬದಲಿಸಲಾಗದು.
ತುಲಾ ರಾಶಿ: ಇಂದು ವ್ಯವಸ್ಥೆಯ ಮುಖ್ಯಸ್ಥರಾದವರಿಗೆ ಮುನ್ನಡೆಸುವುದು ಕಷ್ಟವಾಗುವುದು. ಆಯಾಸದಿಂದ ಯಾವ ಉತ್ಸಾಹವೂ ನಿಮ್ಮಲ್ಲಿ ಇರದು. ನಿರ್ದಯೆಯು ನಿಮ್ಮ ಸ್ವಭಾವವಲ್ಲದಿದ್ದರೂ ಸಂದರ್ಭವು ಅದನ್ನು ಸೃಷ್ಟಿಸುವುದು. ಯಾವುದನ್ನೂ ಒಪ್ಪಿಕೊಳ್ಳುವ ಮನೋಭಾವ ನಿಮ್ಮದಾಗದು. ಅನಗತ್ಯ ಖರ್ಚಿನ ನಡುವೆ ಸದುಪಯೋಗವಾಯಿತು ಎಂಬ ಸಂತೋಷವು ಇರಲಿದೆ. ನಂಬಿಕೊಂಡವರೂ ನಿಮ್ಮ ಕೈ ಬಿಡಬಹುದು. ದ್ವಂದ್ವನೀತಿಯನ್ನು ನೀವು ಬಿಡುವುದಿಲ್ಲ. ಇಂದು ನೀವು ಕೆಲವು ಅನಗತ್ಯ ಖರ್ಚುಗಳನ್ನು ಸಹ ಅನುಭವಿಸಬಹುದು. ದುಂದುವೆಚ್ಚ ಮಾಡುವ ಸಾಧ್ಯತೆಯೂ ಇದೆ. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ಅನಾರೋಗ್ಯವು ತುರ್ತು ಚಿಕಿತ್ಸೆ ಮಾಡುವತನಕ ಕರೆದುಕೊಂಡು ಹೋಗುವುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.
ವೃಶ್ಚಿಕ ರಾಶಿ: ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ಇದನ್ನು ತುರ್ತು ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಅನುಭವಿಗಳ ಜೊತೆಗಿನ ಒಡನಾಟದದಿಂದ ಉದ್ಯಮವು ಹೆಚ್ಚಾಗುವುದು. ಭೂ ವಿವಾದವು ನಿಮಗೆ ಬೇಸರ ತರಿಸಬಹುದು. ನಿಮಗೆ ಪೋಷಕರ ಬೆಂಬಲವು ಪರೋಕ್ಷವಾಗಿ ಸಿಕ್ಕರೂ ಪ್ರತ್ಯಕ್ಷ ಬೆಂಬಲವನ್ನು ನೀವು ನಿರೀಕ್ಷಿಸುವಿರಿ. ಅಶಿಸ್ತಿನ ನಿಮ್ಮ ವರ್ತನೆಯು ಸಂಗಾತಿಗೆ ಕಿರಿಕಿರಿಯನ್ನು ಉಂಟುಮಾಡೀತು. ಅನಪೇಕ್ಷಿತ ಮಾತುಗಳನ್ನು ಕಡಿಮೆ ಮಾಡುವುದು ಉತ್ತಮ. ನಿಮ್ಮ ಕೆಲಸಗಳೇ ಆಗದಿರುವಾಗ ಇನ್ನೊಬ್ಬರ ಕೆಲಸವನ್ನೂ ಮಾಡಿಕೊಡಬೇಕಾದೀತು. ಅನಧಿಕೃತ ಹಣವು ನಿಮ್ಮ ಖಾತೆಗ ಜಮಾ ಆಗಬಹುದು. ಮನೆಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಸಾಲ ಕೊಟ್ಟ ಹಣವು ನಿಮಗೆ ಮರಳಿ ಬರುವುದು.
ಧನು ರಾಶಿ: ಯಾವುದರಲ್ಲಿಯೂ ಸುಖ ಕಾಣುವ ಮನಸ್ಸು ಆಗದು. ನಕಾರಾತ್ಮಕತೆ ನಿಮ್ಮ ಸಂತೋಷವನ್ನು ಹಾಳುಮಾಡುವುದು. ಇಂದು ನೀವು ಮಕ್ಕಳ ವಿಚಾರವಾಗಿ ಮಾಡಿದ ಶ್ರಮವು ಇಂದು ಫಲಿಸುವುದು. ಮಕ್ಕಳಿಂದ ನಿಮಗೆ ಅವಶ್ಯಕವಾದ ಸಹಕಾರವು ದೊರೆಯುವುದು. ಪ್ರೇಮವೂ ನಿಮಗೆ ನೆಮ್ಮದಿಯನ್ನು ಹಾಳುಮಾಡುವುದು. ಮನೆಯಲ್ಲಿ ನಿಮ್ಮ ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿರುವರು. ಬಂಧುಗಳೂ ನಿಮ್ಮನ್ನು ಪ್ರಶಂಸೆ ಮಾಡುವರು. ಊರಿನಲ್ಲಿ ನಿಮಗೆ ಹೆಚ್ಚು ಗೌರವ ಸಿಗಲಿದೆ. ನಿಮ್ಮ ಅಪೂರ್ಣ ಕೆಲಸವು ಇಂದು ಪೂರ್ಣಗೊಳ್ಳುತ್ತದೆ. ಹಿತಶತ್ರುಗಳಿಂದ ನೀವು ದೂರವಿರುವುದು ಅವಶ್ಯಕ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಪ್ರಯಾಣದಿಂದ ಇಂದು ತುಂಬಾ ಪ್ರಯೋಜನ ಆಗದು. ಬಾಂಧವರ ಜೊತೆ ಸ್ನೇಹದಿಂದ ಇರುವಿರಿ. ಬೇಡ ಕೆಲಸಕ್ಕೆ ಸಾಲವನ್ನು ಮಾಡಬೇಕಾಗುವುದು.
ಮಕರ ರಾಶಿ: ಇಂದು ಕೆಲವು ಘಟನೆಗಳು ಇರುಸುಮುರುಸಾಗಬಹುದು. ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದು ನೀವು ಮಾಡಿದ ಖರ್ಚು ಸದುಪಯೋಗವಾಗಿದೆ ಎಂದುಕೊಳ್ಳುವುದು ಬೇಡ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಗಾಲು ಹಾಕಬಹುದು. ಸಂಗಾತಿಯನ್ನು ಅತಿಯಾಗಿ ಇಷ್ಟಪಡುವಿರಿ. ಅತಿಯಾದ ಕೆಲಸದ ಕಾರಣ ನಿಮಗಾದ ಮಾನಸಿಕ ಒತ್ತಡಕ್ಕೆ ವಿಶ್ರಾಂತಿ ಅವಶ್ಯಕವಾದೀತು. ಎಲ್ಲ ಜವಾಬ್ದಾರಿಗಳೂ ನಿಮಗೆ ಬೇಕು ಎಂಬ ದುರಾಸೆ ಬೇಡ. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಸಿಕ್ಕಷ್ಟು ಆಹಾರವನ್ನು ತೃಪ್ತಿಕರವಾಗಿ ಸೇವಿಸಿ.
ಕುಂಭ ರಾಶಿ: ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ಆಲಸ್ಯವು ನಿಮ್ಮ ಒಳ್ಳೆತನಕ್ಕೆ ಮುಳುವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ಇಂದು ನೀವು ಬಹಳ ಕಾರ್ಯದಲ್ಲಿ ಮಗ್ನರಾಗುವಿರಿ. ಬೇರೆಯವರ ಮಾತನ್ನೊಂದನ್ನೇ ನಂಬಿ ಮೋಸಹೋಗುವಿರಿ. ನಿಮ್ಮ ಪ್ರೀತಿಯು ಹಿತವಾದ ಅನುಭವವನ್ನು ಕೊಡುವುದು. ನಿಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ಕೊಡುವಿರಿ. ಕಳೆದುಕೊಂಡ ವಸ್ತುವು ನಿಮಗೆ ಸಿಗಲಿದೆ. ಆಕಸ್ಮಿಕವಾಗಿ ನೀವು ಮೋಜಿನ ಬಲೆಗೆ ಸಿಲುಕಿಕೊಳ್ಳುವ ಸಂಭವವಿದೆ. ನಿಮ್ಮ ಸಂತೋಷವನ್ನು ಕಸಿದುಕೊಳ್ಳುವ ಮಾತುಗಳನ್ನು ನಿಮ್ಮವರು ಆಡಬಹುದು. ಕೇಳಿಸಿಕೊಂಡಿಲ್ಲ ಎಂಬ ಮನೋಭಾವವಿರಲಿ. ಹೂಡಿಕೆಯಲ್ಲಿ ಜಾಗರೂಕತೆ ಇರಲಿ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು.
ಮೀನ ರಾಶಿ: ಇಂದು ನೀವು ಮನೆಯವರಿಗೆ ತೊಂದರೆಯಾಗದಂತೆ ನೀವೇ ಉದ್ಯೋಗದ ಜೊತೆ ಉನ್ನತ ವಿದ್ಯಾಭ್ಯಾಸವನ್ನೂ ಮಾಡಬೇಕಾಗಬಹುದು. ನಿಮಗೆ ಇಂದು ಪರಿಚಿತ ವ್ಯಕ್ತಿಯ ಸಹಾಯದಿಂದ ಸಾಲವನ್ನು ಮಾಡುವಿರಿ. ಇಂದು ನೀವು ಸರ್ಕಾರದಿಂದ ಗೌರವಿಸಲ್ಪಡುವ ಸಾಧ್ಯತೆಯಿದೆ. ಹಣಕ್ಕಾಗಿ ಅಪರಿಚಿತರಿಂದ ಪೀಡೆ ಉಂಟಾಗುವುದು. ಹಳೆಯ ಸ್ನೇಹಿತರು ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಸ್ನೇಹಿತರು ಸಹ ಹೆಚ್ಚಾಗುತ್ತಾರೆ. ಇಂದು ನಿಮ್ಮ ಹೆಂಡತಿಯಿಂದ ನೀವು ಉತ್ತಮ ಬೆಂಬಲವನ್ನು ಪಡೆಯಬಹುದು. ತಂದೆಯು ನಿಮಗೆ ಏನನ್ನಾದರೂ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವರು. ತಾಳ್ಮೆಯಿಂದ ಇಂದಿನ ವ್ಯವಹಾರವನ್ನು ಮಾಡಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ನಿಮ್ಮ ನೇರ ನುಡಿಗಳೇ ಇಂದು ನಿಮಗೆ ತೊಂದರೆ ತರುವುದು. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು.
ಲೋಹಿತ ಹೆಬ್ಬಾರ್-8762924271 (what’s app only)