ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:43 ಗಂಟೆ, ರಾಹು ಕಾಲ ಬೆಳಿಗ್ಗೆ 09:27 ರಿಂದ 10:59, ಯಮಘಂಡ ಕಾಲ ಮಧ್ಯಾಹ್ನ 02:06 ರಿಂದ ಸಂಜೆ 03:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ.
ಮೇಷ ರಾಶಿ : ಇಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ಉಪಯೋಗಕ್ಕೆ ಬಾರದ ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು. ಚಿಂತೆಯಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ನಂಬಿಕೆ ಬರುವಂತೆ ಕೆಲಸವನ್ನು ಮಾಡುವಿರಿ. ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ನಿಮ್ಮ ಆಯ್ಕೆಯ ವಿಚಾರದಲ್ಲಿ ಆಪ್ತರನ್ನು ಕೇಳಿ ಸರಿ ಮಾಡಿಕೊಳ್ಳುವಿರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅತಿಯಾದ ಚಿಂತೆಯಲ್ಲಿ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ ಮಾಡಿಸಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಅಂತಃಕರಣದ ಒಪ್ಪಿಗೆಯಿಂದ ಕಾರ್ಯವನ್ನು ಮಾಡುವಿರಿ.
ವೃಷಭ ರಾಶಿ : ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ನೀವು ಸೇವನೋಭಾವದಿಂದ ಹೊರಬರುವಿರಿ. ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗದು. ನಿಮ್ಮ ಸಂತೋಷಕ್ಕೆ ಕಾರಣದ ಅವಶ್ಯಕತೆ ಇಲ್ಲ. ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ. ನಿಮ್ಮ ಮಾತನ್ನು ಯಾರೂ ಪಾಲಿಸರು ಎಂಬ ಬೇಸರ ಇರಲಿದೆ. ನಿಮ್ಮ ಅವಲೋಕನ ಅತ್ಯಗತ್ಯ. ನಿಮ್ಮವರಲ್ಲಿಯೇ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಬರಬಹುದು. ಸ್ಪರ್ಧೆಯಲ್ಲಿ ನಿಮ್ಮ ತೊಡಗುವಿಕೆ ಕಡಿಮೆಯಾಗಿ ಸೋಲುವಿರಿ. ಜನರ ಜೊತೆ ಬೆರೆಯುವಿಕೆ ಕಡಿಮೆ ಆಗಬಹುದು. ಸಂಗಾತಿಯ ಮಾತನ್ನು ಪೂರ್ಣವಾಗಿ ಬೆಂಬಲಿಸಲಾರಿರಿ. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ದೂರ ಪ್ರಯಾಣದ ಮನಸ್ಸಿದ್ದರೂ ಅನನುಕೂಲತೆಯಿಂದ ಅದು ಕಷ್ಟವಾದೀತು.
ಮಿಥುನ ರಾಶಿ : ರಾಜಕೀಯದಲ್ಲಿ ಹೊಸದಾಗಿ ಪ್ರವೇಶವನ್ನು ಪಡೆಯುವವರಿಗೆ ಮೇಲಧಿಕಾರಿಗಳು ತೋರಿಸುವ ಪಕ್ಷಪಾತದ ಧೋರಣೆಯು ನೀವು ಸಹಿಸಲಾರಿರಿ. ಹಿರಿಯರಿಂದ ನಿಮಗೆ ಪ್ರಶಂಸೆ ಸಿಗಲಿದೆ. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮಗೆ ಸಿಕ್ಕ ಪ್ರೇರಣೆ ಕೊನೆಯ ತನಕ ಬಾರದು. ನಿಮ್ಮ ದಿನಚರ್ಯೆಯಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಬಹುದು. ಆಪ್ತರನ್ನು ನೀವು ಕಳೆದೊಳ್ಳುವ ಸಂಭವವಿದೆ. ಅಧಿಕ ಒತ್ತಡವು ಕಂಡು ಬಂದಲ್ಲಿ ಸ್ವಲ್ಪಕಾಲ ಏಕಾಂತದಲ್ಲಿ ಇರಿ. ಆರ್ಥಿಕವಾಗಿ ದುರ್ಬಲವಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಹಣವಂತೂ ಸಿಗದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ. ನಿಮ್ಮವರನ್ನು ನೀವು ಬಿಟ್ಟಕೊಡಲಾರಿರಿ.
ಕರ್ಕಾಟಕ ರಾಶಿ : ಉದ್ಯಮದ ಕಾರಣಕ್ಕೆ ಮಾಡಿದ ಪ್ರಯಾಣವು ಸಫಲವಾಗುವುದು. ಎಲ್ಲ ಸಂದರ್ಭವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಕಷ್ಟವೇ ಆದೀತು. ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು. ನೀವು ಎಲ್ಲವನ್ನೂ ಹೇಳಬೇಕು ಎಂದು ಅಂದುಕೊಂಡರೂ ನಿಮಗೆ ಹೇಳಲಾಗದೇ ದುಃಖವು ಬರಬಹುದು. ವಾಹನದ ದುರಸ್ತಿಯು ಅನಿವಾರ್ಯವಸದೀತು. ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಮೇಲಿಟ್ಟ ವಿಶ್ವಾಸವು ಭಂಗವಾಗುವುದು ಬೇಡ. ವ್ಯಾಪಾರವನ್ನು ನಿಮ್ಮ ಮಿತಿಯಲ್ಲಿ ಮಾಡಿ. ದೈವಭಕ್ತಿಯು ನಿಮಗೆ ದಾರಿ ತೋರಿಸುವುದು. ಆರ್ಥಿಕವಾಗಿ ಸುಧಾರಣೆ ಮಾಡಿಕೊಳ್ಳಲು ನಿಮಗೆ ದಾರಿಗಳು ಸಿಗಬಹುದು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಮುಖ್ಯ. ಕೈ ಬಂದ ಉದ್ಯೋಗವನ್ನು ಅಹಂಕಾರದಿಂದ ಕಳೆದುಕೊಳ್ಳುವಿರಿ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು. ಸ್ವಂತ ಉದ್ಯೋಗವಿದ್ದರೆ ಹೆಚ್ಚು ಶ್ರಮ ಆದೀತು. ನಿಮ್ಮ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ.
ಸಿಂಹ ರಾಶಿ : ಇನ್ನೊಬ್ಬರಿಗಾಗಿ ನೀವು ನಿಮ್ಮ ತುರ್ತಿನ ಕಾರ್ಯವನ್ನು ಬಿಡಬೇಕಾದೀತು. ಇಂದು ಮನೆಯ ನಿರ್ಮಾಣದ ಕಾರ್ಯಕ್ಕೆ ನಿಮ್ಮವರಿಂದ ತೊಂದರೆ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ರಮ್ಯವಾದ ಸ್ಥಳಗಳನ್ನು ನೋಡುವ ಬಯಕೆ ಇರುವುದು. ಸಂಕೋಚದ ಸ್ವಭಾವವು ನಿಮ್ಮ ಅನೇಕ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತದೆ. ಸಂಬಂಧಗಳನ್ನು ನೀವು ಇಂದು ಬಿಡಲು ಪ್ರಯತ್ನಿಸುವಿರಿ. ವಾಹನ ಸಂಚಾರಕ್ಕೆ ನಿಮಗೆ ತೊಂದರೆಯಾಗಬಹುದು. ಸ್ತ್ರೀಯರ ಉದ್ಯಮಕ್ಕೆ ತೊಂದರೆಯಾಗುವುದು. ಶುಭ ಸುದ್ದಿಯು ನಿಮಗೆ ಸ್ವಲ್ಪ ಸಂತೋಷವನ್ನು ತರಬಹುದು. ಮಕ್ಕಳ ಜೊತೆ ಇರುವಿರಿ. ಒಂದಿಷ್ಟು ಬದಲಾವಣೆಗಳು ಆಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ.
ಕನ್ಯಾ ರಾಶಿ : ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು. ಇಂದು ನಿಮಗೆ ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ. ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತಯಲ್ಲಿ ಇರುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಖರೀದಿಗೆಂದು ತೆಗೆದಿಡುವಿರಿ. ನಿಮಗೆ ಅಂಟಿದ ಅಪವಾದವು ನಿರಾಧಾರ ಎಂದು ಸಾಬೀತಾಗಬಹುದು. ಸಹೋದರರ ಮೇಲಿನ ಬೇಸರವನ್ನು ಹೊರಹಾಕುವಿರಿ. ಸಮಯಸ್ಫೂರ್ತಿಯಿಂದ ತೊಂದರೆಯ ಸನ್ನಿವೇಶವನ್ನು ದಾಟುವಿರಿ. ಸುಮ್ಮನೇ ಅನುಮಾನದಿಂದ ಸ್ನೇಹವನ್ನು ಹಾಳುಮಾಡಿಕೊಳ್ಳಬಹುದು. ಸಿಗಬೇಕಾದ ಸಮಯಕ್ಕೆ ಗೌರವವು ಸಿಗಲಿದೆ. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ನೇರವಾದ ಮಾತುಗಳು ನಿಮಗೆ ಒಪ್ಪಿಗೆ ಆಗದೇಹೋಗಬಹುದು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.
ತುಲಾ ರಾಶಿ : ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವ ಸಾಧ್ಯತೆ ಇದೆ. ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು. ವೃತ್ತಿಯ ಅನ್ವೇಷಣೆ ಬಹಳ ವೇಗದಿಂದ ಸಾಗುವುದು. ಹೆಚ್ಚು ಪರಿಶ್ರಮದಿಂದ ಕೆಲಸವನ್ನು ಮಾಡುವಿರಿ. ಯಾರ ಸಹಕಾರವನ್ನೂ ಬಯಸದೇ ನಿಮ್ಮ ಜವಾಬ್ದಾರಿಯಲ್ಲಿ ನೀವು ಇರುವಿರಿ. ಸಮಯವನ್ನು ವ್ಯರ್ಥ ಮಾಡಿ ಸಂಕಟಪಡುವಿರಿ. ದಾನ ಮಾಡುವ ಮನಸ್ಸು ನಿಮಗೆ ಇರದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. ವೃತ್ತಿಗಾಗಿ ಅಪರಿಚಿತರು ಹಣವನ್ನು ಕೇಳಬಹುದು. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು.
ವೃಶ್ಚಿಕ ರಾಶಿ : ಇಂದು ನೀವು ಯಾರಿಗೂ ನೋವಾಗದಂತೆ ವರ್ತಿಸುವ ಯೋಚನೆ ಮಾಡುವಿರಿ. ನಿಮ್ಮ ಎಲ್ಲ ಆಸೆಗಳೂ ಪೂರ್ಣಗೊಳ್ಳದು. ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮ್ಮ ವಾಹನವನ್ನು ಯಾರದೋ ಕಾರ್ಯಕ್ಕೆ ಕೊಡಬೇಕಾಗುವುದು. ನಿಮಗೆ ಹೆಚ್ಚಿನ ಆದಾಯದ ಅವಶ್ಯಕತೆ ಇರಲಿದೆ. ಅದಕ್ಕಾಗಿ ನೀವು ಏನನ್ನಾದರೂ ಆದಾಯದ ಮೂಲವನ್ನು ಪಡೆದುಕೊಳ್ಳಬೇಕಾಗುವುದು. ಹೊಸತನ್ನು ಯೋಚಿಸಿ ಅದನ್ನು ಕ್ರಿಯಾರೂಪಕ್ಕೆ ತೆಗೆದುಕೊಂಡು ಬನ್ನಿ. ಅಧಿಕೃತವಲ್ಲದ ಕಾರ್ಯಕ್ಕೆ ನಿಮ್ಮ ಸಹಾಯವು ಸಿಗದು. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು. ಹೊಸ ವಸ್ತುಗಳನ್ನು ನೀವು ಯಾರದೋ ಮೂಲಕ ಪಡೆದುಕೊಳ್ಳುವಿರಿ. ಗೌರವವನ್ನು ಕೇಳಿಪಡೆಯಬೇಕಾಗುವುದು. ಧಾರ್ಮಿಕ ಕಾರ್ಯದಲ್ಲಿ ಅಶ್ರದ್ಧೆಯನ್ನು ತೋರಿಸುವುದು ಬೇಡ.
ಧನು ರಾಶಿ : ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ತಪ್ಪನ್ನು ನೀವೇ ಒಪ್ಪಿಕೊಂಡರೆ ದಂಡನೆಯಲ್ಲಿಯೂ ವಿನಾಯಿತಿ ಸಿಗಬಹುದು. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಅಧಿಕ ಒತ್ತಡದಿಂದ ಕೆಲಸವು ನಿಮಗೆ ಸೂಚಿಸದೇ ಹೋಗಬಹುದು. ಸಜ್ಜನರ ಸಹವಾಸದಿಂದ ನಿಮ್ಮಲ್ಲಿ ಸಣ್ಣ ಬದಲಾವಣೆ ಆಗಲಿದೆ. ವಿದ್ಯಾಭ್ಯಾಸದ ಕೊರತೆಯಿಂದ ಕಾರ್ಯದ ಸ್ಥಳದಲ್ಲಿ ಅಪಮಾನವಗುವುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಬರಬಹುದು. ಸಿಗಬೇಕಾದವರು ನಿಮ್ಮಿಂದ ದೂರವಾಗಬಹುದು. ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯವನ್ನು ಕೊಡಿ. ವಿದ್ಯಾಭ್ಯಾಸದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿಯನ್ನು ಕೊಟ್ಟೀತು. ಹಿರಿಯರ ಕೋಪಕ್ಕೆ ತುತ್ತಾಗುವಿರಿ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.
ಮಕರ ರಾಶಿ : ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ಏನನ್ನಾದರೂ ಕೇಳಿ ಬಂದವರಿಗೆ ಇಲ್ಲವೆನದೇ ನೀಡಿ. ಅವರ ಸಂತೋಷದಲ್ಲಿ ಭಾಗಿಯಾಗುವಿರಿ. ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಬಹುದು. ಪ್ರೀತಿಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಶೀಲರಾಗುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ಕ್ರಮವು ಬಹಳ ಚೆನ್ನಾಗಿರುವುದು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಬೇಡ. ತಾಳ್ಮೆಯ ಪರೀಕ್ಷೆ ಇಂದು ಆಗಬಹುದು. ಕಛೇರಿಯ ಒತ್ತಡದಿಂದ ನಿಮಗೆ ಸ್ವಂತ ಕಾರ್ಯವು ಮರೆಯುವುದು. ದೈವಭಕ್ತಿಯು ಕಡಿಮೆ ಆಗಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ಎತ್ತರದ ಪ್ರದೇಶವನ್ನು ಏರುವುದು ಬೇಡ. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು.
ಕುಂಭ ರಾಶಿ : ಬರುವ ಕಷ್ಟಗಳು ನಿಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ವ್ಯವಹಾರದ ದೃಷ್ಟಿಯಿಂದ ನಿಮಗೆ ಸೋಲಾಗುವುದು. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ನಿಮಗೆ ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವಿರಿ. ಪ್ರೀತಿಯನ್ನು ಒಡೆಯಲು ನೀವು ಬಹಳ ಹಾತೊರೆಯುವಿರಿ. ಸಣ್ಣ ವ್ಯಾಪರವು ಲಾಭದಾಯಕವಾಗಲಿದೆ. ಭಾವ ಬಲದಿಂದ ಗೆಲ್ಲಲು ಪ್ರಯತ್ನಿಸಿ. ಕೊಟ್ಟ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಮಾಡುವಿರಿ. ನಿಮಗೆ ಭವಿಷ್ಯವನ್ನು ನಿರ್ಧರಿಸಲು ಕಷ್ಟವಾದೀತು. ಇಂದಿನ ನಿಮ್ಮ ಸಮಯವು ಸದುಪತೋಗವಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸತನ್ನು ಮಾಡಲು ಯತ್ನಿಸುವಿರಿ. ಯವುದನ್ನೋ ಇನ್ನಾವುದಕ್ಕೋ ತಳಕುಹಾಕುವಿರಿ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಇಂದು ಕುಟುಂಬದ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸ್ವತಂತ್ರವಾಗಿ ಇರಲು ನಿಮ್ಮ ಚಿಂತನೆ ಇರುವುದು.
ಮೀನ ರಾಶಿ : ನಿಮ್ಮನ್ನು ಗುಪ್ತವಾಗಿ ಗಮನಿಸುವಂತೆ ತಿಳಿದೀತು. ಸ್ವಂತಿಕೆಯನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ಅಡ್ಡಿಗಳು ಬರಬಹುದು. ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ಆಪ್ತರು ನಿಮ್ಮಿಂದ ದೂರವಾಗಬಹುದು. ಇದು ನಿಮ್ಮನ್ನು ವಿಚಲಿತ ಗೊಳಿಸಬಹುದು. ನಿಮ್ಮ ಬಳಿ ಆಗದೇ ಇರುವ ಕಾರ್ಯಕ್ಕೆ ಮರಳಿ ಯತ್ನವ ಮಾಡುವಿರಿ. ನೀವು ಯಾರನ್ನಾದರೂ ಬಹಳ ಇಷ್ಟಪಡುವಿರಿ. ಮನೆಯಿಂದ ದೂರವಿರಲು ನೀವು ಬಯಸುವಿರಿ. ಉದ್ಯೋಗದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಮನೆಯ ಚಿಂತೆಯೂ ನಿಮ್ಮನ್ನು ಕಾಡಬಹುದು. ಕೆಲಸದ ವಿಚಾರದಲ್ಲಿ ಉಭಯ ಸಂಕಟವಾಗಬಹುದು. ಒತ್ತಾಯದಿಂದ ಒಲಿಸಿಕೊಂಡಿದ್ದು ನಿಮಗೆ ಸಿಗದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು.
-ಲೋಹಿತ ಹೆಬ್ಬಾರ್ – 8762924271 (what’s app only)