Daily Horoscope 9 August 2024: ಈ ರಾಶಿಯವರಿಗೆ ವೃತ್ತಿಯ ಬಗ್ಗೆ ಕೀಳರಿಮೆ ಬರುವ ಸಾಧ್ಯತೆ ಇದೆ

ಆಗಸ್ಟ್​ 9,​​ 2024ರ​​ ನಿಮ್ಮ ರಾಶಿಭವಿಷ್ಯ: ವೈವಾಹಿಕ ಕಾರ್ಯದಲ್ಲಿ ನಿಮಗೆ ಬಂಧುಗಳ ಸಹಕಾರ ಕಾಣಿಸುವುದು. ಒಡಹುಟ್ಟಿದವರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ ಸಂತೋಷಪಡಿಸಿ. ಯಂತ್ರೋಪಕರಣದಲ್ಲಿ ನಿಮಗೆ ಲಾಭವಿದೆ. ಹಾಗಾದರೆ ಆಗಸ್ಟ್​ 9ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 9 August 2024: ಈ ರಾಶಿಯವರಿಗೆ ವೃತ್ತಿಯ ಬಗ್ಗೆ ಕೀಳರಿಮೆ ಬರುವ ಸಾಧ್ಯತೆ ಇದೆ
ಈ ರಾಶಿಯವರಿಗೆ ವೃತ್ತಿಯ ಬಗ್ಗೆ ಕೀಳರಿಮೆ ಬರುವ ಸಾಧ್ಯತೆ ಇದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2024 | 12:02 AM

ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ (Horoscope) ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಸಿದ್ಧ ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:57 ಗಂಟೆ, ರಾಹು ಕಾಲ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 12:38, ಯಮಘಂಡ ಕಾಲ ಮಧ್ಯಾಹ್ನ 03:48 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:29ರ ವರೆಗೆ.

ಮೇಷ ರಾಶಿ: ತಂದೆಯಿಂದ ನಿಮಗೆ ಆರ್ಥಿಕ ಸಹಾಯವಾಗಲಿದೆ. ಇಂದು ನೀವು ಮಾಡಿದ ಹೂಡಿಕೆಯಿಂದ ಲಾಭವಿದೆ. ದುರಭ್ಯಾಸದಿಂದ ಹಣವನ್ನು ಕಳೆದುಕೊಳ್ಳುವಿರಿ. ವ್ಯಾಪರದಲ್ಲಿ ಲಾಭವಾಗಲಿದೆ. ಅಪರಿಚಿತರ ಜೊತೆ ಮಾತನಾಡಲು ನಿಮಗೆ ಮುಜಗರವಾದೀತು. ನಿಮ್ಮ ಉದ್ಯೋಗಕ್ಕೆ ಕೆಲವು ಅಡೆತಡೆಗಳು ಬಂದರೂ ಅದನ್ನು ಸರಿಮಾಡಿಕೊಳ್ಳುವ ಬಗ್ಗೆ ಅರಿವಿರಲಿದೆ. ಯುವಕರು ಬಲವಂತರಾಗಿದ್ದರೂ ಸರಿಯಾದ ಮಾರ್ಗವು ಸಿಗದೇ ಒದ್ದಾಡಬೇಕಾದೀತು. ಕೃತಜ್ಞತೆಯು ನಿಮ್ಮ ಗೌರವಾನ್ವಿತ ಅಧಿಕಗೊಳಿಸುವುದು. ಸಹೋದರರ ಸಂಬಂಧವು ಇಂದು ಸ್ವಲ್ಪ ಸುಧಾರಿಸಬಹುದು. ನೂತನ ಅನ್ವೇಷಣೆಯ ಕಡೆ ನಿಮ್ಮ ಮನಸ್ಸು ಹೋಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ. ಹೂಡಿಕೆಯಲ್ಲಿ ಹಿನ್ನಡೆ ಸಾಧ್ಯತೆ ಇದೆ. ಕೋಪವನ್ನು ಯಾರೆದುರೂ ಪ್ರಕಟಿಸುವುದು ಬೇಡ.

ವೃಷಭ ರಾಶಿ: ನಿಮಗೆ ಬೇಕಾದಷ್ಟು ಸೌಲಭ್ಯಗಳಿದ್ದರೂ ಕೊರತೆ ಎನಿಸಬಹುದು. ಇಂದು ನೀವು ಒತ್ತಡಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಕಾರ್ಯವನ್ನು ನಿಭಾಯಿಸಲು ಕಲಿಯಬೇಕಾಗಬಹುದು. ಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳಲು ಅನೇಕ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮವರ ಮಾತಿನಿಂದ ಅಪಮಾನವೆನಿಸಬಹುದು. ನಿಮ್ಮ ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು.‌ ಸಕಾರಾತ್ಮಕವಾಗಿ ಇದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರಲಿ. ದಾಂಪತ್ಯದಲ್ಲಿ ಮಕ್ಕಳ ವಿಚಾರಕ್ಕೆ ಕಲಹವಾಗಬಹುದು. ನ್ಯಾಯಾಲಯದಲ್ಲಿ ನಿಮಗೆ ಸೋಲಾಗಬಹುದು. ಅಪವಾದವನ್ನು ದೂರಮಾಡಿಕೊಳ್ಳಲು ಹಣವನ್ನು ಕಳೆದುಕೊಳ್ಳುವಿರಿ. ಯಾರಾದರೂ ನಿಮ್ಮನ್ನು ಕಂಡು ಅವಮಾನಿಸುವರು. ಉತ್ತರಿಸಿ ಇನ್ನಷ್ಟು ಹತಾಶರಾಗಬೇಡಿ. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಬೇರೆ ಸ್ಥಳದಲ್ಲಿ ನಿಮ್ಮ ವಾಸವು ಇರಬಹುದು.

ಮಿಥುನ ರಾಶಿ: ಪ್ರಭಾವಿಗಳ ಜೊತೆ ನೀವು ಪ್ರಯಾಣ ಮಾಡುವಿರಿ. ಇಂದು ನಿಮ್ಮ ವಾಹನದಲ್ಲಿ ದೀರ್ಘಪ್ರಯಾಣವು ಮಾಡುವುದು ಬೇಡ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ನಿಮಗೆ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳಲು ಕಷ್ಟವಾದೀತು. ಆಹಾರದ ಬಗ್ಗೆ ಗಮನವಿರಬೇಕು. ಭೂಮಿಯ ಖರೀದಿಗೆ ಅಧಿಕ ಖರ್ಚಾಗಬಹುದು. ನಿಮ್ಮ ಉದ್ಯೋಗವು ಅಭಿವೃದ್ಧಿಯ ಕಡೆಗೆ ಸಾಗಲಿದೆ. ಅಪರಿಚಿತ ಕರೆಗೆ ನೀವು ಮಾರುಹೋಗಬಹುದು, ಎಚ್ಚರವಾಗಿರಿ. ನಿಮಗೆ ಏಕಾಂತ ಬೇಕೆನಿಸಿ ಏಕಾಂಗಿಯಾಗಿ ಹೋಗಬಹುದು‌. ಸಜ್ಜನರ ಸಹವಾಸವು ನಿಮ್ಮ ಅಹಂಕಾರದಿಂದ ಸಿಗದೇಹೋಗಬಹುದು. ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ಸಾಮೂಹಿಕ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗಬಹುದು. ಸ್ತ್ರೀಯರಿಗೆ ಖಾಸಗಿ ಸಂಸ್ಥೆಯಲ್ಲಿ ಅಧಿಕಾರ ಸಿಗಲಿದೆ. ಯಾವುದನ್ನೂ ಕೇವಲ‌ ಮಾತಿನ ಮೇಲೆ ನಂಬಲಾಗದು.

ಕರ್ಕಾಟಕ ರಾಶಿ: ಅಧಿಕಾರಕ್ಕೆ ನೀವು ಬಹಳ ಶ್ರಮಪಡುವಿರಿ. ಅಹಂಕಾರದಿಂದ ಕೆಲವರನ್ನು ಕಳೆದುಕೊಳ್ಳುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಸ್ವತಂತ್ರವಾಗಿರುವ ನಿಮಗೆ ಏನನ್ನೋ ಕಳೆದುಕೊಂಡಿದ್ದೀರಿ ಎಂದು ಅನ್ನಿಸಬಹುದು.‌ ಅನುಮಾನವು ನಿಮ್ಮ ನೆಮ್ಮದಿಗೆ ಭಂಗ ತರುವುದು. ಮಕ್ಕಳು ನಿಮ್ಮನ್ನು ಅನೇಕ ಪ್ರಕಾರವಾಗಿ ಪೀಡಿಸಿಯಾರು. ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಇದೆ.‌ ಸರ್ಕಾರದ ಕಡೆಯಿಂದ ನಿಮಗೆ ಲಾಭವಾಗುವುದು. ಕಛೇರಿಯಲ್ಲಿ ನಿಮ್ಮ‌ ಕೆಳಗಿನವರು ನಿಮಗೆ ಆದೇಶ ಮಾಡಿಯಾರು. ಆರಂಭಿಸಿದ ಕೆಲಸಗಳು ಮಂದಗತಿಯಲ್ಲಿ ಸಾಗಬಹುದು. ಅಕ್ರಮ ಆಸ್ತಿಯಿಂದ‌ ನಿಮಗೆ ಇಂದು ತೊಂದರೆಯಾಗಬಹುದು. ರಾಜಕಾರಣಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚು ಓಡಾಡುವರು. ತೋರಿಕೆಗೆ ಮಾಡುವ ಕೆಲಸದಲ್ಲಿ ನಿಮಗೆ ಸಂತೋಷ ಸಿಗದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌ ಉತ್ಸಾಹಕ್ಕೆ ತೊಂದರೆ ಬರುವ ಕಡೆ ನೀವು ಇರಲಾರಿರಿ.

ಸಿಂಹ ರಾಶಿ: ಬಹು ದಿನಗಳ ವಿವಾಹದ ಚಿಂತೆಯು ನಿಮ್ಮಿಂದ ದೂರಾಗುವುದು. ಇಂದು ಕುಟುಂಬದ ಸದಸ್ಯ ನಿಮ್ಮ ಜೊತೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ನಿಮ್ಮ ಯೋಜನೆಯನ್ನು ಮುಂದುವರಿಸಲು ನಿಮಗೆ ಆತಂಕವು ಬರಬಹುದು. ಮುಖ್ಯ ವಿಚಾರವನ್ನು ನೀವು ಮರೆಯುವ ಸಂಭವವಿದೆ. ನೀವೇ ಇಂದು ಸಂಗಾತಿಯನ್ನು ಆರಿಸಿಕೊಳ್ಳಲು ಮುಂದಾಗುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಲೆಕ್ಕಪರಿಶೋಧಕರು ಒತ್ತಡದಿಂದ ಹೊರಬಂದಿರುವರು. ನಿಮ್ಮ ಕಾರ್ಯವನ್ನು ನೀವೇ ಹೇಳಿಕೊಳ್ಳಬೇಕಾದೀತು. ನಿಮ್ಮನ್ನು ಇಷ್ಟಪಡುವವರು ನಿಮಗೆ ಉಡುಗೊರೆಯನ್ನು ಕೊಟ್ಟಾರು. ನಿಮ್ಮ ಆಲೋಚನೆಗಳಿಂದ‌ ನಕಾರಾತ್ಮಕತೆಯು ಉಂಟಾಗಬಹುದು. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು. ನೀವು ವಿನಾಕಾರಣ ಯಾರನ್ನೂ ಇಷ್ಟಪಡಲಾರಿರಿ.

ಕನ್ಯಾ ರಾಶಿ: ಇಂದು ನಿಮ್ಮ‌ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ನೀವು ಕೋಪವು ಹತೋಟಯಲ್ಲಿ ಇರಲಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹೋದ್ಯೋಗಿಗಳ ಸಹಾಯ ಪಡೆಯುವಿರಿ. ಭೂ ವಿವಾದವು ಇತ್ಯರ್ಥವಾಗಬಹುದು. ಉದ್ಯೋಗದಲ್ಲಿ ಸಿಗುವ ಬಡ್ತಿಗೆ ನೀವು ಕಾಯುತ್ತಿರುವಿರಿ. ಲಾಭ ಹಾಗೂ ನಷ್ಟವನ್ನು ಸರಿಗೂಡಿಸಿಕೊಂಡು ನೋಡುವುದು ಉತ್ತಮ. ಕ್ರೀಡೆಯಲ್ಲಿ ಇಂದು ಹೆಚ್ಚು ಆಸಕ್ತಿ ಬರಬಹುದು. ಮನೋರಂಜನೆಗೆ ಇಂದು ಸಮಯವನ್ನು ಕೊಡುವಿರಿ. ನ್ಯಾಯ ಸಮ್ಮತವಾದ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಯಾರದೋ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ನಿಮ್ಮ‌ ನಿಜಸ್ವರೂಪ ಗೊತ್ತಾಗಬಹುದು. ನಿಮ್ಮ ಸಂಬಂಧಿಕರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ.

ತುಲಾ ರಾಶಿ: ತುರ್ತಾಗಿ ಸ್ಥಳ ಬದಲಾವಣೆ ಮಾಡಬೇಕಾಗಬಹುದು. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿರುವ ನಿಮಗೆ ಪ್ರೇಮ ಜೀವನವು ಒಳ್ಳೆಯ ತಿರುವು ಕೊಡಬಹುದು. ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿಯು ಸಿಗುವರು. ನಿಮ್ಮ ಸಮಯಕ್ಕೆ ಯೋಗ್ಯವಾದ ವಸ್ತುವೊಂದು ಬರಲಿದೆ. ಯಾರ ಸಾಮರ್ಥ್ಯವನ್ನೂ ನೀವು ಕೆಳದರ್ಜೆಯಲ್ಲಿ ಕಾಣಲು ಬಯಸುವಿರಿ. ಸ್ತ್ರೀಯರಿಗೆ ಅನಾರೋಗ್ಯದಿಂದ ಸಂಕಟವಾಗಲಿದೆ. ಸುಮ್ಮನೇ ಕುಳಿತು ನಕಾರಾತ್ಮಕ ಚಿಂತನೆಗಳನ್ನು ಮಾಡಿಕೊಳ್ಳುವವರಿದ್ದೀರಿ. ಸಮೀಪದ‌ ದೇವಾಲಯ ದರ್ಶನವು‌ ಮನಸ್ಸಿಗೆ ಯಾವುದೇ ಕಾರಗಣಕ್ಕಾಗಿ ಧನಾತ್ಮಕ ಚಿಂತನೆಯನ್ನು ಮಾಡಿಕೊಳ್ಳಿ. ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ‌ಮಾಡಿ. ಸ್ನೇಹಿತರ ಅಸಹಕಾರವು ನಿಮಗೆ ಬೇಸರ ಕೊಡಬಹುದು. ಇದು ಜಾಣತನವೂ ಹೌದು. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು.

ವೃಶ್ಚಿಕ ರಾಶಿ: ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಒತ್ತಡದಿಂದ ವೇಗವನ್ನು ಹೆಚ್ಚಿಸುವಿರಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ನಿಮಗೆ ನಿಮ್ಮ ಸಾಮರ್ಥ್ಯ ಗೊತ್ತಿದ್ದರೂ ಹಿಂದೆಟು ಹಾಕಬಹುದು. ಸ್ನೇಹಿತರ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ವಿಧೇಯಯತೆಯು ನಿಮ್ಮ ಗೌರವವನ್ನು ಹೆಚ್ಚಿಸುವುದು. ಹಣವೂ ನಿಮ್ಮ ಸ್ಥಾನಮಾನಕ್ಕೆ ಯೋಗ್ಯವಾಗಿ ವ್ಯವಸ್ಥೆಯನ್ನು ಮಡುವುದು. ನೂತನ‌ ಆಭರಣವನ್ನು ಖರೀದಿಸುವಿರಿ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರದೋ ಮಾತಿಗೆ ವಶವಾಗುವ ಸಾಧ್ಯತೆ ಇದೆ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ತಪ್ಪಾದ ಆಚರಣೆಯನ್ನು ಮಾಡುವುದು ಬೇಡ.

ಧನು ರಾಶಿ: ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ಇಂದು ನೀವು ಉದ್ಯಮದ ಕಾರಣಕ್ಕೆ ಕೈಗೊಂಡ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಅಧಿಕೃತ ಕೆಲಸವನ್ನು ಬಿಟ್ಟು ಅನ್ಯ ಕೆಲಸವನ್ನು ಮಾಡಬೇಕಾಗಬಹುದು. ಮಾತನಾಡುವಾಗ ಭೀತಿ ಕಾಣಿಸುವುದು. ಅಧಿಕ ಲಾಭವನ್ನು ನೀವು ನಿರೀಕ್ಷಿಸಿದರೂ ನಿಮಗೆ ಫಲವು ಸಿಗಲಿಕಗಕಿಲ್ಲ. ವೃತ್ತಿಯ ಬಗ್ಗೆ ನಿಮಗೆ ಕೀಳರಿಮೆ ಬರುವ ಸಾಧ್ಯತೆ ಇದೆ. ಪ್ರಾಮಾಣಿಕತೆಯಿಂದ ನಿಮಗೆ ಲಾಭವಾಗಬಹುದು. ಕುಟುಂಬದ ಜೊತೆ ಬದುಕುವ ಆನಂದವನ್ನು ಅನುಭವಿಸುವಿರಿ. ಸಂಗಾತಿಯ ಮಾತುಗಳನ್ನು ನೀವು ತಳ್ಳಿಹಾಕುವಿರಿ. ನಿಮಗೆ ವಹಿಸಿದ ಕೆಲಸವು ವಿಳಂಬವಾಗಬಹುದು. ಸ್ನೇಹಿತರ ಬೆಂಬಲದಿಂದ ವಾಹನ ಖರೀದಿಯನ್ನು ಮಾಡುವಿರಿ. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ‌ ಫಲಿತಾಂಶವು ಕೊಡುವುದು.

ಮಕರ ರಾಶಿ: ಮಂಗಳ ಕಾರ್ಯದಲ್ಲಿ ನಿಮಗೆ ಆಸಕ್ತಿ ಬರುವುದು. ಇಂದು ನೀವು ಜಾಗರೂಕತೆಯಿಂದ ಆಯೋಜಿಸಿ ಕಾರ್ಯವನ್ನು ಸಾಧಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕಛೇರಿಯಲ್ಲಿ ಅಧಿಕಾರಿಯ ಜೊತೆ ವಾದಕ್ಕೆ ಇಳಿಯಬಹುದು. ವೈವಾಹಿಕ ಕಾರ್ಯದಲ್ಲಿ ನಿಮಗೆ ಬಂಧುಗಳ ಸಹಕಾರ ಕಾಣಿಸುವುದು. ಒಡಹುಟ್ಟಿದವರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ ಸಂತೋಷಪಡಿಸಿ. ಯಂತ್ರೋಪಕರಣದಲ್ಲಿ ನಿಮಗೆ ಲಾಭವಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿ ಕೊಡುವ ಸಂಗತಿಯಾಗಿದೆ. ಇಂದು ನೆರೆ ಹೊರೆಯವರ ಭಿನ್ನಾಭಿಪ್ರಾಯವು ಬೆಳಕಿಗೆ ಬರಬಹುದು. ನಿಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ಕೋಪಗೊಳ್ಳುವುದು ಬೇಡ. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು.

ಕುಂಭ ರಾಶಿ: ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ತಾವು ಉಳಿದುಕೊಳ್ಳಲು ಯಾರ ಮೇಲೂ ಅನಗತ್ಯ ಆರೋಪ ಮಡಿಯಾರು. ಸ್ನೇಹಿತರು ಸ್ವಾರ್ಥಕ್ಕಾಗಿ ನಿಮಗೆ ಬೇಡದ್ದನ್ನು ಮಾಡಬಹುದು. ಉತ್ಸಾಹವು ಎಷ್ಟೇ ಇದ್ದರೂ ಶಾಂತವಾದ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಿರಿಯರು ನಿಮಗೆ ಉತ್ತಮ ವಿಚಾರಗಳನ್ನು ತಿಳಿಸುವರು. ಇಂದು ನಿಮ್ಮ ಕಠಿಣ ಪರಿಶ್ರಮವು ವ್ಯರ್ಥವಾಗಬಹುದು. ಹಿತಶತ್ರುಗಳಿಗೆ ನಿಮ್ಮ ಯಶಸ್ಸು ಸಹಿಸಲಾಗದ ಶೂಲವಾದೀತು. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ಇಂದು ನಿಮಗೆ ಯಾವುದೇ ತೊಂದರೆಯನ್ನು ತೆಗೆದುಕೊಳ್ಳಲು ಮನಸ್ಸು ಇರದು. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ. ವಿಷಯದಲ್ಲಿ ನೀವು ಗೊಂದಲವಿರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಬಹುದು.

ಮೀನ ರಾಶಿ; ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ವಿದ್ಯಾಭ್ಯಾಸದಲ್ಲಿ ನೂರಕ್ಕೆ ನೂರು ಇದ್ದರೂ ಫಲಿತಾಂಶವು ಕೈಕೊಡಬಹುದು. ಮಕ್ಕಳು ಸೋಮಾರಿಗಳಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಏನಾದರೊಂದು ಕಾರಣ ಹೇಳಿ ಮನೆಯಲ್ಲಿಯೇ ಇರಲು ಇಚ್ಛಿಸುವಿರಿ. ಪಾಲುದಾರಿಕೆಯಲ್ಲಿ ಬಂಡವಾಳವು ಕಡಿಮೆ ಇರುವುದು. ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ‌. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ. ಮೋಸಹೋಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ.

ಲೋಹಿತ ಹೆಬ್ಬಾರ್-8762924271 (what’s app only)

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ